Home
ಮೊಬೈಲ್

Nothing: ಹೊಸ ಫೋನ್ ಬಿಡುಗಡೆ; 50MP ಸೆಲ್ಫಿ ಕ್ಯಾಮೆರಾ.. 256GB ಸ್ಟೋರೇಜ್‌.. 1000 ಫೋನ್‌ ಮಾತ್ರ!

ನಥಿಂಗ್ (Nothing) ಕಂಪನಿಯು ಸದ್ದಿಲ್ಲದೆ ಹೊಸ ಮೊಬೈಲ್ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಗ್ರಾಹಕರಿಗೆ ದೀಪಾವಳಿ ಉಡುಗೊರೆ ನೀಡಿದೆ. ಹೌದು, ನಥಿಂಗ್ ಫೋನ್ 2ಎ ಪ್ಲಸ್ ಕಮ್ಯುನಿಟಿ ಎಡಿಷನ್ ಸ್ಮಾರ್ಟ್‌ಫೋನ್ (Nothing Phone (2a) Plus Community Edition) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ವರ್ಷದ ಮೊದಲಾರ್ಧದಲ್ಲಿ ಸ್ಟ್ಯಾಂಡರ್ಡ್ 2ಎ ಪ್ಲಸ್ ಫೋನನ್ನು ಬಿಡುಗಡೆ ಮಾಡಲಾಯಿತು. ಈ ವಿಶೇಷ ಆವೃತ್ತಿಯ ಮೊಬೈಲ್ ಆಕರ್ಷಕವಾಗಿದೆ. ಬನ್ನಿ, ಹೊಸ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ನಥಿಂಗ್ ಫೋನ್ 2ಎ ಪ್ಲಸ್ ಕಮ್ಯುನಿಟಿ ಎಡಿಷನ್ ಫೋನನ್ನು ಹಸಿರು ಫಾಸ್ಫೊರೆಸೆಂಟ್ ಮೆಟೀರಿಯಲ್ ಲೇಪನದೊಂದಿಗೆ ಮಾಡಲಾಗಿದೆ. ಕಂಪನಿಯು ಕೇವಲ 1000 ಸ್ಮಾರ್ಟ್‌ಫೋನ್‌ಗಳನ್ನು ಮಾತ್ರ ಲಭ್ಯಗೊಳಿಸಿದೆ. ಇದು ಕೇವಲ ಒಂದೇ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7350 ಪ್ರೊ ಪ್ರೊಸೆಸರ್‌ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಜೊತೆಗೆ, 5,000mAh ಬ್ಯಾಟರಿ ಮತ್ತು 6.7 ಇಂಚಿನ ಡಿಸ್ಪ್ಲೇ ಜೊತೆಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Nothing: ಹೊಸ ಫೋನ್ ಬಿಡುಗಡೆ; 50MP ಸೆಲ್ಫಿ ಕ್ಯಾಮೆರಾ.. 1000 ಫೋನ್‌ ಮಾತ್ರ!

ನಥಿಂಗ್ ಫೋನ್ 2ಎ ಪ್ಲಸ್ ಕಮ್ಯುನಿಟಿ ಆವೃತ್ತಿ ಬೆಲೆ

ನಥಿಂಗ್ ಫೋನ್ 2ಎ ಪ್ಲಸ್ ಕಮ್ಯುನಿಟಿ ಆವೃತ್ತಿಯ 12GB + 256GB ಸ್ಟೋರೇಜ್‌ ರೂಪಾಂತರವನ್ನು 29,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಇದು ಸಾಮಾನ್ಯ ನಥಿಂಗ್ ಫೋನ್ (2a) ಪ್ಲಸ್ 12GB + 256GB ಸ್ಟೋರೇಜ್‌ ವೇರಿಯಂಟ್‌ನ ಬೆಲೆಯಾಗಿದೆ. ಈ ಫೋನ್ ಖರೀದಿಸಲು ಆಸಕ್ತಿ ಹೊಂದಿರುವವರು, ನಥಿಂಗ್ ಇಂಡಿಯಾದ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ಕೇವಲ 1000 ಸ್ಮಾರ್ಟ್‌ಫೋನ್‌ಗಳು ಮಾತ್ರ ಖರೀದಿಗೆ ಲಭ್ಯವಿರುತ್ತವೆ.

ನಥಿಂಗ್ ಫೋನ್ 2ಎ ಪ್ಲಸ್ ಕಮ್ಯುನಿಟಿ ಎಡಿಷನ್ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ನಥಿಂಗ್ ಫೋನ್ 2ಎ ಪ್ಲಸ್ ಕಮ್ಯುನಿಟಿ ಎಡಿಷನ್ 6.7 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ, 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7350 ಪ್ರೊ ಪ್ರೊಸೆಸರ್‌ ಹೊಂದಿದೆ. ಜೊತೆಗೆ, ಮಾಲಿ G610 MC4 ಜಿಪಿಯು ಹೊಂದಿದೆ. ಈ ಫೋನ್ (2a) ಪ್ಲಸ್ ಆಂಡ್ರಾಯ್ಡ್ 14 ಆಧಾರಿತ ನಥಿಂಗ್ ಓಎಸ್ 2.6 ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದು 3 ವರ್ಷಗಳವರೆಗೆ ಆಂಡ್ರಾಯ್ಡ್‌ ನವೀಕರಣಗಳನ್ನು ಮತ್ತು 4 ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ.

ಕ್ಯಾಮೆರಾ ಸೆಟಪ್

ನಥಿಂಗ್ ಫೋನ್ 2ಎ ಪ್ಲಸ್ ಕಮ್ಯುನಿಟಿ ಎಡಿಷನ್ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ GN9 ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಮತ್ತು OIS, EIS ಮತ್ತು 10x ಡಿಜಿಟಲ್ ಜೂಮ್‌ನೊಂದಿಗೆ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN1 ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN1 ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 50W ವೇಗದ ಚಾರ್ಜಿಂಗ್ ಮತ್ತು 5W ರಿವರ್ಸ್ ವೈರ್ಡ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

ಇತರೆ ವೈಶಿಷ್ಟ್ಯಗಳು

ನಥಿಂಗ್ ಫೋನ್ (2a) ಪ್ಲಸ್ ಕಮ್ಯುನಿಟಿ ಆವೃತ್ತಿಯು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಪಡೆದಿದೆ. ಜೊತೆಗೆ, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಗೂಗಲ್ ಪೇ (Google Pay) ಬೆಂಬಲದೊಂದಿಗೆ NFC ಅನ್ನು ಸಹ ಹೊಂದಿದೆ.

Best Mobiles in India

English summary
Nothing Phone (2a) Plus Community Edition launched in India: price, specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+