ನೋಕಿಯಾ ಎಕ್ಸ್‌ಎಲ್ ಡ್ಯುಯೆಲ್ ಸಿಮ್ ಇನ್ನು ರೂ. 11,349 ಕ್ಕೆ

Written By:

ಸ್ಮಾರ್ಟ್‌ಫೋನ್ ಜಗತ್ತನ್ನೇ ಒಂದೊಮ್ಮೆ ತನ್ನ ಜನಪ್ರಿಯತೆಯಿಂದ ಆಳಿದ ಕಂಪೆನಿಯಾಗಿತ್ತು ನೋಕಿಯಾ. ಆಂಡ್ರಾಯ್ಡ್ ಆಧಾರಿತ ಡಿವೈಸ್ ಅನ್ನು ಎಕ್ಸ್ ಸ್ವರೂಪದಲ್ಲಿ ಮೊದಲು ಹೊರ ತಂದಿದ್ದ ನೋಕಿಯಾ ಆಂಡ್ರಾಯ್ಡ್ ಓಪನ್ ಸೋರ್ಸ್ ಪ್ರೋಜೆಕ್ಟ್ ಅನ್ನು ಮತ್ತು ಹಲವಾರು ವೈಶಿಷ್ಟ್ಯಗಳನ್ನು ತನ್ನ ಫೋನ್‌ಗಳಲ್ಲಿ ಹೊರ ತಂದಿತು.

ಈಗ ಇದೇ ಸ್ವರೂಪದ ಅಂಶಗಳನ್ನು ನೋಕಿಯಾ ಎಕ್ಸ್‌ಎಲ್ ಶ್ರೇಣಿಯಲ್ಲೂ ಹೊರತರಲಿರುವ ಕಂಪೆನಿ ತನ್ನ ರೀಟೈಲ್ ತಾಣದಲ್ಲಿ ರೂ. 11,349 ಕ್ಕೆ ಹೊರತರುವ ತಯಾರಿಯನ್ನು ಮಾಡಿಕೊಂಡಿದೆ. ಸ್ನ್ಯಾಪ್‌ಡೀಲ್‌ನಲ್ಲಿ ಇದರ ಬೆಲೆ ಮೇಲೆ ತಿಳಿಸಿದಂತೆ ರೂ. 11,349 ಆಗಿದೆ. ಇದು ದೊಡ್ಡ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದ್ದು ಇದರ ಗಾತ್ರ 5 ಇಂಚಾಗಿದೆ. ಇದು 480×800 ಪಿಕ್ಸೆಲ್ ರೆಸಲ್ಯೂಶನ್ ಅನ್ನು ನೀಡುತ್ತದೆ.

ನೋಕಿಯಾ ಎಕ್ಸ್‌ಎಲ್ ಡ್ಯುಯೆಲ್ ಸಿಮ್ ಇನ್ನು ರೂ. 11,349 ಕ್ಕೆ

ಈ ಡಿವೈಸ್ 1GHz ಡ್ಯುಯೆಲ್ ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ S4 ಪ್ರೊಸೆಸರ್ ನೊಂದಿಗೆ 768 ಎಂಬಿ ಯ ರ್‌ಯಾಮ್ ಅನ್ನು ಇದು ಹೊಂದಿದೆ. 4ಜಿಬಿ ಆಂತರಿಕ ಸಂಗ್ರಹಣೆ ಈ ಫೋನ್‌ಗಿದ್ದು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಇದನ್ನು 32ಜಿಬಿಗೆ ವಿಸ್ತರಿಸಬಹುದು. ಸಂಪರ್ಕ ಆಯ್ಕೆಗಳು ಹೆಚ್ಚಾಗಿ 3ಜಿ, ವೈಫೈ, ಬ್ಲೂಟೂತ್, A-GPS ನೊಂದಿಗೆ GPS ಹಾಗೂ ಡ್ಯುಯೆಲ್ ಸಿಮ್ ಬೆಂಬಲ ಈ ಫೋನ್‌ಗಿದೆ.

5ಎಂಪಿ ಫ್ಲ್ಯಾಶ್‌fನೊಂದಿಗಿರುವ ಸ್ವಯಂ ಫೋಕಸ್ ಕ್ಯಾಮೆರಾವನ್ನು 2ಎಂಪಿ ಮುಂಭಾಗ ಕ್ಯಾಮೆರಾವನ್ನು ಈ ಫೋನ್ ಹೊಂದಿದೆ. ಈ ಡಿವೈಸ್ 141.3 x 77.7 x 10.8 ಎಂಎಂ ಅಳತೆಯನ್ನು ಹೊಂದಿದ್ದು ಇದರ ತೂಕ 190 ಗ್ರಾಮ್ ಆಗಿದೆ. 2000 ಎಂಎಚ್ ಬ್ಯಾಟರಿ ಶಕ್ತಿ ಇದಕ್ಕಿದೆ. ಇದರ ಬ್ಯಾಟರಿ 13 ಗಂಟೆಗಳ ಟಾಕ್ ಟೈಮ್ ಅನ್ನು ಒದಗಿಸಲಿದ್ದು 37 ಗಂಟೆಗಳ ಮ್ಯೂಸಿಕ್ ಪ್ಲೇಬೇಕ್ ಸಮಯವನ್ನು ಒದಗಿಸುತ್ತದೆ. ಇದರ ಈ ಎಲ್ಲಾ ವೈಶಿಷ್ಟ್ಯತೆಗಳು ಮೋಟೋರೋಲಾ ಕಂಪೆನಿಯ ಮೋಟೋ ಇ ಗೆ ಸಮನಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot