ನೋಕಿಯಾ ದಿಂದ 3 ಹೊಸ ಆಶಾ ಫೋನ್

Posted By: Varun
ನೋಕಿಯಾ ದಿಂದ 3 ಹೊಸ ಆಶಾ ಫೋನ್

ನೆನ್ನೆ ತಾನೇ ವಿಂಡೋಸ್ 8 ಆಧಾರಿತ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿಕೊಂಡಿದ್ದ ನೋಕಿಯಾ, ಈಗ ಭಾರತದ ಮಧ್ಯಮ ಬಜೆಟ್ ಫೋನುಗಳ ಮಾರುಕಟ್ಟೆಗೆ ಈಗಾಗಲೇ ಯಶಸ್ವಿಯಾಗಿರುವ ಆಶಾ ಸರಣಿಯಗೆ 3 ಹೊಸ ಫೋನುಗಳನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದ್ದು, ಆಶಾ 305, ಆಶಾ 306 ಹಾಗು ಆಶಾ 311 ಸ್ಮಾರ್ಟ್ ಫೋನುಗಳನ್ನು (ನಾಳೆ) ಆಗಸ್ಟ್ 9ಕ್ಕೆ ಬಿಡುಗಡೆ ಮಾಡಲಿದೆ.

ಈ ಎಲ್ಲಾ ಸ್ಮಾರ್ಟ್ ಫೋನುಗಳಿಗೆ ಕೆಪಾಸಿಟಿವ್ ಟಚ್ ಸ್ಕ್ರೀನ್ ಇರಲಿದ್ದು S40 ತಂತ್ರಾಂಶ, ನೋಕಿಯಾ 2.0 ಬ್ರೌಸರ್ (ನೋಕಿಯಾ ಕ್ಲೌಡ್ ತಂತ್ರಜ್ಞಾನ ದೊಂದಿಗೆ ಸಂಪರ್ಕ) ಹೊಂದಲಿದೆ ಹಾಗು 10 ಸಾವಿರ ರೂಪಾಯಿಗೆ ಬರಲಿದೆ.

ಈ ಮೂರೂ ಸ್ಮಾರ್ಟ್ ಫೋನುಗಳ ಸಂಕ್ಷಿಪ್ತ ಫೀಚರುಗಳು ಈ ರೀತಿ ಇವೆ:

1) ನೋಕಿಯಾ ಆಶಾ 305

 • ದ್ವಿ ಸಿಮ್

 • 3 ಇಂಚಿನ ರೆಸಿಸ್ಟಿವ್ ಟಚ್ ಸ್ಕ್ರೀನ್

 • ಸ್ವಿಚ್ ಆಫ್ ಮಾಡದೆ ಸಿಮ್ ಹೊರ ತೆಗೆಯಲು ಈಸಿ ಸ್ವಾಪ್ ಸೌಕರ್ಯ

 • ಬ್ಲೂಟೂತ್

 • 2 ಮೆಗಾ ಪಿಕ್ಸೆಲ್ ಕ್ಯಾಮೆರಾ

 • ಬೆಲೆ 4,400 ರೂಪಾಯಿ.
 

2) ನೋಕಿಯಾ ಆಶಾ 306

ನೋಕಿಯಾ ಆಶಾ 305 ರೀತಿಯ ಫೀಚರುಗಳನ್ನು ಇದು ಒಳಗೊಂಡಿದ್ದರೂ ಇದು ಒಂದು ಸಿಮ್ ಸೌಲಭ್ಯ, 3 ಇಂಚ್ ರೆಸಿಸ್ಟಿವ್ ಟಚ್ ಸ್ಕ್ರೀನ್, ಹಾಗು WLAN ಮತ್ತು GPRS ಮೂಲಕ ವೀಡಿಯೋ ಸ್ಟ್ರೀಮಿಂಗ್ ಮಾಡುವ ಸೌಲಭ್ಯವೂ ಇದೆ.

ಈ ಆಶಾ 306 ಮೊಬೈಲ್ ನ ಬೆಲೆ 4,800 ರೂಪಾಯಿ.

 

3) ನೋಕಿಯಾ ಆಶಾ 311

 • 3 ಇಂಚ್ ನ ಕೆಪಾಸಿಟಿವ್ ಟಚ್ ಸ್ಕ್ರೀನ್

 • 1 GHz ಪ್ರೋಸೆಸರ್

 • 3.5G ಮತ್ತು ವೈಫೈ ಸಂಪರ್ಕ

 • ಫೇಸ್ ಬುಕ್ ಹಾಗು ಟ್ವಿಟರ್ ಗೆ ಪ್ರೀ ಲೋಡೆಡ್ ಆಪ್

 • WhatsApp ಮೆಸೆಂಜರ್

 • 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ

 • ಪ್ರೀ ಲೋಡೆಡ್ ಆಂಗ್ರಿ ಬರ್ಡ್ಸ್ ಆಟ

 • ಬೆಲೆ 6,400 ರೂಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot