Home
ಮೊಬೈಲ್

ಭಾರತದಲ್ಲಿ Nothing Phone 3a ಕಮ್ಯುನಿಟಿ ಎಡಿಷನ್ ಲಾಂಚ್: ಕೇವಲ 1,000 ಮಾತ್ರ!

Nothing ತನ್ನ ಬಹುನಿರೀಕ್ಷಿತ Phone 3a Community Edition ಮಾದರಿಯನ್ನು ಭಾರತದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಫೋನ್ ಸಾಮಾನ್ಯ Phone 3a ಮಾದರಿಯ ತಾಂತ್ರಿಕ ಫೀಚರ್ಸ್‌ಗಳನ್ನು ಉಳಿಸಿಕೊಂಡಿದ್ದರೂ, ಅದರ ವಿನ್ಯಾಸ, ಬಳಕೆದಾರ ಅನುಭವ ಮತ್ತು ಥೀಮ್‌ಗಳನ್ನು ಸಂಪೂರ್ಣವಾಗಿ ಸಮುದಾಯದ ಸಹಯೋಗದ ಮೂಲಕ ರೂಪಿಸಲಾಗಿದೆ ಎಂಬುದು ಈ ಹೊಸ ಆವೃತ್ತಿಯ ದೊಡ್ಡ ಹೈಲೈಟ್ ಆಗಿದೆ. ಜಾಗತಿಕ Nothing Community ಯ 700 ಕ್ಕೂ ಹೆಚ್ಚು ಸದಸ್ಯರಿಂದ ಬಂದ ಸೃಜನಾತ್ಮಕ ಸಲಹೆಗಳು ಈ ಆವೃತ್ತಿಯ ರಚನೆಗೆ ಕಾರಣವಾಗಿದೆ.!

ಭಾರತದಲ್ಲಿನ ಬೆಲೆ, ಮಾರಾಟ ಮತ್ತು ಲಭ್ಯತೆ
Nothing Phone 3a Community Edition ಅನ್ನು ₹28,999 ಕ್ಕೆ ಬಿಡುಗಡೆ ಮಾಡಲಾಗಿದೆ. 12GB RAM + 256GB ಸ್ಟೋರೇಜ್ ಹೊಂದಿರುವ ಒಂದೇ ವರ್ಶನ್‌ನಲ್ಲಿ ಇದು ಲಭ್ಯ.
ಇದರ ಅತ್ಯಂತ ವಿಶೇಷ ಅಂಶವೆಂದರೆ, ಈ ಫೋನ್‌ನ ಕೇವಲ 1,000 ಯೂನಿಟ್‌ಗಳನ್ನು ಮಾತ್ರ Nothing ತಯಾರಿಸಲಾಗುತ್ತಿದೆ, ಹಾಗಾಗಿ ಇದು ಸಂಗ್ರಹಿಸಿಕೊಳ್ಳಬಹುದಾದ ಲಿಮಿಟೆಡ್ ಎಡಿಷನ್ ಉತ್ಪನ್ನವಾಗಿದೆ.
ಭಾರತೀಯ ಬಳಕೆದಾರರು ಈ ಫೋನ್ ಅನ್ನು ಡಿಸೆಂಬರ್ 13 ರಂದು ಬೆಂಗಳೂರಿನಲ್ಲಿ ನಡೆಯುವ ವಿಶೇಷ ಡ್ರಾಪ್ ಈವೆಂಟ್‌ನಲ್ಲಿ ಮಾತ್ರ ಖರೀದಿಸಲು ಸಾಧ್ಯ. ಈ ಕಾರಣದಿಂದ ಟೆಕ್ ಪ್ರಿಯರ ನಡುವೆ ಇದಕ್ಕೆ ಈಗಾಗಲೇ ಭಾರಿ ಕುತೂಹಲ ಮೂಡಿದೆ.

ಭಾರತದಲ್ಲಿ Nothing Phone 3a ಕಮ್ಯುನಿಟಿ ಎಡಿಷನ್ ಲಾಂಚ್: ಕೇವಲ 1,000 ಮಾತ್ರ!

Community Edition ಅನ್ನು ವಿಭಿನ್ನಗೊಳಿಸುವ ಮುಖ್ಯ ಅಂಶಗಳು
ತಾಂತ್ರಿಕ ವೈಶಿಷ್ಟ್ಯಗಳು Phone 3a ಮಾದರಿಯಂತೆಯೇ ಇದ್ದರೂ, Community Edition ನ USP ಅದರ ಬಳಕೆದಾರರೇ ನಿರ್ಮಿಸಿದ ವಿನ್ಯಾಸ ಭಾಷೆ.
ಹಾರ್ಡ್‌ವೇರ್ ವಿನ್ಯಾಸ: ಸಮುದಾಯದ ಸದಸ್ಯ Emre Kayganacı ಸಲ್ಲಿಸಿದ ವಿನ್ಯಾಸ late 90s ಮತ್ತು early 2000s ಟೆಕ್ ಗ್ಯಾಜೆಟ್‌ಗಳ ಮಿನಿಮಲಿಸ್ಟಿಕ್ ಶೈಲಿಯಿಂದ ಪ್ರೇರಿತವಾಗಿದೆ.
ಆಕ್ಸೆಸರಿ ಡಿಸೈನ್: ಈ ಬಾರಿ Nothing "Accessory Design" ವಿಭಾಗವನ್ನೂ ಪ್ರಾಜೆಕ್ಟ್‌ಗೆ ಸೇರಿಸಿತು. Ambrogio Tacconi ಮತ್ತು Louis Aymond ವಿನ್ಯಾಸಗೊಳಿಸಿದ Dice ಆಕ್ಸೆಸರಿ Ndot 55 ಫಾಂಟ್‌ನ ಸಂಖ್ಯೆಗಳೊಂದಿಗೆ ಭಿನ್ನತೆಯನ್ನು ತೋರಿಸುತ್ತದೆ.

ಭಾರತದಲ್ಲಿ Nothing Phone 3a ಕಮ್ಯುನಿಟಿ ಎಡಿಷನ್ ಲಾಂಚ್: ಕೇವಲ 1,000 ಮಾತ್ರ!

ಹೊಸ ಲಾಕ್‌ಸ್ಕ್ರೀನ್ ಕ್ಲಾಕ್ ಮತ್ತು ಮಿನಿಮಲ್ ವಾಲ್‌ಪೇಪರ್‌ಗಳು
ಈ ವಿಶೇಷ ಆವೃತ್ತಿಯಲ್ಲಿ software ಲೆವೆಲ್‌ನಲ್ಲೂ ಹೊಸತನ ಇದೆ.
ಸಮುದಾಯ ಸದಸ್ಯ Jad Zock Nothing ನ London software ತಂಡದೊಂದಿಗೆ ಸೇರಿ ವಿನ್ಯಾಸಗೊಳಿಸಿದ ಹೊಸ ಲಾಕ್‌ಸ್ಕ್ರೀನ್ ಕ್ಲಾಕ್ ಫೇಸ್ ಹಾಗೂ ವಾಲ್‌ಪೇಪರ್‌ಗಳು Nothing OS signature look ಅನ್ನು ಹೆಚ್ಚಿಸುತ್ತದೆ.
ಬಳಕೆದಾರರಿಗೆ ನೀಲಿ ಮತ್ತು ನೇರಳೆ ವರ್ಣಗಳ ನಾಲ್ಕು ವಿಭಿನ್ನ ಆಯ್ಕೆಗಳು ಲಭ್ಯವಿದ್ದು, IU ಅನ್ನು ಹೆಚ್ಚು ಸ್ವಚ್ಛ, ಮಿನಿಮಲ್ ಹಾಗೂ ಗಮನ ಸೆಳೆಯುವಂತೆ ಮಾಡುತ್ತದೆ.

'Made Together' ಮಾರ್ಕೆಟಿಂಗ್ ಅಭಿಯಾನ
Nothing Phone 3a Community Edition ಅನ್ನು ಪ್ರಚಾರಗೊಳಿಸಲು ನಡೆಸಿದ 'Made Together' ಅಭಿಯಾನಕ್ಕಾಗಿ Sushruta Sarkar ಆಯ್ಕೆಯಾದರು. ಈ ಅಭಿಯಾನ Nothing ಸಮುದಾಯ ಮತ್ತು ಬ್ರಾಂಡ್ ನಡುವಿನ ಸಂಪರ್ಕವನ್ನು ಮತ್ತಷ್ಟು ಗಟ್ಟಿ ಮಾಡಿರುವುದು ಗಮನಾರ್ಹ.

ಒಟ್ಟಾರೆಯಾಗಿ, ಹೊಸ Nothing Phone 3a Community Edition ಮಾದರಿಯು ಒಂದು ಫೋನ್‌ಗಿಂತ ಹೆಚ್ಚು. ಇದು ಬಳಕೆದಾರರು ಹಾಗೂ ಬ್ರಾಂಡ್ ಸೇರಿ ನಿರ್ಮಿಸಿದ ಸೃಜನಾತ್ಮಕ ಪ್ರಾಜೆಕ್ಟ್. ಕಡಿಮೆ ಪ್ರಮಾಣ, ವಿಭಿನ್ನ ವಿನ್ಯಾಸ, ಹೊಸ UI ಅಂಶಗಳು ಮತ್ತು ಸಮುದಾಯದ ನೇರ ಪಾಲ್ಗೊಳ್ಳುವಿಕೆಯೊಂದಿಗೆ ಇದು ಭಾರತದಲ್ಲಿ ಟೆಕ್ ಅಭಿಮಾನಿಗಳಿಗೆ ವಿಶೇಷ ಅನುಭವ ನೀಡುವ ಸಾಧ್ಯತೆ ಇದೆ. ನೀವು ಕೂಡ ಈ ಫೋನ್ ಖರೀದಿಸಲು ಉತ್ಸುಕರಾಗಿದ್ದೀರಾ?, ಹಾಗಾದರೆ, ಡಿಸೆಂಬರ್ 13 ರಂದು ಬೆಂಗಳೂರಿನಲ್ಲಿ ನಡೆಯುವ ವಿಶೇಷ ಡ್ರಾಪ್ ಈವೆಂಟ್ ಮರೆಯದಿರಿ.

Best Mobiles in India

English summary
The Nothing Phone 3a Community Edition has been launched at ₹28,999. It is available in a single version with 12GB RAM + 256GB storage. The most special thing about it is that Nothing is manufacturing only 1,000 units of this phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+