Home
ಮೊಬೈಲ್

ಇಂದಿನಿಂದ Nothing Phone 3a Lite ಮೊದಲ ಸೇಲ್: ಆಫರ್ ಬೆಲೆ ಕೇವಲ ₹19,999!

ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ ಬಜೆಟ್ ಬೆಲೆಯ Nothing Phone 3a Lite ಸ್ಮಾರ್ಟ್‌ಫೋನ್ ಮಾರಾಟವು ಇಂದಿನಿಂದ ಆರಂಭವಾಗಿದೆ. ಕಳೆದ ತಿಂಗಳು ಅಂತ್ಯದಲ್ಲಿ (ನವೆಂಬರ್ 27, ಗುರುವಾರ) ದೇಶದಲ್ಲಿ Nothing Phone 3a Lite ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಾಗಿದ್ದು, Nothing Phone 3a ಸರಣಿಯಲ್ಲಿ ಮಧ್ಯಮ ಶ್ರೇಣಿಯ ಗ್ರಾಹಕರನ್ನು ಗುರಿಯಾಗಿಸಿಕೊಂಡು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಮತ್ತು ಸ್ಪರ್ಧಾತ್ಮಕ ಬೆಲೆಗಳಲ್ಲಿ ಈ ಫೋನ್ ಬಿಡುಗಡೆಯಾಗಿತ್ತು. ಇದೀಗ ಖರೀದಿಗೆ ಲಭ್ಯವಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಕೆಳಕಂಡಂತಿದೆ.

Nothing Phone 3a Lite: ಬೆಲೆ ಮತ್ತು ಲಭ್ಯತೆ
Nothing Phone 3a Lite ಫೋನಿನ ಬೆಲೆ ಭಾರತದಲ್ಲಿ ₹20,999 ರಿಂದ ಪ್ರಾರಂಭವಾಗುತ್ತದೆ. ಈ ಬೆಲೆಗೆ 8GB RAM + 128GB ಸ್ಟೊರೆಜ್ ಮಾದರಿಯು ಲಭ್ಯವಿದೆ. ಇದರ 256GB ಸ್ಟೊರೆಜ್ ಮಾದರಿಯ ಬೆಲೆ ₹22,999 ಎಂದು ಕಂಪನಿ ತಿಳಿಸಿದೆ. ಆದರೆ, ಬಿಡುಗಡೆ ಕೊಡುಗೆಯ ಭಾಗವಾಗಿ, ICICI ಮತ್ತು OneCard ಬ್ಯಾಂಕ್ ಆಫರ್‍ಗಳ ಮೂಲಕ ಖರೀದಿದಾರರು ಈ ಫೋನ್‌ಗಳನ್ನು ಕ್ರಮವಾಗಿ ₹19,999 ಮತ್ತು ₹21,999 ರ ಪರಿಣಾಮಕಾರಿ ಬೆಲೆಯಲ್ಲಿ ಖರೀದಿಸಬಹುದು. ಬ್ಲ್ಯಾಕ್, ಬ್ಲೂ ಮತ್ತು ವೈಟ್ ಬಣ್ಣಗಳಲ್ಲಿ ಲಭ್ಯವಿದ್ದು, Flipkart, Vijay Sales, Croma ಹಾಗೂ ದೇಶದ ಪ್ರಮುಖ ರಿಟೇಲ್ ಅಂಗಡಿಗಳಲ್ಲಿ ಮಾರಾಟಕ್ಕೆ ಬಂದಿದೆ

Nothing Phone 3a Lite: ಫೀಚರ್ಸ್ ಮತ್ತು ಪ್ರಮುಖ ವೈಶಿಷ್ಟ್ಯಗಳು
Nothing ಕಂಪನಿ ಈ ಬಾರಿ ಸಿಗ್ನೇಚರ್ Glyph Interface ಗೆ ಬದಲಾಗಿ ನವೀಕರಣಗೊಂಡ Glyph Light ಸೂಚನೆ ವ್ಯವಸ್ಥೆಯನ್ನು ಪರಿಚಯಿಸಿದೆ. ಹಾಗಾಗಿ, Nothing Phone 3a Lite ವಿನ್ಯಾಸವು ಪಾರದರ್ಶಕ ಹಿಂಭಾಗದ ಬದಲಿಗೆ ಒಂದೇ, ಮಧ್ಯದ Glyph LED ಲೈಟ್‌ನೊಂದಿಗೆ ಕನಿಷ್ಠ ವಿನ್ಯಾಸವನ್ನು ಹೊಂದಿದೆ. ಇದು ಪ್ಲಾಸ್ಟಿಕ್ ಫ್ರೇಮ್, ಪಾಂಡಾ ಗ್ಲಾಸ್ ರಕ್ಷಣೆಯೊಂದಿಗೆ ಗಾಜಿನ ಹಿಂಭಾಗವನ್ನು ಒಳಗೊಂಡಿದೆ. ಇತರ ನಥಿಂಗ್ ಫೋನ್‌ಗಳಿಗೆ ಹೋಲಿಸಿದರೆ ಇದು ಸರಳವಾದ ಕ್ಯಾಮೆರಾ ವಿನ್ಯಾಸದಲ್ಲಿದೆ. ಜೊತೆಗೆ ಹಲವಾರು ಕಾರ್ಯಗಳನ್ನು ನಿರ್ವಹಿಸುವ "Essential Key" ಇದೆ.

ಇಂದಿನಿಂದ Nothing Phone 3a Lite ಮೊದಲ ಸೇಲ್: ಆಫರ್ ಬೆಲೆ ಕೇವಲ ₹19,999!

ಡಿಸ್‌ಪ್ಲೇ ವಿಭಾಗದಲ್ಲಿ, ಈ ಫೋನ್‌ನಲ್ಲಿ 6.77 ಇಂಚಿನ Full-HD+ Flexible AMOLED ಡಿಸ್‌ಪ್ಲೇ ನೀಡಲಾಗಿದೆ. ಇದು 120Hz ರಿಫ್ರೆಶ್ ರೇಟ್, 3,000 ನಿಟ್ಸ್ HDR ಪೀಕ್ ಬ್ರೈಟ್ನೆಸ್ ಮತ್ತು 2,160Hz PWM ಡಿಮ್ಮಿಂಗ್ ಬೆಂಬಲಿಸುತ್ತದೆ. ಡಿಸ್‌ಪ್ಲೇಗೆ Panda Glass ರಕ್ಷಣೆಯೂ ಲಭ್ಯ. ಕಾರ್ಯಕ್ಷಮತೆಗಾಗಿ, ಫೋನ್‌ಗೆ MediaTek Dimensity 7300 Pro ಚಿಪ್‌ಸೆಟ್ ಶಕ್ತಿ ನೀಡುತ್ತದೆ. ಇದನ್ನು 8GB RAM ಮತ್ತು 256GB ಸ್ಟೊರೆಜ್‌ನೊಂದಿಗೆ ಸಂಯೋಜಿಸಲಾಗಿದೆ. ಇನ್ನು microSD ಕಾರ್ಡ್ ಮೂಲಕ 2TB ವರೆಗೆ ವಿಸ್ತರಣೆ, ಜೊತೆಗೆ 8GB ವರೆಗೆ ವರ್ಚುವಲ್ RAM ವಿಸ್ತರಣೆಯನ್ನೂ ಫೋನ್ ಬೆಂಬಲಿಸುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, Nothing Phone 3a Lite ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ50 ಮೆಗಾಪಿಕ್ಸೆಲ್ ಮುಖ್ಯ ಸೆನ್ಸರ್ (OIS + EIS)8 , ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ (119.5° FoV) ಮತ್ತು ಮೂರನೇ ಸೆನ್ಸರ್ (ವಿವರ ಬಹಿರಂಗಪಡಿಸಿಲ್ಲ) ಇವೆ. ಸೆಲ್ಫಿಗಳಿಗೆ16 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಈ ಫೋನ್ Ultra XDR ಫೋಟೋಗಳು, Night, Portrait, Macro ಮೂಡ್‌ಗಳು ಮತ್ತು Motion Capture ಫೋಟೋಗ್ರಫಿಯನ್ನು ಬೆಂಬಲಿಸುತ್ತದೆ. ವೀಡಿಯೋ ವಿಭಾಗದಲ್ಲಿ 4K 30fps ಹಾಗೂ 1080p 120fps ಸ್ಲೋ-ಮೋಷನ್ ರೆಕಾರ್ಡಿಂಗ್‌ ಒದಗಿಸುತ್ತದೆ.

ಬ್ಯಾಟರಿ ವಿಭಾಗದಲ್ಲಿ, Nothing Phone 3a Lite 5,000mAh ಬ್ಯಾಟರಿ ಹೊಂದಿದೆ. ಇದು 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಫೋನಿನ ಸುರಕ್ಷತೆಗಾಗಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, IP54 ರೇಟಿಂಗ್ ಇದ್ದರೆ, Wi-Fi 6, Bluetooth 5.3, ಹಾಗೂ ಹಲವಾರು ಜಾಗತಿಕ ನ್ಯಾವಿಗೇಶನ್ ವ್ಯವಸ್ಥೆಗಳು ಇವೆ. ಇನ್ನು ಈ ಫೋನ್ Android 15 ಆಧಾರಿತ Nothing OS 3.5 ಕಾರ್ಯನಿರ್ವಹಿಸುತ್ತದೆ. ಕಂಪನಿಯು ಮೂರು ಪ್ರಮುಖ Android ಅಪ್‌ಡೇಟ್‌ಗಳು ಹಾಗೂ ಆರು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ನೀಡುವುದಾಗಿ ಭರವಸೆ ನೀಡಿದೆ.

Best Mobiles in India

English summary
The Nothing Phone 3a Lite is now on sale starting today. Launched in India on November 27, the mid-range smartphone brings strong features at a competitive price and is now available for buyers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+