Home
ಮೊಬೈಲ್

ಭಾರತಕ್ಕೆ ಶೀಘ್ರವೇ ಬರುತ್ತಿದೆ ಅತ್ಯಂತ ಕಡಿಮೆ ಬೆಲೆಯ ಹೊಸ Nothing ಫೋನ್!

ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆವರಿಸುವುದು ಸುಲಭದ ಮಾತಲ್ಲ. 140 ಕೋಟಿ ಜನರು ವಾಸಿಸುವ ದೇಶದಲ್ಲಿ ಗಟ್ಟಿಯಾಗಿ ನೆಲೆಯೂರಲು ದೈತ್ಯ ಮೊಬೈಲ್ ಕಂಪೆನಿಗಳೆಲ್ಲವೂ ಒಂದಿಲ್ಲೊಂದು ಪರಾಕ್ರಮ ಮಾಡುತ್ತಲೇ ಇರುತ್ತವೆ. ಯುಕೆ ಮೂಲದ ಜನಪ್ರಿಯ ಮೊಬೈಲ್ ಬ್ರ್ಯಾಮಡ್ Nothing ಕೂಡ ಇಂತಹುದೇ ಹೊಸ ಸಾಹಸವನ್ನು ಮಾಡಲು ಮುಂದಾಗಿದೆ. ಹೌದು, ನಥೀಂಗ್ ಶೀಘ್ರದಲ್ಲೇ ಭಾರತದಲ್ಲಿ ಕಂಪನಿಯ ಅತ್ಯಂತ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ.!

ವಿಶಿಷ್ಟ್ ಗ್ಲಿಫ ಇಂಟರ್‌ಪೇಸ್ ವಿನ್ಯಾಸ ಮತ್ತು ಉತ್ತಮ ಫೀಚರ್ಸ್ ಮೂಲಕ ನಥಿಂಗ್ ಫೋನ್‌ಗಳು ಗಮನಸೆಳೆಯುತ್ತವೆ. ಆದರೆ, ದೇಶದಲ್ಲಿ ಈ ಪೋನ್‌ಗಳು ಸ್ವಲ್ಪ ದುಬಾರಿಯಾಗಿ ಕಾಣುತ್ತವೆ. ಇದರಿಂದ ದೇಶದಲ್ಲಿ ನಥಿಂಗ್ ಕಂಪೆನಿಯು ಅಷ್ಟಾಗಿ ನೆಲೆಯೂರಿಲ್ಲ. ಈ ಕಾರಣದಿಂದಲೇ ಏನೋ, ದೇಶದಲ್ಲಿ Nothing Phone 3a Lite ಎಂಬ ಹೊಸ ಪೋನ್ ಬಿಡುಗಡೆಗೆ ಕಂಪೆನಿ ಸಿದ್ಧವಾಗಿದೆ. ಈ ಹಿಂದೆ ಕೇವಲ ವದಂತಿಯಾಗಿದ್ದ ಈ ಸಿಹಿಸುದ್ದಿ ಇದೀಗ ಬಹುತೇಕ ಖಚಿತವಾಗಿದೆ.

Nothing ಕಂಪೆನಿಯ ಘೋಷಣೆಯಾಗದ ಹೊಸ ಸ್ಮಾರ್ಟ್‌ಫೋನ್ ಅನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದ್ದು, ಈ ಫೋನ್‌ಗೆ A001T ಎಂಬ ಮಾದರಿ ಸಂಖ್ಯೆಯನ್ನು ನೀಡಲಾಗಿದೆ. ಇದು CMF Phone 2 Pro ನ ಮಾದರಿ ಸಂಖ್ಯೆಗೆ (A001) ಹೋಲುತ್ತದೆ. ಮೊಬೈಲ್ ಉದ್ಯಮ ಮೂಲಗಳ ಪ್ರಕಾರ, ಇದು CMF Phone 2 Pro ನ ಮರು-ವಿನ್ಯಾಸಗೊಳಿಸಿದ ಆವೃತ್ತಿಯಾಗಿ Nothing Phone 3a Lite ಇರಬಹುದು ಎಂದು ವದಂತಿಗಳಿವೆ.

ಇದೀಗ ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ, Nothing Phone 3a Lite ಫೋನ್ 8GB RAM + 128GB ಸಂಗ್ರಹಣೆಯ ಏಕೈಕ ಆಯ್ಕೆಯಲ್ಲಿ, ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಬರುವ ಸಾಧ್ಯತೆ ಇದೆ. ಈ 'Lite' ಮಾದರಿಯು ಗಮನ ಸೆಳೆಯುವ ಪ್ರಮುಖ ಅಂಶವೆಂದರೆ ಅದರ ನಿರೀಕ್ಷಿತ ಬೆಲೆ. Lite ಎಂಬ ಹೆಸರೇ ಇದು Phone (3a) ಗಿಂತ ಕಡಿಮೆ ಫಿಚರ್ಸ್ ಹೊಂದಿರುವುದನ್ನು ಸೂಚಿಸುತ್ತಿದೆ. ಏಕೆಂದರೆ, ಸಾಮಾನ್ಯವಾಗಿ Lite ಹೆಸರಿನಲ್ಲಿ ಬಿಡುಗಡೆಯಾಗುವ ಫೋನ್‌ಗಳು ಅಗ್ಗವಾಗಿರುತ್ತವೆ.

ಭಾರತಕ್ಕೆ ಶೀಘ್ರವೇ ಬರುತ್ತಿದೆ ಅತ್ಯಂತ ಕಡಿಮೆ ಬೆಲೆಯ ಹೊಸ Nothing ಫೋನ್!

ಇದರಿಂದಾಗಿ, ಈ ಹೊಸ ಮಾದರಿಯು ಈಗಾಗಲೇ ದೇಶದಲ್ಲಿ ಲಭ್ಯವಿರುವ Nothing Phone 3a ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ದೇಶದಲ್ಲಿ Nothing Phone 3a ಫೋನ್ ₹24,999 ರೂ.ಗಳ ಆರಂಭಿಕ ಬೆಲೆಯನ್ನು ಹೊಂದಿತ್ತು. ಈ ಬೆಲೆಯಲ್ಲಿ ಸ್ನಾಪ್‌ಡ್ರಾಗನ್ 7s Gen 3 ಚಿಪ್‌ಸೆಟ್, 50MP ಟೆಲಿಫೋಟೋ ಕ್ಯಾಮೆರಾ ಮತ್ತು 50W ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿತ್ತು. ಆದರೆ, ನಾವು ಇಂತಹ ಫೀಚರ್ಸ್ ಅನ್ನು 'Lite' ಆವೃತ್ತಿಯಲ್ಲಿ ನಿರೀಕ್ಷಿಸಲಾಗದು.

ಇನ್ನು Nothing ಕಂಪೆನಿಯ ಸಬ್‌ಬ್ರ್ಯಾಂಡ್ ಫೋನ್ CMF Phone 2 Pro ದೇಶದಲ್ಲಿ ₹18,999 ರೂ.ಗೆ ಲಭ್ಯವಿದೆ. ಈ ಪೋನ್ MediaTek Dimensity 7300 Pro SoC, 6.77-ಇಂಚಿನ AMOLED ಡಿಸ್ಪ್ಲೇ, ಮತ್ತು 5,000mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Nothing ಕಂಪನಿಯು ದೇಶದ ಬಜೆಟ್ ವಿಭಾಗದಲ್ಲಿ ಹೊಸ ಕ್ರಾಂತಿ ತರಲುNothing Phone 3a Lite ಅನ್ನು ತರುತ್ತಿರಬಹುದು. ಇದು ಅದರ ಸಿಗ್ನೇಚರ್ ವಿನ್ಯಾಸ ಮತ್ತು ಉತ್ತಮ ಸಾಫ್ಟ್‌ವೇರ್ ಅನುಭವವನ್ನು ಕಡಿಮೆ ಬೆಲೆಗೆ ನೀಡುವ ಮೂಲಕ ಹೆಚ್ಚು ಜನರನ್ನು ತಲುಪುವ ಗುರಿಯನ್ನು ಹೊಂದಿರಬಹುದು. ಈ ಪೋನ್ ಭಾರತೀಯ ಮಾರುಕಟ್ಟೆಯನ್ನು ₹20,000 ಕ್ಕಿಂತ ಕಡಿಮೆ ಬೆಲೆಯೊಂದಿಗೆ ತಲುಪಿದರೆ, ಇದು ಹೆಚ್ಚು ಸ್ಪರ್ಧಾತ್ಮಕ ಬಜೆಟ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹೊಸ ಅಲೆಯನ್ನು ಮೂಡಿಸಿಸುವುದು ಖಂಡಿತ. ಏನಂತಿರಾ?

ಮೂಲ ಮಾಹಿತಿ: gadgets360

Best Mobiles in India

English summary
Nothing Phone 3a Lite has been spotted on the BIS certification website, hinting that its India launch could happen very soon. check here for more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+