2012ಕ್ಕೆ ಬರಲಿದೆ ಅತ್ಯುನ್ನತ ನೋಕಿಯಾ ಎನ್ 801

Posted By:

 

2012ಕ್ಕೆ ಬರಲಿದೆ ಅತ್ಯುನ್ನತ ನೋಕಿಯಾ ಎನ್ 801
ಅತ್ಯುತ್ತಮ ಮತ್ತು ಆಧುನಿಕ ಮೊಬೈಲ್ ಸಾಲಿಗೆ ಈಗ ಇನ್ನೊಂದು ಮೊಬೈಲ್ ಸೇರ್ಪಡೆಯಾಗಲಿದೆ. ನೋಕಿಯಾ N8 ಮಾದರಿಯ ನೋಕಿಯಾ ಎನ್ 801 ಎಂಬ ಮೊಬೈಲ್ 2012ರ ಆರಂಭದಲ್ಲಿ ಬಿಡುಗಡೆಗೊಳ್ಳುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಆದರೆ ನೋಕಿಯಾ 801 ಮೊಬೈಲ್ ಬಿಡುಗಡೆ ಕುರಿತು ಅಧೀಕೃತವಾಗಿ ಘೋಷಣೆಯಾಗಿಲ್ಲ. ಆದ್ದರಿಂದ ಈ ಮೊಬೈಲ್ ಕುರಿತ ಸಂಪೂರ್ಣ ಮಾಹಿತಿ ಇನ್ನೂ ತಿಳಿದುಬರಬೇಕಷ್ಟೆ.

ಆದರೆ ನೋಕಿಯಾ N8 ಮಾದರಿಯಾದ್ದರಿಂದ ಇದರಲ್ಲಿ ಅನೇಕ ವಿಶೇಷತೆಗಳನ್ನು ನಿರೀಕ್ಷಿಸಬಹುದಾಗಿದೆ. ಮೊಬೈಲ್ ಸ್ಕ್ರೀನ್ ಆಧುನಿಕ ಟಚ್ ತಂತ್ರಜ್ಞಾನ ಹೊಂದಿದ್ದು, ಅಳತೆ ಬಗ್ಗೆ ಮಾಹಿತಿ ಇಲ್ಲ.

ಸಿಂಬಿಯಾನ್ ಬೆಲ್ಲೆ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಮೊಬೈಲ್ ನಿಂದ ಉತ್ತಮ ಸಾಮರ್ಥ್ಯವನ್ನು ನೀವು ನಿರೀಕ್ಷಿಸಬಹುದು. ಮಲ್ಟಿ ಟಾಸ್ಕಿಂಗ್ ಗೆ ಅನೇಕ ಆಯ್ಕೆಗಳೂ ಇರುವ ಅಂದಾಜಿದೆ. ನೂತನ ಅಪ್ಲಿಕೇಶನ್ ಗಳೂ ಸಹ ಇದಕ್ಕೆ ಜೊತೆಯಾಗಲಿದೆ. ವಿಶೇಷವಾಗಿ ಇದು NFC ತಂತ್ರಜ್ಞಾನ ಹೊಂದಿರುವುದೆಂದು ತಿಳಿದುಬಂದಿದೆ.

ನೋಕಿಯಾ N8 ನಂತೆಯೇ ಉತ್ತಮ ವಿನ್ಯಾಸ, ಸಂಪರ್ಕ, ಕ್ಯಾಮೆರಾ ಮತ್ತು ಬ್ಯಾಟರಿಯನ್ನು ಹೊಂದಿದೆ ಎನ್ನಲಾಗಿದೆ. ಆದರೆ ಎನ್ 801 ಮೊಬೈಲ್ ಬೆಲೆ ಇನ್ನೂ ತಿಳಿದುಬಂದಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot