ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಅಲ್ಲೋಲ-ಕಲ್ಲೋಲ: ನೋಕಿಯಾ X6 ಬಿಡುಗಡೆಗೆ ಡೇಟ್ ಫಿಕ್ಸ್….!

|

ಭಾರತೀಯ ಮಾರುಕಟ್ಟೆ ಸೇರಿದಂತೆ ಜಾಗತೀಕವಾಗಿಯೂ ಸಾಕಷ್ಟು ಸದ್ದು ಮಾಡುತ್ತಿರುವ ನೋಕಿಯಾ X6 ಸ್ಮಾರ್ಟ್ ಫೋನ್ ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದ್ದು, ಮೂಲಗಳು ಈ ಕುರಿತು ಮಾಹಿತಿಯನ್ನು ನೀಡಿವೆ. ಜುಲೈ ಮೊದಲನೇ ವಾರ ಇಲ್ಲವೇ ಎರಡನೇ ವಾರದಲ್ಲಿ ನೋಕಿಯಾ X6 ಸ್ಮಾರ್ಟ್ ಫೋನ್ ಲಾಂಚ್ ಆಗಲಿದ್ದು, ಇದಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸುತ್ತಿದೆ ಎನ್ನಲಾಗಿದೆ.

ನೋಕಿಯಾ X6 ಬಿಡುಗಡೆಗೆ ಡೇಟ್ ಫಿಕ್ಸ್….!

ನೋಕಿಯಾ ಲಾಂಚ್ ಮಾಡಿರುವ ಮೊದಲ ನೋಚ್ ಡಿಸ್ ಪ್ಲೇಯನ್ನು ಹೊಂದಿರುವ ನೋಕಿಯಾ X6 ಸ್ಮಾರ್ಟ್ ಫೋನ್ ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿಯೂ ನೋಕಿಯಾ X6 ಸ್ಮಾರ್ಟ್ ಫೋನ್ ಹೆಚ್ಚಿನ ಕುತೂಹಲವನ್ನು ಕೆರಳಿಸಿದೆ.

ಜಾಗತೀಕವಾಗಿ ಲಾಂಚ್:

ಜಾಗತೀಕವಾಗಿ ಲಾಂಚ್:

ಕೇವಲ ಚೀನಾ ಮಾರುಕಟ್ಟೆಯಲ್ಲಿ ಮಾತ್ರವೇ ಮಾರಾಟವಾಗುತ್ತಿದ್ದು, ಭಾರೀ ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಚೀನಾದಲ್ಲಿ ಯಶಸ್ವಿಯಾಗಿರುವ ನೋಕಿಯಾ X6 ಸ್ಮಾರ್ಟ್ ಫೋನ್ ಅನ್ನು ಒಂದೇ ಎಟಿಗೆ ಜಾಗತಿಕವಾಗಿ ಲಾಂಚ್ ಮಾಡಲಿದೆ ಎನ್ನಲಾಗಿದೆ. ಭಾರತ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಒಮ್ಮೆಗೆ ಮಾರುಕಟ್ಟೆಗೆ ಕಾಲಿಡಲಿದೆ.

ನೋಚ್ ಡಿಸ್ ಪ್ಲೇ:

ನೋಚ್ ಡಿಸ್ ಪ್ಲೇ:

ನೋಕಿಯಾ X6 ಸ್ಮಾರ್ಟ್ ಫೋನಿನಲ್ಲಿ ಐಫೋನ್ X ಮಾದರಿಯ ನೋಚ್ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. 5.8 ಇಂಚಿನ ಡಿಸ್ ಪ್ಲೇ ಇದಾಗಿದ್ದು, 18:9 ಅನುಪಾತದಿಂದ ಕೂಡಿದೆ. ಇದು ಗೇಮ್ ಆಡುವ ಮತ್ತು ವಿಡಿಯೋ ನೋಡುವ ಅನುಭವನ್ನು ಉತ್ತಮ ಪಡಿಸಲಿದೆ.

6 GB RAM:

6 GB RAM:

ನೋಕಿಯಾ X6 ಸ್ಮಾರ್ಟ್ ಫೋನ್ ವೇಗಕ್ಕೆ ಸಾಕ್ಷಿಯಾಗಲಿದ್ದು, ಇದರಲ್ಲಿ 6GB RAM ಅನ್ನು ಅಳವಡಿಲಾಗಿದೆ. ಇದರೊಂದಿಗೆ ಸ್ನಾಪ್ ಡ್ರಾಗನ್ 636 ಪ್ರೋಸೆಸರ್ ಅನ್ನು ನೀಡಲಾಗಿದ್ದು, ಹೆಚ್ಚಿನ ಗ್ರಾಫಿಕ್ಸ್ ಇರುವ ಗೇಮ್ ಗಳನ್ನು ಆಡಲು ಹೇಳಿ ಮಾಡಿಸಿದಂತಿದೆ. ಇದಲ್ಲದೇ 4GB RAM ಆವೃತ್ತಿಯೂ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ನೋಕಿಯಾ X6 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 16 MP + 5 MP ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ ಡ್ಯುಯಲ್ LED ಲೈಟ್ ಅನ್ನು ಸಹ ನೋಡಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ 16 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಉತ್ತಮ ಬ್ಯಾಟರಿ:

ಉತ್ತಮ ಬ್ಯಾಟರಿ:

ನೋಕಿಯಾ X6 ಸ್ಮಾರ್ಟ್ ಫೋನಿನಲ್ಲಿ 3060mAh ಬ್ಯಾಟರಿಯನ್ನು ನೀಡಲಾಗಿದ್ದು, ಇದರೊಂದಿಗೆ ವೇಗದ ಚಾರ್ಜಿಂಗ್ ಗಾಗಿ ಕ್ವೀಕ್ ಚಾರ್ಜರ್ ಅನ್ನು ಸಹ ಅಳವಡಿಸಲಾಗಿದೆ. ಇದು ಬ್ಯಾಟರಿ ಬಾಳಿಕೆಗೆ ಸಹಾಯವನ್ನು ಮಾಡಲಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಬೆಸ್ಟ್ ಫೋನ್ ಎನ್ನಿಸಿಕೊಸಳ್ಳುವ ಎಲ್ಲಾ ಅರ್ಹತೆಯೂ ಇದರಲ್ಲಿದೆ.

Best Mobiles in India

English summary
Nokia X6 india launch confirmed. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X