ಆಕರ್ಷಕ ಫೀಚರ್‌ಗಳೊಂದಿಗೆ ನೋಕಿಯಾ ಎಕ್ಸ್ ನೋಟ

Written By:

ನೋಕಿಯಾ ಎಕ್ಸ್ ಆಶಾ ಮತ್ತು ಲ್ಯೂಮಿಯಾ ವಿನ್ಯಾಸವನ್ನೇ ಅಸಲಿಗೆ ಪಡೆದುಕೊಂಡಿದೆ. ನೋಕಿಯಾವು ತನ್ನ ಎಕ್ಸ್ ಸಿರೀಸ್ ಫೋನ್‌ಗೆ ಅತ್ಯುತ್ತು ವಿನ್ಯಾಸವನ್ನು ನೀಡಿದ್ದು ಇದು ಆಕರ್ಷಕವಾಗಿದೆ. ಹಗುರವಾಗಿರುವ ಈ ಫೋನ್ ಸೂಕ್ಷ್ಮ ರೀತಿಯ ವಿನ್ಯಾಸವನ್ನು ಪಡೆದುಕೊಂಡು ಸುಂದರವಾಗಿದೆ. ಫೋನ್‌ನ ಹಿಂಭಾಗ ಕವರ್ ಅನ್ನು ತೆಗೆಯಬಹುದಾಗಿದ್ದು, ಫೋನ್ ಯಾವುದೇ ಅನಾವಶ್ಯಕ ಗ್ಯಾಪ್ ಅನ್ನು ಹೊಂದಿಲ್ಲ. ನೋಕಿಯಾ ಎಕ್ಸ್ ಕಪ್ಪು, ಬಿಳಿ, ಕೆಂಪು, ಹಸಿರು ಬಣ್ಣದಲ್ಲಿ ಲಭ್ಯವಿದೆ.

ಇದು 4.0 ಇಂಚಿನ IPS LCD ಪರದೆಯೊಂದಿಗೆ ಬಂದಿದ್ದು, ಫೋನ್ ಹಿಂಭಾಗ ಕ್ಯಾಮೆರಾ ಸಾಮರ್ಥ್ಯ 3 ಮೆಗಾಪಿಕ್ಸೆಲ್ ಆಗಿದ್ದು ಧ್ವನಿವರ್ಧಕ ಕೂಡ ಚೆನ್ನಾಗಿದೆ. ಫೋನ್‌ನ ಬಲಭಾಗದಲ್ಲಿ ನಿಮಗೆ ವಾಲ್ಯೂಮ್ ರಾಕರ್ ಅನ್ನು ಕಾಣಬಹುದಾಗಿದೆ. ಪವರ್ ಲಾಕ್ ಕೀಯನ್ನು ಕೂಡ ಫೋನ್ ಹೊಂದಿದೆ. ಫೋನ್‌ನ ಎಡಭಾಗದಲ್ಲಿ, ಇದು ತಾಜಾ ಮತ್ತು ಸ್ವಚ್ಛ ನೋಟವನ್ನು ನೀಡಿದೆ. ಪೋನ್‌ನ ಮೇಲ್ಭಾಗವು 3.5mm ಹೆಡ್‌ಫೋನ್ ಜಾಕ್ ಅನ್ನು ಹೊಂದಿದ್ದು, ಕೆಳಭಾಗದಲ್ಲಿ ಚಾರ್ಜಿಂಗ್ ಮಾಡುವುದಕ್ಕಾಗಿ microUSB ಪೋರ್ಟ್ ಮತ್ತು ಡೇಟಾ ಟ್ರಾನ್ಸಫರ್ ಸಿಟ್ಸ್ ಅನ್ನು ಹೊಂದಿದೆ.

ನೋಕಿಯಾ ಎಕ್ಸ್ ಕುರಿತ ವೀಡಿಯೋ ರಿವ್ಯೂ

ಇಷ್ಟೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದ್ದರೂ ಡಿವೈಸ್ ಗಂಭೀರ ಬೆಲೆಯಲ್ಲಿ ಬಂದಿರುವುದು ಹರ್ಷವನ್ನುಂಟು ಮಾಡಿದೆ. ಇದು ಇತ್ತೀಚಿನ ಗೋರಿಲ್ಲಾ ಗ್ಲಾಸ್ ಡಿಸ್‌ಪ್ಲೇಯನ್ನು ಹೊಂದಿಲ್ಲದಿದ್ದರೂ ವಿಶಿಷ್ಟವಾಗಿ ಕಣ್ಸೆಳೆಯುವಂತಿದೆ. ಅಂತೂ ಕಡಿಮೆ ಬಜೆಟ್ ದರದಲ್ಲೇ ನೋಕಿಯಾ ತನ್ನ ನೋಕಿಯಾ ಎಕ್ಸ್ ಅನ್ನು ಪ್ರಸ್ತುತಪಡಿಸಿರುವುದು ನೋಕಿಯಾ ಪ್ರೇಮಿಗಳಿಗೆ ಹಬ್ಬವನ್ನುಂಟು ಮಾಡಿದೆ ಎಂದೇ ಹೇಳಬಹುದು. ಮತ್ತು ಈ ಫೋನ್‌ನಿಂದ ನೋಕಿಯಾ ತನ್ನ ಕಳೆದುಹೋದ ಹೆಸರನ್ನು ಪುನಃ ಪಡೆಯಬಹುದೆಂಬ ಆಶಾಭಾವನೆ ನೋಕಿಯಾದ್ದಾಗಿದೆ.

<center><iframe width="100%" height="360" src="//www.youtube.com/embed/Dx96-jrOWZo?feature=player_embedded" frameborder="0" allowfullscreen></iframe></center>

Read more about:
English summary
Nokia x smartphone video review showing all the features and specifications of mobile which is running under android OS.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot