ಈ ಕಪ್ಪು ಸುಂದರಿಗೆ ಸೆಡ್ಡು ಹೊಡೆಯೋರು ಯಾರು?

By Super
|
ಈ ಕಪ್ಪು ಸುಂದರಿಗೆ ಸೆಡ್ಡು ಹೊಡೆಯೋರು ಯಾರು?


ನೋಕಿಯಾ ಎನ್ ಸಿರೀಸ್ ಮೊಬೈಲ್ ಗಳು ಭಾರತದಲ್ಲಿ ಹೆಚ್ಚು ಸುದ್ದಿ ಮಾಡಿವೆ. ಈ ಯಶಸ್ಸಿನ ಹಿನ್ನಲೆಯಲ್ಲಿ ಇನ್ನಷ್ಟು ಮೊಬೈಲ್ ಗಳು ಈ ಸಿರೀಸ್ ಗೆ ಸೇರಿಕೊಳ್ಳುತ್ತಿವೆ. ಹೆಚ್ಚು ಉತ್ಕ್ರಷ್ಟವಾದ ಈ ಮೊಬೈಲ್ ಗಳು ಜನರ ಮೆಚ್ಚುಗೆಯನ್ನೂ ಗಳಿಸಿವೆ.

ಇದೀಗ ಎನ್ ಸಿರೀಸ್ ನಲ್ಲಿ ಹೊಸತಾಗಿರುವ ನೋಕಿಯಾ ಎನ್ 10 ಮೊಬೈಲನ್ನು ಬಿಡುಗಡೆಗೊಳಿಸಲು ನೋಕಿಯಾ ಸಿದ್ಧವಿದೆ. ನೋಕಿಯಾ ಮೀಗೊ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಮೊಬೈಲ್ ನಲ್ಲಿ ನಿಮ್ಮ ಮನಕ್ಕೆ ಒಪ್ಪಿಗೆ ಎನಿಸುವ ಅನೇಕ ಲಕ್ಷಣಗಳಿವೆ. ಅದೇನೆಂದು ಇಲ್ಲಿ ನೋಡಿ.

ನೋಕಿಯಾ N10 ಮೊಬೈಲ್ ವಿಶೇಷತೆ:

* 111 ಎಂಎಂ x 47.5 ಎಂಎಂ x 14.6 ಎಂಎಂ ಸುತ್ತಳತೆ

* 78 ಗ್ರಾಂ ತೂಕ

* ಸ್ಲೈಡಿಂಗ್ ಕ್ವೆರ್ಟಿ ಕೀ ಬೋರ್ಡ್

* 5 ಸೆ.ಮೀ ಡಿಸ್ಪ್ಲೇ

* 12 ಮೆಗಾ ಪಿಕ್ಸಲ್ ಕ್ಯಾಮೆರಾ, ಕ್ಸೆನಾನ್ ಫ್ಲಾಶ್

* 256 ಎಂಬಿ ಆಂತರಿಕ ಮೆಮೊರಿ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* T-ಫ್ಲಾಶ್ ಕಾರ್ಡ್ ಸ್ಲಾಟ್

* Mp4 ಮತ್ತು Mp3 ಪ್ಲೇಯರ್

* ಡ್ಯೂಯಲ್ ಸ್ಪೀಕರ್

* 3.5 ಎಂಎಂ ಆಡಿಯೋ ಜ್ಯಾಕ್

ಪೂರ್ಣ ಟಚ್ ಸ್ಕ್ರೀನ್ ಜೊತೆ ಲಭ್ಯವಿರುವ ಕ್ವೆರ್ಟಿ ಕೀ ಬೋರ್ಡ್ ತುಂಬಾ ಉಪಯೋಗಕ್ಕೆ ಬರಲಿದೆ. ನೋಕಿಯಾ N8 ನ ಸ್ಕ್ರೀನ್ ರೆಸೊಲ್ಯೂಷನನ್ನು N10 ಮೊಬೈಲ್ ಪಡೆದುಕೊಂಡಿರುವುದಾಗಿ ಮಾಹಿತಿಯಿದೆ. ನೋಕಿಯಾ ಮತ್ತು ಇಂಟೆಲ್ ಜೊತೆಗೂಡಿ ಮೀಗೊ ಆಪರೇಟಿಂಗ್ ಸಿಸ್ಟಮನ್ನು ಅಭಿವೃದ್ಧಿ ಪಡಿಸಿದ್ದು, ಲೈನಕ್ಸ್ ಬೆಂಬಲಿತ ಸಾಫ್ಟ್ ವೇರ್ ಬಳಸಿ ತಯಾರಿಸಲಾಗಿದೆ. ಇದು ಮೊಬೈಲಿನ ಕಾರ್ಯ ವೈಖರಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಲೀಥಿಯಂ ಐಯಾನ್ ಬ್ಯಾಟರಿ ಬೆಂಬಲಿತ ಮೊಬೈಲ್ ಇದಾಗಿದೆ

ಈ ಮೊಬೈಲಿನಲ್ಲಿರುವ ಕ್ಸೆನಾನ್ ಫ್ಲಾಶ್ ಉತ್ತಮ ಗುಣಮಟ್ಟದ ಫೋಟೊ ತೆಗೆಯಲು ಅನುಕೂಲವಾಗಲಿದೆ. ಇದರಲ್ಲಿರುವ ಅತ್ಯುತ್ಕ್ರಷ್ಟ ಮಲ್ಟಿಮೀಡಿಯಾ ಪ್ಲೇಯರ್ ಹಲವು ಗಂಟೆಗಳವರೆಗೆ ಮನರಂಜನೆ ಒದಗಿಸುತ್ತದೆ. ದೊಡ್ಡ ಸ್ಕ್ರಿನ್ ನಲ್ಲಿ ವಿಡಿಯೋ ನೋಡುತ್ತಾ ಡ್ಯೂಯಲ್ ಸ್ಪೀಕರ್ ಮೂಲಕ ಉತ್ತಮ ಗುಣಮಟ್ಟದ ಶಬ್ದವನ್ನು ಪಡೆಯಬಹುದಾದ ಸೌಲಭ್ಯ ಮೊಬೈಲಿನಲ್ಲಿದೆ. ಇದರಲ್ಲಿ ಪುಶ್ ಮೇಲ್. IM, ಸಾಮಾಜಿಕ ತಾಣಗಳ ಅಪ್ಲಿಕೇಶನ್ ಗಳೂ ಇವೆ.

ಆದರೆ ನೋಕಿಯಾ N10 ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಮೊಬೈಲ್ ಕುರಿತ ಸಂಪೂರ್ಣ ಮಾಹಿತಿ ಮತ್ತು ಬೆಲೆ ತಿಳಿದುಬರಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X