ನೋಕಿಯಾ ಹಾಗೂ ಮೈಕ್ರೋಸಾಫ್ಟ್‌ನ ಸಮ್ಮಿಶ್ರ ಎರಕ

By Shwetha
|

ನೋಕಿಯಾ ಫೋನ್‌ಗಳ ಭರಾಟೆ ಇನ್ನೂ ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿ ತಲೆ ಎತ್ತಿ ನಿಲ್ಲುತ್ತಿದೆ ನೋಕಿಯಾ ಎಕ್ಸ್‌ಎಲ್ ಸ್ಮಾರ್ಟ್‌ಫೋನ್‌ಗಳು. ಸ್ಯಾಮ್‌ಸಂಗ್, ಆಪಲ್, ಮೋಟೋರೋಲಾ ಹೀಗೆ ಪ್ರಖ್ಯಾತ ಕಂಪೆನಿಗಳು ಹೊಸ ಹೊಸ ಅನ್ವೇಷಣೆಗಳನ್ನು ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತಮ್ಮ ಮೌಲ್ಯವನ್ನು ಏರುವಂತೆಮಾಡುವ ನಡುವೆಯೂ ನೋಕಿಯಾ ಹಾಗೂ ಮೈಕ್ರೋಸಾಫ್ಟ್ ಕಂಪೆನಿಗಳು ಈ ಧೀಮಂತ ಕಂಪೆನಿಗಳ ನಡುವೆ ತಮ್ಮ ಅಸ್ತಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿವೆ.

ಆಶಾ ಫೋನ್ ಶ್ರೇಣಿಗಳನ್ನು ಹೊಸದಾಗಿ ಮಾರುಕಟ್ಟೆಗೆ ತಂದು ಹೆಚ್ಚು ಕಡಿಮೆ ಗ್ರಾಹಕರನ್ನು ಸೆಳೆದಿದ್ದ ನೋಕಿಯಾ ನಂತರ ಬೇರೆಲ್ಲಾ ಸ್ಮಾರ್ಟ್‌ಫೋನ್‌ಗಳ ನಡುವೆ ಆಶಾಳನ್ನುಕಳೆದುಕೊಳ್ಳುವಂತೆ ಮಾಡಿಕೊಂಡಿತ್ತು. ಇದರ ಪರದೆ ಬೇರೆಲ್ಲಾ ಫೋನ್‌ಗಳಿಗೆ ಹೋಲಿಸಿದಾಗ ಕಡಿಮೆ ಇದ್ದು ಆಕರ್ಷಣೆಯನ್ನು ಕಳೆದುಕೊಂಡಿತ್ತು. ಆದರೆ ಇದೀಗ ಕಂಪೆನಿ ಇದನ್ನೇ ಅಸ್ವಿತ್ವವಾಗಿಟ್ಟುಕೊಂಡು ಸ್ವಲ್ಪ ದೊಡ್ಡದು ಮತ್ತು ಆಕರ್ಷಕ ಪರದೆಯ್ನು ಹೊಂದಿರುವ ನೋಕಿಯಾ ಎಕ್ಸ್‌ಎಲ್ ಫೊನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಎಕ್ಸ್‌ಎಲ್ ಕುಟುಂಬ ಆಂಡ್ರಾಯ್ಡ್ ಓಪನ್ ಪ್ರೊಜೆಕ್ಟ್ ಆಧಾರಿತವಾಗಿದ್ದು, ದೊಡ್ಡದಾದ ರೆಸಲ್ಯೂಶನ್ ಪರದೆಗಳನ್ನು ಹೊಂದಿ ಶಕ್ತಿಯುತ ಹಾರ್ಡ್‌ವೇರ್‌ನೊಂದಿಗೆ ಬಂದಿದೆ. ನೋಕಿಯಾ ಹಾಗೂ ಮೈಕ್ರೋಸಾಫ್ಟ್‌ನ ಸಮ್ಮಿಶ್ರ ಎರಕವನ್ನು ಹೊಂದಿರುವ ನೋಕಿಯಾ ಎಕ್ಸ್‌ಎಲ್ ಗ್ರಾಹಕರ ಬೇಡಿಕೆಯನ್ನು ತೀರಿಸಲೆಂದೇ ಜನ್ಮವೆತ್ತಿದಂತಿದೆ. ಹಾಗಿದ್ದರೆ ಇದರ ಇನ್ನಷ್ಟು ವಿವರಪೂರ್ಣ ಮಾಹಿತಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ವೀಕ್ಷಿಸಿ.

#1

#1

ಕ್ವಾಡ್ ಬ್ಯಾಂಡ್ ಜಿಎಸ್‌ಎಮ್, ಜಿಪಿಆರ್‌ಎಸ್, ಎಡ್ಜ್ ಅನ್ನು ಹೊಂದಿದೆ. ಇದು ಡ್ಯುಯೆಲ್ ಸಿಮ್ ಬೆಂಬಲವನ್ನನು ಹೊಂದಿದ್ದು, ಡ್ಯುಯೆಲ್ ಸ್ಟ್ಯಾಂಡ್‌ಬೈ ಆಗಿದೆ. ಇದು 1.0.1ಆಧಾರಿಯ ಆಂಡ್ರಾಯ್ಡ್ ಓಪನ್ ಸೋರ್ಸ್ ಪ್ರೊಜೆಕ್ಟ್‌ನೊಂದಿಗೆ ಬಂದಿದ್ದು 5" IPS LCD WVGA ಸಾಮರ್ಥ್ಯವುಳ್ಳ ಟಚ್‌ಸ್ಕ್ರೀನ್‌ನೊಂದಿಗೆ ಬಂದಿದೆ.

#2

#2

1.2 GHz ಡ್ಯುಯೆಲ್ ಕೋರ್ ಕೋರ್ಟೆಕ್ಸ್ - A5 ಪ್ರೊಸೆಸರ್, ಆಡ್ರೆನೊ 203 GPU, ಕ್ವಾಲ್‌ಕಾಮ್ MSM8225 ಸ್ನ್ಯಾಪ್‌ಡ್ರಾಗನ್ S4 ಪ್ಲೇ ಚಿಪ್‌ಸೆಟ್‌ನೊಂದಿಗೆ ಬಂದಿದೆ. ಇದು 768 ಎಂಬಿ RAM ಅನ್ನು ಹೊಂದಿದ್ದು ಪ್ರೊಕ್ಸಿಮಿಟಿ ಸೆನ್ಸಾರ್, ಆಟೋರೊಟೇಶನ್ ಡಿಸ್‌ಪ್ಲೇಯನ್ನು ಹೊಂದಿದೆ.

#3

#3

ನೋಕಿಯಾ ಎಕ್ಸ್‌ಎಲ್ 5 ಎಂಪಿ ಕ್ಯಾಮೆರಾವನ್ನು ಹೊಂದಿದ್ದು ವೀಡಿಯೋ ರೆಕಾರ್ಡಿಂಗ್ ಸಾಮರ್ಥ್ಯದಿಂದ ಕೂಡಿದೆ. 2 ಎಂಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಫೋನ್‌ನಲ್ಲಿದ್ದು ಮೈಕ್ರೊಎಸ್‌ಡಿ ಕಾರ್ಡ್‌ ಸೌಲಭ್ಯದೊಂದಿಗೆ ಇದರ ಆಂತರಿಕ ಸಂಗ್ರಹಣೆಯನ್ನು 32ಜಿಬಿಗೆ ವಿಸ್ತರಿಸಬಹುದಾಗಿದೆ.

#4

#4

ಇದು ವೈ-ಫೈ ಸಂಪರ್ಕವನ್ನು ಹೊಂದಿದ್ದು ಬ್ಲೂಟೂತ್ ಸಾಮರ್ಥ್ಯ ಆವೃತ್ತಿ 3.0ವನ್ನು ಹೊಂದಿದೆ. ಇದು 2,000mAh Li-Ion ಬ್ಯಾಟರಿಯೊಂದಿಗೆ ಬಿಡುಗಡೆಗೊಂಡಿದೆ.

#5

#5

ಇದು 141.3x77.7x10.8 ಎಮ್‌ಎಮ್ ಅಳತೆಯನ್ನು ಹೊಂದಿದ್ದು ತೂಕ 190 ಗ್ರಾಮ್‌ಗಳಾಗಿದೆ. ಇದು 13 ಗಂಟೆಗಳ ಟಾಕ್‌ಟೈಮ್ ಅವಧಿಯನ್ನು ನೀಡಲಿದ್ದು 37 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಅವಧಿಯನ್ನು ನೀಡುತ್ತಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X