Home
ಮೊಬೈಲ್

₹20,000 ಕ್ಕಿಂತ ಕಡಿಮೆ ಬೆಲೆಗೆ ಬರುತ್ತಿದೆ ಹೊಸ Nothing Phone (3a) Lite!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ Nothing ಕಂಪನಿಯು 2024ರ ಆರಂಭದಲ್ಲಿ ತನ್ನ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ವಿಭಾಗದಲ್ಲಿ Phone (3a) ಮತ್ತು Phone (3a) Pro ಮಾದರಿಗಳನ್ನು ಬಿಡುಗಡೆ ಮಾಡಿ ಸದ್ದು ಮಾಡಿತ್ತು. ಆದರೆ, ಈ ಸರಣಿ ಅಲ್ಲಿಗೆ ಮುಗಿದಿಲ್ಲ ಎಂದು ಹೇಳಲಾಗುತ್ತಿದೆ. ಏಕೆಂದರೆ, ಶೀಘ್ರವೇ Nothing ಕಂಪೆನಿಯು 'Phone (3a) Lite' ಎಂಬ ಹೊಸ ಮಾದರಿಯ ಸ್ಮಾರ್ಟ್‌ಫೋನ್ ಬಿಡುಗಡೆಗೆ ತಯಾರಿ ನಡೆಸುತ್ತಿದ್ದು, ಇದು ₹20,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.!

ಹೌದು, ಮೂಲ ಸುಧಾಂಶು ಅಂಬೋರ್ ಅವರ ಮಾಹಿತಿಯನ್ನು ಉಲ್ಲೇಖಿಸಿ xpertpick.com ವರದಿ ಮಾಡಿರುವಂತೆ, Nothing ಕಂಪೆನಿಯ ಬಜೆಟ್ ಬೆಲೆಯಲ್ಲಿ 'Phone (3a) Lite' ಎಂಬ ಹೊಸ ಪೋನ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ ಎಂದು ಹೇಳಲಾಗಿದೆ. ಮೂಲವನ್ನು ಉಲ್ಲೇಖಿಸಿ ವರದಿಯು ಹೇಳಿರುವ ಪ್ರಕಾರ, ಈ ಹೊಸ ಸಾಧನವು 8GB RAM ಮತ್ತು 128GB ಆಂತರಿಕ ಸಂಗ್ರಹಣೆಯ ಕೇವಲ ಒಂದೇ ಆವೃತ್ತಿಯಲ್ಲಿ ಮಾರುಕಟ್ಟೆಗೆ ಬರಲಿದೆ. ಮತ್ತು ಕ್ಲಾಸಿಕ್ ಶೇಡ್‌ಗಳಾದ ಕಪ್ಪು ಮತ್ತು ಬಿಳಿ ಎರಡು ಬಣ್ಣಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.

ಈ 'Lite' ಮಾದರಿಯು ಗಮನ ಸೆಳೆಯುವ ಪ್ರಮುಖ ಅಂಶವೆಂದರೆ ಅದರ ನಿರೀಕ್ಷಿತ ಬೆಲೆ. Phone (3a) Lite ಎಂಬ ಹೆಸರೇ ಇದು Phone (3a) ಗಿಂತ ಕಡಿಮೆ ಪೀಚರ್ಸ್ ಹೊಂದಿದೆ ಎಂದು ಸೂಚಿಸುತ್ತದೆ. ಆದರೆ, ಈ ಸಾಧನದ ಕ್ಯಾಮರಾ, ಡಿಸ್‌ಪ್ಲೇ ಅಥವಾ ಪ್ರೊಸೆಸರ್‌ನಂತಹ ಪ್ರಮುಖ ಫೀಚರ್ಸ್ ಬಗ್ಗೆ ಯಾವುದೇ ಮಾಹಿತಿ ಈ ವರದಿಯಲ್ಲಿ ಲಭ್ಯವಿಲ್ಲ.ಆದರೆ, Nothing ಈಗ ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಈ ಮಾದರಿಯನ್ನು ಪರಿಚಯಿಸುತ್ತಿರುವುದರಿಂದ, Phone (3a) Lite ಸರಳ ಮತ್ತು ಕಡಿಮೆ ಬೆಲೆಯ ಮಾದರಿಯಾಗಿ ಬರುವ ಸಾಧ್ಯತೆ ಕೂಡ ಇದೆ.

₹20,000 ಕ್ಕಿಂತ ಕಡಿಮೆ ಬೆಲೆಗೆ ಬರುತ್ತಿದೆ ಹೊಸ Nothing Phone (3a) Lite!
Phone (3a) ಚಿತ್ರ

Phone (3a) Lite ಈ ವರ್ಷದ ಅಂತ್ಯದೊಳಗೆ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ವರದಿಗೂ ಮೊದಲೇ, Lite ಮಾದರಿಯ ಹೊಸ Nothing Phone ಆಗಮನವನ್ನು ಮೊದಲು ಜುಲೈನಲ್ಲಿ ಉದ್ಯಮದ ಒಳಗಿನ ಜನಪ್ರಿಯ ಟಿಪ್‌ಸ್ಟಾರ್ ಯೋಗೇಶ್ ಬ್ರಾರ್ ಅವರು ಸೂಚಿಸಿದ್ದರು. ಹಾಗಾಗಿ, ಈ ಸುದ್ದಿಯು ಇದೀಗ ವಿಶೇಷ ಒದಲವನ್ನು ಪಡೆದುಕೊಂಡಿದೆ. ಹೋಲಿಕೆಗಾಗಿ ನಾವು ನೋಡುವುದಾದರೆ, ಮೂಲ Phone (3a) ಬಿಡುಗಡೆಯಾದಾಗ, ದೇಶದಲ್ಲಿ ₹24,999 ರೂ.ಗಳ ಆರಂಭಿಕ ಬೆಲೆಯನ್ನು ಹೊಂದಿತ್ತು.

₹24,999 ರ ಆರಂಭಿಕ ಬೆಲೆಯ ಈ Phone (3a) ಫೋನಿನಲ್ಲಿ ನೀಡಲಾದ ಪ್ರಬಲವಾದ ಸ್ನಾಪ್‌ಡ್ರಾಗನ್ 7s Gen 3 ಚಿಪ್‌ಸೆಟ್, 50MP ಟೆಲಿಫೋಟೋ ಕ್ಯಾಮೆರಾ ಮತ್ತು 50W ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳನ್ನು 'Lite' ಆವೃತ್ತಿಯಲ್ಲಿ ನಾವು ನಿರೀಕ್ಷಿಸಲಾಗದು. ಆದರೆ, ಖಂಡಿತವಾಗಿ, ಹೊಸ Phone (3a) Lite ಬೆಲೆ ₹20,000 ಕ್ಕಿಂತ ಕಡಿಮೆ ಇರಬಹುದು. ಇರಬಹುದು ಎನ್ನುವುದಕ್ಕಿಂತ, ₹20,000 ಕ್ಕಿಂತ ಕಡಿಮೆಯಿದ್ದರೆ ಮಾತ್ರ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರುತ್ತದೆ

ಒಟ್ಟಾರೆಯಾಗಿ, Nothing ಕಂಪನಿಯು ಬಜೆಟ್ ವಿಭಾಗದಲ್ಲಿ ತನ್ನದೇ ಆದ ಬಲವಾದ ಪ್ರವೇಶವನ್ನು ಮಾಡಲು Phone (3a) Lite ಅನ್ನು ಯೋಜಿಸುತ್ತಿದೆ. ಇದು ಅದರ ಸಿಗ್ನೇಚರ್ ವಿನ್ಯಾಸ ಮತ್ತು ಉತ್ತಮ ಸಾಫ್ಟ್‌ವೇರ್ ಅನುಭವವನ್ನು ಕಡಿಮೆ ಬೆಲೆಗೆ ನೀಡುವ ಮೂಲಕ ಹೆಚ್ಚು ಜನರನ್ನು ತಲುಪುವ ಗುರಿಯನ್ನು ಹೊಂದಿದೆ. ಇದು ಭಾರತೀಯ ಮಾರುಕಟ್ಟೆಯನ್ನು ₹20,000 ಕ್ಕಿಂತ ಕಡಿಮೆ ಬೆಲೆಯೊಂದಿಗೆ ತಲುಪಿದರೆ, ಇದು ಹೆಚ್ಚು ಸ್ಪರ್ಧಾತ್ಮಕ ಬಜೆಟ್ ಸ್ಮಾರ್ಟ್‌Phone ವಿಭಾಗದಲ್ಲಿ ಒಂದು ಆಸಕ್ತಿದಾಯಕ ಆಯ್ಕೆಯಾಗಲಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
“Nothing Phone (3a) Lite is in development, promising a budget-friendly alternative. check here for more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+