ಬಿಗ್ ಆಫರ್! 17000 ಡಿಸ್ಕೌಂಟ್.. 512GB ಸ್ಟೋರೇಜ್.. 32MP ಸೆಲ್ಫಿ ಕ್ಯಾಮೆರಾ; ಯಾವ ಫೋನ್?
ಸ್ಮಾರ್ಟ್‌ಫೋನ್ ಪ್ರಿಯರು ಸಂತೋಷ ಪಡಲು ಇಷ್ಟು ಸಾಕು! ಹೊಸ ವರ್ಷ ಬಂದಿದೆ, ಸಾಲು ಸಾಲು ಆಫರ್‌ಗಳನ್ನು ತಂದಿದೆ. ಹೌದು, ಹೊಸ ವರ್ಷದ ಪ್ರಯುಕ್ತ ಪ್ರಸಿದ್ಧ ಟೆಕ್ ಕಂಪನಿಗಳು ಬಂಪರ್ ಆಫರ್ ನೀಡುತ್ತಿವೆ. ನಥಿಂಗ್ ಸಹ ಇದರಿಂದ ಹಿಂದೆ ಬಿದ್ದಿಲ್ಲ. ಹೌದು, ಕಂಪನಿಯು ತನ್ನ ನಥಿಂಗ್ ಫೋನ್ 2 (Nothing Phone 2) ಫೋನಿನ ಮೇಲೆ ಶೇ.30 ರಷ್ಟು ಡಿಸ್ಕೌಂಟ್ ಘೋಷಿಸಿದೆ. ಬನ್ನಿ, ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.
ನಥಿಂಗ್ ಫೋನ್ 2 ಫೋನನ್ನು ಕಳೆದ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಮೊಬೈಲ್ ಎರಡು 50MP ಕ್ಯಾಮೆರಾಗಳು ಮತ್ತು 32MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಫೋನಿನಲ್ಲಿ 6.7 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8+ ಜೆನ್ 1 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ 512GB ಸ್ಟೋರೇಜ್ ಮತ್ತು 4700mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ. ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನನ್ನು ಭಾರೀ ರಿಯಾಯಿತಿಯಲ್ಲಿ ಖರೀದಿಸಬಹುದು. ಈ ಫೋನಿಗೆ ಯಾವೆಲ್ಲಾ ಆಫರ್‌ಗಳಿ ಲಭ್ಯವಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ನಥಿಂಗ್ ಫೋನ್ 2 ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ನಥಿಂಗ್ ಫೋನ್ 2 ಸ್ಮಾರ್ಟ್‌ಫೋನ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪೂರ್ಣ ಹೆಚ್‌ಡಿ ಪ್ಲಸ್ LTPO ಓಎಲ್‌ಇಡಿ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 1080 × 2412 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಪಡೆದಿದೆ. ಹಾಗೆಯೇ 120Hz ರಿಫ್ರೆಶ್ ದರ, 240Hz ಸ್ಪರ್ಶ ಮಾದರಿ ದರ ಮತ್ತು 1600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದ ಹೊಂದಿದೆ. ಈ ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಸಹ ಹೊಂದಿದೆ.
ಶಕ್ತಿಶಾಲಿ ಪ್ರೊಸೆಸರ್
ನಥಿಂಗ್ ಫೋನ್ 2 ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8+ ಜೆನ್ 1 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದು ಗ್ರಾಫಿಕ್ಸ್‌ಗಾಗಿ ಆಡ್ರಿನೊ 730 ಜಿಪಿಯು ಸಹ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 13 ಆಧಾರಿತ ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಫೋನಿನಲ್ಲಿ 3 ಆಂಡ್ರಾಯ್ಡ್ ಓಎಸ್ ಅಪ್ಡೇಟ್ ಮತ್ತು 4 ವರ್ಷಗಳ ಭದ್ರತಾ ನವೀಕರಣಗಳು ಲಭ್ಯವಿದೆ.
32MP ಸೆಲ್ಫಿ ಕ್ಯಾಮೆರಾ
ನಥಿಂಗ್ ಫೋನ್ 2 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN1 ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.
ಪವರ್ ಫುಲ್ ಬ್ಯಾಟರಿ
ನಥಿಂಗ್ ಫೋನ್ 2 ಸ್ಮಾರ್ಟ್‌ಫೋನ್ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ಚಾರ್ಜಿಂಗ್, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ವೈರ್ ಚಾರ್ಜರ್ ಮೂಲಕ ಕೇವಲ 55 ನಿಮಿಷಗಳಲ್ಲಿ ಶೇ.100 ರಷ್ಟು ಚಾರ್ಜ್ ಮಾಡಬಹುದು.
ಇತರೆ ವೈಶಿಷ್ಟ್ಯಗಳು
ನಥಿಂಗ್ ಫೋನ್ 2 ಮೊಬೈಲ್ ಗ್ಲಿಫ್ ಇಂಟರ್ಫೇಸ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಬ್ಲೂಟೂತ್ 5.3, ವೈ-ಫೈ 6, 5G, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ನಥಿಂಗ್ ಫೋನ್ 2 ಬೆಲೆ ಮತ್ತು ಆಫರ್‌ಗಳು
ನಥಿಂಗ್ ಫೋನ್ 2 ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ನೀವು, 8GB RAM + 128GB, 12GB RAM + 256GB ಮತ್ತು 12GB RAM + 512GB ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಸಬಹುದು. ಕಂಪನಿಯು 128GB ಸ್ಟೋರೇಜ್ ರೂಪಾಂತರವನ್ನು 44,999 ರೂ.ಗೆ ಬಿಡುಗಡೆ ಮಾಡಿತ್ತು. ಪ್ರಸ್ತುತ ಇದು ಫ್ಲಿಪ್‌ಕಾರ್ಟ್‌ನಲ್ಲಿ 36,999 ರೂ.ಗೆ ಲಭ್ಯವಿದೆ. ನೀವು 8,000 ರೂ. ರಿಯಾಯಿತಿ ದರದಲ್ಲಿ ಖರೀದಿಸಬಹುದು.
ಫೋನಿನ 256GB ಸ್ಟೋರೇಜ್ ರೂಪಾಂತರವನ್ನು 49,999 ರೂ.ಗೆ ಪರಿಚಯಿಸಲಾಗಿತ್ತು. ಪ್ರಸ್ತುತ ಇದನ್ನು 37,999 ರೂ.ಗೆ ಖರೀದಿಸಬಹುದು. 512GB ಸ್ಟೋರೇಜ್ ರೂಪಾಂತರವನ್ನು 54,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಇದು ಪ್ರಸ್ತುತ 38,999 ರೂ.ಗೆ ಮಾರಾಟವಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸೆಸ್ ಬ್ಯಾಂಕ್ ಕಾರ್ಡ್‌ಗಳ ಮೇಲೆ ಶೇ.5 ರಷ್ಟು ಡಿಸ್ಕೌಂಟ್ ಸಹ ಪಡೆಯಬಹುದು. ಈ ಫೋನ್ ಬೂದು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.


Click it and Unblock the Notifications








