ಇಂದಿನಿಂದ Nothing Phone 2a ಫಸ್ಟ್ ಸೇಲ್ ಆರಂಭ: ಬೆಲೆ ಎಷ್ಟು? ಏನೆಲ್ಲಾ ಫೀಚರ್‌ಗಳಿವೆ ಗೊತ್ತಾ?
ಇತ್ತೀಚೆಗೆ ತನ್ನ ವಿಭಿನ್ನ ಲುಕ್ ಮತ್ತು ಅಪ್ಡೇಟೆಡ್ ಫೀಚರ್ಸ್‌ಗಳೊಂದಿಗೆ ನಥಿಂಗ್ ಫೋನ್ 2a ಸ್ಪೆಷಲ್ ಎಡಿಷನ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿತ್ತು. ನಥಿಂಗ್ ಸಂಸ್ಥೆಯ ಈ ಫೋನ್ ಬೆಲೆ, ಡಿಸೈನ್ ಹಾಗೂ ಅದ್ಭುತ ಫೀಚರ್ಸ್‌ಗಳಿಂದ ಗಮನ ಸೆಳೆದಿತ್ತು. ಈ ಮೊಬೈಲ್ ಇಂದು (ಜೂನ್ 5) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಅಧಿಕೃತವಾಗಿ ಸೇಲ್ ಪ್ರಾರಂಭಿಸಲಿದೆ. ಈ ಸ್ಮಾರ್ಟ್‌ಫೋನ್ ಖರೀದಿಸಲು ಮೊಬೈಲ್ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಹಾಗಿದ್ರೆ, Nothing Phone 2a Special Edition ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಅನ್ನೋದನ್ನು ತಿಳಿಯೋಣ ಬನ್ನಿ.
ಕಳೆದ ಮೇ ತಿಂಗಳಲ್ಲಿ Nothing Phone 2a ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಇದೀಗ, ಫ್ಲಿಪ್‌ಕಾರ್ಟ್ ಮೂಲಕ ಮೊದಲ ಮಾರಾಟ ಆರಂಭಿಸುತ್ತಿದೆ. ಈ ಫೋನ್ 12GB RAM + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಒಳಗೊಂಡಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 7200 ಪ್ರೊ ಚಿಪ್‌ಸೆಟ್ ಪ್ರೊಸೆಸರ್ ಪವರ್ ಹೊಂದಿದೆ. ಇದರ ಬೆಲೆ 27,999 ರೂ. ಆಗಿದ್ದು, ಬ್ಯಾಂಕ್ ಆಫರ್ ಸೇರಿದಂತೆ ಇತರೆ ಡಿಸ್ಕೌಂಟ್‌ಗಳು ಲಭ್ಯವಾಗಲಿವೆ. ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಆಲೋಚನೆಯನ್ನು ಹೊಂದಿದ್ದರೆ, ಬಜೆಟ್ ಫ್ರೆಂಡ್ಲಿಯ ನಥಿಂಗ್ ಫೋನ್ 2a ಬೆಸ್ಟ್ ಚಾಯ್ಸ್.

3 ವರ್ಷಗಳವರೆಗೆ ಆಂಡ್ರಾಯ್ಡ್ ಅಪ್ಡೇಟ್
ನಥಿಂಗ್ ಫೋನ್ 2a ಸ್ಮಾರ್ಟ್‌ಫೋನ್ ಶಕ್ತಿಯುತ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದು 45 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಈ ಫೋನ್ ಹೊಸ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಮೊಬೈಲ್‌ನಲ್ಲಿ 3 ವರ್ಷಗಳವರೆಗೆ ಆಂಡ್ರಾಯ್ಡ್ ನವೀಕರಣಗಳನ್ನು ಪಡೆಯಬಹುದು. ಈ ಫೋನ್ 50 MP ಕ್ಯಾಮೆರಾ ಹೊಂದಿದೆ. ಉಳಿದಂತೆ, ಈ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ನಥಿಂಗ್ ಫೋನ್ 2ಎ ಡಿಸ್‌ಪ್ಲೇ ಹೇಗಿದೆ?
ನಥಿಂಗ್ ಫೋನ್ 2ಎ ಸ್ಪೆಷಲ್ ಎಡಿಷನ್ ಸ್ಮಾರ್ಟ್‌ಫೋನ್ 6.7 ಇಂಚಿನ ಅಮೋಲ್ಡ್ ಫುಲ್‌ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಜೊತೆಗೆ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಈ ಫೋನ್ 120Hz ರಿಫ್ರೆಶ್ ರೇಟ್‌ಗೆ ಹೊಂದಿದ್ದು, 1,300 ನಿಟ್‌ಗಳ ಗರಿಷ್ಠ ಶೈನಿಂಗ್ ಹೊಂದಿರಲಿದೆ. ಇನ್ನು ಮಿಡಿಯಾ ಟೆಕ್ ಡೈಮೆನ್ಸಿಟಿ 7200 Pro SoC ಪ್ರೊಸೆಸರ್ ಹೊಂದಿರಲಿದೆ. ಮಾರುಕಟ್ಟೆಯಲ್ಲಿ ಲಭ್ಯ ಇರುವ ಬಜೆಟ್ ಫೋನ್‌ಗಳಿಗೆ ಇದು ಭರ್ಜರಿ ಪೈಫೋಟಿ ನೀಡುವುದರಲ್ಲಿ ಡೌಟೇ ಇಲ್ಲ.
ಈ ಫೋನ್‌ನ ಕ್ಯಾಮೆರಾ ಫೀಚರ್ಸ್ ಹೇಗಿರಲಿವೆ?
ನಥಿಂಗ್ ಫೋನ್ 2a ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳಿವೆ. ಪ್ರಾಥಮಿಕ ಕ್ಯಾಮೆರಾ 50 ಮೆಗಾ ಫಿಕ್ಸೆಲ್ ಹೊಂದಿದ್ದು, ಅದ್ಭುತ ಮತ್ತು ಸ್ಪಷ್ಟವಾದ ಫೋಟೋಗಳನ್ನು ತೆಗೆಯಬಹುದು. ಇದಲ್ಲದೇ, 50 ಮೆಗಾ ಫಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿ ಹಾಗೂ ವಿಡಿಯೋಗಳಿಗಾಗಿ 32MP ಕ್ಯಾಮೆರಾವನ್ನು ಮುಂಭಾಗದಲ್ಲಿ ನೀಡಲಾಗಿದೆ. ಈ ಫೋನ್ ಡ್ಯುಯಲ್ ಸಿಮ್, 5ಜಿ, ವೈ-ಫೈ 6, ಬ್ಲೂಟೂತ್ 5.3, ಎನ್‌ಎಫ್‌ಸಿ, ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಬಿಳಿ, ಕಪ್ಪು ಬಣ್ಣದ ಫೋನ್‌ಗಿಂತಲೂ ಸಖತ್ ಲುಕ್
ನಥಿಂಗ್ ಫೋನ್ 2a ನೀಲಿ ಬಣ್ಣದಲ್ಲಿ ಸೇಲ್ ಆರಂಭಿಸುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಿಳಿ, ಕಪ್ಪು ಬಣ್ಣದ ಫೋನ್‌ಗಿಂತಲೂ ಇದರ ಲುಕ್ ಸಖತ್ ಆಗಿದೆ. ಹಳೆಯ ನಥಿಂಗ್ 2ಎನಂತೆ ಇರುವ ಈ ಫೋನ್ ಹೊಸ ಕಲರ್‌ನೊಂದಿಗೆ ಬಂದಿದೆ. ಈ ಫೋನ್ ಕೇವಲ ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿರಲಿದೆ. ನಥಿಂಗ್ ಫೋನ್ 2ಎ ಸ್ಪೆಷಲ್ ಎಡಿಷನ್ ಭಾರತೀಯ ಗ್ರಾಹಕರನ್ನು ಎಷ್ಟರಮಟ್ಟಿಗೆ ಆಕರ್ಷಿಸಲಿದೆ ಎಂಬುದನ್ನು ಕಾದು ನೋಡಬೇಕು.


Click it and Unblock the Notifications








