Nothing Phone 3a Lite ಫೋನ್ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ?!
ವಿಶ್ವದಾದ್ಯಂತ ಮೊಬೈಲ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ ಮಧ್ಯಮ ಶ್ರೇಣಿಯ ಹೊಸ Nothing Phone 3a Lite ಸ್ಮಾರ್ಟ್‌ಫೋನ್ ಇಂದು ಭರ್ಜರಿಯಾಗಿ ಬಿಡುಗಡೆಯಾಗಿದೆ. Carl Pei ನೇತೃತ್ವದ Nothing ಕಂಪನಿಯು ತನ್ನ ಹೊಸ Nothing Phone 3a Lite ಸ್ಮಾರ್ಟ್‌ಫೋನ್ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಿದ್ದು, ನಿರೀಕ್ಷೆಯಂತೆಯೇ ಈ ಹೊಸ Lite ಸ್ಮಾರ್ಟ್‌ಫೋನ್ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಪರಿಚಯಗೊಂಡಿದೆ.
ಕಂಪೆನಿಯ ಜನಪ್ರಿಯ Phone 3a ಸರಣಿಯ ಭಾಗವಾಗಿರುವ ಈ ಹೊಸ ಸಾಧನದಲ್ಲಿ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊ ಪ್ರೊಸೆಸರ್, OIS/EIS ಬೆಂಬಲದ 50-ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್ ಮತ್ತು 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೋಂದಿಗೆ ಬಿಡುಗಡೆಯಾಗಿದೆ. ಹಾಗಾದರೆ, ಹೊಸ Nothing Phone 3a Lite ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಮತ್ತು ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Nothing Phone 3a Lite: ಪ್ರಮುಖ ವೈಶಿಷ್ಟ್ಯಗಳು
ಹೊಸ Nothing Phone 3a Lite ನಲ್ಲಿ 6.77 ಇಂಚಿನ Full HD+ AMOLED ಡಿಸ್ಪ್ಲೇ ಇದೆ. ಇದು 120Hz ಅಡಾಪ್ಟಿವ್ ರಿಫ್ರೆಶ್ ರೇಟ್, 3,000 ನಿಟ್ಸ್ ಪೀಕ್ ಬ್ರೈಟ್ನೆಸ್ ಮತ್ತು 1,000Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಹೊಂದಿದೆ. ಕಾರ್ಯಕ್ಷಮತೆಗಾಗಿ, ಈ ಫೋನಿನಲ್ಲಿ 8GB RAM ಮತ್ತು 256GB ವರೆಗೆ ಸ್ಟೋರೇಜ್ ವರೆಗೆ ಸಂಯೋಜಿಸಲಾಗಿರುವ 4nm MediaTek Dimensity 7300 Pro ಪ್ರೊಸೆಸರ್ ಇದೆ.
ಜೊತೆಗೆ ಇದರಲ್ಲಿ ಗಮನಾರ್ಹ ಅಂಶವೆಂದರೆ, ಬಳಕೆದಾರರು microSD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದು. ಇನ್ನು ನಿರೀಕ್ಷೆಯಂತೆಯೇ, Nothing OS 3.5 (Android 15 ಆಧಾರಿತ) ಮೇಲೆ ಕಾರ್ಯನಿರ್ವಹಿಸುವ ಈ ಫೋನ್‌ಗೆ 3 ವರ್ಷಗಳ Android ಅಪ್‌ಡೇಟ್‌ಗಳು ಹಾಗೂ 6 ವರ್ಷಗಳ ಭದ್ರತಾ ಅಪ್‌ಡೇಟ್‌ಗಳು ದೊರೆಯುತ್ತವೆ ಎಂದು ಕಂಪೆನಿಯು ತಿಳಿಸಿದೆ.

ಕ್ಯಾಮೆರಾ ವಿಭಾಗದಲ್ಲಿ, ಈ Nothing Phone 3a Lite ಫೋನಿನ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ (Samsung ಸೆನ್ಸರ್, OIS/EIS ಬೆಂಬಲದೊಂದಿಗೆ) ಮತ್ತು 8MP ಅಲ್ಟ್ರಾವೈಡ್ ಲೆನ್ಸ್ ಇದೆ.ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಫೋನ್ 4K ವಿಡಿಯೋ ಚಿತ್ರೀಕರಣ (30fps) ಹಾಗೂ ಸ್ಲೋ-ಮೊಷನ್ (120fps) ಚಿತ್ರೀಕರಣವನ್ನೂ ಬೆಂಬಲಿಸುತ್ತದೆ. ಜೊತೆಗೆ "TrueLens Engine 4.0", "Night Mode" ಹಾಗೂ "Portrait Optimiser" ಫೀಚರ್‌ಗಳು ವೃತ್ತಿಪರ ಫೋಟೋ ಗುಣಮಟ್ಟವನ್ನು ಒದಗಿಸುವ ಭರವಸೆ ನೀಡಿವೆ.
ಬ್ಯಾಟರಿ ವಿಭಾಗದಲ್ಲಿ, ಈ ಫೋನ್‌ನಲ್ಲಿ 5,000mAh ಬ್ಯಾಟರಿ ಇದ್ದು, 33W ವೇಗದ ಚಾರ್ಜಿಂಗ್ ಹಾಗೂ 5W ರಿವರ್ಸ್ ಚಾರ್ಜಿಂಗ್ ಬೆಂಬಲ ನೀಡುತ್ತದೆ. ಸುರಕ್ಷತೆಗಾಗಿ in-display fingerprint sensor, IP54 ಧೂಳು ಮತ್ತು ನೀರಿನ ನಿರೋಧಕತೆ, ಹಾಗೂ Panda Glass ರಕ್ಷಣೆ ಇದೆ. ಫೋನ್‌ನ ತೂಕ ಕೇವಲ 199 ಗ್ರಾಂ ಇದ್ದು, ಇದು ಕೈಯಲ್ಲಿ ಹಿಡಿದಾಗ ಹಗುರ ಮತ್ತು ಆರಾಮದಾಯಕವಾಗಿದೆ.

ಗಮನಿಸುವುದಾದರೆ, ಈ ಫೋನ್ Nothing ಕಂಪೆನಿಯ ಸಿಗ್ನೇಚರ್ ಪಾರದರ್ಶಕ ಸೌಂದರ್ಯದ ಸ್ಕೇಲ್ಡ್-ಡೌನ್ ಆವೃತ್ತಿಯನ್ನು ಹೊಂದಿದೆ. ಇದು ಪ್ರೀಮಿಯಂ ನೋಟವನ್ನು ಕೈಗೆಟುಕುವ ಬೆಲೆಯೊಂದಿಗೆ ಸಮತೋಲನಗೊಳಿಸುವ ಸಲುವಾಗಿ ಇರಬಹುದು. ಪ್ರಮುಖ ಮಾದರಿಗಳಿಂದ ಇದನ್ನು ಪ್ರತ್ಯೇಕಿಸಲು, ಲೈಟ್ ಆವೃತ್ತಿಯು ಸರಳ ವಿನ್ಯಾಸ ಮತ್ತು ಕಡಿಮೆ ಗ್ಲಿಫ್ ಇಂಟರ್ಫೇಸ್ ಅನ್ನು ಹೊಂದಿದೆ. ಇದರ ವಿಶಿಷ್ಟ Glyph ಲೈಟ್ ಡಿಸೈನ್ ಸಹ ಆಕರ್ಷಿಸುವಂತಿದೆ.
Nothing Phone 3a Lite: ಬೆಲೆ ಮತ್ತು ಲಭ್ಯತೆ
ಈ ಹೊಸ Nothing Phone 3a Lite ಸ್ಮಾರ್ಟ್‌ಫೋನ್ ಪ್ರಸ್ತುತ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಈ ಫೋನಿನ ಯುರೋಪ್ ಬೆಲೆ EUR 249 (ಸುಮಾರು ₹25,600) ರಿಂದ ಪ್ರಾರಂಭವಾಗುತ್ತದೆ. ಬ್ರಿಟನ್‌ನಲ್ಲಿ ಇದರ ಬೆಲೆ GBP 249 (ಸುಮಾರು ₹29,000) ಗಳಾಗಿವೆ. ಇನ್ನುಹೆಚ್ಚು ಸ್ಟೋರೇಜ್ ಇರುವ 256GB ಮಾದರಿಯು EUR 279 (ಸುಮಾರು ₹28,700) ಹಾಗೂ GBP 279 (ಸುಮಾರು ₹32,500) ದರದಲ್ಲಿ ಲಭ್ಯವಾಗಲಿದೆ.
ಗ್ರಾಹಕರು ವೈಟ್ ಮತ್ತು ಬ್ಲಾಕ್ ಎರಡು ಬಣ್ಣಗಳಲ್ಲಿ Nothing ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಗೂ ಆಯ್ದ ಮಾರುಕಟ್ಟೆಗಳಲ್ಲಿ ಫೋನ್ ಅನ್ನು ಖರೀದಿಸಬಹುದು. ಮಧ್ಯಮ ದರದಲ್ಲಿ ಪ್ರೀಮಿಯಂ ಅನುಭವ ಬಯಸುವವರಿಗೆ ಇದು ಸ್ಪರ್ಧಾತ್ಮಕ ಆಯ್ಕೆಯಾಗಬಹುದು. ಭಾರತದ ಬಿಡುಗಡೆ ದಿನಾಂಕವನ್ನು ಕಂಪನಿ ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ. ಗಮನಿಸುವುದಾದರೆ, ಈ ಸ್ಮಾರ್ಟ್‌ಫೋನ್ ಭಾರತದಲ್ಲಿ 20 ಸಾವಿರ ಆಸುಪಾಸಿನಲ್ಲಿ ಬಿಡುಗಡೆಯಾಗಲಿದೆ ಎಂದಯ ಹಲವಾರು ಸೋರಿಕೆಯ ವರದಿಗಳು ಸೂಚಿಸಿವೆ.


Click it and Unblock the Notifications








