ನೋಕಿಯಾ ‍‍X6 V/s ಹುವಾವೆ P20 ಲೈಟ್: ಯಾವುದು ಬೆಸ್ಟ್?

|

ಚೀನಾದಲ್ಲಿ ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ HMD ಗ್ಲೋಬಲ್ ಅವರ ನೋಕಿಯಾ ಎಕ್ಸ್ 6 ಫೋನ್ ಎಲ್ಲರನ್ನೂ ಸೆಳೆಯುತ್ತಿದೆ. ಕೆಲವರು ಈ ಫೋನನ್ನು ವಿರೋಧಿಸುತ್ತಿದ್ದು, ಸ್ಮಾರ್ಟ್ ಫೋನ್ ತಯಾರಕರು ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳಿಂದ ಮೈಲ್ಡ್ ಟಯರ್ ಸ್ಮಾರ್ಟ್ ಫೋನ್ ಗಳನ್ನು ಅನುಷ್ಟಾನಕ್ಕೆ ತರುತ್ತಿದ್ದಾರೆ. ನೋಕಿಯಾ ಎಕ್ಸ್ 6 ಮತ್ತು ಹುವಾಯಿ ಪಿ20ಲೈಟ್ ಗಳಲ್ಲಿ ಹೆಚ್ಚುಕಮ್ಮಿ ಒಂದೇ ರೀತಿಯ ವೈಶಿಷ್ಟ್ಯಗಳಿದ್ದು, ಮಾರ್ಕೆಟ್ ನಲ್ಲಿ ಎರಡನ್ನೂ ಹೋಲಿಸುವ ಪ್ರಯತ್ನ ನಡೆಯುತ್ತಿದೆ.

ನೋಕಿಯಾ ‍‍X6 V/s ಹುವಾವೆ P20 ಲೈಟ್: ಯಾವುದು ಬೆಸ್ಟ್?

ಹುವಾಯಿ ಪಿ20 ಲೈಟ್ ನ ಭಾರತೀಯ ಮಾರುಕಟ್ಟೆ ದರ 19,999 ( 4 GB RAM ಮತ್ತು 64 GB ಸ್ಟೋರೇಜ್) ಹೊಂದಿದೆ. ಇದೇ ವೈಶಿಷ್ಟ್ಯಗಳನ್ನು ಹೊಂದಿರುವ ನೋಕಿಯಾ ಎಕ್ಸ್ 6 ನ 1,499 CNY (ಭಾರತೀಯ ಮಾರುಕಟ್ಟೆಯ ದರ ಕೇವಲ 15,500ರುಪಾಯಿ). ಒಂದು ವೇಳೆ HMD ಗ್ಲೋಬಲ್ ಸಂಸ್ಥೆಯು ನೋಕಿಯಾ ಎಕ್ಸ್ 6 ನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದರೆ ಅದರ ಬೆಲೆ 17,000 ಆಗಿರಬಹುದು. HMD ಗ್ಲೋಬಲ್ ನ ವಿಶ್ವದಾದ್ಯಂತ ಮಾರುಕಟ್ಟೆ ತಂತ್ರಗಾರಿಕೆಯ ಬೆಲೆಯನ್ನು ಆಧರಿಸಿ ಹೇಳುವುದಾದರೆ ಈ ಬೆಲೆ ಇರಬಹುದು. ಯಾಕೆಂದರೆ 20,000 ರುಪಾಯಿ ಮತ್ತು ಅದಕ್ಕಿಂತ ಕಡಿಮೆ ಬೆಲೆಯ ಇಂತಹ ಅಧ್ಬುತ ಡಿಸ್ಪ್ಲೇ ನಾಚ್ ಇರುವ ಸ್ಮಾರ್ಟ್ ಫೋನ್ ಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿದೆ.

ವಿನ್ಯಾಸ

ಗಾಜು. ಎಲ್ಲಾ ಕಡೆಯೂ ಗಾಜು. ಇದು ನೋಕಿಯಾ ಎಕ್ಸ್ 6 ಮತ್ತು ಹುವಾಯಿ ಪಿ20 ಲೈಟ್ ನ್ನು ವಿವರಿಸುವವರು ಹೇಳುವ ಸಣ್ಣ ಡೈಲಾಗು ಇದು. ಎರಡೂ ಫೋನ್ ಗಳಲ್ಲೂ ಗಾಜಿನ ವಿನ್ಯಾಸವಿದೆ. ಜೊತೆಗೆ ಬೆರಳಚ್ಚು ಸಂವೇದಕವಿದೆ. ಅಷ್ಟೇ ಅಲ್ಲ ಡುಯಲ್ ಕ್ಯಾಮರಾವಿದೆ. ಮೊಬೈಲಿನ ಕೆಳಭಾಗದ ಗಾಜಿನ ವಿನ್ಯಾಸದಿಂದಲೇ ನೀವು ಈ ಎರಡೂ ಮೊಬೈಲಿನ ವ್ಯತ್ಯಾಸವನ್ನು ಗುರುತಿಸಬಹುದು. ನೀವು ಸ್ಮಾರ್ಟ್ ಫೋನ್ ಖರೀದಿಸಬೇಕು ಎಂದುಕೊಂಡಿದ್ದು ನಿಮ್ಮ ವೆಚ್ಚ 20,000 ದಾಟಿರಬಾರದು ಎಂದರೆ ಇವೆರಡೂ ಕೂಡ ಹೇಳಿ ಮಾಡಿಸಿದ ಮೊಬೈಲ್ ಗಳಾಗಿವೆ.

ವೈಶಿಷ್ಟ್ಯತೆಗಳು

ನೋಕಿಯಾ ಎಕ್ಸ್ 6 Qualcomm Snapdragon 636 Octa-core chipset ನ್ನು ಹೊಂದಿದೆ. ಅದೇ ಹುವಾಯಿ ಪಿ 20 ಲೈಟ್ in-house HiSilicon Kirin 659 Octa-core ಚಿಪ್ ಸೆಟ್ಟನ್ನು ಹೊಂದಿದೆ. ಕೆಲವರು 659 ಚಿಪ್ ಸೆಟ್ 636 ಗಿಂತ ದೊಡ್ಡದು ಎಂದು ಅಂದುಕೊಂಡಿದ್ದಾರೆ. ಆದ್ರೆ ಇದು ನಿಜವಲ್ಲ. Kirin 659 ಕೂಡ ಒಂದು ಒಳ್ಳೆಯ ಸಾಕೆಟ್ ಆಗಿದೆ. ಆದರೆ Qualcomm Snapdragon 636 Octa-coreನಷ್ಟು ದೀರ್ಘಾವಧಿ ಬ್ಯಾಟರಿ ಬಾಳಿಕೆಯನ್ನು ನೀಡುವುದಿಲ್ಲ.ಯಾಕೆಂದರೆ 636 eight Kryo cores ಮತ್ತು 14nm FinFET ಬಳಸಿ ತಯಾರಿಸಲಾಗಿದೆ. ಇದು ದಿನನಿತ್ಯದ ಬಳಕೆಯಲ್ಲಿ ಕೂಡಲೇ ತೊಂದರೆ ಕೊಡುವುದಿಲ್ಲ. ಇವೆರಡು ಚಿಪ್ ಸೆಟ್ ನಲ್ಲಿ GPU ಇಲ್ಲದ ಕಾರಣಕ್ಕೆ ಯಾವುದೇ ಆಟವನ್ನು ಫುಲ್ HD ರೆಸೋಲ್ಯೂಷನ್ ನಲ್ಲಿ ನೋಡಲು ಸಾಧ್ಯವಿಲ್ಲ. ಮಾಮೂಲಿ ಗೇಮ್ ನಲ್ಲಿ ತೊಡಗಬಹುದು ಯಾವುದೇ ಸಮಸ್ಯೆಯಾಗುವುದಿಲ್ಲ. ಎರಡೂ ಫೋನ್ ನಲ್ಲೂ ಕೂಡ IPS LCD ಡಿಸ್ಪ್ಲೇಯು 19:9 ಅನುಪಾತದಲ್ಲಿದೆ. ಹುವಾಯಿ ಪಿ 20 ಲೈಟ್ ಸ್ವಲ್ಪ ದೊಡ್ಡದಿದ್ದು,5.82 ಇಂಚಿನ ಡಿಸ್ಪ್ಲೇ ಹೊಂದಿದೆ. ಅದೇ ನೋಕಿಯಾ ಎಕ್ಸ್ 6 ನಲ್ಲಿ 5.8 ಇಂಚಿನ ಡಿಸ್ಪ್ಲೇ ಹೊಂದಿದೆ. 2280 x 1080 px ರೆಸೋಲ್ಯೂಷನ್ ನಲ್ಲಿ ಎರಡೂ ಫೋನ್ ಗಳು ಅಧ್ಬುತ ಅನುಭವವನ್ನು ನೀಡುತ್ತೆ.

ನೋಕಿಯಾ ‍‍X6 V/s ಹುವಾವೆ P20 ಲೈಟ್: ಯಾವುದು ಬೆಸ್ಟ್?

ಕ್ಯಾಮರಾ

ಹುವಾಯಿ ಪಿ 20 ಲೈಟ್ ನಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಇದ್ದು,16MP ಪ್ರೈಮರಿ ಕ್ಯಾಮರಾ ಮತ್ತು 2MP ಸೆಕೆಂಡರಿ ಡೆಪ್ತ್ ಕ್ಯಾಮರಾ ಇದೆ. ಬೊಕೆ ಎಫೆಕ್ಟ್ ನಲ್ಲಿ ಫೋಟೋಗಳನ್ನು ತೆಗೆಯಲು ಸಾಧ್ಯವಾಗುತ್ತೆ. ಅದೇ ನೋಕಿಯಾ ಎಕ್ಸ್ 6 ನಲ್ಲಿ 16MP ಪ್ರೈಮರಿ ಕ್ಯಾಮರಾ ಮತ್ತು 5 MP ಡೆಪ್ತ್ ನ ಸೆನ್ಸರ್ ಕ್ಯಾಮರಾವನ್ನು ಒಳಗೊಂಡಿದೆ. ಹುವಾಯಿ ಪಿ20ಯಲ್ಲಿ 24 MP ಎದುರು ಮುಖದ ಸೆಲ್ಫೀ ಕ್ಯಾಮರಾ ಸೌಲಭ್ಯವಿದ್ದು, ಫೇಸ್ ಅನ್ ಲಾಕ್ ಸಿಸ್ಟಮ್ ಇದೆ. ನೋಕಿಯಾ ಎಕ್ಸ್ 6 ನಲ್ಲಿ 16MP ಎದುರು ಮುಖದ ಸೆಲ್ಫೀ ಕ್ಯಾಮರಾ ವಿದ್ದು ಯಾವುದೇ ಫೇಸ್ ಅನ್ ಲಾಕ್ ಸಿಸ್ಟಮ್ ವಿರುವ ಬಗ್ಗೆ ಮಾಹಿತಿ ಇಲ್ಲ. ವೀಡಿಯೋ ರೆಕಾರ್ಡಿಂಗ್ 1080 P ನಲ್ಲಿ ಹುವಾಯಿ ಯಲ್ಲಿ ಮಾಡಬಹುದಾಗಿದ್ದು, ಅದೇ ನೋಕಿಯಾದಲ್ಲಿ 4k ವೀಡಿಯೋಗಳನ್ನು 30fps ನಲ್ಲಿ ಮಾಡಬಹುದು.

ಬ್ಯಾಟರಿ ಮತ್ತು ಸ್ಟೋರೇಜ್

ನೋಕಿಯಾ ಮತ್ತು ಹುವಾಯಿಯಲ್ಲಿ ಕ್ರಮವಾಗಿ 3060 ಮತ್ತು 3000 mAh Li-ion ಬ್ಯಾಟರಿ ಸೌಲಭ್ಯವಿದೆ. ಎರಡೂ ಫೋನ್ ಗಳು USB type C port ನೊಂದಿಗೆ ವೇಗವಾಗಿ ಚಾರ್ಜ್ ಮಾಡಬಹುದು. ಅಷ್ಟೇ ಅಲ್ಲ, 3.5 MM ಹೆಡ್ ಫೋನ್ ಜಾಕ್ ಇದೆ. ನೋಕಿಯಾ ಎಕ್ಸ್ 6 Android 8.1 Oreo ನಲ್ಲಿ ರನ್ ಆಗುತ್ತೆ. ಮಾಮೂಲಿ ಬಳಕೆದಾರರು ಈ ಫೋನ್ ಗಳನ್ನು ದಿನಕ್ಕೆ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕಾಗುತ್ತೆ ಆದರೆ ಅತಿಯಾಗಿ ಮೊಬೈಲ್ ಬಳಸುವ ಬಳಕೆದಾರರು ಸಂಜೆವೇಳೆಗೆ ಮತ್ತೆ ಚಾರ್ಜಿಂಗ್ ಗೆ ಹಾಕಬೇಕಾಗುತ್ತದೆ

ಅಂತಿಮ ತೀರ್ಮಾನ

ಇದುವರೆಗೆ ಬಂದಿರುವ ನೋಕಿಯಾ ಫೋನ್ ಗಳಲ್ಲಿ ನೋಕಿಯಾ ಎಕ್ಸ್ 6 ನ ಬೆಲೆಯು ಹಣಕ್ಕೆ ತಕ್ಕ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ಇನ್ನೂ ಭಾರತದಲ್ಲಿ ಬಿಡುಗಡೆಗೊಳ್ಳದ ಕಾರಣ ಸದ್ಯಕ್ಕೆ ಎಷ್ಟು ಬೆಲೆಯನ್ನು ಭಾರತದಲ್ಲಿ ನಿಗದಿಗೊಳಿಸಲಾಗುತ್ತೆ ಎಂಬುದು ತಿಳಿದಿಲ್ಲ. ಆದರೆ ಸದ್ಯ ಹುವಾಯಿ ಭಾರತದಲ್ಲಿ 19,999 ರುಪಾಯಿ ಬೆಲೆಗೆ ಮಾರಾಟವಾಗುತ್ತಿದೆ. ಅಂತಿಮವಾಗಿ ಪ್ರತಿಯೊಂದು ನಿರ್ಧಾರವೂ ಬಳಕೆದಾರನ ಮೇಲೆ ನಿರ್ಧರಿತವಾಗುತ್ತೆ. OS ಎರಡೂ ಫೋನ್ ನಲ್ಲಿರುವ ಪ್ರಮುಖ ವ್ಯತ್ಯಾಸವಾಗಿದೆ. ಒಂದು ವೇಳೆ ನೀವು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಹುಡುಕುತ್ತಿದ್ದರೆ ನೋಕಿಯಾ ಎಕ್ಸ್ 6 (ಬಹುಶಃ ಇನ್ನೊಂದು ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದು) ನ್ನು ಆಯ್ಕೆ ಮಾಡಬಹುದು. ಆದರೆ ಹುವಾಯಿ ಈಗಾಗಲೇ ತಿಳಿದಿರುವಂತೆ ಉತ್ತಮ custom EMUI skin ಹೊಂದಿದೆ.

Most Read Articles
Best Mobiles in India

English summary
Nokia X6 Vs Huawei P20 Lite. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more