ಸಿಹಿ ಸುದ್ದಿ! ಸ್ವಲ್ಪ ಕಾಯಿರಿ.. ಜು.31ಕ್ಕೆ ಬರುತ್ತೆ Nothingನ ಜಬರ್ದಸ್ತ್ ಫೋನ್
ಸ್ಮಾರ್ಟ್‌ಫೋನ್ ಪ್ರಿಯರಿಗೆ ಸಿಹಿ ಸುದ್ದಿ! ನಥಿಂಗ್ (Nothing) ಕಂಪನಿಯಿಂದ ಮತ್ತೊಂದು ಸ್ಪೆಷಲ್ ಫೋನ್. ಹೌದು, ನಥಿಂಗ್ ಕಂಪನಿಯ ಮುಂಬರುವ ಹೊಸ ನಥಿಂಗ್ ಫೋನ್ 2a ಪ್ಲಸ್ (Nothing Phone 2a Plus) ಫೋನ್ ಭಾರೀ ಸದ್ದು ಮಾಡುತ್ತಿದೆ. ಇದೀಗ, ಈ ಫೋನಿಗೆ ಸಂಬಂಧಿಸಿದ ಮಹತ್ವದ ಅಪ್ಡೇಟ್ ಹೊರಬಿದ್ದಿದೆ. ಕಂಪನಿಯು ನಥಿಂಗ್ ಫೋನ್ 2a ಪ್ಲಸ್ ಫೋನಿನ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಇದೇ ಜುಲೈ 31ರಂದು ಹೊಸ ಫೋನ್ ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ. ಈ ಹೊಸ ಫೋನಿನ ಬೆಲೆ ಎಷ್ಟು? ವಿಶೇಷತೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಟೆಕ್ ಬ್ರ್ಯಾಂಡ್ ನಥಿಂಗ್ ತನ್ನ ಮೂರನೇ ಸ್ಮಾರ್ಟ್‌ಫೋನ್ ನಥಿಂಗ್ ಫೋನ್ 2ಎ ಅನ್ನು ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ಅನಾವರಣಗೊಳಿಸಿತ್ತು. ಅತ್ಯಾಕರ್ಷಕ ಬ್ಯಾಕ್ ಪ್ಯಾನೆಲ್ ಮತ್ತು ಗ್ಲಿಫ್ ಲೈಟಿಂಗ್ ಹೊಂದಿರುವ ಈ ಮೊಬೈಲ್ ತನ್ನ ಸ್ಟೈಲಿಶ್ ಲುಕ್‌ನಿಂದ ಸೌಂಡ್ ಮಾಡಿದೆ. ಈಗ ಕಂಪನಿಯು ತನ್ನ 'ಪ್ಲಸ್' ಮಾದರಿಯನ್ನು ತರುತ್ತಿದೆ. ಜುಲೈ 31 ರಂದು ನಥಿಂಗ್ ಫೋನ್ 2ಎ ಪ್ಲಸ್ ಅನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ಬ್ರ್ಯಾಂಡ್ ಘೋಷಿಸಿದೆ. ಬಿಡುಗಡೆಯ ನಂತರ, ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ.

ಫೋನ್ 2ಎ ಪ್ಲಸ್ ಬಿಡುಗಡೆ ದಿನಾಂಕ
ನಥಿಂಗ್ ಫೋನ್ 2A ಪ್ಲಸ್ ಅನ್ನು ಬಿಡುಗಡೆ ಮಾಡಲು ಜುಲೈ 31 ರಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಲಂಡನ್ ಮೂಲದ ಟೆಕ್ ಬ್ರ್ಯಾಂಡ್ ಘೋಷಣೆ ಮಾಡಿದೆ. ಈ ಫೋನ್ ಜುಲೈ 31 ರಂದು ಮಧ್ಯಾಹ್ನ 2.30ಕ್ಕೆ ಬಿಡುಗಡೆಯಾಗಲಿದೆ. ಈ ಫೋನ್‌ನ ಚಿತ್ರವೊಂದನ್ನು ಕಂಪನಿಯು ಹಂಚಿಕೊಂಡಿದೆ. ಅಸಾಧಾರಣವಾದ ಹೊಸ ಸ್ಮಾರ್ಟ್‌ಫೋನ್ ಬರಲಿದೆ. Nothing Phone (2a) Plusಗಾಗಿ ಸಿದ್ಧರಾಗಿ..! ಎಂಬ ಟೈಟಲ್ ಅನ್ನು ನೀಡಿದೆ. ಪ್ರಸ್ತುತ, ಮೊಬೈಲ್‌ನ ಇತರ ವಿವರಗಳನ್ನು ಕಂಪನಿ ಬಹಿರಂಗಪಡಿಸಿಲ್ಲ.
ಫೋನ್ 2ಎ ವಿಶೇಷತೆಗಳೇನು?
ನಥಿಂಗ್ ಫೋನ್ (2a) ಪ್ಲಸ್ ಸ್ಮಾರ್ಟ್‌ಫೋನ್ 6.7-ಇಂಚಿನ AMOLED ಡಿಸ್ಲ್ಪೇಯನ್ನು ಹೊಂದಿರಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊ ಪ್ರೊಸೆಸರ್, 12GB RAM ಮತ್ತು 256GB ಸ್ಟೋರೇಜ್ ಪಡೆದಿರಲಿದೆ. 50MP+50MP ಹಿಂಬದಿಯ ಕ್ಯಾಮೆರಾ, 32MP ಫ್ರಂಟ್ ಕ್ಯಾಮೆರಾ, 45W ಫ್ಲ್ಯಾಶ್ ಚಾರ್ಜ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಬ್ಯಾಕಪ್ ಹೊಂದಿರುವ ನಿರೀಕ್ಷೆಯಿದೆ.
ಫೋನ್ 2ಎ ಬೆಲೆ ಎಷ್ಟು?
ಈ ಫೋನಿನ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ 23,999 ರೂ. ಇದೆ. 256 GB ಸ್ಟೋರೇಜ್ ರೂಪಾಂತರವನ್ನು 25,999 ರೂ.ಗೆ ಖರೀದಿಸಬಹುದು. ಇನ್ನೂ 12GB ಹೊಂದಿರುವ ಮಾದರಿಯನ್ನು 27,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ, Flipkartನಲ್ಲಿ Axis ಬ್ಯಾಂಕ್ ಮತ್ತು IDFC FIRST ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಈ ಫೋನ್ ಖರೀದಿಸಿದರೆ 1,500 ರೂ. ಡಿಸ್ಕೌಂಟ್ ನೀಡಲಾಗುತ್ತದೆ. ಇದನ್ನು ಕಪ್ಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ನೀವು ಖರೀದಿಸಬಹುದು.
ನಥಿಂಗ್ ಫೋನ್ 2ಎ ವಿಶೇಷತೆಗಳೇನು?
ಡಿಸ್ಲ್ಪೇ: ಈ ಫೋನ್ 6.7 ಇಂಚಿನ FullHD+ ಪಂಚ್ ಹೋಲ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 1300nits ಬ್ರೈಟ್‌ನೆಸ್ ಪಡೆದಿದೆ. ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಗೊರಿಲ್ಲಾ ಗ್ಲಾಸ್ 5 ಲೇಯರ್ ಅನ್ನು ಹೊಂದಿದೆ.
ಪ್ರೊಸೆಸರ್: ಇದು ಮೀಡಿಯಾ ಟೆಕ್ ಡೈಮೆನ್ಶನ್ 7200 ಪ್ರೊ ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ನಥಿಂಗ್ OS 2.5ನಲ್ಲಿ ಕಾರ್ಯನಿರ್ವಹಿಸುವ Android 14ನಲ್ಲಿ ಪ್ರಾರಂಭಿಸಲಾಗಿದೆ.
ಸ್ಟೋರೇಜ್: ಈ ಫೋನ್ 8GB RAM ಮತ್ತು 12GB RAM ಅನ್ನು ಬೆಂಬಲಿಸುತ್ತದೆ. ಈ ಮೊಬೈಲ್ 8GB RAM ಬೂಸ್ಟರ್ ತಂತ್ರಜ್ಞಾನವನ್ನು ಹೊಂದಿದ್ದು, ಅದು ಭೌತಿಕ RAM ಜೊತೆಗೆ 20GB RAM ವರೆಗೆ ಶಕ್ತಿಯನ್ನು ನೀಡುತ್ತದೆ. ಇದನ್ನು 128GB ಮತ್ತು 256GB ಸ್ಟೋರೇಜ್‌ನೊಂದಿಗೆ ಖರೀದಿಸಬಹುದು.
ಕ್ಯಾಮೆರಾ: ನಥಿಂಗ್ ಫೋನ್ 2a ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ: ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಈ ದೊಡ್ಡ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸಪೋರ್ಟ್ ಒದಗಿಸಲಾಗಿದೆ. ಈ ಫೋನ್ 23 ನಿಮಿಷಗಳಲ್ಲಿ ಅನ್ನು 0 ರಿಂದ 50% ವರೆಗೆ ಮತ್ತು 59 ನಿಮಿಷಗಳಲ್ಲಿ 100% ವರೆಗೆ ಸಂಪೂರ್ಣ ಚಾರ್ಜ್ ಮಾಡಬಹುದು.


Click it and Unblock the Notifications








