Home
ಮೊಬೈಲ್

Nothing Phone 3a Lite ರಿಲೀಸ್ ಡೇಟ್ ಫಿಕ್ಸ್: ಇಲ್ಲಿದೆ ಸಂಪೂರ್ಣ ಮಾಹಿತಿ!

ಯುಕೆ ಮೂಲದ ಪ್ರಖ್ಯಾತ ಟೆಕ್ ಬ್ರ್ಯಾಂಡ್ Nothing ತನ್ನ ಹೊಸ ಸ್ಮಾರ್ಟ್‌ಫೋನ್ Nothing Phone 3a Lite ಅನ್ನು ಅಕ್ಟೋಬರ್ 29 ರಂದು ಜಾಗತಿಕವಾಗಿ ಬಿಡುಗಡೆ ಮಾಡವುದುದಾಗಿ ಅಧಿಕೃತವಾಗಿ ಘೋಷಿಸಿದೆ. ಕಳೆದ ಎರಡು ವಾರಗಳಿಂದಲೂ ವದಂತಿಯ ಸುದ್ದಿಗಳಿಂದಲೇ ಕುತೂಹಲ ಮೂಡಿಸಿದ್ದ Nothing Phone 3a Lite ಸ್ಮಾರ್ಟ್‌ಫೋನ್ ಬಿಡುಗಡೆ ಕುರಿತು Nothing ಕಂಪೆನಿಯು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟೀಸರ್ ಮೂಲಕ ಲಾಂಚ್ ದಿನಾಂಕವನ್ನು ದೃಢಪಡಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

Nothing Phone 3a Lite: ಜಾಗತಿಕ ಬಿಡುಗಡೆ ವಿವರಗಳು
Nothing Phone 3a Lite ಅಕ್ಟೋಬರ್ 29ರಂದು ಮಧ್ಯಾಹ್ನ 1:00 (ಭಾರತೀಯ ಸಮಯ ಸಂಜೆ 6:30) ಕ್ಕೆ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಕಂಪನಿಯು ಇನ್ನೂ ಇದರ ಸಂಪೂರ್ಣ ಸ್ಪೆಸಿಫಿಕೇಶನ್ ಮತ್ತು ಬೆಲೆಯನ್ನು ಬಹಿರಂಗಪಡಿಸದಿದ್ದರೂ, ಟೀಸರ್‌ನಿಂದ ಇದು Phone 3 ಸರಣಿಯ ಅಗ್ಗದ ಆವೃತ್ತಿ ಆಗಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಟೀಸರ್‌ನಲ್ಲಿ ಹಿಂಭಾಗದ ಕೆಳಭಾಗದಲ್ಲಿ ಇರುವ LED ಲೈಟ್ ಸ್ಟ್ರಿಪ್ ಸ್ಪಷ್ಟವಾಗಿ ಕಾಣಿಸಿದ್ದು, ಇದು ನೋಟಿಫಿಕೇಶನ್ ಸೂಚಕ ಆಗಿ ಕೆಲಸ ಮಾಡುವ ಸಾಧ್ಯತೆ ಇದೆ. ಈ ವಿನ್ಯಾಸವು Nothing ಕಂಪನಿಯ ವಿಶಿಷ್ಟ ಪಾರದರ್ಶಕಕ ಶೈಲಿಯನ್ನು ಮುಂದುವರಿಸುತ್ತದೆ.

Nothing Phone 3a Lite: ನಿರೀಕ್ಷಿತ ವೈಶಿಷ್ಟ್ಯಗಳು.
ಕಾರ್ಲ್ ಪೇ ನೇತೃತ್ವದ Nothing ಕಂಪನಿಯು ಈ ಮುಂಬರುವ Nothing Phone 3a Lite ಸ್ಮಾರ್ಟ್‌ಫೋನ್ ಕುರಿತು ಯಾವುದೇ ಅಧಿಕೃತ ಫೀಚರ್ಸ್ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಆದರೆ, ವರದಿಗಳ ಪ್ರಕಾರ, Nothing Phone 3a Lite ನಲ್ಲಿ MediaTek Dimensity 7300 ಚಿಪ್‌ಸೆಟ್ ಇರಲಿದೆ. ಇದಕ್ಕೆ ಜೊತೆಗೆ Mali-G615 MC2 GPU ಮತ್ತು 8GB RAM ನೀಡಲಾಗುವ ಸಾಧ್ಯತೆ ಇದೆ. ಈ ಪ್ರೊಸೆಸರ್‌ನಲ್ಲಿ 2GHz ವೇಗದ ನಾಲ್ಕು ಎಫಿಷಿಯನ್ಸಿ ಕೋರ್‌ಗಳು ಹಾಗೂ 2.5GHz ವೇಗದ ನಾಲ್ಕು ಪರ್ಫಾರ್ಮೆನ್ಸ್ ಕೋರ್‌ಗಳು ಇರುತ್ತವೆ ಎಂದು ಹೇಳಲಾಗಿದೆ. ಈ ಫೋನ್‌ನಲ್ಲಿ Android 15 ಆಪರೇಟಿಂಗ್ ಸಿಸ್ಟಮ್ ನೇರವಾಗಿ ಲಭ್ಯವಿರುವುದು ಅದರ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದು ಎನ್ನಲಾಗಿದೆ.

Nothing Phone 3a Lite ರಿಲೀಸ್ ಡೇಟ್ ಫಿಕ್ಸ್: ಇಲ್ಲಿದೆ ಸಂಪೂರ್ಣ ಮಾಹಿತಿ!

Nothing Phone 3a Lite: ಬೆಲೆ ಮತ್ತು ಇತರೆ ಮಾಹಿತಿ.
ಹಲವಾರು ಪ್ರಮುಖ ಟೆಕ್ ವರದಿಗಳು ಸೂಚಿಸಿರುವಂತೆ, ಈ Nothing Phone 3a Lite ಫೋನ್ ಏಕೈಕ 8GB RAM + 128GB ಸ್ಟೋರೇಜ್ ಮಾದರಿಯಲ್ಲಿ ಹಾಗೂ ಕಪ್ಪು ಮತ್ತು ಬಿಳಿ ಎರಡು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಯಾಗಬಬಹುದು. ಬೆಲೆ ಕುರಿತು ಕಂಪನಿಯು ಮಾಹಿತಿ ನೀಡದಿದ್ದರೂ, Phone 3a ಕ್ಕಿಂತ ಕಡಿಮೆ ದರದಲ್ಲಿ ಈ ಫೋನ್ ಬರಬಹುದೆಂದು ಹೇಳಲಾಗಿದೆ. Phone 3a ನ ಪ್ರಾರಂಭಿಕ ಬೆಲೆ ಭಾರತದಲ್ಲಿ ₹22,999 ಆಗಿತ್ತು. ಆದ್ದರಿಂದ, Phone 3a Lite ಅನ್ನು ಮಧ್ಯಮ ಬಜೆಟ್ ವಿಭಾಗದಲ್ಲಿ ಸ್ಪರ್ಧಾತ್ಮಕ ಆಯ್ಕೆಯಾಗಿ ಕಾಣಬಹುದು.

ಭಾರತದಲ್ಲಿ ಯಾವಾಗ ಬಿಡುಗಡೆ?
ಅಕ್ಟೋಬರ್ 29 ರಂದು ಜಾಗತಿಕವಾಗಿ ಬಿಡುಗಡೆಯಾಗುತ್ತಿರುವ Nothing Phone 3a Lite ಫೋನ್ ಅಂದೇ ಭಾರತದಲ್ಲಿ ಕೂಡ ಬಿಡುಗಡೆಯಾಗಲಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಇನ್ನು ಕೆಲವೇ ದಿನಗಳು ಅಥವಾ ವಾರಗಳಲ್ಲಿ ನಾವು ದೇಶದಲ್ಲಿ Nothing Phone 3a Lite ಫೋನ್ ಬಿಡುಗಡೆಯನ್ನು ನಿರೀಕ್ಷಿಸಬಹುದು. ಒಟ್ಟಿನಲ್ಲಿ, Nothing Phone 3a Lite ಫೋನ್ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆ ತರಬಹುದು.ಸಂಪೂರ್ಣ ವಿವರಗಳು ಮತ್ತು ಅಧಿಕೃತ ಬೆಲೆ ಮಾಹಿತಿ ಅಕ್ಟೋಬರ್ 29ರ ಲಾಂಚ್ ಕಾರ್ಯಕ್ರಮದಲ್ಲಿ ಬಹಿರಂಗಗೊಳ್ಳಲಿವೆ. ಅಂದು ನಾವು ನಿಮಗೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತೇವೆ. ಒಂದು ಪ್ರಶ್ನೆ: ಭಾರತದಲ್ಲಿ Nothing Phone 3a Lite ಫೋನ್ ಬೆಲೆ ಎಷ್ಟಿರಬಹುದು?. ನಿಮ್ಮ ಊಹೆಯನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Nothing Phone 3a Lite is scheduled for a global launch on October 29 at 1:00 PM (6:30 PM IST). Although the company has not disclosed complete specifications and pricing details, initial teasers indicate that it might be a more affordable version of the Phone 3 series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+