ಭಾರತೀಯರು ಹೆಚ್ಚು ಸರ್ಚ್ ಮಾಡಿದ ಟಾಪ್ 10 ಸ್ಮಾರ್ಟ್‌ಫೋನ್‌ ಲೀಸ್ಟ್!!

Written By:

ಭಾರತೀಯ ಮಾರುಕಟ್ಟೆಗೆ ಪ್ರತಿದಿನವೂ ಹತ್ತಾರು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತವೆ. ಆದರೆ, ಒಂದಕ್ಕಿಂತ ಒಂದು ವಿಶಿಷ್ಟ ಎನ್ನುವ ಫೀಚರ್ಸ್ ಹೊತ್ತು ಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವ ಸ್ಮಾರ್ಟ್‌ಫೋನ್ ಖರೀದಿಸುವುದು ಎನ್ನುವುದೇ ಎಲ್ಲರಿಗೂ ಬಹುದೊಡ್ಡ ಚಿಂತೆಯಾಗಿರುತ್ತದೆ.!

ಹಾಗಾದರೆ, ಯಾವ ಸ್ಮಾರ್ಟ್‌ಫೋನ್ ಖರೀದಿಸುವುದು? ನಾವು ನೀಡುವ ಹಣಕ್ಕೆ ಅದು ಸರಿಯಾದ ಸ್ಮಾರ್ಟ್‌ಫೋನ್ ಆಗಿದೆಯೇ? ಯಾವ ಸ್ಮಾರ್ಟ್‌ಫೋನ್ ಹೆಚ್ಚು ಜನರನ್ನು ಸೆಳೆದಿದೆ? ಯಾವ ಮೊಬೈಲ್ ಹೆಚ್ಚು ಸರ್ಚ್ ಆಗಿದೆ? ಎಂಬುದು ಎಲ್ಲಾ ಸ್ಮಾರ್ಟ್‌ಫೋನ್ ಖರೀದಿದಾರರ ಮನಸ್ಸಿನಲ್ಲಿ ಮೂಡುತ್ತದೆ.!!

ಹಾಗಾಗಿ, ಇಂದಿನ ಲೇಖನದಲ್ಲಿ ಭಾರತೀಯರು ಪ್ರಸ್ತುತ ಅತಿ ಹೆಚ್ಚು ಸರ್ಚ್ ಮಾಡುತ್ತಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬ ಪಟ್ಟಿಯನ್ನು ನೀಡುತ್ತೇವೆ.!! ಅವು ಯಾವುವು? ಯಾವುದು ಬೆಸ್ಟ್ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#10 ಲೆನೊವೊ K6 ನೋಟ್

#10 ಲೆನೊವೊ K6 ನೋಟ್

ರೆಡ್ಮಿ ನೋಟ್ 4 ಸ್ಮಾರ್ಟ್‌ಫೋನ್‌ಗೆ ಹೆಚ್ಚು ಸೆಡ್ಡು ಹೊಡೆದ ಸ್ಮಾರ್ಟ್‌ಫೋನ್ ಲೆನೊವೊ K6 ನೋಟ್ ಭಾರತೀಯರು ಹೆಚ್ಚು ಸರ್ಚ್ ಮಾಡಿದ ಸ್ಮಾರ್ಟ್‌ಫೋನ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೇ.! ಬೆಲೆ ಮತ್ತು ಫೀಚರ್ಸ್ ಸಮಾಂತರವಾಗಿರುವುದೇ ಇದಕ್ಕೆ ಕಾರಣ!!

ಪೂರ್ತಿ ಫೀಚರ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

#9 ಸ್ಯಾಮ್‌ಸಂಗ್ ಆನ್ ಮ್ಯಾಕ್ಸ್!!

#9 ಸ್ಯಾಮ್‌ಸಂಗ್ ಆನ್ ಮ್ಯಾಕ್ಸ್!!

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಡಮೆ ಬೆಲೆಗೆ ಅತ್ಯಂತ ಹೆಚ್ಚು ಪೀಚರ್ಸ್ ಹೊಂದಿರುವ ಮೊಬೈಲ್ ಎಂಬ ಹಣೆಪಟ್ಟಿ ಸ್ಯಾಮ್‌ಸಂಗ್ ಆನ್ ಮ್ಯಾಕ್ಸ್‌ಗಿದೆ.!! ಹಾಗಾಗಿ, ಭಾರತೀಯರು ಹೆಚ್ಚು ಸರ್ಚ್ ಮಾಡಿದ ಸ್ಮಾರ್ಟ್‌ಫೋನ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಜಿಗಿದಿದೆ.!!

ಪೂರ್ತಿ ಫೀಚರ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

#8 ಒನ್‌ಪ್ಲಸ್ 5

#8 ಒನ್‌ಪ್ಲಸ್ 5

ಮಧ್ಯಮ ಬೆಲೆಗೆ ಹೈ ಎಂಡ್ ಸ್ಮಾರ್ಟ್‌ಫೋನ್ ಫೀಚರ್ಸ್ ಹೊಂದಿದ್ದ ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನವೇ ಫೇಮಸ್ ಆಗಿತ್ತು. ಬಿಡುಗಡೆಯಾದ ನಂತರವೂ ಹೆಚ್ಚು ಜನರಿಂದ ಸರ್ಚ್‌ ಒಳಪಟ್ಟು ಭಾರತೀಯರು ಹೆಚ್ಚು ಸರ್ಚ್ ಮಾಡಿದ ಸ್ಮಾರ್ಟ್‌ಫೋನ್ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದಿದೆ.

ಪೂರ್ತಿ ಫೀಚರ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

#7 ನೋಕಿಯಾ 5

ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಿಡುಗಡೆಯಾದ ನಂತರ ಮಧ್ಯಮ ಬೆಲೆಯ ನೋಕಿಯಾ 5 ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಹೆಚ್ಚು ಸರ್ಚ್ ಆದ ಸ್ಮಾರ್ಟ್‌ಫೋನ್‌ಗಳಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಗೊಂಡಿದೆ.!!

ಪೂರ್ತಿ ಫೀಚರ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

#6 ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌8

#6 ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌8

ಗ್ಯಾಲಾಕ್ಸಿ ಎಸ್‌8 ಬ್ಯಾಟರಿ ಸ್ಪೋಟದ ತೊಂದರೆಗೆ ಸಿಲುಕಿದರೂ ಸಹ ಭಾರತೀಯರು ಹೆಚ್ಚು ಸರ್ಚ್ ಮಾಡಿದ ಸ್ಮಾರ್ಟ್‌ಫೋನ್ ಪಟ್ಟಿಯಲ್ಲಿ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌8 ಆರನೇ ಸ್ಥಾನದಲ್ಲಿದೇ.!! ಏನೇ ಆದರೂ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌ ಸರಣಿ ಸ್ಮಾರ್ಟ್‌ಫೋನ್ ಎಂಬುದೇ ಇದಕ್ಕೆ ಕಾರಣ!!

ಪೂರ್ತಿ ಫೀಚರ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

#5 ಹಾನರ್ 6‍‍x

#5 ಹಾನರ್ 6‍‍x

ಚೀನಾದ ನಂಬರ್ ಒನ್ ಮೊಬೈಲ್ ಕಂಪೆನಿ ಹಾನರ್ 6‍‍x ಭಾರತಿಯರು ಹೆಚ್ಚು ಸರ್ಚ್ ಮಾಡಿದ ಸ್ಮಾರ್ಟ್‌ಫೋನ್ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ.!! ಹೆಚ್ಚು ಪ್ರಚಲಿತವಾಗದಿದ್ದರೂ ತನ್ನ ಫೀಚರ್ಸ್ ಮತ್ತು ಬೆಲೆಯಿಂದಲೇ ಮೊಬೈಲ್ ಇಷ್ಟು ಫೇಮಸ್ ಆಗಿದೆ ಎನ್ನಬಹುದು.!!

ಪೂರ್ತಿ ಫೀಚರ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

#4 ಶಿಯೋಮಿ ರೆಡ್ಮಿ 4

#4 ಶಿಯೋಮಿ ರೆಡ್ಮಿ 4

ಕಡಿಮೆ ಬೆಲೆಗೆ ಬಿಡುಗಡೆಗೊಂಡ ಶಿಯೋಮಿ ರೆಡ್ಮಿ 4 ಭಾರತಿಯರು ಹೆಚ್ಚು ಸರ್ಚ್ ಮಾಡಿದ ಸ್ಮಾರ್ಟ್‌ಫೋನ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.!! 7000 ರೂ. ಬೆಲಯಲ್ಲಿ ಅತ್ಯುತ್ತಮ ಎನ್ನುವಂತಹ ಫೀಚರ್ಸ್ ಅನ್ನು ಶಿಯೋಮಿ ರೆಡ್ಮಿ 4 ಒಳಗೊಂಡಿತ್ತು.

ಪೂರ್ತಿ ಫೀಚರ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

#3 ಒಪ್ಪೊ ಎಫ್‌ 3ಪ್ಲಸ್

#3 ಒಪ್ಪೊ ಎಫ್‌ 3ಪ್ಲಸ್

ಹೈ ಎಂಡ್ ಸ್ಮಾರ್ಟ್‌ಫೋನ್ ಫೀಚರ್ಸ್ ಒಳಗೊಂಡಿದ್ದ ಒಪ್ಪೊ ಎಫ್‌ 3ಪ್ಲಸ್ ಭಾರತದಲ್ಲಿ ಹೆಚ್ಚು ಟ್ರೆಂಡ್ ಸೃಷ್ಟಿ ಮಾಡಿತ್ತು. ಹಾಗಾಗಿಯೇ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಮಾಡಿದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಒಪ್ಪೊ ಎಫ್‌ 3ಪ್ಲಸ್ ಮೂರನೇ ಸ್ಥಾನ ಪಡೆದುಕೊಂಡಿದೆ.!!

ಪೂರ್ತಿ ಫೀಚರ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

#2 ನೋಕಿಯಾ 6

#2 ನೋಕಿಯಾ 6

ನೋಕಿಯಾದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಎಂಬ ಹೆಗ್ಗಳಿಕೆ ಪಡೆದ ನೋಕಿಯಾ 6 ಭಾರತೀಯರು ಅತ್ಯಂತ ಹೆಚ್ಚು ಹುಡುಕಿದ ಸ್ಮಾರ್ಟ್‌ಫೋನ್‌ಗಳಲ್ಲಿ ಎರಡನೇ ಸ್ಥಾನ ಪಡೆದಿದೆ.!!

ಪೂರ್ತಿ ಫೀಚರ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

#1ಶಿಯೋಮಿ ರೆಡ್ಮಿ ನೋಟ್ 4

#1ಶಿಯೋಮಿ ರೆಡ್ಮಿ ನೋಟ್ 4

ಶಿಯೋಮಿಯ ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್ ರೆಡ್ಮಿ ನೋಟ್ 4 ಈ ವರ್ಷ ಭಾರತೀಯರು ಅತಿ ಹೆಚ್ಚು ಸರ್ಚ್ ಮಾಡಿರುವ ಸ್ಮಾರ್ಟ್‌ಫೋನ್ ಆಗಿದೆ.!! 4GB RAM, 64GB ಮೆಮೊರಿ ಹೊಂದಿರುವ ಈ ಸ್ಮಾರ್ಟ್‌ಫೋನ್ ಅತ್ಯದ್ಬುತ ಫೀಚರ್ಸ್ ಒಳಗೊಂಡಿದೆ.!!

ಪೂರ್ತಿ ಫೀಚರ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.ಹಾಗೆಯೇ ಮರೆಯದೇ ನಮ್ಮ ಫೆಸ್‌ಬುಕ್ ಪೇಜ್ ಲೈಕ್ ಮಾಡಿCool!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Well, in the smartphone world while there are lots of brands and manufactures all around the globe, it is pretty impressive how many phones are unveiled every now and then. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot