ಬಂದೈತೆ ಗುರು ನೋಕಿಯಾ ಲೂಮಿಯಾ 900

By Super
|
ಬಂದೈತೆ ಗುರು ನೋಕಿಯಾ ಲೂಮಿಯಾ 900

ಮೊಬೈಲ್‌ ತಯಾರಿಕೆಯ ದಿಗ್ಗಜ ಸಂಸ್ಥೆಯಾದ ನೋಕಿಯಾ ತನ್ನಯ ಸ್ಮಾರ್ಟ್‌ಫೋನ್‌ಗಳಿಗೆ ವಿಂಡೋಸ್‌ನ ತಳಹದಿ ಒದಗಿಸಿ ಭಾರೀ ಸದ್ದು ಮಾಡುತ್ತಿದೆ. ಅಂದಹಾಗೆ ಬಹು ನಿರೀಕ್ಷತ ವಿಂಡೋಸ್‌ ಚಾಲಿತ ನೋಕಿಯಾ ಲೂಮಿಯಾ 900 ಕೊನೆಗೂ ಬಿಡುಗಡಯಾಗಿದೆ. ಅಮೇರಿಕಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ನೋಕಿಯಾ ಲೂಮಿಯಾದ ಬೆಲೆ ಅಮೇರಿಕಾದಲ್ಲಿ 499 ಡಾಲರ್‌ ಆಗಿದೆ (ಸುಮಾರು 24,555 ರೂ.).

ಇತ್ತೀಚಿನ ವರದಿಗಳ ಪ್ರಕಾರ ನೋಕಿಯಾ ಲೂಮಿಯಾ ಭಾರತದಲ್ಲಿ ಹೆಚ್ಚು ಕಡಿಮೆ 30 ಸಾವಿರ ರೂ ಬೆಲೆಯಲ್ಲಿ ನವೆಂಬರ್‌ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ತಿಳಿಸಿವೆ. ಈಗಾಗಲೇ ಆಪಲ್‌ ಐಫೊನ್‌ 5 ನ ಬಿಡುಗಡೆಯಿಂದಾದ ನಿರಾಸೆಯ ನಡುವೆ ನೋಕಿಯಾ ಭಾರತೀಯ ಮಾರುಕಟ್ಟೆಗೆ ಲೂಮಿಯಾ 900 ಬಿಡುಗಡೆ ಮಾಡಲಿದೆ ಎಂದು BGR ಇಂಡಿಯಾ ವರದಿ ಮಾಡಿದೆ.

ಅಂದಹಾಗೆ ನೋಕಿಯಾ ಲೂಮಿಯಾ 900 ಏನೆಲ್ಲಾ ಫೀಚರ್ಸ್‌ಗಳಿವೆ ಎಂಬುದನ್ನು ತಿಳಿದುಕೊಳ್ಳೊಣ.

ನೋಕಿಯಾ ಲೂಮಿಯಾ 900 ವಿಶೇಷತೆಗಳು:

  • ವಿಂಡೋಸ್‌ ಫೊನ್‌ 7.5 ಆಪರೇಟಿಂಗ್‌ ಸಿಸ್ಟಂ (ವಿಂಡೋಸ್‌ ಫೋನ್‌ 7.8 ಗೆ ಅಪ್ಗ್ರೇಡ್‌ ಆಗಲಿದೆ).

  • 4.3- ಇಂಚಿನ 480×800 WVGA ಬ್ಲಾಕ್‌ ಡಿಸ್ಪ್ಲೆ.

  • 127.8 x 68.5 x 11.5mm ಸುತ್ತಳತೆಯೊಂದಿಗೆ 160 ಗ್ರಾಂ ತೂಕವಿದೆ.

  • 16GB ಆಂತರಿಕ ಮೆಮೊರಿ ಹಾಗೂ 512MB RAM.

  • ಸಿಂಗಲ್‌-ಕೋರ್‌ 1.4GHz ಕ್ವಾಲ್‌ಕಾಮ್‌ ಸ್ಕಾರ್ಪಿಯನ್‌ ಪ್ರೊಸೆಸರ್‌.

  • ಕಾರ್ಲ್‌ ಜೀಸ್‌ ಆಪ್ಟಿಕಲ್ಸ ಸಹಿತ 8-MP ಹಿಂಬದಿಯ ಕ್ಯಾಮೆರಾ ಹಾಗೂ 1-MP ಮುಂಬದಿಯ ಕ್ಯಾಮೆರಾ.

  • 3G, Wi-Fi, GPS ಗಾಹೂ FM ರೇಡಿಯೋ.

  • ಸ್ಕ್ರಾಚ್‌ ನಿರೊದಕ ಗೊರಿಲ್ಲಾ ಗ್ಲಾಸ್‌ ಹೊಂದಿದೆ.

  • ನೋಕಿಯಾ ಮ್ಯಾಪ್ಸ್‌ ಹೊಂದಿದ್ದು, ಡ್ರೈವ್‌ ಹಾಗೂ ನೋಕಿಯಾ ಮ್ಯೂಸಿಕ್‌ ಒಳಗೊಂಡಿದೆ.

Read in English

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X