ಅತ್ಯದ್ಭುತ ಕ್ಯಾಮೆರಾ ಹೊಂದಿರುವ ಲ್ಯೂಮಿಯಾ 830

By Shwetha

  ವಿಂಡೋಸ್ ಆಧಾರಿತ ಹೊಸ ಲ್ಯೂಮಿಯಾ 830 ಅನ್ನು ಸಪ್ಟೆಂಬರ್ 4 ರಂದು ಬರ್ಲಿನ್‌ನಲ್ಲಿ ಲಾಂಚ್ ಮಾಡುವ ಯೋಜನೆಯನ್ನು ನೋಕಿಯಾ ತೀರ್ಮಾನಿಸಿದೆ. ಈ ವಾರಕ್ಕಿಂತ ಮುಂಚಿತವಾಗಿ ವರದಿಗಾರರನ್ನು ಈ ಸಮಾರಂಭಕ್ಕಾಗಿ ಕಂಪೆನಿ ಆಹ್ವಾನಿಸಿದೆ.

  ಮುಂಬರಲಿರುವ ಲ್ಯೂಮಿಯಾ 830 ಮುಂಚಿತವಾಗಿಯೇ ಎಲ್ಲೆಡೆಯೂ ತನ್ನ ಖ್ಯಾತಿಯನ್ನು ಹಬ್ಬಿಸಿದ್ದು, ಈ ಬಾರಿ ಫೋನ್‌ನ ಚಿತ್ರವನ್ನು ಜಾಲತಾಣದಲ್ಲಿ ಹಬ್ಬಿಸಿದೆ. ಇದರ ಮುಂಭಾಗವು ಲ್ಯೂಮಿಯಾ 925 ಅನ್ನು ಹೋಲುತ್ತಿರುವುದು ವಿಶೇಷವೆನಿಸಿದೆ.

  ಲ್ಯೂಮಿಯಾ 830 ಸಪ್ಟೆಂಬರ್ 4 ಕ್ಕೆ ಲಾಂಚಿಂಗ್

  ಫೋನ್‌ನ ಆಕಾರವು ಚೌಕಾಕಾರದಲ್ಲಿ ಮೆಟಲ್ ರಿಮ್‌ನಲ್ಲಿದ್ದು ಹಿಂಭಾಗವು ಪೋಲಿಕಾರ್ಬೊನೇಟ್ ಅನ್ನು ಒಳಗೊಂಡಿದೆ. ಇದರ ಕ್ಯಾಮೆರಾವಂತೂ ಆಕರ್ಷಕವಾಗಿದ್ದು ಫೋನ್ ಈ ವಿಷಯಕ್ಕೆ ಹೆಚ್ಚು ಮಾರಾಟವಾಗುವುದು ಖಾತ್ರಿಯಾಗಿದೆ. ಹಾಗೆಯೇ ಫೋನ್‌ನ ಕ್ಯಾಮೆರಾ ಲೆನ್ಸ್ ಕೂಡ ಆಕಾರದಲ್ಲಿ ಸಣ್ಣದಾಗಿದೆ.

  ನೋಕಿಯಾ ಲ್ಯೂಮಿಯಾ 830 ವೈರ್‌ಲೆಸ್ ಚಾರ್ಜಿಂಗ್‌ಗೂ ಅವಕಾಶವನ್ನು ಕಲ್ಪಿಸಿಕೊಡುತ್ತದೆ ಎಂಬುದನ್ನು ನಿರೀಕ್ಷಿಸಲಾಗಿದೆ. ಇದು 4.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಡಿವೈಸ್‌ನಲ್ಲಿದೆ. ಇದರ RAM ಸಾಮರ್ಥ್ಯ 1GB ಯಾಗಿದ್ದು ಆಂತರಿಕ ಸಂಗ್ರಹಣಾ ಸಾಮರ್ಥ್ಯ 8 ಜಿಬಿಯಾಗಿದೆ ಮತ್ತು ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಇದನ್ನು ವಿಸ್ತರಿಸಬಹುದು.

  ಇದರ ರಿಯರ್ ಕ್ಯಾಮೆರಾ 20MP ಆಗಿದ್ದು ಮುಂಭಾಗ ಕ್ಯಾಮೆರಾ 5MP ಆಗಿದೆ. ಈ ಡಿವೈಸ್‌ನೊಂದಿಗೆ ನೋಕಿಯಾ ಲ್ಯೂಮಿಯಾ 730 ಅನ್ನು ಲಾಂಚ್ ಮಾಡಲಿದೆ ಎಂಬುದು ವದಂತಿಗಳಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ. ವರ್ಷದ ಪ್ರಾರಂಭದಲ್ಲೇ ನೋಕಿಯಾ ಲ್ಯೂಮಿಯಾ 930 ಅನ್ನು ಬಿಡುಗಡೆ ಮಾಡಿತ್ತು. ವಿಂಡೋಸ್ ಫೋನ್ 8.1 ಶಕ್ತಿಯಿರುವ ಈ ಡಿವೈಸ್ ಭಾರತದಲ್ಲಿ ಬಲು ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು.

  ಕಂಪೆನಿ ಐಎಫ್ಎ (IFA) ಟೆಕ್ ಶೋನಲ್ಲಿ ಲ್ಯೂಮಿಯಾ 830 ಅನ್ನು ಲಾಂಚ್ ಮಾಡುತ್ತಿದ್ದು ಗ್ರಾಹಕರಲ್ಲಿ ಡಿವೈಸ್ ಕುರಿತಾದ ನಿರೀಕ್ಷೆಯನ್ನು ಹೆಚ್ಚುವಂತೆ ಮಾಡಿದೆ.

  ಮೂಲ: Wpdang

  Read more about:
  English summary
  This article tells about Nokia Lumia 830 Alleged Images Leaked Ahead of Offical Launch.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more