ಎಫ್‌ಸಿಸಿ ಡೇಟಾಬೇಸ್‌ನಲ್ಲಿ ನೋಕಿಯಾ RM-1018

Posted By:

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್ ಆದ 'ನೋಕಿಯಾ ಬೈ ಮೈಕ್ರೋಸಾಫ್ಟ್' ಫೋನ್ ವಲಯದಿಂದ ಬಂದಂತಹ ವರದಿಯು ಇನ್ನೂ ಹಸಿಯಾಗಿರುವಾಗಲೇ ಇನ್ನೊಂದು ಡಿವೈಸ್ ಎಫ್‌ಸಿಸಿ ಡೇಟಾಬೇಸ್‌ನಿಂದ ಹೊರಬಂದಿದೆ.

ಈ ಡಿವೈಸ್ ಹೊಸದಾಗಿದ್ದು ಮೈಕ್ರೋಸಾಫ್ಟ್ ಮೊಬೈಲ್ ಬ್ರ್ಯಾಂಡ್ ಅಡಿಯಲ್ಲಿ RM-1018 ಮಾಡೆಲ್ ಹೆಸರಿನಲ್ಲಿ ಪಟ್ಟಿ ಮಾಡಲಾಗಿದೆ. ಇದರಲ್ಲಿ ವಿಂಡೋಸ್ ಫೋನ್ ಚಾಲನೆಯಾಗುತ್ತಿದೆ. ನಮಗಿನ್ನೂ ಖಾತ್ರಿಯಿಲ್ಲ, ಆದರೆ ಇದು ಹೆಚ್ಚು ಕಡಿಮೆ ದೀರ್ಘ ಕಾಲದಿಂದ ವದಂತಿಯಲ್ಲಿರುವ ನೋಕಿಯಾ ಲ್ಯೂಮಿಯಾ 530 ಆಗಿರುವ ಸಾಧ್ಯತೆಯೇ ಹೆಚ್ಚಾಗಿದೆ.

ನಿರೀಕ್ಷಿತ ನೋಕಿಯಾ RM-1018 ವೈಶಿಷ್ಟ್ಯ

ಎಫ್‌ಸಿಸಿ ಪಟ್ಟಿಯ ಪ್ರಕಾರ, ಡಿವೈಸ್ ಹೊರತೆಗೆಯಲು ಸಾಧ್ಯವಾಗದಿರುವ ಬ್ಯಾಟರಿಯನ್ನು ಹೊಂದಿದ್ದು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್, ಮತ್ತು ಇತರ ಡಿವೈಸ್‌ಗಳಲ್ಲಿರುವಂತೆ ರೇಡಿಯೋ, ಸಂಪರ್ಕ ಆಯ್ಕೆಗಳಾದ 3ಜಿ, ವೈಫೈ, ಬ್ಲೂಟೂತ್ ಮತ್ತು ಜಿಪಿಎಸ್ ಅನ್ನು ಒಳಗೊಂಡಿದೆ. ಇದರ ಅಗಲ 62.3 ಮಿಲಿಮೀಟರ್‌ಗಳಾಗಿದ್ದು ಉದ್ದ 119.7 ಮಿಲಿಮೀಟರ್‌ಗಳಾಗಿದೆ.

ಇದಿಷ್ಟು ನಮಗೆ ತಿಳಿದು ಬಂದ ಮಾಹಿತಿಯಾಗಿದ್ದು ಡಿವೈಸ್ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿ ದೊರಕಿಲ್ಲ ಮತ್ತು ಇದು ವದಂತಿಯಾಗಿದೆ ಎಂಬುದನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ.

ಇದಕ್ಕಿಂತಲೂ ಹೆಚ್ಚಾಗಿ ನೋಕಿಯಾ ತನ್ನ ಲ್ಯೂಮಿಯಾ 1525 ಸ್ಮಾರ್ಟ್‌ಫೋನ್‌ನೊಂದಿಗೆ ಬರುತ್ತಿದೆ. ಇದು 6 ಇಂಚಿನ FHD ಡಿಸ್‌ಪ್ಲೇ, 2ಜಿಬಿ RAM, 16ಜಿಬಿ/32ಜಿಬಿ ಸಂಗ್ರಹಣಾ ಸಾಮರ್ಥ್ಯ, ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್, 20ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಮತ್ತು ಡ್ಯುಯೆಲ್ ಎಲ್‌ಇಡಿ ಫ್ಲ್ಯಾಶ್, ZEISS ಆಪ್ಟಿಕ್ಸ್, ಪೂರ್ಣ HD ವೀಡಿಯೋ ದಾಖಲಿಸುವಿಕೆ, ಮತ್ತು ಮುಂಭಾಗ ಕ್ಯಾಮೆರಾ ಸಾಮರ್ಥ್ಯ 1.2 ಮೆಗಾಪಿಕ್ಸೆಲ್‌ನೊಂದಿಗೆ ಬಂದಿದೆ. ಇದರಲ್ಲಿ ವೀಡಿಯೋ ಕರೆ ಸೌಲಭ್ಯ ಕೂಡ ಇದೆ.

Read more about:
English summary
This article tells that Nokia RM 1018 gets listed on FCC database
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot