ನೋಕಿಯಾದಿಂದ 3 ಆಶಾ ಸರಣಿಯ ಟಚ್ ಫೋನ್

ಏಷಿಯಾದಲ್ಲಿ ಕಳೆದ 11 ವರ್ಷಗಳಿಂದ ನಂ.1 ಸ್ಥಾನದಲ್ಲಿದ್ದ ಫಿನ್ ಲ್ಯಾಂಡ್ ಕಂಪನಿ ನೋಕಿಯಾ ಇತ್ತೀಚಿಗೆ ಸ್ಯಾಮ್ಸಂಗ್ ಗೆ ಆ ಸ್ಥಾನವನ್ನು ಬಿಟ್ಟುಕೊಟ್ಟಿತ್ತು. ಹಾಗಾಗಿಯೇ ತನ್ನ ಪಟ್ಟವನ್ನು ಮತ್ತೆ ಪಡೆಯಲು ಹೆಣಗುತ್ತಿರುವ ಅದು ಈಗ ಆಶಾ ಸರಣಿಯ ಮೂರು ಟಚ್ ಸ್ಕ್ರೀನ್ ಮೊಬೈಲುಗಳನ್ನು ಅನಾವರಣ ಮಾಡಿದೆ.
ನೋಕಿಯಾ ಆಶಾ 305, ನೋಕಿಯಾ ಆಶಾ 306 ಹಾಗು ನೋಕಿಯಾ ಆಶಾ 311 ಹೆಸರಿನ ಈ ಮೂರು ಮೊಬೈಲುಗಳು ಕೆಪಾಸಿಟಿವ್ ಟಚ್ ಸ್ಕ್ರೀನ್ ಹಾಗು S40 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಇದರಿಂದಾಗಿ ಆಶಾ ಸರಣಿಯ ಮೊಬೈಲುಗಳ ಸಂಖ್ಯೆ 10ಕ್ಕೆ ಏರಿದೆ.
S40 ತಂತ್ರಾಂಶದಿಂದಾಗಿ ಟಚ್ ಸ್ಕ್ರೀನು ಉತಾಮವಾಗಿ ಕಾರ್ಯ ನಿರ್ವಹಿಸಲಿದ್ದು, ಇಂಟರ್ನೆಟ್ ಸಂಪರ್ಕಕ್ಕೆ ನೋಕಿಯಾ ಬ್ರೌಸರ್ 2.0 ಇರಲಿದೆ. ಮೆಮೊರಿಯ ಉಪಯೋಗ ಕಡಿಮೆ ಮಾಡಿಕೊಳ್ಳಲು ಕ್ಲೌಡ್ ಕಂಪ್ಯೂಟಿಂಗ್ ಸೌಲಭ್ಯವೂ ಕಲ್ಪಿಸಲಾಗಿದೆ.
ಈ ಮೂರೂ ಫೋನುಗಳ ಸ್ಪೆಸಿಫಿಕೇಶನ್ ಗಳು ಈ ರೀತಿ ಇವೆ:
ನೋಕಿಯಾ ಆಶಾ 305
- ದ್ವಿ ಸಿಮ್
- 3 ಇಂಚಿನ ರೆಸಿಸ್ಟಿವ್ ಟಚ್ ಸ್ಕ್ರೀನ್
- ಸ್ವಿಚ್ ಆಫ್ ಮಾಡದೆ ಸಿಮ್ ಹೊರ ತೆಗೆಯಲು ಈಸಿ ಸ್ವಾಪ್ ಸೌಕರ್ಯ
- ಬ್ಲೂಟೂತ್
- 2 ಮೆಗಾ ಪಿಕ್ಸೆಲ್ ಕ್ಯಾಮೆರಾ
ನೋಕಿಯಾ ಆಶಾ 306
ನೋಕಿಯಾ ಆಶಾ 305 ರೀತಿಯ ಫೀಚರುಗಳನ್ನು ಇದು ಒಳಗೊಂಡಿದ್ದರೂ ಇದು ಒಂದು ಸಿಮ್ ಸೌಲಭ್ಯ, 3 ಇಂಚ್ ರೆಸಿಸ್ಟಿವ್ ಟಚ್ ಸ್ಕ್ರೀನ್, ಹಾಗು WLAN ಮತ್ತು GPRS ಮೂಲಕ ವೀಡಿಯೋ ಸ್ಟ್ರೀಮಿಂಗ್ ಮಾಡುವ ಸೌಲಭ್ಯವೂ ಇದೆ.
ಈ ಆಶಾ 306 ಮೊಬೈಲ್ ನ ಬೆಲೆ 4,800 ರೂಪಾಯಿ.
ನೋಕಿಯಾ ಆಶಾ 311
- 3 ಇಂಚ್ ನ ಕೆಪಾಸಿಟಿವ್ ಟಚ್ ಸ್ಕ್ರೀನ್
- 1 GHz ಪ್ರೋಸೆಸರ್
- 3.5G ಮತ್ತು ವೈಫೈ ಸಂಪರ್ಕ
- ಫೇಸ್ ಬುಕ್ ಹಾಗು ಟ್ವಿಟರ್ ಗೆ ಪ್ರೀ ಲೋಡೆಡ್ ಆಪ್
- WhatsApp ಮೆಸೆಂಜರ್
- 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ
- ಪ್ರೀ ಲೋಡೆಡ್ ಆಂಗ್ರಿ ಬರ್ಡ್ಸ್ ಆಟ


Click it and Unblock the Notifications