Subscribe to Gizbot

ನೋಕಿಯಾ ಎಕ್ಸ್‌‌ ಪ್ಲಸ್‌,ಎಕ್ಸ್ ಎಲ್‌ ಎರಡು ತಿಂಗಳಲ್ಲಿ ಬಿಡುಗಡೆ

Posted By:

ನೋಕಿಯಾ ಕಂಪನಿ ಆಂಡ್ರಾಯ್ಡ್‌ ಓಪನ್‌ ಸೋರ್ಸ್‌ ಪ್ರೊಜೆಕ್ಟ್‌ನಲ್ಲಿ ಕಾರ್ಯ‌ ನಿರ್ವ‌ಹಿಸುವ ನೋಕಿಯಾ ಎಕ್ಸ್‌ ಎಲ್‌ ಮತ್ತು ನೋಕಿಯಾ ಎಕ್ಸ್‌ ಪ್ಲಸ್‌ ಸ್ಮಾರ್ಟ್‌‌ಫೋನ್‌ಗಳನ್ನು ಎರಡು ತಿಂಗಳ ಒಳಗಡೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನೋಕಿಯಾ ತಿಳಿಸಿದೆ.

ನೋಕಿಯಾ ಎಕ್ಸ್‌ ಸ್ಮಾರ್ಟ್‌‌ಫೋನ್‌ ನಿನ್ನೆ ಬಿಡುಗಡೆಯಾಗಿದ್ದು ಮಾರುಕಟ್ಟೆಯಲ್ಲಿ ಲಭ್ಯವಿದೆ.ನೋಕಿಯಾದ ಮೂರು ಆಂಡ್ರಾಯ್ಡ್‌ ಸ್ಮಾರ್ಟ್‌‌ಫೋನ್‌ಗಳು ಮೂರು ಸ್ಮಾರ್ಟ್‌‌ಫೋನ್‌ಗಳು ಡ್ಯುಯಲ್‌ ಸಿಮ್‌ಗೆ‌‌ ಬೆಂಬಲ ನೀಡುತ್ತವೆ.ನೋಕಿಯಾ ಎಕ್ಸ್‌ ಎಲ್‌ 99 ಯುರೋ(ಅಂದಾಜು 8,400 ರೂಪಾಯಿ)ನೋಕಿಯಾ ಎಕ್ಸ್‌ ಪ್ಲಸ್‌ 109 ಯುರೋ(ಅಂದಾಜು 9,300 ರೂಪಾಯಿ) ನಿಗದಿ ಪಡಿಸಿದೆ.

ನೋಕಿಯಾ ತನ್ನ ಪ್ರಥಮ ಆಂಡ್ರಾಯ್ಡ್‌ ಓಪನ್‌ ಸೋರ್ಸ್‌ ಪ್ರೊಜೆಕ್ಟ್‌ನಲ್ಲಿ ಕಾರ್ಯ‌ನಿರ್ವ‌ಹಿಸುವ ಮೂರು ಸ್ಮಾರ್ಟ್‌ಫೋನ್‌‌ಗಳನ್ನು ಸ್ಪೈನ್‌ನಲ್ಲಿ ನಡೆದ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌‌ನಲ್ಲಿ ಸಮ್ಮೇಳನದಲ್ಲಿ ಬಿಡುಗಡೆ ಮಾಡಿತ್ತು.

 ನೋಕಿಯಾ ಎಕ್ಸ್‌‌ ಪ್ಲಸ್‌,ಎಕ್ಸ್ ಎಲ್‌ ಎರಡು ತಿಂಗಳಲ್ಲಿ ಬಿಡುಗಡೆ

ನೋಕಿಯಾ ಎಕ್ಸ್‌ ಎಲ್‌
ವಿಶೇಷತೆ:
5 ಇಂಚಿನ WVGAಸ್ಕ್ರೀನ್‌(480x800 ಪಿಕ್ಸೆಲ್‌)
1GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌
4ಜಿಬಿ ಆಂತರಿಕ ಮೆಮೊರಿ
768 ಎಂಬಿ ರ್‍ಯಾಮ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್‌,ಜಿಪಿಎಸ್‌‌,ವೈಫೈ
2000mAh ಬ್ಯಾಟರಿ

ನೋಕಿಯಾ ಎಕ್ಸ್‌ ಪ್ಲಸ್‌
ವಿಶೇಷತೆ:
ಡ್ಯುಯಲ್‌ ಸಿಮ್‌
4 ಇಂಚಿನ WVGA ಸ್ಕ್ರೀನ್‌(480x800 ಪಿಕ್ಸೆಲ್‌)
1GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌
4ಜಿಬಿ ಆಂತರಿಕ ಮೆಮೊರಿ
768 ಎಂಬಿ ರ್‍ಯಾಮ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ವಿಶೇಷತೆಯಿಲ್ಲ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್‌,ಜಿಪಿಎಸ್‌‌,ವೈಫೈ
1500mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot