Home
ಮೊಬೈಲ್

'ಒನ್‌ಪ್ಲಸ್ 5ಟಿ' ಖರೀದಿಸುವವರಿಗೆ ಬಂಪರ್!.ಇಷ್ಟೊಂದು ಆಫರ್ಸ್ ಇದೇ ಮೊದಲು!!

ಹೆಚ್ಚು ಹವಾ ಎಬ್ಬಿಸಿದ್ದ ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್ ಬಿಡುಗಡೆಯಾದ ನಂತರ ಕೇವಲ ಗ್ರಾಹಕರನ್ನು ಮಾತ್ರ ಸೆಳೆದಿಲ್ಲ. ಬದಲಾಗಿ ಅಮೆಜಾನ್, ಝೊಮೊಟೊ ಮತ್ತು ಪಿವಿಆರ್‌ನಂತಹ ಹಲವು ಹೆಸರಾಂತ ಬ್ರಾಂಡ್‌ಗಳನ್ನು ಸೆಳೆದಿದೆ.!!

By Bhaskar N J

ಯಾರೇ ಆಗಲಿ ಕಡಿಮೆ ಬೆಲೆಯಲ್ಲಿ ಹೆಚ್ಚು ಸೇವೆಗಳನ್ನು ನೀಡುತ್ತಾರೆ ಎಂದರೆ ಗ್ರಾಹಕರೂ ಕೂಡ ಅವರ ಬಳಿ ತೆರಳಲು ಇಷ್ಟಪಡುತ್ತಾರೆ ಅಲ್ಲವೇ? ಅಂತಹುದೆ ಒಂದು ಟ್ರೆಂಡ್ ಅನ್ನು ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್ ಜಗತ್ತಿನಲ್ಲೆಡೆ ಕ್ರಿಯೇಟ್ ಮಾಡಿದೆ ಎಂದರೆ ಸ್ಮಾರ್ಟ್‌ಫೋನ್ ಎಷ್ಟೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ನೀಡವು ತಿಳಿಯಬಹುದು.!!

ಹೌದು, ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಬಿಡುಗಡೆಗೂ ಮುನ್ನವೇ ಹೆಚ್ಚು ಹವಾ ಎಬ್ಬಿಸಿದ್ದ ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್ ಬಿಡುಗಡೆಯಾದ ನಂತರ ಕೇವಲ ಗ್ರಾಹಕರನ್ನು ಮಾತ್ರ ಸೆಳೆದಿಲ್ಲ. ಬದಲಾಗಿ ಅಮೆಜಾನ್, ಝೊಮೊಟೊ ಮತ್ತು ಪಿವಿಆರ್‌ನಂತಹ ಹಲವು ಹೆಸರಾಂತ ಬ್ರಾಂಡ್‌ಗಳನ್ನು ಸೆಳೆದಿದೆ.!!

ಒನ್‌ಪ್ಲಸ್ 5ಟಿ ಖರೀದಿದಾರರನ್ನು ಸೆಳೆಯಲು ಈ ದೊಡ್ಡ ದೊಡ್ಡ ಆನ್‌ಲೈನ್ ಕಂಪೆನಿಗಳು ಹೊಸ ಹೊಸ ಆಫರ್‌ಗಳನ್ನು ಘೋಷಿಸಿದ್ದು, ಹಾಗಾದರೆ, ಒನ್‌ಪ್ಲಸ್ 5ಟಿ ಬಳಕೆದಾರರಿಗೆ ಯಾವ ಯಾವ ಕಂಪೆನಿಗಳು ಏನೆಲ್ಲಾ ಆಫರ್‌ಗಳನ್ನು ಪ್ರಕಟಿಸಿದ್ದಾರೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಯಿರಿ.!!

12 ತಿಂಗಳ ಆಕಸ್ಮಿಕ ಡ್ಯಾಮೇಜ್ ವಿಮೆ!!

12 ತಿಂಗಳ ಆಕಸ್ಮಿಕ ಡ್ಯಾಮೇಜ್ ವಿಮೆ!!

ಇಂದಿನ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಫೋನ್ ಡಿಸ್‌ಪ್ಲೇ ಬ್ರೇಕ್ ಆದರೆ ಎಂಬುದು ದೊಡ್ಡ ಚಿಂತೆ.! ಹಾಗಾಗಿಯೇ, ಒನ್‌ಪ್ಲಸ್ ಕಂಪೆನಿ ಜತೆ ಸರ್ವಿಫೈ ಸಂಸ್ಥೆ ಕೈ ಜೋಡಿಸಿದ್ದು, ಸರ್ವಿಫೈ ಮೂಲಕ ಕೇವಲ 1000 ರೂಪಾಯಿಗಳ ವಿಮೆ ಮಾಡಿಸಿದರೆ 12-ತಿಂಗಳ ಆಕಸ್ಮಿಕ ಹಾನಿ ವಿಮೆಗೆ ಒನ್‌ಪ್ಲಸ್ 5ಟಿ ಗ್ರಾಹಕರು ಅರ್ಹರಾಗುತ್ತಾರೆ ಎಂದು ತಿಳಿಸಿದೆ.!!

ಝೊಮೊಟೊದಿಂದ ಅದ್ಭುತ ಕೊಡುಗೆ!!

ಝೊಮೊಟೊದಿಂದ ಅದ್ಭುತ ಕೊಡುಗೆ!!

ಫುಡ್ ಆನ್‌ಲೈನ್ ಡೆಲಿವರಿಯಲ್ಲಿ ಹಸರಾಂತ ಕಂಪೆನಿ ಝೊಮೊಟೊ( Zomato) ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಒನ್‌ಪ್ಲಸ್ 5ಟಿ ಗ್ರಾಹಕರಿಗೆ ಭಾರಿ ಆಫರ್ ಘೋಷಿಸಿದೆ. ಒನ್‌ಪ್ಲಸ್ 5ಟಿ ಗ್ರಾಹಕರು ಝೊಮೊಟೊ ಗೋಲ್ಡ್ ಸೇವೆಯ 1 ವರ್ಷ ಉಚಿತ ಸದಸ್ಯತ್ವ ಪಡೆಯಲಿದ್ದಾರೆ ಎಂದು ಹೇಳಿದ್ದು, ಹೊಸದಾಗಿ ಬಿಡುಗಡೆಯಾದ ಪ್ರೀಮಿಯಂ ಚಂದಾದಾರಿಕೆ ಕೊಡುಗೆ ಮೂಲಕ ಭಾರಿ ರಿಯಾಯಿತಿ ಮತ್ತು ಕೊಡುಗೆ ನೀಡುವುದಾಗಿ ತಿಳಿಸಿದೆ.!!

ಐಡಿಯಾ ಜತೆ ಒನ್‌ಪ್ಲಸ್ 5ಟಿ!!

ಐಡಿಯಾ ಜತೆ ಒನ್‌ಪ್ಲಸ್ 5ಟಿ!!

ಇಂದು ಯಾವುದೇ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾದರೂ ಅದರ ಜೊತೆಗೆ ಟೆಲಿಕಾಂ ಒಂದು ಉಚಿತ ಡೇಟಾ ನೀಡುವ ಒಪ್ಪಂದಕ್ಕೆ ತಯಾರಾಗಿರುತ್ತದೆ.!! ಅದರಂತೆಯೇ ಐಡಿಯಾ ಟೆಲಿಕಾಂ ಒನ್‌ಪ್ಲಸ್ 5ಟಿ ಗ್ರಾಹಕರನ್ನು ಸೆಳೆಯಲು 1008 ಜಿಬಿ ಡೇಟಾವನ್ನು ಉಚಿತವಾಗಿ ನೀಡುತ್ತಿದೆ.!

ಹೆಲ್ತ್ ಕಾರ್ಟ್ ಮತ್ತು ಪಿವಿಆರ್ ಇಂಡಿಯಾ!!

ಹೆಲ್ತ್ ಕಾರ್ಟ್ ಮತ್ತು ಪಿವಿಆರ್ ಇಂಡಿಯಾ!!

ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್ ಅಮೆರಿಕಾದಲ್ಲಿ ಲಾಂಚ್ ಆಗುವಾಗಲೇ ಭಾರತದಲ್ಲಿ ಥಿಯೇಟರ್‌ಗಳ ಮೂಲಕ ಲೈವ್ ಲಾಂಚ್ ವೀಕ್ಷಿಸಲು ಒನ್‌ಪ್ಲಸ್ ಕಂಪೆನಿಯ ಜೊತೆ ಕೈ ಜೋಡಿಸಿತ್ತು. ಈ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡವರು 1000 ಡಿಸ್ಕೌಂಟ್ಸ್ ಪಡೆದರೆ, ಹೆಲ್ತ್‌ಕಾರ್ಟ್‌ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಒನ್‌ಪ್ಲಸ್ 5ಟಿ ಕ್ಯಾಮೆರಾದ ಅದ್ಬುತ ಅನುಭವವನ್ನು ಹೇಳಿಕೊಂಡಿತು.!!

ಹೆಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ರಿಯಾಯಿತಿ!!

ಹೆಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ರಿಯಾಯಿತಿ!!

ಒನ್‌ಪ್ಲಸ್ ಕಂಪೆನಿಯು ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಹೆಚ್‌ಡಿಎಫ್‌ಸಿ ಬ್ಯಾಂಕ್ ಜತೆ ಕೈ ಜೋಡಿಸಿದೆ. ಹಾಗಾಗಿ, ಹೆಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಅಮೆಜಾನ್ ಇಂಡಿಯಾ ಮತ್ತು ಒನ್‌ಪ್ಲಸ್ ಸ್ಟೋರ್ ಮೂಲಕ ಮೊಬೈಲ್ ಖರೀದಿಸಿರೆ ತಕ್ಷಣವೇ 1,500 ತ್ವರಿತ ರಿಯಾಯಿತಿ ಸಿಗಲಿದೆ.!!

ಅಮೆಜಾನ್ ನೀಡಿದೆ ಹಲವು ಆಫರ್ಸ್!!

ಅಮೆಜಾನ್ ನೀಡಿದೆ ಹಲವು ಆಫರ್ಸ್!!

ಅಮೆಜಾನ್ ಮೂಲಕ ಒನ್‌ಪ್ಲಸ್ 5ಟಿ ಖರೀದಿಸುವ ಗ್ರಾಹಕರಿಗೆ ಅಮೆಜಾನ್ ಹಲವು ಆಫರ್ಸ್ ನೀಡಿದ್ದು, ಅಮೆಜಾನ್ ಪ್ರೈಮ್ ಮತ್ತು ಕಿಂಡಲ್ ಬಳಕೆದಾರರಿಗೆ ಹಲವು ಸೇವೆಗಳು ಉಚಿತವಾಗಿ ಲಭ್ಯವಿವೆ.!! ಇಂದು 4.30 ಕ್ಕೆ ಬೆಂಗಳೂರಿನಲ್ಲಿ ಒನ್‌ಪ್ಲಸ್ 5ಟಿ ಎಕ್ಸ್‌ಪೀರಿಯನ್ಸ್ ಸ್ಟೋರ್ ಪ್ರಾರಂಭವಾಗುತ್ತಿದ್ದರೆ, ನವೆಂಬರ್ 28, 2017 ರಂದು ಸೇಲ್ ಪ್ರಾರಂಭವಾಗಲಿದೆ.!!

Best Mobiles in India

English summary
Once in a while the world gets to see a product that redefines what technology can achieve. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+