ಸ್ಪರ್ಧೆಯಲ್ಲಿರುವ ಎರಡು ಸೂಪರ್ ಸ್ಮಾರ್ಟ್ ಫೋನ್ ಯಾವುದು?

Posted By: Staff
ಸ್ಪರ್ಧೆಯಲ್ಲಿರುವ ಎರಡು ಸೂಪರ್ ಸ್ಮಾರ್ಟ್ ಫೋನ್ ಯಾವುದು?

 

ಪ್ರತಿಷ್ಟಿತ ಕಂಪನಿಗಳಾದ ನೋಕಿಯಾ ಮತ್ತು ಸ್ಯಾಮ್ ಸಂಗ್ ಇದೀಗ ಸ್ಪರ್ಧೆಯಲ್ಲಿವೆ. ನೋಕಿಯಾ ಹೊರತಂದಿರುವ ಲುಮಿಯಾ ಮೊಬೈಲ್ ಗಳಿಗೆ ಬೇಡಿಕೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದೆ. ಇದೇ ಸಮಯದಲ್ಲಿ ಸ್ಯಾಮ್ ಸಂಗ್ ಕೂಡ ಮಾರುಕಟ್ಟೆಗೆ ತನ್ನ ವಿನೂತನ ಆಂಡ್ರಾಯ್ಡ್ ಮೊಬೈಲನ್ನು ಬಿಡುಗಡೆ ಮಾಡಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ ಮೊಬೈಲ್ ನೋಕಿಯಾ ಲುಮಿಯಾ 800 ಗೆ ಭಾರೀ ಸ್ಪರ್ಧೆಯೊಡ್ಡಲು ತಯಾರಾಗಿದೆ. ನೋಕಿಯಾ ಲುಮಿಯಾ ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ ಎರಡೂ ಮೊಬೈಲ್ ಗಳಲ್ಲೂ ಗ್ರಾಹಕರನ್ನು ಸೆಳೆಯುವ ಅನೇಕ ಆಧುನಿಕ ಆಯ್ಕೆಗಳಿವೆ.

ಎರಡೂ ಸ್ಮಾರ್ಟ್ ಫೋನ್ ಗಳು 2ಜಿ ಮತ್ತು 3ಜಿ ನೆಟ್ ವರ್ಕ್ ಬೆಂಬಲಿತವಾಗಿವೆ. 2ಜಿನಲ್ಲಿ 850/900/1800/1900 ಫ್ರಿಕ್ವೆನ್ಸಿ ಮತ್ತು 3ಜಿನಲ್ಲಿ 850/900/1900/2100 ಫ್ರಿಕ್ವೆನ್ಸಿಗಳನ್ನು ಬೆಂಬಲಿಸಲಿವೆ.

ನೋಕಿಯಾ ಲುಮಿಯಾ 800 ಮೊಬೈಲ್ 1.4 GHz MSM8255 ಪ್ರೊಸೆಸರ್ ಮತ್ತು ಅಡೆರ್ನೊ ಗ್ರಾಫಿಕ್ ಪ್ರೊಸೆಸರ್ ಪಡೆದುಕೊಂಡಿದ್ದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ ಡ್ಯೂಯಲ್ ಕೋರ್ ARM Cortex-A9 ಪ್ರೊಸೆಸರ್ ಮತ್ತು ಗ್ರಾಫಿಕ್ ಗೆಂದು Mali-400MP ಪ್ರೊಸೆಸರ್ ಹೊಂದಿದೆ.

ನೋಕಿಯಾ ಲುಮಿಯಾ 800 ವಿಶೇಷತೆ:

* 117ಎಂಎಂ x 61 ಎಂಎಂ x 12 ಎಂಎಂ ಸುತ್ತಳತೆ

* 142 ಗ್ರಾಂ ತೂಕ

* 3.70 ಇಂಚಿನ ಸ್ಕ್ರೀನ್, 800 x 480 ಪಿಕ್ಸಲ್ ರೆಸೊಲ್ಯೂಷನ್

* 16,000,000 ಬಣ್ಣ ಬೆಂಬಲಿತ ಟಚ್ ಡಿಸ್ಪ್ಲೇ

* 8 ಮೆಗಾ ಪಿಕ್ಸಲ್ ಕ್ಯಾಮೆರಾ

* ಆಟೊ ಫೋಕಸ್, LED ಫ್ಲಾಶ್

* 512MB ಸಿಸ್ಟಮ್ ಮೆಮೊರಿ

* 16ಜಿಬಿ ಆಂತರಿಕ ಮೆಮೊರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ ವಿಶೇಷತೆ:

* 146 ಎಂಎಂ x 83ಎಂಎಂ x 10 ಎಂಎಂ ಸುತ್ತಳತೆ

* 176 ಗ್ರಾಂ ತೂಕ

* 5.3 ಇಂಚಿನ ಟಚ್ ಸ್ಕ್ರೀನ್, 800 x 1280 ಪಿಕ್ಸಲ್ ರೆಸೊಲ್ಯೂಷನ್

* 8 ಮೆಗಾ ಪಿಕ್ಸಲ್ ಕ್ಯಾಮೆರಾ

* ಆಟೊ ಫೋಕಸ್, LED ಫ್ಲಾಶ್

* 2 ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮೆರಾ

* 1ಜಿಬಿ ಸಿಸ್ಟಮ್ ಮೆಮೊರಿ

* ಆಂತರಿಕ ಮೆಮೊರಿಗೆಂದು ಎರಡು ಆಯ್ಕೆ: 16 ಜಿಬಿ, 32 ಜಿಬಿ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

ನೋಕಿಯಾ ಲುಮಿಯಾ 800 ಮೊಬೈಲ್ ನ 1450 mAh ಬ್ಯಾಟರಿ 265 ಗಂಟೆ ಸ್ಟ್ಯಾಂಡ್ ಬೈ ಟೈಂ, 780 ನಿಮಿಷ ಟಾಕ್ ಟೈಂ ನೀಡಲಿದೆ. ಸ್ಯಾಮ್ ಸಂಗ್ ಮೊಬೈಲ್ ನ 2500mAh  ಬ್ಯಾಟರಿ 570 ಗಂಟೆ ಟಾಕ್ ಟೈಂ ಮತ್ತು 780 ನಿಮಿಷ ಟಾಕ್ ಟೈಂ ನೀಡುತ್ತದೆ.

ಈ ಎರಡೂ ಮೊಬೈಲ್ ಗಳ ಬೆಲೆ ಭಾರತದಲ್ಲಿ ಎಷ್ಟಿದೆ ಎಂದು ತಿಳಿದುಬಂದಿಲ್ಲ. ಆದರೆ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ನೋಕಿಯಾ ಲುಮಿಯಾ 800 ಮೊಬೈಲ್ 30,000ರು, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ ಮೊಬೈಲ್ 35,000ರು ಇರಬಹುದೆಂದು ಅಂದಾಜಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot