ನೋಕಿಯಾ ಲ್ಯೂಮಿಯಾ ತಕ್ಕ ಬೆಲೆಗೆ ತಕ್ಕ ಉತ್ಪನ್ನ ಹೇಗೆ?

By Shwetha
|

ನಾವು ಸ್ಮಾರ್ಟ್‌ಫೋನ್ ವಿಷಯಕ್ಕೆ ಬಂದಾಗ ನಮ್ಮ ತಲೆಯಲ್ಲಿ ಬರುವ ವಿಚಾರವೇ ಆಂಡ್ರಾಯ್ಡ್ ಮತ್ತು ಐಒಎಸ್. ಅದರಲ್ಲೂ ಮಾರುಕಟ್ಟೆಯಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಫೋನ್‌ಗಳೆಂದರೆ ಗೂಗಲ್ ರಚಿತ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅಥವಾ ಆಪಲ್ ಆಧಾರಿತ ಐಒಎಸ್ ಆಗಿದೆ.

ಗೂಗಲ್ ಹಾಗೂ ಐಒಎಸ್ ಹೊರತುಪಡಿಸಿ ಮೈಕ್ರೋಸಾಫ್ಟ್‌ನ ವಿಂಡೋಸ್ ಫೋನ್ ಕೂಡ ಹೆಚ್ಚಿನ ಡಿವೈಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಾಗಿ ನೋಕಿಯಾ ಲ್ಯೂಮಿಯಾ ಡಿವೈಸ್‌ಗಳಲ್ಲಿ ವಿಂಡೋಸ್ ಆವೃತ್ತಿಯನ್ನು ನಿಮಗೆ ಕಾಣಬಹುದಾಗಿದೆ.

ಹೊಸದಾಗಿ ಲಾಂಚ್ ಆಗಿರುವ ನೋಕಿಯಾ ಲ್ಯೂಮಿಯಾ 630 ಅನ್ನು ಬಳಕೆದಾರರು ಈ ವರ್ಷದ ಅಂತ್ಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಖರೀದಿಸುವ ನಿರೀಕ್ಷೆ ಇದೆ. ಇದರ ಬೆಲೆ ರೂ 11,500 ಆಗಿದ್ದು ಇದು 4.5 ಇಂಚಿನ ಕ್ಲಿಯರ್‌ಬ್ಲಾಕ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯೊಂದಿಗೆ ಬಂದಿದೆ ಇದರ ರೆಸಲ್ಯೂಶನ್ 854 x 480 ಪಿಕ್ಸೆಲ್‌ಗಳಾಗಿದೆ. ಗೋರಿಲ್ಲಾ ಗ್ಲಾಸ್ 3 ರಕ್ಷಣೆ ಈ ಪೋನ್‌ಗಿದ್ದು ಇದರ ಅಳತೆ 129.5mm x 66.7mm x 9.2mm ಆಗಿದೆ ಮತ್ತು ತೂಕ 134 ಗ್ರಾಮ್‌ಗಳಾಗಿವೆ.

8 ಜಿಬಿ ಸಂಗ್ರಹಣೆ ಸಾಮರ್ಥ್ಯ ಈ ಫೋನ್‌ಗಿದ್ದು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಇದನ್ನು 128 ಜಿಬಿಗೆ ವಿಸ್ತರಿಸಬಹುದು. ಫೋನ್‌ನೊಂದಿಗೆ 7 ಜಿಬಿ ಉಚಿತ ಕ್ಲೌಡ್ ಸ್ಟೋರೇಜ್ ಅನ್ನು ಇದು ವಿತರಿಸುತ್ತದೆ. 1830 mAh ಬ್ಯಾಟರಿಯೊಂದಿಗೆ ಈ ಫೋನ್ ಚಾಲನೆಯಾಗಲಿದೆ.

ಇದಿಷ್ಟು ವೈವಿಧ್ಯತೆಗಳನ್ನು ನೋಕಿಯಾ ಹೊಂದಿದ್ದರೂ ನೋಕಿಯಾ ಲ್ಯೂಮಿಯಾ ಬಳಕೆದಾರರ ಪ್ರೀತಿ ಪಾತ್ರನಾಗಿ ಮತ್ತು ಖರೀದಿಗೆ ಸರಿಯಾದ ಮೌಲ್ಯವನ್ನು ಒದಗಿಸುತ್ತದೆ ಎಂಬುದನ್ನು ತಿಳಿಯಲು ಇಲ್ಲಿ ನಾವು ಐದು ಅಂಶಗಳನ್ನು ನೀಡಿದ್ದೇವೆ. ಹಾಗಿದ್ದರೆ ಆ ಅಂಶಗಳು ಯಾವುವು ಎಂಬುದನ್ನು ಅರಿತುಕೊಂಡು ಅದನ್ನು ಖರೀದಿಸಿ.

#1

#1

ನಿಮ್ಮ ಆಯ್ಕೆಯ ಬಣ್ಣಗಲ್ಲಿ ನೋಕಿಯಾ ಲ್ಯೂಮಿಯಾ 630 ಲಭ್ಯವಿದ್ದು ಇದರ ಹಿಂದಿನ ಲ್ಯೂಮಿಯಾ 930 ಯಂತೆ ಪರಿಪೂರ್ಣವಲ್ಲ. ಆದರೂ ಇದು ನಿಮ್ಮ ಪಾಕೆಟ್‌ಗೆ ಸರಿ ಹೊಂದುವ ವಿನ್ಯಾಸದಲ್ಲಿದೆ. ನೋಡಲು ಕ್ಯೂಟ್ ಆಗಿದ್ದು ಬೆಲೆಗೆ ತಕ್ಕಂತಿದೆ.

#2

#2

ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ನೋಕಿಯಾ ಲ್ಯೂಮಿಯಾ 630 ಬೆಲೆಗೆ ತಕ್ಕಂತೆ ಬಣ್ಣಗಳನ್ನು ವಿನ್ಯಾಸಗೊಳಿಸಿದೆ. ನಾವು ನೋಕಿಯಾದಿಂದ ಇನ್ನಷ್ಟು ಹೆಚ್ಚಿನ ಬಣ್ಣಗಳನ್ನು ನಿರೀಕ್ಷಿಸಿದ್ದೆವು.

#3

#3

ಇದು ವಿಂಡೋಸ್ ಫೋನ್ 8.1 ಆಪರೇಟಿಂಗ್ ವ್ಯವಸ್ಥೆಯನ್ನು ಹೊಂದಿದೆ. ಗ್ರಾಹಕರು ತಾವು ನೀಡಿದ ಬೆಲೆಗೆ ತಕ್ಕಂತೆ ಈ ಆವೃತ್ತಿಯಲ್ಲಿ ಮೊಬೈಲ್ ಆಪರೇಟ್ ಮಾಡಲಿದ್ದು ಇದೊಂದು ಅದ್ಭುತ ಅನುಭವವಾಗಿದೆ.

#4

#4

ನೀವು ಈ ಫೋನ್ ಖರೀದಾಗ ನೋಕಿಯಾವ ನಿಮಗೆ ೭ಜಿಬಿ ಸಂಗ್ರಹಣೆ ಸಾಮರ್ಥ್ಯವನ್ನು ಕ್ಲೌಡ್‌ನಲ್ಲಿ ಒದಗಿಸಲಿದೆ. ನಿಮಗೆ ಇದರಲ್ಲಿ ಹೆಚ್ಚಿನ ಹಾಡುಗಳು, ಚಿತ್ರಗಳು ಮತ್ತು ವೀಡಿಯೋಗಳನ್ನು ಶೇಖರಿಸಿಡಬಹುದು.

#5

#5

ಇದು ಬಾಹ್ಯ ಸಂಗ್ರಹಣಾ ಸಾಮರ್ಥ್ಯ 128 ಮೆಮೊರಿ ಬೆಂಬಲದೊಂದಿಗೆ ಬಂದಿದ್ದು ನಿಮಗೆ ದೊರೆಯಲಿರುವ ಎಸ್‌ಡಿ ಕಾರ್ಡ್ ಮೂಲಕ ಇದನ್ನು ವಿಸ್ತರಿಸಬಹುದಾಗಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X