ಭಾರತಕ್ಕೆ ಬರುತ್ತಿವೆ Nothing Phone 4a, 4a Pro: ಪ್ರಮುಖ ವಿವರಗಳು ಬಹಿರಂಗ!
ಲಂಡನ್ ಮೂಲದ ಜನಪ್ರಿಯ ಟೆಕ್ ಬ್ರ್ಯಾಂಡ್ Nothing ಭಾರತದಲ್ಲಿ ತನ್ನ ಬಹುನಿರೀಕ್ಷಿತ ಹೊಸ Nothing Phone 4a ಸರಣಿಯನ್ನು ಮಾರ್ಚ್ ಮೊದಲ ವಾರದಲ್ಲಿ (ಮಾರ್ಚ್ 5, 2026 ರಂದು ಸಂಜೆ 4:00 IST ಗಂಟೆಗೆ ಬಿಡುಗಡೆಯಾಗಲಿದೆ) ಬಿಡುಗಡೆ ಮಾಡಲು ಸಿದ್ಧವಾಗಿದೆ. ಕಂಪನಿ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಈ ಸರಣಿಯಲ್ಲಿ Nothing Phone 4a ಮತ್ತು Nothing Phone 4a Pro ಎಂಬ ಎರಡು ಮಾದರಿಗಳು ಪರಿಚಯವಾಗಲಿವೆ ಎಂದು ಈಗಾಗಲೇ ತಿಳಿದುಬಂದಿದೆ. ಇದೀಗ ಈ ಸರಣಿಯು ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಹೊಂದಿರುವುದು ಅಧಿಕೃತವಾಗಿದೆ.!
ಹೌದು, Nothing Phone 4a ಸರಣಿಯಲ್ಲಿಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಬಳಕೆಯಿರುವುದನ್ನು ಕಂಪನಿಯು ದೃಢಪಡಿಸಿದೆ. ಆದರೆ ನಿಖರ ಪ್ರೊಸೆಸರ್ ಮಾದರಿಯ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ತಂತ್ರಜ್ಞಾನ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಈ ಫೋನ್‌ಗಳಲ್ಲಿ Snapdragon 7s Gen 4 ಪ್ರೊಸೆಸರ್ ಇರಬಹುದೆಂಬ ನಿರೀಕ್ಷೆ ಇದೆ. ಇದು ಉತ್ತಮ ಕಾರ್ಯಕ್ಷಮತೆ ಮತ್ತು ಶಕ್ತಿ ಸಮತೋಲನವನ್ನು ನೀಡುವ ಮಿಡ್-ರೇಂಜ್ ಚಿಪ್‌ಸೆಟ್ ಆಗಿರಲಿದೆ ಎಂಬುದನ್ನು ನಾವು ಸುಲಭವಾಗಿ ಊಹಿಸಬಹುದು.
ಒಂದು ವೇಳೆ Nothing Phone 4a ಸರಣಿಯು ಆಕ್ಟಾ ಕೋರ್ Snapdragon 7s Gen 4 ಪ್ರೊಸೆಸರ್ ಹೊಂದಿದ್ದರೆ, ಇದು 2.71GHz ನ ಗರಿಷ್ಠ ಕ್ಲಾಕ್ ಸ್ಪೀಡ್ ನೀಡುತ್ತದೆ. ಇದನ್ನು 5,400mAh ಬ್ಯಾಟರಿಯಿಂದ 50W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬೆಂಬಲಿಸಬಹುದು. ಡಿಸ್ಪ್ಲೇ ವಿಭಾಗದಲ್ಲಿ Nothing Phone 4a 6.7 ಇಂಚಿನ 1.5K AMOLED ಪರದೆ, 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಬಹುದೆಂದು ವರದಿಗಳು ಸೂಚಿಸುತ್ತಿವೆ. ಆದಾಗ್ಯೂ, ಇತರೆ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ದೊರೆತಿಲ್ಲ.

ಇನ್ನು ಬೆಲೆ ವಿಚಾರದಲ್ಲಿ, Nothing Phone 4a Pro ಯುರೋಪಿಯನ್ ಮಾರುಕಟ್ಟೆಯಲ್ಲಿ ಸುಮಾರು EUR 499 (ಅಂದಾಜು ₹54,000) ರಿಂದ ಆರಂಭವಾಗಬಹುದು ಎಂದು ಹೇಳಲಾಗುತ್ತಿದೆ. ಉನ್ನತ 12GB RAM + 256GB ಸ್ಟೋರೇಜ್ ಮಾದರಿಯ ಬೆಲೆ EUR 569 (ಸುಮಾರು ₹61,000) ಇರಬಹುದೆಂದು ನಿರೀಕ್ಷೆ. ಈ ಮಾದರಿ Black, Silver ಮತ್ತು Pink ಬಣ್ಣಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಸಾಮಾನ್ಯ Nothing Phone 4a ಪ್ರಾರಂಭಿಕ ಬೆಲೆ EUR 409 (ಸುಮಾರು ₹44,000) ಇರಬಹುದು. 12GB + 256GB ಆವೃತ್ತಿಯು EUR 449 (ಸುಮಾರು ₹48,000) ಇರಬಹುದೆಂದು ಅಂದಾಜಿಸಲಾಗಿದೆ. ಇದು Black, Blue, Pink ಮತ್ತು White ಬಣ್ಣಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ Nothing ಈಗಾಗಲೇ ತನ್ನ ವಿಶಿಷ್ಟ ವಿನ್ಯಾಸ ಮತ್ತು ಗ್ಲಿಫ್ ಲೈಟ್ ಇಂಟರ್‌ಫೇಸ್ ಮೂಲಕ ಗಮನ ಸೆಳೆದಿದೆ. 4a ಸರಣಿ ಮಿಡ್-ರೇಂಜ್ ವಿಭಾಗದಲ್ಲಿ ಸ್ಪರ್ಧೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಅಧಿಕೃತ ಬಿಡುಗಡೆ ಸಂದರ್ಭದಲ್ಲಿ ಸಂಪೂರ್ಣ ಫೀಚರ್ಸ್, ಭಾರತದಲ್ಲಿನ ನಿಖರ ಬೆಲೆ ಹಾಗೂ ಮಾರಾಟ ದಿನಾಂಕ ಪ್ರಕಟವಾಗಲಿದೆ.ಒಟ್ಟಿನಲ್ಲಿ, Nothing Phone 4a ಸರಣಿ ಉತ್ತಮ ಡಿಸ್ಪ್ಲೇ, ಸಾಮರ್ಥ್ಯವಾದ ಬ್ಯಾಟರಿ ಮತ್ತು ಸ್ನಾಪ್‌ಡ್ರಾಗನ್ ಪ್ರೊಸೆಸರ್ ಬೆಂಬಲದೊಂದಿಗೆ ಭಾರತೀಯ ಗ್ರಾಹಕರ ಗಮನ ಸೆಳೆಯುವ ಸಾಧ್ಯತೆ ಹೊಂದಿದೆ. ಬಿಡುಗಡೆ ದಿನದ ನಂತರವೇ ಇದರ ನಿಜವಾದ ಕಾರ್ಯಕ್ಷಮತೆ ಮತ್ತು ಮೌಲ್ಯ ಸ್ಪಷ್ಟವಾಗಲಿದೆ. ಜೊತಗೆ, ಮುಂದಿನ ದಿನಗಳಲ್ಲಿ ಪ್ರಮುಖ ವೈಶಿಷ್ಟ್ಯಗಳನ್ನು ಹಂತ ಹಂತವಾಗಿ ಬಹಿರಂಗಪಡಿಸುವ ಸಾಧ್ಯತೆ ಇದೆ.


Click it and Unblock the Notifications