CMF Phone 1 ಎಂಟ್ರಿಗೆ ಮುಹೂರ್ತ ಫಿಕ್ಸ್.. ಕ್ಯಾಮೆರಾ, ಡಿಸೈನ್ ಲೀಕ್: ಎದುರಾಳಿಗಳಿಗೆ ನಡುಕ ಶುರು!
ನಥಿಂಗ್ ಫೋನ್ ಪ್ರಿಯರಿಗೆ ಒಂದೇ ಬಾರಿಗೆ ಎರಡು ಸಿಹಿ ಸುದ್ದಿ. ಬ್ರಿಟನ್ ಮೂಲದ ನಥಿಂಗ್ ಮೊಬೈಲ್ ತಯಾರಕ ಕಂಪನಿಯು ತನ್ನ ವಿನೂತನ ನಥಿಂಗ್ ಫೋನ್ ಅನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಇದು ನಥಿಂಗ್‌ನ ಉಪ ಬ್ರಾಂಡ್ CMFನ ಮೊದಲ ಫೋನ್ ಆಗಿದೆ. ಇದನ್ನು CMF Phone 1 ಹೆಸರಿನಲ್ಲಿ ಲಾಂಚ್ ಮಾಡಲಾಗುವುದು. ಇದರಲ್ಲೇನು ವಿಶೇಷತೆ ಎಂದರೆ ಬಜೆಟ್ ಬೆಲೆಗೆ ಮಾತ್ರವಲ್ಲದೇ ಭಾರತೀಯ ಗ್ರಾಹಕರಿಗೆ ಎಕ್ಸ್‌ಕ್ಲೂಸಿವ್ ಎಂಬಂತೆ ಅತ್ಯಾಕರ್ಷಕ ಫೀಚರ್ಸ್, ಅದ್ಭುತ ಕ್ಯಾಮೆರಾದೊಂದಿಗೆ ಪರಿಚಯಿಸಲಿದೆ. ಬಿಡುಗಡೆಯಾದ ನಂತರ, ಈ ಫೋನ್ ಅನ್ನು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡಲಾಗುತ್ತದೆ.
ನಥಿಂಗ್ ಫೋನ್‌ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಇದೀಗ CMF Phone 1 ಹೆಸರಿನ ನೂತನ ಮೊಬೈಲ್ ಅನ್ನು ಅನಾವರಣಗೊಳಿಸಲು ಕಂಪನಿ ಸಿದ್ಧವಾಗಿದೆ. CMFನ ಈ ಮೊದಲ ಫೋನ್ ತೆಗೆಯಬಹುದಾದ ಸ್ಕ್ರೂಗಳೊಂದಿಗೆ ನಾಕ್ ಮಾಡುತ್ತದೆ. ಜೊತೆಗೆ ಕ್ಯಾಮೆರಾ, ಚಿಪ್‌ಸೆಟ್ ಮತ್ತು ಡಿಸ್ಪ್ಲೇ ವೈಶಿಷ್ಟ್ಯಗಳಲ್ಲಿಯೂ ಅನೇಕ ಬದಲಾವಣೆಗಳನ್ನು ಮಾಡಿದೆ. ಪ್ರಸ್ತುತ, ಈ ಫೋನ್‌ನ ಕ್ಯಾಮೆರಾದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಈ ಬಹುನಿರೀಕ್ಷಿತ ಮೊಬೈಲ್ ಲಾಂಚ್ ಯಾವಾಗ? ಫೀಚರ್ಸ್‌ಗಳೇನು? ತಿಳಿಯೋಣ ಬನ್ನಿ.

ಜುಲೈ 8 ರಂದು CMF Phone 1 ಭಾರತದಲ್ಲಿ ಬಿಡುಗಡೆ
ಇದೇ ಜುಲೈ 8 ರಂದು CMF Phone 1 ಮೊಬೈಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಜೊತೆಗೆ, CMF Buds Pro 2 ಹಾಗೂ CMF Watch Pro 2 ಸಹ ಲಾಂಚ್ ಆಗಲಿದೆ. ಕಳೆದ ಕೆಲವು ದಿನಗಳಲ್ಲಿ ಈ ಫೋನ್‌ನ ಅಧಿಕೃತ ಟೀಸರ್‌ಗಳನ್ನು ಬಿಡುಗಡೆ ಮಾಡಲಾಗಿದೆ. CMF ಫೋನ್ 1ನ ಹಲವು ಫೀಚರ್ಸ್‌ಗಳು ಬಹಿರಂಗಗೊಂಡಿವೆ. ಪ್ರಸ್ತುತ, ಇದರ ಕ್ಯಾಮೆರಾದ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಅದರಂತೆ, CMF ಫೋನ್ 1, 50 ಮೆಗಾಪಿಕ್ಸೆಲ್ ಸೋನಿ ಪ್ರಾಥಮಿಕ ಹಿಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಈ ಫೋನ್‌ನಲ್ಲಿದೆ ಅದ್ಭುತ ಕ್ಯಾಮೆರಾ ಸೆಟಪ್
YouTube ನಲ್ಲಿ ಜನಪ್ರಿಯ ಟೆಕ್ YouTuber Supersafe ಮೂಲಕ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಮುಂಬರುವ CMF ಫೋನ್ 1 ಮೊಬೈಲ್ 50MP ಪ್ರಾಥಮಿಕ ಸೆನ್ಸಾರ್ ಜೊತೆಗೆ ಡ್ಯುಯಲ್ ಕ್ಯಾಮೆರಾ ಹೊಂದಿರುವ ಸಾಧ್ಯತೆ ಇದೆ. ಮುಂಭಾಗದಲ್ಲಿ 16MP ಸೆಲ್ಫಿ ಶೂಟರ್ ಅನ್ನು ಹೊಂದಿರಲಿದೆ. ಕ್ಯಾಮೆರಾವು f/1.8 ದ್ಯುತಿರಂಧ್ರವನ್ನು ಹೊಂದಿದೆ. 2x ಇನ್-ಸೆನ್ಸಾರ್ ಜೂಮ್‌ನೊಂದಿಗೆ ಬರುತ್ತದೆ ಎಂದು ಕಂಪನಿ ಹೇಳಿದೆ. ಕಂಪನಿಯ ಪ್ರಕಾರ, CMF ಫೋನ್ 1 ಸೆಕೆಂಡರಿ ಪೋಟ್ರೇಟ್ ಸಂವೇದಕವನ್ನು ಪಡೆದಿದೆ.
ನಿಮ್ಮ ಇಷ್ಟದಂತೆಯೇ ಫೋನ್‌ನ ಲುಕ್ ಚೇಂಜ್!
ಇದಕ್ಕೂ ಮೊದಲು, CMF ಮುಂಬರುವ ಫೋನ್ 1ನ ಹಲವು ವೈಶಿಷ್ಟ್ಯಗಳನ್ನು ಫ್ಲಿಪ್‌ಕಾರ್ಟ್ ಮತ್ತು ಇತರ ಟೀಸರ್‌ಗಳ ಮೂಲಕ ಅನಾವರಣಗೊಳಿಸಲಾಗಿದೆ. ಇದರ ದೊಡ್ಡ ವೈಶಿಷ್ಟ್ಯವೆಂದರೆ ಅದರ ಹಿಂಭಾಗದ ಫಲಕ, ಇದು ತೆಗೆಯಬಹುದಾದ ಸ್ಕ್ರೂಗಳನ್ನು ಹೊಂದಿದೆ. ಈ ಸ್ಕ್ರೂ ಅನ್ನು ತೆರೆಯುವ ಮೂಲಕ, ಬಳಕೆದಾರರು ಕಂಪನಿಯು ಬಿಡುಗಡೆ ಮಾಡಿದ ಕೆಲವು ವಿಶೇಷ ಪ್ಯಾನಲ್‌ಗಳನ್ನು ಬದಲಾಯಿಸಲು ಸಾಧ್ಯವಾಗುತ್ತದೆ. ಜೊತೆಗೆ ತಮ್ಮ ಆಯ್ಕೆಯ ಪ್ರಕಾರ ಫೋನ್‌ನ ಲುಕ್ ಅನ್ನು ಬದಲಾಯಿಸಬಹುದು.
CMF Phone 1ನ ಪ್ರೊಸೆಸರ್ ಮಾಹಿತಿ
CMF ಫೋನ್ 1 6.67-ಇಂಚಿನ FHD+ AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು 120Hz ವರೆಗಿನ ಅಡಾಪ್ಟಿವ್ ರಿಫ್ರೆಶ್ ದರ ಮತ್ತು 2,000 nits ವರೆಗಿನ ಗರಿಷ್ಠ ಬ್ರೈಟ್ನೆಸ್ ಪಡೆದಿದೆ. ಈ ಫೋನ್‌ನಲ್ಲಿ MediaTekನ ಡೈಮೆನ್ಸಿಟಿ 7300 5G ಚಿಪ್‌ಸೆಟ್ ಲಭ್ಯವಿರುತ್ತದೆ ಎಂದು ಕಂಪನಿಯು ಈಗಾಗಲೇ ದೃಢಪಡಿಸಿದೆ. ಈ ಫೋನ್‌ನಲ್ಲಿ 8GB RAM ಅನ್ನು ಒದಗಿಸಲಾಗಿದೆ. ಜೊತೆಗೆ 8GB ವರೆಗೆ ವಿಸ್ತರಿಸಬಹುದು. ಅಂದರೆ, ಈ ಫೋನ್‌ನಲ್ಲಿ ಒಟ್ಟು 16GB RAM ಲಭ್ಯವಿರುತ್ತದೆ.
5000mAh ಬ್ಯಾಟರಿ, 33W ಸ್ಪೀಡ್ ಚಾರ್ಜಿಂಗ್
ಇನ್ನೂ ಈ ಫೋನ್‌ನ ಬ್ಯಾಟರಿ ಬ್ಯಾಕಪ್ ಬಗ್ಗೆ ಹೇಳುವುದಾದರೆ, ಇದು 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. 33W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆಯಬಹುದು. ಇದರೊಂದಿಗೆ ಪಂಚ್ ಕಟೌಟ್ ವಿನ್ಯಾಸವನ್ನು ಪಡೆದಿರಲಿದೆ. ಇದು ಡಿಸ್ಲ್ಪೇನ ಮಧ್ಯಭಾಗದಲ್ಲಿ ಇರುತ್ತದೆ. ಇಷ್ಟಲ್ಲಾ ವಿಶೇಷತೆ ಹೊಂದಿರುವ ಈ ಮೊಬೈಲ್‌ನ ಬೆಲೆಯ ಬಗ್ಗೆ ಮಾತನಾಡುವುದಾದರೆ, ಈವರೆಗಿನ ವರದಿಗಳ ಪ್ರಕಾರ, CMF ಫೋನ್ 1 ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 20,000 ರೂ.ಗಿಂತ ಕಡಿಮೆಯಿರಬಹುದು ಎನ್ನಲಾಗಿದೆ.
CMF Buds Pro 2 ಮತ್ತು CMF Watch Pro 2 ಲಾಂಚ್
ನಥಿಂಗ್ ಕಂಪನಿಯು ತನ್ನ ಮುಂದಿನ ಜನರೇಶನ್‌ನ ಅಪ್‌ಡೇಟ್ ಈವೆಂಟ್ ಅನ್ನು ಜುಲೈ 8 ರಂದು ಹೋಸ್ಟ್ ಮಾಡುವುದಾಗಿ ಘೋಷಿಸಿದೆ. ಈ ಈವೆಂಟ್‌ನಲ್ಲಿ CMF Buds Pro 2 ಮತ್ತು CMF Watch Pro 2 ಅನ್ನು ಬಿಡುಗಡೆ ಮಾಡಲಿದೆ. ಜೊತೆಗೆ, ತನ್ನ ಉಪ-ಬ್ರಾಂಡ್ CMF ಅಡಿಯಲ್ಲಿ ತನ್ನ ಮೊದಲ ಸ್ಮಾರ್ಟ್‌ಫೋನ್ ಆಗಿರುವ CMF ಫೋನ್ 1 ಅನ್ನು ಅನಾವರಣಗೊಳಿಸಲಿದೆ. ಇದು ನಥಿಂಗ್ ಬ್ರ್ಯಾಂಡ್‌ನ ಕೈಗೆಟುಕುವ ದರದಲ್ಲಿ ಲಭ್ಯವಿರುವ ನಥಿಂಗ್ ಫೋನ್ 2aಗಿಂತ ಅಗ್ಗವಾಗಿರಲಿದೆ.
ನಥಿಂಗ್ ಫೋನ್ 2aನ ರೀ ಬ್ರಾಂಡ್?
CMF ಫೋನ್ 1 ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ನಥಿಂಗ್ ಫೋನ್ 2a ನ ರೀ ಬ್ರಾಂಡ್ ಆವೃತ್ತಿಯಾಗಿದೆ ಎಂದು ನಿರೀಕ್ಷಿಸಲಾಗಿದೆ. ಆದರೂ, ಮುಂಬರುವ CMF ಬ್ರಾಂಡ್ ಸ್ಮಾರ್ಟ್‌ಫೋನ್ ವಿಭಿನ್ನ ವಿನ್ಯಾಸದ ಥೀಮ್‌ನೊಂದಿಗೆ ಫೋನ್ 2a ಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಪವರ್‌ನ ಪ್ರೊಸೆಸರ್ ಅನ್ನು ಹೊಂದಿರುವ ಸಾಧ್ಯತೆಗಳಿವೆ. ಕಂಪನಿಯು ಹಂಚಿಕೊಂಡಿರುವ ಚಿತ್ರದಲ್ಲಿ, GAN ಚಾರ್ಜರ್, CMF ಬಡ್ಸ್ ಮತ್ತು ಹೆಚ್ಚಿನವುಗಳಂತಹ ಇತರ CMF ಉತ್ಪನ್ನಗಳೊಂದಿಗೆ ಕಂಪನಿಯು ಬಳಸಿದ ಛಾಯೆಯಂತೆಯೇ ಸ್ಮಾರ್ಟ್‌ಫೋನ್ ಪೆಪ್ಪಿ ಆರೆಂಜ್ ಬಣ್ಣದ ಥೀಮ್ ಅನ್ನು ಹೊಂದಿದೆ.
ಒಟ್ನಲ್ಲಿ, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ನಥಿಂಗ್ ಸಂಸ್ಥೆಯ ಮೊಬೈಲ್‌ಗಳು ಭಾರೀ ಸದ್ದು ಮಾಡುತ್ತಿವೆ. ಕಂಪನಿಯು, ಬಜೆಟ್ ಸ್ನೇಹಿ ದರದಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಫೋನ್‌ಗಳನ್ನು ಪರಿಚಯಿಸುವ ಮೂಲಕ ಇತರೆ ಕಂಪನಿಗಳಿಗೆ ಪೈಪೋಟಿ ನೀಡುತ್ತಿದೆ. ಆಗಾಗ್ಗೆ, ವಿನೂತನ ಫೀಚರ್ಸ್‌ನ ಸ್ಮಾರ್ಟ್‌ಫೋನ್‌ಗಳ ಮೂಲಕ ಮೊಬೈಲ್ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ, CMF ಫೋನ್ 1 ಜೊತೆಗೆ CMF Buds Pro 2 ಮತ್ತು CMF Watch Pro 2 ಅನ್ನು ಲೋಕಾರ್ಪಣೆಗೊಳಿಸುತ್ತಿದೆ.


Click it and Unblock the Notifications








