Subscribe to Gizbot

ನೋಕಿಯಾ ಸ್ಮಾರ್ಟ್‌ಫೋನ್‌ ಬೆಲೆ ದಿಢೀರ್‌ ಇಳಿಕೆ

Posted By:

ಹೊಸ ಮೊಬೈಲ್‌ಗಳು ಮಾರುಕಟ್ಟೆಗೆ ಬಂದಾಗ ಹಳೇ ಮೊಬೈಲ್‌ಗಳ ದರ ಕಡಿಮೆಯಾಗುವುದು ಸಾಮಾನ್ಯ. ಕಳೆದ ಸೋಮವಾರವಷ್ಟೇ ಬ್ಲ್ಯಾಕ್‌ಬೆರಿ ಝಡ್‌ 10 ಬಿಡುಗಡೆಯಾಗಿದೆ. ಈ ಹಿನ್ನಲೆಯಲ್ಲಿ ನೋಕಿಯಾ ತನ್ನ ಎರಡು ದುಬಾರಿ ಬೆಲೆಯ ಮೊಬೈಲ್‌ಗಳ ದರವನ್ನು ಕಡಿಮೆ ಮಾಡಿದೆ.

ಲ್ಯೂಮಿಯ 920 ಆರಂಭಿಕ ಬೆಲೆ 38,199 ಇದ್ದರೆ ಲ್ಯೂಮಿಯ 820 ಬೆಲೆ 27,559 ಇತ್ತು. ಆದರೆ ಈಗ ಆನ್‌ಲೈನ್‌ ಶಾಪಿಂಗ್ ಸೈಟ್‌ ಫ್ಲಿಫ್‌ಕಾರ್ಟ್‌.ಕಂನಲ್ಲಿ ಬೆಲೆ ಕಡಿಮೆಯಾಗಿದ್ದು ಲ್ಯೂಮಿಯ 920ಗೆ 35,000 ರೂಪಾಯಿಯಾದ್ರೆ, ಲ್ಯುಮಿಯ 820ಗೆ 25,300 ಬೆಲೆ ನಿಗದಿ ಮಾಡಿದೆ.. ಇದೇ ಸಂದರ್ಭದಲ್ಲಿ ಹೋಮ್‌ ಶಾಪ್‌.18ನಲ್ಲಿ ಲ್ಯುಮಿಯ 920 ಹ್ಯಾಂಡ್‌ಸೆಟ್‌ನ್ನು 31,129 ರೂ ನೀಡಿ ಖರೀದಿಸಬಹುದು.

ನೋಕಿಯಾ ಲ್ಯೂಮಿಯ 920 ಸ್ಮಾರ್ಟ್‌ಫೋನ್ ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್ ಗ್ಯಾಲರಿ

ನೋಕಿಯಾ ಸ್ಮಾರ್ಟ್‌ಫೋನ್‌ ಬೆಲೆ ದಿಢೀರ್‌ ಇಳಿಕೆ

ನೋಕಿಯಾ ಲ್ಯೂಮಿಯ 920
ವಿಶೇಷತೆ:

4.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
8.7 ಎಂಪಿ ಹಿಂದುಗಡೆ ಕ್ಯಾಮೆರಾ,1.3 ಎಂಪಿ ಎದುರುಗಡೆ ಕ್ಯಾಮೆರಾ
1.5GHz ಡ್ಯುಯಲ್‌ ಕೋರ್‌ ಕ್ವ್ಯಾಲ್ಕಂ ಸ್ನಾಪ್‌ಡ್ರ್ಯಾಗನ್‌ ಪ್ರೊಸೆಸರ್‌
1GB RAM
32GB ಆಂತರಿಕ ಮೆಮೊರಿ
2,000 mAh ಲಿಯಾನ್‌ ಬ್ಯಾಟರಿ
ಕೆಂಪು, ಹಳದಿ,ಬಿಳಿ, ಕಪ್ಪು ಬಣ್ಣದಲ್ಲಿ ಲಭ್ಯ

ನೋಕಿಯಾ ಲ್ಯೂಮಿಯ 820 ಸ್ಮಾರ್ಟ್‌ಫೋನ್ ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್ ಗ್ಯಾಲರಿ

ನೋಕಿಯಾ ಲ್ಯೂಮಿಯ 820
ವಿಶೇಷತೆ :

4.3 ಇಂಚಿನ MOLED ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.5GHz ಡ್ಯುಯಲ್‌ ಕೋರ್‌ ಕ್ವ್ಯಾಲ್ಕಂ ಸ್ನಾಪ್‌ಡ್ರ್ಯಾಗನ್‌ S4 ಪ್ರೊಸೆಸರ್‌
1GB RAM
8GB ಆಂತರಿಕ ಮೆಮೊರಿ
8MP ಹಿಂದುಗಡೆ ಕ್ಯಾಮೆರಾ, ಎದುರುಗಡೆ ವಿಜಿಎ ಕ್ಯಾಮೆರಾ
1,650 mAh ಲಿಯಾನ್‌ ಬ್ಯಾಟರಿ
ಬಿಳಿ,ಕಪ್ಪು, ಹಳದಿ,ಕೆಂಪು ಬಣ್ಣದಲ್ಲಿ ಲಭ್ಯ

ಲಿಂಕ್‌ : ನಿಮ್ಮಲ್ಲಿರುವ ಫೋಟೋವನ್ನು ಸುಂದರಗೊಳಿಸುವುದು ಹೇಗೆ ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot