ನೋಕಿಯಾ ಲುಮಿಯಾಗೆ ಹೊಸ ಮ್ಯುಸಿಕ್ ಅಪ್ಲಿಕೇಶನ್

ಮೊಬೈಲ್ ಮತ್ತು ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಮುಂದಿರುವ ನೋಕಿಯಾ ಕಂಪನಿ ಇದೀಗ ಸುದ್ದಿಯಲ್ಲಿದೆ. ನೋಕಿಯಾ ಬಿಡುಗಡೆಗೊಳಿಸಿರುವ ಲುಮಿಯಾ ಸಿರೀಸ್ ಮೊಬೈಲ್ ಗಳಿಗೆ ನೂತನ ಮ್ಯುಸಿಕ್ ಅಪ್ಲಿಕೇಶನ್ ಗಳನ್ನು ಅಳವಡಿಸುತ್ತಿರುವುದಾಗಿ ತಿಳಿದುಬಂದಿದೆ. ನೋಕಿಯಾ ಲುಮಿಯಾ 710 ಮತ್ತು ಲುಮಿಯಾ 800 ಮೊಬೈಲ್ ಗಳು ನೂತನ ಮ್ಯುಸಿಕ್ ಅಪ್ಲಿಕೇಶನ್ ನೊಂದಿಗೆ ಪರಿಷ್ಕ್ರತಗೊಳ್ಳಲಿವೆ.
ಇದರೊಂದಿಗೆ ಇನ್ನೂ ವಿಶೇಷವಾದದ್ದೆಂದರೆ ನೋಕಿಯಾದ ಗಿಗ್ ಫೈಂಡರ್ ಕಾರ್ಯವೈಖರಿ ಬಳಕೆದಾರರಿಗೆ ಬ್ರ್ಯಾಂಡೆಡ್ ಲೈವ್ ಮ್ಯುಸಿಕ್ ಮತ್ತು ಬೆಲೆ ಹೋಲಿಕೆ ಹಾಗೂ ಟಿಕೆಟ್ ಮಾಹಿತಿಯನ್ನೂ ನೀಡಲಿದೆ. ಪರಿಷ್ಕ್ರತಗೊಂಡ ಇನ್ನೊಂದು ಅಂಶವೆಂದರೆ ಬಳಕೆದಾರರು ಫೇಸ್ ಬುಕ್ ಮೂಲಕ ತಮ್ಮ ಸ್ನೇಹಿತರಿಗೆ ಮಾಹಿತಿಗಳನ್ನು ಅಪ್ಡೇಟ್ ಮಾಡಬಹುದಾಗಿದೆ.
ಈ ಗಿಗ್ ಫೈಂಡರ್ ನ ಅತ್ಯಾಕರ್ಷಕ ಅಂಶವೆಂದರೆ, ಬಳಕೆದಾರರ ಸಂಗೀತದ ಅಭಿರುಚಿಗೆ ತಕ್ಕಂತೆ ಸಂಗೀತಕ್ಕೆ ಸಂಬಂಧ ಪಟ್ಟಂತೆ ಇತ್ತೀಚಿನ ಮಾಹಿತಿಯನ್ನು ನೀಡುತ್ತದೆ. ಇದರೊಂದಿಗೆ ಮಿಕ್ಸ್ ರೇಡಿಯೋ ಸೌಲಭ್ಯವನ್ನೂ ಅಳವಡಿಸಲಾಗಿದೆ. ತಮ್ಮ ಮೆಚ್ಚಿನ 3 ಕಲಾವಿದರ ಹೆಸರನ್ನು ನಮೂದಿಸಿ ಆ ಭಾಗದಲ್ಲಿ ಹಾಡುಗಳನ್ನು ಶೇಖರಿಸಿಕೊಳ್ಳಬಹುದಾಗಿದೆ.
ಗರಿಷ್ಠ 5 ರೇಡಿಯೋ ಸ್ಟೇಷನ್ ಗಳನ್ನು ಸೇರಿಸಿಕೊಳ್ಳಬಹುದಾಗಿದೆ. ಇದರಲ್ಲಿನ ವಿಶೇಷ ಅಂಶವೆಂದರೆ ಬಳಕೆದಾರರು ಹುಡುಕುತ್ತಿರುವ ಹಾಡಿನ ಸೂಚನೆಯನ್ನು ನೀಡುತ್ತದೆ. ಬಳಕೆದಾರರಿಗೆ ತಮ್ಮ ಮೆಚ್ಚಿನ ಹಾಡುಗಳನ್ನು ಸಂಗ್ರಹಿಸಲು ಇದು ನೆರವಾಗುತ್ತದೆ.
ಮುಂದಿನ ತಿಂಗಳ ನಂತರ ಈ ಲುಮಿಯಾ ಮ್ಯುಸಿಕ್ ಅಪ್ಲಿಕೇಶನ್ ಲಭ್ಯವಾಗಲಿದ್ದು, ಲುಮಿಯಾ ಮೊಬೈಲ್ ಖರೀದಿಸಿ ಆಕ್ಟಿವೇಟ್ ಮಾಡಿದರೆ ಸಾಕು ಸ್ವಯಂ ಚಾಲಿತವಾಗಿ ಈ ಮ್ಯುಸಿಕ್ ಅಪ್ಲಿಕೇಶನ್ ಅಪ್ಡೇಟ್ ಆಗುತ್ತದೆ ಎನ್ನಲಾಗಿದೆ.


Click it and Unblock the Notifications