ಲುಮಿಯಾ ಬ್ಯಾಟರಿ ಪವರ್ ಬಾಳಿಕೆಗೆ ಪರಿಷ್ಕರಣೆ ನಿರ್ಧಾರ

ನೋಕಿಯಾ ಕಂಪನಿ ವಿನೂತನವಾಗಿ ಹೊರತಂದಿರುವ ನೋಕಿಯಾ ಲುಮಿಯಾ 800 ಸ್ಮಾರ್ಟ್ ಫೋನಿನ ಬ್ಯಾಟರಿ ಸಾಮರ್ಥ್ಯದಲ್ಲಿ ಸಮಸ್ಯೆ ಇದೆ ಎಂಬ ವರದಿಗೆ ಸ್ಪಂದಿಸಿರುವ ಕಂಪನಿ ಈ ಕುರಿತು ಪರಿಶೀಲಿಸಿ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಲು ಎರಡು ಪರಿಷ್ಕರಣೆಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ.
ಕಳೆದ ವಾರವಷ್ಟೇ ಮೊಬೈಲಿನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಬಳಕೆದಾರರೊಬ್ಬರು ನೀಡಿದ್ದ ವರದಿಗೆ ಅನುಗುಣವಾಗಿ ಬ್ಯಾಟರಿ ಬ್ಯಾಕಪ್ ಗೆಂದು ಎರಡು ಪರಿಷ್ಕರಣೆಗಳನ್ನು ಮಾಡುವುದಾಗಿ ಕಂಪನಿ ತಿಳಿಸಿದೆ. ಆದರೆ ಈ ಕುರಿತು ಪರಿಶೀಲಿಸಿದಾಗ ಈ ಹಿಂದೆ ಖರೀದಿಸಿದ್ದ ಗ್ರಾಹಕರ ಲುಮಿಯಾ ಮೊಬೈಲಿನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದೂ ತಿಳಿಸಿದೆ.
ಬ್ಯಾಟರಿ ಗುಣಮಟ್ಟ ಸುಧಾರಣೆಗೆ ಎರಡು ನೂತನ ಪರಿಷ್ಕರಣೆ ಮಾಡಲಿರುವುದಾಗಿ ತಿಳಿಸಿರುವ ಕಂಪನಿ ಒಂದು ಪರಿಷ್ಕರಣೆಯನ್ನು ಈ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಮತ್ತೊಂದನ್ನು 2012 ರ ಆರಂಭದಲ್ಲಿ, ಬಹುಶಃ ಜನವರಿಯಲ್ಲಿ ಮಾಡಲಿರುವುದಾಗಿ ತಿಳಿಸಿದೆ.
ಮುಂದಿನ ತಿಂಗಳಿನಲ್ಲಿ ನಡೆಯುವ ಪರಿಷ್ಕರಣೆ ಬ್ಯಾಟರಿ ಗುಣಮಟ್ಟ ಹೆಚ್ಚಿಸುತ್ತದೆ ಮತ್ತು ಜನವರಿಯಲ್ಲಿನ ಪರಿಷ್ಕರಣೆ ಪ್ರಸ್ತುತ ಇರುವ 1300 mAh ಬ್ಯಾಟರಿ ಸಾಮರ್ಥ್ಯವನ್ನು 1450 mAh ಬ್ಯಾಟರಿಯಷ್ಟು ಸಾಮರ್ಥ್ಯಕ್ಕೆ ಏರಿಸಲಿದೆ ಎಂದು ತಿಳಿದುಬಂದಿದೆ. ಒಟ್ಟಾರೆ ಈ ಎರಡೂ ಪರಿಷ್ಕರಣೆಯಿಂದ ಬ್ಯಾಟರಿಗೆ ಸಂಬಂಧಿಸಿದ್ದ ಸಮಸ್ಯೆ ಮುಕ್ತಾಯ ಕಾಣಲಿದೆ ಎಂದು ಕಂಪನಿ ತಿಳಿಸಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
