Subscribe to Gizbot

ವೈರಲ್ ಆಗಿದೆ ನೋಕಿಯಾ ‍‍‍‍‍X ಲೀಕ್ ಫೋಟೋ: ಏಪ್ರಿಲ್ 27ಕ್ಕೆ ಲಾಂಚ್

Written By:

ಈಗಾಗಲೇ ಮಾರುಕಟ್ಟೆಯಲ್ಲಿ ಆಪಲ್ ಐಫೋನ್ X ಸದ್ದು ಮಾಡುತ್ತಿದೆ. ತನ್ನ ವಿನ್ಯಾಸ ಮತ್ತು ವಿಶೇಷತೆಗಳಿಂದಲೇ ಬಳಕೆದಾರರನ್ನು ಸೆಳೆದಿದ್ದ ಐಫೋನ್ X ಅನ್ನು ಮೀರಿಸುವ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ನೋಕಿಯಾ ಮುಂದಾಗಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಹುಟ್ಟಿಹಾಕಲಿದೆ. ಇದೇ ಏಪ್ರಿಲ್ 27 ರಂದು ಚೀನಾದಲ್ಲಿ ಲಾಂಚ್ ಆಗಲಿದೆ ಎನ್ನಲಾಗಿರುವ ನೋಕಿಯಾ X ಸ್ಮಾರ್ಟ್‌ಫೋನ್ ಫೋಟೊವೊಂದು ಲೀಕ್ ಆಗಿದ್ದು, ಆನ್‌ಲೈನಿನಲ್ಲಿ ಹವಾ ಎಬ್ಬಿಸಿದೆ.

ವೈರಲ್ ಆಗಿದೆ ನೋಕಿಯಾ ‍‍‍‍‍X ಲೀಕ್ ಫೋಟೋ: ಏಪ್ರಿಲ್ 27ಕ್ಕೆ ಲಾಂಚ್

ಈ ಹಿಂದೆ ನೋಕಿಯಾ ಕಂಪನಿಯ ಒಡೆತವನ್ನು ಹೊಂದಿದ್ದ ಮೈಕ್ರೊಸಾಫ್ಟ್ ನೋಕಿಯಾ X ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು. ಆದರೆ ಅದು ವಿಂಡೋಸ್ ಫೋನ್ ಆಗಿತ್ತು. ಆದರೆ ಈ ಬಾರಿ HMD ಕಂಪನಿಯೂ ಆಂಡ್ರಾಯ್ಡ್ ಟಾಪ್ ಎಂಡ್ ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದ್ದು, ಲೀಕ್ ಆಗಿರುವ ಫೋಟೋ ವನ್ನು ನೋಡಿದರೆ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಹುಟ್ಟಿಹಾಕುವ ಸಾಧ್ಯತೆಯೂ ಜೋರಾಗಿದೆ ಎನ್ನಲಾಗಿದೆ.

ಇದೇ 27 ರಂದು ಈ ನೋಕಿಯಾ X ಸ್ಮಾರ್ಟ್‌ಫೋನ್ ಲಾಂಚ್ ಆಗಲಿದ್ದು, ಬಳಕೆದಾರರಿಗೆ ಹೊಸ ಮಾದರಿಯ ವಿನ್ಯಾಸದಲ್ಲಿ ಕಾಣಸಿಕೊಳ್ಳಲಿದೆ. ಇದೊಂದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಆಗಲಿದ್ದು, ಮುಂಭಾಗದಲ್ಲಿ ಸಂಪೂರ್ಣವಾಗಿ ಡಿಸ್‌ಪ್ಲೇಯೇ ಆವರಿಸಿಕೊಂಡಿದ್ದು, ಬೇರೆ ಯಾವುದೇ ಆಯ್ಕೆಯೂ ಕಾಣಿಸಿಕೊಂಡಿಲ್ಲ. ಸಂಪೂರ್ಣ ಡಿಸ್‌ಪ್ಲೇ ಯನ್ನು ಕಾಣಬಹುದಾಗಿದೆ.

ಈ ಸ್ಮಾರ್ಟ್‌ಫೋನಿನಲ್ಲಿ ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇಲ್ಲವೇ, ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕಾಣುವ ಸಾಧ್ಯತೆ ಇದ್ದು, ಡ್ಯುಯಲ್ ಕ್ಯಾಮೆರಾವನ್ನು ಹೊಂದಿರಲಿದೆ. ಅಲ್ಲದೇ ಟಾಪ್ ಪ್ರೋಸೆಸರ್ ಇರುವ ಸಾಧ್ಯತೆ ಇದ್ದು, ಹೆಚ್ಚಾಗಿ ವಿಶೇಷತೆಗಳ ಬಗ್ಗೆ ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ.

How to read deleted WhatsApp messages - GIZBOT KANNADA

ಇದು ನೋಕಿಯಾ X ಇಲ್ಲವೇ ನೋಕಿಯಾ 10 ಎಂದು ಕರೆಯವು ಸಾಧ್ಯತೆ ಇದ್ದು, ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆ ತೋರಿಸಿಕೊಡಲಿದ್ದು, ಭಾರತೀಯ ಮಾರುಕಟ್ಟೆಗೆ ಶೀಘ್ರವೇ ಬರುವ ಸಾಧ್ಯತೆಯೂ ದಟ್ಟವಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಲೀಕ್ ಫೋಟೋದಿಂದಲೇ ಸದ್ದು ಮಾಡುತ್ತಿರುವ ನೋಕಿಯಾ ‍‍‍X, ಬಿಡುಗಡೆಯ ನಂತರ ಹೇಗೆ ಗೇಮ್ ಚೇಂಜರ್ ಆಗಲಿದೆ ಎಂಬುದನ್ನು ನೋಡಬೇಕು.

English summary
Nokia X could be unveiled by HMD Global on April 27. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot