ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ನೋಕಿಯಾ X2 ಆಗಮನ

By Shwetha
|

ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ X2 ನ ಲಾಂಚಿಗ್‌ಗೆ ಬೇಕಾದ ಎಲ್ಲಾ ತಯಾರಿಯನ್ನು ಮೈಕ್ರೋಸಾಫ್ಟ್ ಮಾಡಿಕೊಂಡಿದೆ. ಈಗಾಗಲೇ ಕಂಪೆನಿ ನೋಕಿಯಾ X2 ವನ್ನು ಕಳೆದ ತಿಂಗಳಿನಲ್ಲೇ ತೋರಿಸಿತ್ತು. ಇನ್ನು ಈ ಡಿವೈಸ್‌ನ ವಿಶಿಷ್ಟತೆ ಕಡೆಗೆ ಮನ ಕೊಡುವುದಾದರೆ ಇದು 4.3 ಇಂಚಿನ WVGA ಡಿಸ್‌ಪ್ಲೇಯೊಂದಿಗೆ ಬಂದಿದೆ. ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ, ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2014 ರಲ್ಲಿ ಬಿಡುಗಡೆಯಾದ ನೋಕಿಯಾ X ಶ್ರೇಣಿಗಳ ಇದೊಂದು ಭಾಗವಾಗಿದೆ ಎಂದೂ ಕೂಡ ಹೇಳಬಹುದು.

ಡಿವೈಸ್‌ನಲ್ಲಿ 1.2GHz ಡ್ಯುಯೆಲ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಜೊತೆಗೆ 1 ಜಿಬಿ RAM ಡಿವೈಸ್‌ನಲ್ಲಿದೆ. ನೋಕಿಯಾ X ಮತ್ತು ನೋಕಿಯಾ XL ನಂತೆ ಡ್ಯುಯೆಲ್ ಸಿಮ್ ಅನ್ನು ಬೆಂಬಲಿಸುವ ಫೋನ್ ಇದಾಗಿದೆ.

ನೋಕಿಯಾ ಸಂವಾದಗಳಿಗೆ ಪೂರಕವಾಗಿರುವಂತೆ, ನೋಕಿಯಾ X2 ಗೆ ಅಗತ್ಯವಾಗಿರುವ ಕೆಲವೊಂದು ಅಪ್ಲಿಕೇಶನ್‌ಗಳ ಪಟ್ಟಿಯನ್ನು ಇಂದಿನ ನಮ್ಮ ಲೇಖನ ತಂದಿದೆ. ಆ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ನೋಡೋಣ.

#1

#1

ಯಾಮರ್
ನಿಮಗೆ ಅತ್ಯಗತ್ಯವಾಗಿ ಬೇಕಾಗಿರುವ ಸಾಮಾಜಿಕ ನೆಟ್‌ವರ್ಕ್ ಯಾಮರ್ ಆಗಿದೆ. ಪ್ರಾಜೆಕ್ಟ್‌ಗಳು, ಚಾಟ್ ಮತ್ತು ಸಹೋದ್ಯೋಗಿಗಳ ಅಪ್‌ ಟು ಡೇಟ್ ಮಾಹಿತಿಯನ್ನು ನೀಡುವ ಈ ಅಪ್ಲಿಕೇಶನ್‌ನಲ್ಲಿ ನಿಮಗೆ ಉಚಿತವಾಗಿ ಸಂವಾದಗಳನ್ನು ನಡೆಸಬಹುದಾಗಿದೆ.

#2

#2

ವಿಚಾಟ್
ಇನ್ನು ವಾಟ್ಸಾಪ್ ಅನ್ನು ಮರೆತುಬಿಡಿ. ಇದು X2 ವನ್ನು ಇನ್ನೂ ಹೊಸತಾಗಿಸುತ್ತದೆ. ನಿಮಗೆ ಇದರ ಮೂಲಕ ಸರಳವಾದ ಎಸ್‌ಎಮ್‌ಎಸ್ ಪಠ್ಯ ಸಂದೇಶವನ್ನು ಕಳುಹಿಸಬಹುದು. ಧ್ವನಿ ಕರೆಗಳನ್ನು ಕೂಡ ಇದರ ಮೂಲಕ ನಿಮಗೆ ಮಾಡಬಹುದು.

#3

#3

ಫಿಂಡ್ರೆ
ಪ್ರಯಾಣದ ಮಾಹಿತಿಗಳನ್ನು ನೀಡುವ ಒಂದು ಉತ್ತಮ ಅಪ್ಲಿಕೇಶನ್ ಇದಾಗಿದೆ.

#4

#4

ಇನ್‌ಸ್ಟಾಗ್ರಾಮ್
ಇದಕ್ಕೆ ಇನ್ನೊಂದು ದ್ವಿತೀಯ ಪ್ರಸ್ತುತಿ ಬೇಕೆಂದೇನಿಲ್ಲ. ನಿಮ್ಮ ಹೊಸ ನೋಕಿಯಾ X2 ವಿನಿಂದ ತೆಗೆದ ಫೋಟೋಗಳನ್ನು ಇದರ ಮೂಲಕ ನಿಮಗೆ ಹಂಚಿಕೊಳ್ಳಬಹುದಾಗಿದೆ.

#5

#5

ಬ್ರ್ಯೂಸ್ಟರ್
ಈ ಅಪ್ಲಿಕೇಶನ್ ಸದ್ಯದಲ್ಲೇ ಬರಲಿದ್ದು, ನಿಮ್ಮ ಲಿಂಕ್‌ಡನ್ ವ್ಯವಹಾರ ನೆಟ್‌ವರ್ಕ್‌ನಿಂದ ಹಿಡಿದು ಗೂಗಲ್ ಸಂಪರ್ಕಗಳು ಮತ್ತು ನಿಮ್ಮ ಫೇಸ್‌ಬುಕ್ ಸ್ನೇಹಿತರ ಎಲ್ಲಾ ವಿಷಯಗಳ ಸವಿವರ ಮಾಹಿತಿಯನ್ನು ಈ ಅಪ್ಲಿಕೇಶನ್ ನಿಮಗೆ ನೀಡುತ್ತದೆ.

Best Mobiles in India

Read more about:
English summary
This article tells about that Nokia x2 android smartphone coming soon top 5 essential apps recommended.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X