ಭಾರತಕ್ಕೆ Nothing Phone 3a Lite ಬರಲು ದಿನಾಂಕ ನಿಗದಿ!..ಪೂರ್ಣ ಮಾಹಿತಿ!
ಭಾರತದಲ್ಲಿ Nothing ಕಂಪನಿಯ ಬಹುನಿರೀಕ್ಷಿತ Nothing Phone 3a Lite ಫೋನ್ ಬಿಡುಗಡೆ ದಿನಾಂಕವು ಇಂದು ಅಧಿಕೃತವಾಗಿದೆ.! ಇತ್ತೀಚೆಗೆ ಈ ಫೋನ್‌ನ್ನು ದೇಶಕ್ಕೆ ತರಲಾಗುವುದಾಗಿ ಕಂಪನಿ ದೃಢಪಡಿಸಿದ್ದರೂ, ಅಧಿಕೃತ ದಿನಾಂಕವನ್ನು ಘೋಷಿಸಿರಲಿಲ್ಲ. ಆದರೆ, ಇಂದು ಸೋಮವಾರದಂದು ಕಂಪೆನಿಯು ಬಹುನಿರೀಕ್ಷಿತ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದು, ದೇಶದಲ್ಲಿ ಇದೇ ನವೆಂಬರ್ 27 ರಂದು Phone 3a Lite ಬಿಡುಗಡೆಯಾಗುವುದು ಖಚಿತವಾಗಿದೆ. ಕಡಿಮೆ ಬೆಲೆ ಶ್ರೇಣಿಯಲ್ಲಿ ಬರಲಿರುವ Phone 3a ಸರಣಿಯ ಈ ಹೊಸ ಮಾದರಿಗಾಗಿ ಕಾತರದಿಂದ ಕಾಯುತ್ತಿದ್ದವರಿಗೆ ಇದು ಭರ್ಜರಿ ಸಿಹಿಸುದ್ದಿಯಾಗಿದೆ.
Nothing ಇತ್ತೀಚಿಗೆ ಪ್ರಕಟಿಸಿದ್ದ X ಪೋಸ್ಟ್ ನಲ್ಲಿ, "ಲೈಟ್-ನಿಂಗ್ ಯಾವಾಗಲೂ ಏನಾದರೂ ಹೆಚ್ಚಿನದರೊಂದಿಗೆ ಇರುತ್ತದೆ "(Lite-ning is always accompanied by something more) ಎಂದು ಹೇಳಿತ್ತು. ಇದರಿಂದ ಮುಂಬರುವ ಈ ಫೋನ್ ಹೆಚ್ಚಿನ ಕೊಡುಗೆಗಳನ್ನು ಹೊಂದಿರಬಹುದು ಎಂದು ತಿಳಿದುಬಂದಿತ್ತು. ಹಾಗೆಯೇ, ಈ ಫೋನ್ ಕಪ್ಪು ಮತ್ತು ಬಿಳಿ ಎರಡೂ ಬಣ್ಣ ಆಯ್ಕೆಗಳಲ್ಲಿ ಬರುವುದು ಸಹ ಖಚಿತವಾಗಿತ್ತು. ವದಂತಿಗಳಂತೆ, ಕಳೆದ ಅಕ್ಟೋಬರ್‌ನಲ್ಲಿ ಜಾಗತಿಕವಾಗಿ ಪರಿಚಯವಾಗಿದ್ದ ವಿಧದಲ್ಲೇ ದೇಶದಲ್ಲಿ ಕೂಡ Phone 3a Lite ವೈಶಿಷ್ಟ್ಯಗಳು ಮತ್ತು ಫೀಚರ್ಸ್ ಇರುವ ಸಾಧ್ಯತೆಯಿದೆ.
Nothing Phone 3a Lite: ಪ್ರಮುಖ ವೈಶಿಷ್ಟ್ಯಗಳು
ಈಗಾಗಲೇ ಜಾಗತಿಕವಾಗಿ ಲಭ್ಯವಿರುವ Nothing Phone 3a Lite ನಲ್ಲಿ 6.77 ಇಂಚಿನ Full HD+ AMOLED ಡಿಸ್ಪ್ಲೇ ಇದೆ. ಇದು 120Hz ಅಡಾಪ್ಟಿವ್ ರಿಫ್ರೆಶ್ ರೇಟ್, 3,000 ನಿಟ್ಸ್ ಪೀಕ್ ಬ್ರೈಟ್ನೆಸ್ ಮತ್ತು 1,000Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಹೊಂದಿದೆ. ಕಾರ್ಯಕ್ಷಮತೆಗಾಗಿ, ಈ ಫೋನಿನಲ್ಲಿ 8GB RAM ಮತ್ತು 256GB ವರೆಗೆ ಸ್ಟೋರೇಜ್ ವರೆಗೆ ಸಂಯೋಜಿಸಲಾಗಿರುವ 4nm MediaTek Dimensity 7300 Pro ಪ್ರೊಸೆಸರ್ ಇದೆ.
ಜೊತೆಗೆ ಇದರಲ್ಲಿ ಗಮನಾರ್ಹ ಅಂಶವೆಂದರೆ, ಬಳಕೆದಾರರು microSD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದು. ಇನ್ನು ನಿರೀಕ್ಷೆಯಂತೆಯೇ, Nothing OS 3.5 (Android 15 ಆಧಾರಿತ) ಮೇಲೆ ಕಾರ್ಯನಿರ್ವಹಿಸುವ ಈ ಫೋನ್‌ಗೆ 3 ವರ್ಷಗಳ Android ಅಪ್‌ಡೇಟ್‌ಗಳು ಹಾಗೂ 6 ವರ್ಷಗಳ ಭದ್ರತಾ ಅಪ್‌ಡೇಟ್‌ಗಳು ದೊರೆಯುತ್ತವೆ ಎಂದು ಕಂಪೆನಿಯು ತಿಳಿಸಿದೆ.

ಕ್ಯಾಮೆರಾ ವಿಭಾಗದಲ್ಲಿ, ಈ Nothing Phone 3a Lite ಫೋನಿನ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ (Samsung ಸೆನ್ಸರ್, OIS/EIS ಬೆಂಬಲದೊಂದಿಗೆ) ಮತ್ತು 8MP ಅಲ್ಟ್ರಾವೈಡ್ ಲೆನ್ಸ್ ಇದೆ.ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಫೋನ್ 4K ವಿಡಿಯೋ ಚಿತ್ರೀಕರಣ (30fps) ಹಾಗೂ ಸ್ಲೋ-ಮೊಷನ್ (120fps) ಚಿತ್ರೀಕರಣವನ್ನೂ ಬೆಂಬಲಿಸುತ್ತದೆ. ಜೊತೆಗೆ "TrueLens Engine 4.0", "Night Mode" ಹಾಗೂ "Portrait Optimiser" ಫೀಚರ್‌ಗಳು ವೃತ್ತಿಪರ ಫೋಟೋ ಗುಣಮಟ್ಟವನ್ನು ಒದಗಿಸುವ ಭರವಸೆ ನೀಡಿವೆ.
ಬ್ಯಾಟರಿ ವಿಭಾಗದಲ್ಲಿ, ಈ ಫೋನ್‌ನಲ್ಲಿ 5,000mAh ಬ್ಯಾಟರಿ ಇದ್ದು, 33W ವೇಗದ ಚಾರ್ಜಿಂಗ್ ಹಾಗೂ 5W ರಿವರ್ಸ್ ಚಾರ್ಜಿಂಗ್ ಬೆಂಬಲ ನೀಡುತ್ತದೆ. ಸುರಕ್ಷತೆಗಾಗಿ in-display fingerprint sensor, IP54 ಧೂಳು ಮತ್ತು ನೀರಿನ ನಿರೋಧಕತೆ, ಹಾಗೂ Panda Glass ರಕ್ಷಣೆ ಇದೆ. ಫೋನ್‌ನ ತೂಕ ಕೇವಲ 199 ಗ್ರಾಂ ಇದ್ದು, ಇದು ಕೈಯಲ್ಲಿ ಹಿಡಿದಾಗ ಹಗುರ ಮತ್ತು ಆರಾಮದಾಯಕವಾಗಿದೆ.
ಮುಖ್ಯವಾಗಿ ಗಮನಿಸುವುದಾದರೆ, ಈ ಫೋನ್ Nothing ಕಂಪೆನಿಯ ಸಿಗ್ನೇಚರ್ ಪಾರದರ್ಶಕ ಸೌಂದರ್ಯದ ಸ್ಕೇಲ್ಡ್-ಡೌನ್ ಆವೃತ್ತಿಯನ್ನು ಹೊಂದಿದೆ. ಇದು ಪ್ರೀಮಿಯಂ ನೋಟವನ್ನು ಕೈಗೆಟುಕುವ ಬೆಲೆಯೊಂದಿಗೆ ಸಮತೋಲನಗೊಳಿಸುವ ಸಲುವಾಗಿ ಇರಬಹುದು. ಪ್ರಮುಖ ಮಾದರಿಗಳಿಂದ ಇದನ್ನು ಪ್ರತ್ಯೇಕಿಸಲು, ಲೈಟ್ ಆವೃತ್ತಿಯು ಸರಳ ವಿನ್ಯಾಸ ಮತ್ತು ಕಡಿಮೆ ಗ್ಲಿಫ್ ಇಂಟರ್ಫೇಸ್ ಅನ್ನು ಹೊಂದಿದೆ. ಇದರ ವಿಶಿಷ್ಟ Glyph ಲೈಟ್ ಡಿಸೈನ್ ಸಹ ಆಕರ್ಷಿಸುವಂತಿದೆ.
Nothing Phone 3a Lite: ಬೆಲೆ ಎಷ್ಟು?
Nothing Phone 3a Lite ಸ್ಮಾರ್ಟ್‌ಫೋನ್ ಪ್ರಸ್ತುತ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಮಾತ್ರ ಲಭ್ಯವಿದೆ. ಈ ಫೋನಿನ ಯುರೋಪ್ ಬೆಲೆ EUR 249 (ಸುಮಾರು ₹25,600) ರಿಂದ ಪ್ರಾರಂಭವಾಗಿದ್ದರೆ, ಬ್ರಿಟನ್‌ನಲ್ಲಿ ಇದರ ಬೆಲೆ GBP 249 (ಸುಮಾರು ₹29,000) ಗಳಾಗಿವೆ. ಇನ್ನುಹೆಚ್ಚು ಸ್ಟೋರೇಜ್ ಇರುವ 256GB ಮಾದರಿಯು EUR 279 (ಸುಮಾರು ₹28,700) ಹಾಗೂ GBP 279 (ಸುಮಾರು ₹32,500) ದರದಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಈ ಫೋನ್ ಬೆಲೆಯನ್ನು 20 ಸಾವಿರ ಆಸುಪಾಸಿನಲ್ಲಿ ನಿರೀಕ್ಷಿಸಲಾಗಿದೆ.! ಇದಕ್ಕೆ ಸ್ಪಷ್ಟ ಉತ್ತರ ನವೆಂಬರ್ 27ರಂದು ದೊರೆಯಲಿದೆ.


Click it and Unblock the Notifications








