ಅತ್ಯುದ್ಭುತ ಫೋನ್ ಆಗಿ ನೋಕಿಯಾ X2 ಡ್ಯುಯೆಲ್ ಸಿಮ್

Posted By:

ಆಂಡ್ರಾಯ್ಡ್ ಓಎಸ್ ಈಗ ಪ್ರವರ್ಧಮಾನಕ್ಕೆ ಬರುತ್ತಿರುವ ಎಲ್ಲಾ ಫೋನ್‌ಗಳಲ್ಲೂ ಕಂಡುಬಂದಿದ್ದು ನೋಕಿಯಾ X2 ಡ್ಯುಯೆಲ್ ಸಿಮ್‌ಗೂ ಈಗ ಕಾಲಿಟ್ಟಿದೆ.

ಆಂಡ್ರಾಯ್ಡ್ ಅಪ್ಲಿಕೇಶನ್‌ನ ಎಲ್ಲಾ ಧನಾತ್ಮಕ ಅಂಶಗಳನ್ನು ಮೈಗೂಡಿಸಿಕೊಂಡು ಮಾರುಕಟ್ಟೆಗೆ ಅಡಿಯಿಡುತ್ತಿರುವ ನೋಕಿಯಾ X2 ಡ್ಯುಯೆಲ್ ಸಿಮ್ ಫೋನ್ ಮಾಡುವ ಮೋಡಿಯನ್ನು ಕಾದು ನೋಡುವ ಅವಕಾಶ ಬಳಕೆದಾರರಿಗೆ ಸಿಗಲಿದೆ.

ಮೈಕ್ರೋಸಾಫ್ಟ್ ನೋಕಿಯಾ X2 ಡ್ಯುಯೆಲ್ ಸಿಮ್ ಫೋನ್ ಅನ್ನು ಲಾಂಚ್ ಮಾಡಿದ್ದು, ಇಷ್ಟು ದಿನ ವೆಬ್‌ಸೈಟ್‌ಗಳಲ್ಲಿ ಸಾಕಷ್ಟು ರೂಮರ್‌ಗಳಿಂದ ಬಳಕೆದಾರರಲ್ಲಿ ಕಾತರತೆಯನ್ನು ಹೆಚ್ಚಿಸುತ್ತು. ಕೊನೆಗೂ ಇದು ನೋಕಿಯಾ ಪ್ರೇಮಿಗಳ ಕೈ ಸೇರುವ ಕಾಲ ಸನ್ನಿಹಿತವಾಗಿದೆ.

ನೋಕಿಯಾ X2 ಡ್ಯುಯೆಲ್ ಸಿಮ್‌ಗೆ ಮಾರುಕಟ್ಟೆ ಸಜ್ಜು!!!

ನೋಕಿಯಾ X2 ಡ್ಯುಯೆಲ್ ಸಿಮ್ ಗ್ಲೋಸಿ ಹಸಿರು, ಆರೆಂಜ್, ಕಪ್ಪು, ಹಳದಿ, ಬಿಳಿ ಮತ್ತು ಗಾಢ ಕಂದು ಬಣ್ಣದಲ್ಲಿ ಲಭ್ಯವಿದ್ದು ಬೆಲೆ (ರೂ. 8090) ಗಳಾಗಿದೆ. ಭಾರತದಲ್ಲಿ ಈ ಹ್ಯಾಂಡ್‌ಸೆಟ್ ಲಭ್ಯತೆಯನ್ನು ಕುರಿತು ಕಂಪೆನಿ ಇನ್ನೂ ಮಾಹಿತಿಯನ್ನು ನೀಡಿಲ್ಲ.

ನೋಕಿಯಾ X2 ಡ್ಯುಯೆಲ್ ಸಿಮ್ ಫೋನ್ ವೈವಿಧ್ಯ ಬಣ್ಣದಲ್ಲಿ ಲಭ್ಯವಿದ್ದು, ಇತ್ತೀಚೆಗೆ ಬಿಡುಗಡೆಯಾದ ನೋಕಿಯಾ ಎಕ್ಸ್‌ಗೆ ಸಮಾನಾಂತರವಾಗಿದೆ. ಇನ್ನೂ ಹೆಚ್ಚು ವಿವರವಾಗಿ ಹೇಳಬೇಕೆಂದರೆ ಡಿವೈಸ್ 4.3 ಇಂಚಿನ (800x480 ಪಿಕ್ಸೆಲ್‌ಗಳು) ಕ್ಲಿಯರ್ ಬ್ಲ್ಯಾಕ್ ಎಲ್‌ಸಿಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಸ್ಕ್ರಾಚ್ ನಿರೋಧಕ ಗ್ಲಾಸ್ ಮತ್ತು 1.2 GHz ಡ್ಯುಯೆಲ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್‌ನೊಂದಿಗೆ ಬಂದಿದೆ. ಇದರ RAM ಸಾಮರ್ಥ್ಯ 1ಜಿಬಿಯಾಗಿದೆ.

ಡಿವೈಸ್‌ನಲ್ಲಿ ನೋಕಿಯಾ ಎಕ್ಸ್ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ 2.0 ಆಧಾರಿತ AOSP ಆಂಡ್ರಾಯ್ಡ್ 4.3 (ಜೆಲ್ಲಿ ಬೀನ್) ಚಾಲನೆಯಾಗುತ್ತದೆ. ಹೆಚ್ಚು ನವೀಕೃತ ಕ್ಯಾಮೆರಾ ಫೀಚರ್‌ಗಳೊಂದಿಗೆ ಡಿವೈಸ್ ಬಂದಿದ್ದು ರಿಯರ್ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದ್ದು ಎಲ್‌ಇಡಿ ಫ್ಲ್ಯಾಶ್ ಮತ್ತು ಎಚ್‌ಡಿ ವೀಡಿಯೋ ರೆಕಾರ್ಡಿಂಗ್ ಶೂಟರ್‌ನೊಂದಿಗೆ 0.3 ಎಮ್‌ಪಿ ಫ್ರಂಟ್ ಫೇಸಿಂಗ್ ಶೂಟರ್‌ ಇದರಲ್ಲಿದೆ.

ನೋಕಿಯಾ X2 ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 4ಜಿಬಿಯಾಗಿದ್ದು ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 32ಜಿಬಿಗೆ ವಿಸ್ತರಿಸಬಹುದಾಗಿದೆ.

ಸಂಪರ್ಕ ಆಯ್ಕೆಗಳೆಂದರೆ 3ಜಿ HSPA+, ವೈಫೈ 802.11 b/g/n,ಬ್ಲೂಟೂತ್, GPS ಆಗಿದ್ದು ಡ್ಯುಯೆಲ್ ಸಿಮ್ ಇರುವ ಫೋನ್ ಇದಾಗಿದೆ. ಮತ್ತು ಡಿವೈಸ್‌ನ ಬ್ಯಾಟರಿ ಬಗ್ಗೆ ಹೇಳುವುದಾದರೆ 1800 mAh ಬ್ಯಾಟರಿಯನ್ನು ಫೋನ್ ಹೊಂದಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot