Home
ಮೊಬೈಲ್

Nothing Phone 3a Lite ಫೋನ್ ಬೆಲೆ, ಬಿಡುಗಡೆ ಸಮಯ ಸೋರಿಕೆ!

Nothing ಕಂಪನಿಯು ಕಡಿಮೆ ಬೆಲೆಯಲ್ಲಿ ಹೊಸದಾಗಿ 'Nothing Phone 3a Lite' ಎಂಬ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗುತ್ತಿದೆ ಎಂಬ ಸಿಹಿಸುದ್ದಿ ಇತ್ತೀಚಿಗಷ್ಟೇ ಹೊರಬಿದ್ದಿತ್ತು. ಇದೀಗ ಈ ಹೊಸ Nothing Phone 3a Lite ಸ್ಮಾರ್ಟ್‌ಫೋನ್ ಬೆಲೆ ಮತ್ತು ಬಿಡುಗಡೆ ಸಮಯ ಕೂಡ ಸೋರಿಕೆಯಾಗಿದೆ. ನಿರೀಕ್ಷೆಯಂತೆಯೇ, Nothing Phone 3a Lite ಫೋನ್ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಇರುವ ಏಕೈಕ ಮಾದರಿಯಲ್ಲಿ ಹಾಗೂ ಕಪ್ಪು ಮತ್ತು ಬಿಳಿ ಎಂಬ ಎರಡು ಕ್ಲಾಸಿಕ್ ಆಯ್ಕೆಗಳು ಲಭ್ಯವಾಗಲಿವೆ. ಹಾಗಾದರೆ, ಮುಂಬರುವ Nothing Phone 3a Lite ಸ್ಮಾರ್ಟ್‌ಫೋನ್ ಕುರಿತು ಪ್ರಸ್ತುತ ನಾವು ಏನೆಲ್ಲಾ ಮಾಹಿತಿ ತಿಳಿದಿದ್ದೇವೆ ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Nothing Phone 3a Lite: ಬಿಡುಗಡೆ ದಿನಾಂಕ ಮತ್ತು ಬೆಲೆ ಮಾಹಿತಿ
Nothing Phone 3a Lite ಫೋನ್‌ನ್ನು ಜಾಗತಿಕ ಮಟ್ಟದಲ್ಲಿ, ಭಾರತ ಸೇರಿ ಹಲವು ದೇಶಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ವರದಿಗಳು ಸೂಚಿಸುತ್ತವೆ. ಫ್ರೆಂಚ್ ತಂತ್ರಜ್ಞಾನ ಮಾಧ್ಯಮ Dealabs ವರದಿ ಪ್ರಕಾರ, Nothing Phone 3a Lite ಯೂರೋಪಿನ ಮಾರುಕಟ್ಟೆಯಲ್ಲಿ 2025ರ ನವೆಂಬರ್ 4ರಂದು ಅಧಿಕೃತವಾಗಿ ಲಾಂಚ್ ಆಗುವ ನಿರೀಕ್ಷೆಯಿದೆ. ಈ ಫೋನ್‌ನ ಪ್ರಾರಂಭಿಕ ಬೆಲೆ €249.99 (ಸುಮಾರು ₹22,500) ಇರಬಹುದು. ಕೆಲ ಯೂರೋಪಿನ ದೇಶಗಳಲ್ಲಿ ಇದು ಸ್ವಲ್ಪ ಕಡಿಮೆ ಬೆಲೆಯಲ್ಲಿ, ಅಂದರೆ €239.99 (ಸುಮಾರು ₹21,500) ದರದಲ್ಲಿ ದೊರೆಯುವ ಸಾಧ್ಯತೆ ಇದೆ.

Nothing Phone 3a Lite: ನಿರೀಕ್ಷಿತ ವೈಶಿಷ್ಟ್ಯಗಳು
Geekbench ಪಟ್ಟಿಯ ಪ್ರಕಾರ, Nothing Phone 3a Lite ಫೋನ್‌ನ ಮಾದರಿ ಸಂಖ್ಯೆ A001T ಆಗಿದೆ. ಈ ಸಾಧನವು MediaTek Dimensity 7300 ಪ್ರೊಸೆಸರ್ ಹೊಂದಿದೆ ಎಂದು ವರದಿಗಳು ಹೇಳುತ್ತವೆ. ಈ ಮಧ್ಯಮ ಶ್ರೇಣಿಯ ಚಿಪ್‌ಸೆಟ್‌ಗೆ Mali-G615 MC2 GPU ಜೋಡಿಸಲಾಗಿದ್ದು, ಗೇಮಿಂಗ್ ಮತ್ತು ಗ್ರಾಫಿಕ್ಸ್ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇನ್ನು ಈ ಫೋನ್‌ನಲ್ಲಿ Android 15 ಆಪರೇಟಿಂಗ್ ಸಿಸ್ಟಮ್ ಇರಲಿದ್ದು, ಉತ್ತಮ ಸಾಫ್ಟ್‌ವೇರ್ ಅನುಭವ ನೀಡಲಿದೆ. Geekbench ಪರೀಕ್ಷೆಯಲ್ಲಿ ಇದು 1,003 (ಸಿಂಗಲ್-ಕೋರ್) ಮತ್ತು 2,925 (ಮಲ್ಟಿ-ಕೋರ್) ಪಾಯಿಂಟ್ ಗಳಿಸಿದೆ. GPU ಪರೀಕ್ಷೆಯಲ್ಲೂ ಫೋನ್ 2,467 (OpenCL) ಪಾಯಿಂಟ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ತೋರಿದೆ.

Nothing Phone 3a Lite ಫೋನ್ ಬೆಲೆ, ಬಿಡುಗಡೆ ಸಮಯ ಸೋರಿಕೆ!

ಭಾರತದಲ್ಲಿ ಏನನ್ನು ನಿರೀಕ್ಷಿಸಬಹುದು?
ಭಾರತೀಯ ಮಾರುಕಟ್ಟೆಯಲ್ಲಿ Nothing ಕಂಪನಿಯ ಫೋನ್‌ಗಳು ಈಗಾಗಲೇ ಯುವ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿವೆ. Phone (1) ಮತ್ತು Phone (2) ಮಾದರಿಗಳು ಯಶಸ್ವಿಯಾದ ನಂತರ, ಹೊಸ Phone 3a Lite ಕೂಡ ಮಧ್ಯಮ ಬಜೆಟ್ ವಿಭಾಗದಲ್ಲಿ ಹೊಸ ಸ್ಪರ್ಧೆ ತರಬಹುದು. ಕಡಿಮೆ ಬೆಲೆಯಲ್ಲಿಯೇ ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮೆರಾ ಮತ್ತು ದೈನಂದಿನ ಬಳಕೆಗಾಗಿ ಸೂಕ್ತವಾದ ಕಾರ್ಯಕ್ಷಮತೆ ನೀಡುವುದು ಈ ಫೋನ್‌ನ ಪ್ರಮುಖ ಆಕರ್ಷಣೆ ಆಗಬಹುದು. ಭಾರತದಲ್ಲಿ ಈ ಫೋನ್ ಬೆಲೆ 20 ಸಾವಿರಕ್ಕಿಂತ ಕಡಿಮೆ ಇರುವ ಸಾಧ್ಯತೆ ಇದೆ.

Nothing Phone 3a Lite ಫೋನ್ ಬಿಡುಗಡೆ ಕುರಿತು ಅಧಿಕೃತ ಪ್ರಕಟಣೆ ಇನ್ನೂ ಬಾಕಿಯಿದ್ದರೂ, ಲೀಕ್‌ಗಳು ಹೇಳುವಂತೆ Nothing Phone 3a Lite ನವೆಂಬರ್ ಆರಂಭದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಬಹಳ ಹೆಚ್ಚು. ಕಡಿಮೆ ಬೆಲೆಯಲ್ಲಿಯೇ ಹೊಸ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸ ನೀಡುವ ಈ ಫೋನ್, ಮುಂದಿನ ದಿನಗಳಲ್ಲಿ ಮಧ್ಯಮ ಶ್ರೇಣಿಯ ಮಾರುಕಟ್ಟೆಯಲ್ಲೊಂದು ಪ್ರಮುಖ ಆಯ್ಕೆಯಾಗಿ ಹೊರಹೊಮ್ಮಬಹುದು. Nothing Phone 3a Lite ಬಗ್ಗೆ ಅಧಿಕೃತ ಮಾಹಿತಿ ಹೊರಬಂದ ಕೂಡಲೇ ನಾವು ನಿಮಗೆ ತಿಳಿಸುತ್ತೇವೆ. ಯಾವಾಗಲೂ ಕನ್ನಡ ಗಿಜ್‌ಬಾಟ್‌ನ ಸಂಪರ್ಕದಲ್ಲಿರಿ.!

Best Mobiles in India

English summary
A report from the French technology media outlet Dealabs indicates that the Nothing Phone 3a Lite is anticipated to be released officially in the European market on November 4, 2025.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+