Subscribe to Gizbot

ಮಾರ್ಪಡಿತ ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿ ನೋಕಿಯಾ x2

Written By:

ಹೆಚ್ಚಿನವರಿಗೆ, ಮೂಲ ನೋಕಿಯಾ x ಕಿಲ್ಲರ್ ಫೋನ್ ಅಲ್ಲವೇ ಅಲ್ಲ. ಇದು ಕೆಲವೊಂದು ಸಮಸ್ಯೆಗಳನ್ನು ಒಳಗೊಂಡಿತ್ತು ಅಂದರೆ ಡಿಸ್‌ಪ್ಲೇ ರೆಸಲ್ಯೂಶನ್ ಸಮಸ್ಯೆ ಪ್ರೊಸೆಸರ್ ಸಮಸ್ಯೆ ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ನೋಕಿಯಾ ಎದುರಿಸಿತ್ತು.

ಈ ವರ್ಷದ MWC ಟೆಕ್ ಪ್ರದರ್ಶನದಲ್ಲಿ, ನೋಕಿಯಾ ನೋಕಿಯಾ x ಅನ್ನು ಪ್ರಸ್ತುತಪಡಿಸಿದ ನಂತರ ಮೈಕ್ರೋಸಾಫ್ಟ್ ಮೊಬೈಲ್ ಕೆಲವೊಂದು ಮಾರ್ಪಾಡುಗಳೊಂದಿಗೆ ದ್ವಿತೀಯ ಸೆಟ್ ಅನ್ನು ಪ್ರಸ್ತುತಪಡಿಸಲೇಬೇಕು.

ನೋಕಿಯಾ x2 ಶೀಘ್ರದಲ್ಲಿ ಭಾರತಕ್ಕೂ ಆಗಮನ

ನೋಕಿಯಾ x ಭಾರತದಲ್ಲಿ ಇದೀಗ ರೂ 6,000 ದಲ್ಲಿ ಲಭ್ಯವಾಗುತ್ತಿದೆ. ಮೈಕ್ರೋಸಾಫ್ಟ್ ಎರಡನೇ ದ್ವಿತಿಯ ಜನರೇಶನ್ ಹಾರ್ಡ್‌ವೇರ್ ಅನ್ನು ಕೂಡ ಸ್ಥಾಪಿಸಬಹುದಾಗಿದೆ. ಇದರರ್ಥ ನೋಕಿಯಾ ವಿವಿಧ ಬ್ಯಾಚ್‌ಗಳ ಮೂಲಕ ಮೊಬೈಲ್‌ಗಳನ್ನು ಆಮದು ಮಾಡಲು ಪ್ರಾರಂಭಿಸಿದೆ.

ಭಾರತದ ಆಮದು/ರಫ್ತು ವೆಬ್‌ಸೈಟ್ ಆದ ಜೌಬಾದ ಪ್ರಕಾರ ನೋಕಿಯಾ x2 ಡಿಎಸ್ 4.3 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದೆ ಡ್ಯುಯೆಲ್ ಸಿಮ್ ಆಗಿರುವ ನೋಕಿಯಾ x2 ಜೌಬಾದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು ಅಂದರೆ ಭಾರತದಲ್ಲಿ ಈ ಡಿವೈಸ್ ಯಾವಾಗ ಬೇಕಾದರೂ ಲಾಂಚ್ ಆಗಬಹುದಾಗಿದೆ.

ನೋಕಿಯಾ x2 4.3 ಇಂಚಿನ ಕ್ಲಿಯರ್ ಬ್ಲ್ಯಾಕ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದು ಗೀರುಗಳು ಉಂಟಾಗದಿರುವಂತಹ ಗ್ಲಾಸ್ ಅನ್ನು ಒಳಗೊಂಡಿದೆ. 1.2 GHz ಡ್ಯುಯೆಲ್-ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಜೊತೆಗೆ ಅಡ್ರೆನೋ 302 ಫೋನ್‌ನಲ್ಲಿದೆ. ಇದರ RAM ಸಾಮರ್ಥ್ಯ 1ಜಿಬಿಯಾಗಿದೆ.

ಬಜೆಟ್ ಫೋನ್ ನೋಕಿಯಾ X ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ 2.0 ಆಧಾರಿತ AOSP ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ನೊಂದಿಗೆ ಚಾಲನೆಯಾಗುತ್ತಿದೆ. ಇದು 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಇದರಲ್ಲಿ ಎಲ್‌ಇಡಿ ಫ್ಲ್ಯಾಶ್ ಮತ್ತು ಎಚ್‌ಡಿ ವೀಡಿಯೋ ರೆಕಾರ್ಡಿಂಗ್ ಕೂಡ ಇದೆ. ಪೋನ್‌ನ ಮುಂಭಾಗ ಕ್ಯಾಮೆರಾ ಸಾಮರ್ಥ್ಯ 0.3 ಮೆಗಾಪಿಕ್ಸೆಲ್ ಆಗಿದೆ.

ಇದರ ಆಂತರಿಕ ಮೆಮೊರಿಯು 4 ಜಿಬಿಯಾಗಿದ್ದು ಇದನ್ನು 32 ಜಿಬಿಗೆ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ. ಇದರಲ್ಲಿರುವ ಸಂಪರ್ಕ ವ್ಯವಸ್ಥೆಗಳೆಂದರೆ 3G HSPA+, WiFi 802.11, b/g/n,ಬ್ಲ್ಲೂಟೂತ್, GPS, ಮತ್ತು ಇದು ಡ್ಯುಯೆಲ್ ಸಿಮ್‌ನಲ್ಲಿ ಬಂದಿರುವುದು ಫೋನ್‌ಗಿರುವ ವಿಶೇಷತೆಯಾಗಿದೆ.

Read more about:
English summary
This article tells about that Nokia x2 Dual sim could be launched in India soon.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot