ಡಬ್ಬಾ ಮೊಬೈಲ್ ಕೊಟ್ಟಿದ್ದಕ್ಕೆ 67 ಸಾವಿರ ರು ದಂಡ

By Super
|

ಡಬ್ಬಾ ಮೊಬೈಲ್ ಕೊಟ್ಟಿದ್ದಕ್ಕೆ 67 ಸಾವಿರ ರು ದಂಡ
ನೋಕಿಯಾ ಕಂಪನಿಗೆ ಯಾಕೋ ಟೈಮ್ ಸರಿಯಲ್ಲ ಎಂದು ಕಾಣುತ್ತಿದೆ. ಮಾರುಕಟ್ಟೆಯಲ್ಲಿ ಸ್ಥಿರತೆ ಇಲ್ಲದೆ ಆರಕ್ಕೇರದೆ ಮೂರಕ್ಕಿಳಿದ ಸ್ಥಿತಿಯಲ್ಲಿರುವಾಗ 2007ರ ಪ್ರಕರಣವೊಂದರಲ್ಲಿ ಗ್ರಾಹಕರೊಬ್ಬರಿಗೆ ಬರೋಬ್ಬರಿ 67 ಸಾವಿರ ರು ದಂಡ ತೆರಬೇಕಾಗಿದೆ.

2007ರಲ್ಲಿ ದೆಹಲಿಯ ರೋಹನ್ ಆರೋರಾ ಎಂಬಾತ ನೋಕಿಯಾ ಇ 90 ಕಮ್ಯೂನಿಕೇಟರ್ ಮೊಬೈಲ್ ಫೋನ್ ಅನ್ನು 37,000 ರು.ಗೆ ಖರೀದಿಸಿದ್ದ. ಆದರೆ, ಇ 90 ಮೊಬೈಲ್ ಸ್ವರ ಯಾಕೋ ಸಕತ್ ಸಪ್ಪೆಯಾಗಿತ್ತು.

ಒಳ ಬರುವ ಹೊರ ಹೋಗುವ ಕರೆಗಳನ್ನು ಸ್ವೀಕರಿಸಲು ಇ90 ಅಸಮರ್ಥವಾಗಿತ್ತು. ಅತ್ಯಂತ ಕಳಪೆ ಆಡಿಯೋ ಗುಣಮಟ್ಟ ಹೊಂದಿದ್ದ ಮೊಬೈಲ್ ಅನ್ನು ನೋಕಿಯಾ ಕೇರ್ ಸೆಂಟರ್ ಗೆ ಒಯ್ದು ಅರೋರಾ ಸೆಪ್ಟೆಂಬರ್ 2007ರಲ್ಲಿ ರಿಪೇರಿಗೆ ಕೊಟ್ಟಿದ್ದಾರೆ.

ಅದರೆ, ಎಷ್ಟೆ ಪ್ರಯತ್ನಪಟ್ಟರೂ ರಿಪೇರಿ ಮಾಡಲಾಗದ ನೋಕಿಯಾ ಸಂಸ್ಥೆ ಬದಲಿ ಮೊಬೈಲ್ ಆಗಲಿ, ಬದಲಿ ನಗದು ಹಣವನ್ನಾಗಿ ಹಿಂತಿರುಗಿಸಿಲ್ಲ. ಇದರಿಂದ ಸಿಟ್ಟಿಗೆದ್ದ ಅರೋರಾ

ಗ್ರಾಹಕರ ನ್ಯಾಯಾಲಯದಲ್ಲಿ ಮೊಬೈಲ್ ಸಗಟು ಮಾರಾಟಗಾರ ಲೂಥ್ರಾ ಕಮ್ಯೂನಿಕೇಷನ್ ವಿರುದ್ಧ ದೂರು ನೀಡಿದ್ದರು.

2007ರಿಂದ ವಿಚಾರಣೆ ನಡೆದು ಈಗ ಗ್ರಾಹಕ ರೋಹನ್ ಅರೋರಾ ಪರ ನ್ಯಾಯ ಹೊರ ಬಿದ್ದಿದೆ. ಎಂಸಿ ಮೆಹ್ರಾ ಅವರಿದ್ದ ನ್ಯಾಯಪೀಠ ಗ್ರಾಹಕರ ರೋಹನ್ ಗೆ ಹ್ಯಾಂಡ್ ಸೆಟ್ ವೆಚ್ಚ 37,000 ರು, ಪರಿಹಾರ ಧನ 25,000 ರು ಹಾಗೂ 5,000 ರು ವಿಚಾರಣೆ ವೆಚ್ಚವನ್ನು ನೀಡಬೇಕು ಎಂದು ತೀರ್ಪು ನೀಡಿದೆ.

ಒಟ್ಟಿನಲ್ಲಿ ಬದಲಿ ಹ್ಯಾಂಡ್ ಸೆಟ್ ನೀಡಿ ಕೈತೊಳೆದುಕೊಳ್ಳಬೇಕಿದ್ದ ರೀಟೈಲರ್ ಹಾಗೂ ನೋಕಿಯಾ ಸಂಸ್ಥೆ ಹಠಮಾರಿತನಕ್ಕೆ ಡಬಲ್ ದಂಡ ಬಿದ್ದಿದೆ. 37 ಸಾವಿರ ರು.ಗೆ 67 ಸಾವಿರ ರು ಗಳಿಸುವ ಸುದ್ದಿ ಕೇಳಿ ರೋಹನ್ ಖುಷಿಯಾಗಿದ್ದಾರೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X