Home
ಮೊಬೈಲ್

Nothing Phone 3a Lite ವಿಮರ್ಶೆ: ಹೇಗಿದೆ ಫೋನ್?..ನನ್ನ ಮೊದಲ ಅಭಿಪ್ರಾಯ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ ನಥಿಂಗ್ ಕಂಪನಿಯ ಹೊಸ Nothing Phone 3a Lite ಸ್ಮಾರ್ಟ್‌ಫೋನ್ ಕೊನೆಗೂ ನನ್ನ ಕೈ ಸೇರಿತು. ಪ್ರಾರಂಭದಲ್ಲೇ ಹೇಳಬೇಕು, ಇದು 'ಲೈಟ್' ಆವೃತ್ತಿ ಎನ್ನುವುದನ್ನು ನನಗೆ ನಂಬಲು ಆಗುತ್ತಿಲ್ಲ. ಬೆಲೆಯಲ್ಲಿ ಮಧ್ಯಮ ಶ್ರೇಣಿಯದ್ದಾದರೂ, ನಥಿಂಗ್‌ನ ವಿಶಿಷ್ಟ ವಿನ್ಯಾಸ ಮತ್ತು ಸಾಫ್ಟ್‌ವೇರ್ ಅನುಭವ ಇದನ್ನೇ ಪ್ರೀಮಿಯಂ ಫೋನ್‌ನಂತೆ ಮಾಡುತ್ತದೆ. Carl Pei ನೇತೃತ್ವದ ನಥಿಂಗ್ ಕಂಪನಿ ಮತ್ತೊಮ್ಮೆ 'ಪಾರದರ್ಶಕ ವಿನ್ಯಾಸದ ಮಾಯೆ' ಯನ್ನು ತೋರಿಸಿದೆ. ಹಾಗಾದರೆ, Nothing Phone 3a Lite ಸ್ಮಾರ್ಟ್‌ಫೋನ್ ಹೇಗಿದೆ?..ನನ್ನ ಮೊದಲ ಬಳಕೆಯನ್ನು ನೋಡೋಣ ಬನ್ನಿ.

Nothing Phone 3a Lite Review: ನನ್ನ ಮೊದಲ ಅನುಭವ!
Nothing Phone 3a Lite ಸ್ಮಾರ್ಟ್‌ಫೋನ್ ಮೊದಲ ನೋಟದಲ್ಲಿ ಪ್ರಭಾವಶಾಲಿ ವಿನ್ಯಾಸವನ್ನು ಹೊಂದಿದೆ. ಈ ಪೋನಿನ ಪಾರದರ್ಶಕ ಹಿಂಭಾಗದ ವಿನ್ಯಾಸವು ನಥಿಂಗ್‌ನ ಗುರುತಾದ ಸಿಗ್ನೇಚರ್ ಆಗಿದ್ದು, ಗಾಜಿನ ಫಿನಿಶ್ ಮತ್ತು ಅಲ್ಯೂಮಿನಿಯಂ ಫ್ರೇಮ್‌ನ ಸಂಯೋಜನೆ ಫೋನ್‌ಗೆ ಪ್ರೀಮಿಯಂ ಲುಕ್ ನೀಡುತ್ತದೆ. ಎಡಭಾಗದಲ್ಲಿ ವಾಲ್ಯೂಮ್ ಮತ್ತು ಬಲಭಾಗದಲ್ಲಿ ಪವರ್ ಆನ್/ಆಫ್ ಬಟನ್ ಮತ್ತು ಎಸೆನ್ಷಿಯಲ್ ಕೀಯನ್ನು ಹೊಂದಿದೆ. ಕೇವಲ 199 ಗ್ರಾಂ ತೂಕ ಮತ್ತು 8.3 ಮಿಮೀ ದಪ್ಪವಿರುವ ಈ ಫೋನ್ ಕೈಯಲ್ಲಿ ಹಿಡಿದಾಗ ಹಗುರ ಹಾಗೂ ಆರಾಮದಾಯಕವಾಗಿದೆ.

Nothing Phone 3a Lite ವಿಮರ್ಶೆ: ಹೇಗಿದೆ ಫೋನ್?..ನನ್ನ ಮೊದಲ ಅಭಿಪ್ರಾಯ!

ಡಿಸ್‌ಪ್ಲೇ ವಿಭಾಗದಲ್ಲಿ, ಈ ಫೋನ್ 6.77 ಇಂಚಿನ Full HD+ AMOLED ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 3,000 ನಿಟ್ಸ್ ಪೀಕ್ ಬ್ರೈಟ್ನೆಸ್ ಹೊಂದಿದೆ. ಪ್ರಸ್ತುತ ಈ ವೈಶಿಷ್ಟ್ಯಗಳು ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ನಾನು ಪೋನ್ ಅನ್ನು ಬಳಸಿ ನೋಡಿದಾಗ ಒಳಾಂಗಣ ಮತ್ತು ಹೊರಾಂಗಣ ಎರಡೂ ಪರಿಸ್ಥಿತಿಗಳಲ್ಲಿ ದೃಶ್ಯತೆ ಅತ್ಯುತ್ತಮವಾಗಿದೆ. ಇದಕ್ಕಾಗಿ 3,000 ನಿಟ್ಸ್ ಪೀಕ್ ಬ್ರೈಟ್ನೆಸ್ಗೆ ನಾವು ಧನ್ಯವಾದವನ್ನು ಹೇಳಬೇಕು.!

ಕಾರ್ಯಕ್ಷಮತೆ ವಿಭಾಗದಲ್ಲಿ, Nothing Phone 3a Lite ನಲ್ಲಿ ಇರುವ 4nm MediaTek Dimensity 7300 Pro ಚಿಪ್‌ಸೆಟ್ ದಿನನಿತ್ಯದ ಬಳಕೆಗೆ ಅತ್ಯಂತ ತ್ವರಿತವಾಗಿದೆ(ಇದು CMF ಫೋನ್ 2 ಪ್ರೊನಲ್ಲಿಯೂ ಇತ್ತು ಎಂಬುದನ್ನು ನಾವಿಲ್ಲ ಗಮನಿಸಬಹುದು). ನನ್ನ ಪರೀಕ್ಷೆಯಲ್ಲಿ ಫೋನಿನಲ್ಲಿ ಯಾವುದೇ ಲ್ಯಾಗ್ ಅಥವಾ ಸ್ಲೋನಸ್ ಕಂಡುಬರಲಿಲ್ಲ. ಇದರಲ್ಲಿನ 8GB RAM ಮತ್ತು 256GB ವರೆಗೆ ಸ್ಟೋರೇಜ್‌ನ ಆಯ್ಕೆಯು ಸಾಕಷ್ಟು ಕಾರ್ಯಕ್ಷಮತೆ ಒದಗಿಸುತ್ತದೆ. ಇನ್ನು ಮೆಮೊರಿಯನ್ನು ಮೈಕ್ರೋ SD ಕಾರ್ಡ್‌ನೊಂದಿಗೆ 2TB ಗೆ ವಿಸ್ತರಿಸಬಹುದು.

Nothing Phone 3a Lite ವಿಮರ್ಶೆ: ಹೇಗಿದೆ ಫೋನ್?..ನನ್ನ ಮೊದಲ ಅಭಿಪ್ರಾಯ!

ಸಾಫ್‌ವೇರ್ ವಿಭಾಗದಲ್ಲಿ, ಈ ಫೋನ್ Android 15 ಆಧಾರಿತ Nothing OS 3.5 ಮೇಲೆ ಕಾರ್ಯನಿರ್ವಹಿಸುತ್ತಿದ್ದು, ನಥಿಂಗ್‌ನ ಸಿಗ್ನೇಚರ್ 'ಕ್ಲೀನ್ ಇಂಟರ್ಫೇಸ್ ಅನುಭವ ನೀಡುತ್ತದೆ. ಬ್ಲೋಟ್ವೇರ್ ಇಲ್ಲದ ಅನುಭವ ಬಳಕೆದಾರರಿಗೆ ನೇರ ಮತ್ತು ಹಗುರ ಅನುಭವ ನೀಡುತ್ತದೆ. "Glance" ನಂತಹ ಅಪ್ಲಿಕೇಶನ್‌ಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವ ಆಯ್ಕೆಯೂ ಇದೆ. ಇದು ನಥಿಂಗ್‌ನ ಬಳಕೆದಾರ ಸ್ನೇಹಿ ತೋರಿಸುತ್ತದೆಯಾಗದರೂ ಇದು ಕಿರಿಕಿರಿ ಎನಿಸಬಹುದು.

ಕ್ಯಾಮೆರಾ ವಿಭಾಗದಲ್ಲಿ, ಈ Nothing Phone 3a Lite ಫೋನಿನ ಹಿಂಭಾಗದಲ್ಲಿ 50MP (Samsung ಸೆನ್ಸರ್, OIS/EIS ಬೆಂಬಲದೊಂದಿಗೆ) ಮತ್ತು 8MP ಅಲ್ಟ್ರಾವೈಡ್ ಲೆನ್ಸ್ ಇರುವ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ತೆಗೆದ ಸಾಮಾನ್ಯವಾಗಿ ಫೋಟೋಗಳು ಪ್ರಕಾಶಮಾನವಾಗಿದ್ದು, ಬಣ್ಣಗಳು ನೈಸರ್ಗಿಕವಾಗಿವೆ. TrueLens Engine 4.0 ಸಹಾಯದಿಂದ ಸ್ಕಿನ್ ಟೋನ್‌ಗಳು ಮತ್ತು ಬೆಳಕಿನ ಪ್ರಮಾಣ ಸಮತೋಲನದಲ್ಲಿದೆ ಎನ್ನಬಹದು.

Nothing Phone 3a Lite ವಿಮರ್ಶೆ: ಹೇಗಿದೆ ಫೋನ್?..ನನ್ನ ಮೊದಲ ಅಭಿಪ್ರಾಯ!

ಇನ್ನು ಮುಂಭಾಗದ 16MP ಸೆಲ್ಫಿ ಕ್ಯಾಮೆರಾ ಇದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಸೂಕ್ತವಾದಂತಹ ಚಿತ್ರಗಳನ್ನು ತೆಗೆಯಬಹುದು. ಈ ಫೋನ್ ಕ್ಯಾಮೆರಾದ ವಿಶೇಷತೆ ಎಂದರೆ, 4K ವಿಡಿಯೋ ಚಿತ್ರೀಕರಣ (30fps) ಮತ್ತು 120fps ಸ್ಲೋ-ಮೊಷನ್ ಬೆಂಬಲ. ಇವೆರರಿಂದ ವಿಡಿಯೋ ಗುಣಮಟ್ಟ ಉತ್ತಮವಾಗಿದೆ. ಆದರೆ, ಈಗಲೇ ಫೋನ್ ಕ್ಯಾಮೆರಾದ ಕುರಿತು ಸಂಪೂರ್ಣ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಈ ಕುರಿತು ಮುಂದಿನ ಲೇಖನಗಳಲ್ಲಿ ನೋಡೋಣ

ಇನ್ನು ಬ್ಯಾಟರಿ ವಿಭಾಗದಲ್ಲಿ, Nothing Phone 3a Lite ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್‌ನ್ನು ಬೆಂಬಲಿಸುತ್ತದೆ. ಕಂಪೆನಿಯು ಹೇಳಿಕೊಂಡಿರುವಂತೆ ಸಾಮಾನ್ಯವಾಗಿ ಒಂದು ಗಂಟೆಯೊಳಗೆ ಫೋನ್ ಪೂರ್ಣ ಚಾರ್ಜ್ ಆಗುತ್ತದೆ. ನಾನು ದಿನಪೂರ್ತಿ ಫೋಟೋ, ಸ್ಟ್ರೀಮಿಂಗ್, ಮತ್ತು ಬ್ರೌಸಿಂಗ್ ಮಾಡಿದಾಗಲೂ ಬ್ಯಾಟರಿ ಬಾಳಿಕೆ ಸುಲಭವಾಗಿ ಒಂದು ದಿನ ಇತ್ತು.

Nothing Phone 3a Lite ವಿಮರ್ಶೆ: ಹೇಗಿದೆ ಫೋನ್?..ನನ್ನ ಮೊದಲ ಅಭಿಪ್ರಾಯ!

ಜೊತೆಗೆ ಇದರಲ್ಲಿರುವ 5W ರಿವರ್ಸ್ ಚಾರ್ಜಿಂಗ್ ಸಹ ಉಪಯುಕ್ತವಾಗಿದೆ. ಇನ್ನುಳಿದಂತೆ, Panda Glass ರಕ್ಷಣೆಯೊಂದಿಗೆ ಸ್ಟ್ರಾಂಗ್ ಬಿಲ್ಡ್ ನನ್ನ ಗಮನಸೆಳೆಯಿತು. ಈ ಪೋನ್‌ನಲ್ಲಿ IP54 ಧೂಳು ಮತ್ತು ನೀರಿನ ನಿರೋಧಕತೆ ಇದೆ. ಇದನ್ನು ಇನ್ನೂ ಪರೀಕ್ಷಿಸಬೇಕಿದೆ. ಇದರಲ್ಲಿರುವ in-display ಫಿಂಗರ್‌ಪ್ರಿಂಟ್ ಸೆನ್ಸರ್ ವೇಗವಾಗಿದೆ. 3 ವರ್ಷಗಳ Android ಅಪ್‌ಡೇಟ್ + 6 ವರ್ಷಗಳ ಭದ್ರತಾ ಅಪ್‌ಡೇಟ್ ಘೋಷಣೆಯು ಈ ಫೋನಿನ ಪ್ರಮುಖ ಗುರಿತಾಗಿ ಕಂಡಿದೆ.

Nothing Phone 3a Lite Review: ಒಟ್ಟಾರೆಯಾಗಿ ನನ್ನ ಮೊದಲ ಅಭಿಪ್ರಾಯ
ನನ್ನ ಮೊದಲ ಬಳಕೆಯಲ್ಲಿ Nothing Phone 3a Lite ನಿಜಕ್ಕೂ "ಲೈಟ್" ಎಂಬ ಹೆಸರಿನಂತಿಲ್ಲ. ಇದು ಮಧ್ಯಮ ಶ್ರೇಣಿಯಲ್ಲಿ ಪ್ರೀಮಿಯಂ ಅನುಭವ ನೀಡುವ ಪರಿಪೂರ್ಣ ಆಯ್ಕೆಯಂತೆ ಕಾಣುತ್ತಿದೆ. ಪಾರದರ್ಶಕ ವಿನ್ಯಾಸ, ಸ್ವಚ್ಛ ಸಾಫ್ಟ್‌ವೇರ್, ಸ್ಥಿರ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹ ಕ್ಯಾಮೆರಾ ಎಲ್ಲವನ್ನೂ ಸಮತೋಲನಗೊಳಿಸಿದೆ. ಆದರೆ, ನನ್ನ ಚಿಂತೆ ಬೆಲೆಯ ಕುರಿತು. Nothing Phone 3a Lite ಯುರೋಪ್‌ನಲ್ಲಿ EUR 249 (ಸುಮಾರು ₹25,600) ದಿಂದ ಪ್ರಾರಂಭವಾಗುತ್ತದೆ.

ಭಾರತದಲ್ಲಿ ಇನ್ನೂ ಬೆಲೆ ಪ್ರಕಟವಾಗಿಲ್ಲ. ಆದರೆ, ಶೀಘ್ರದಲ್ಲೇ ಲಭ್ಯವಾಗಲಿದೆ. ಈ ವೇಳೆ ಈ ಫೋನ್ 20,000-25,000 ಬೆಲೆಯಲ್ಲಿ ಬಂದರೆ, ನಥಿಂಗ್ ಈ ಬೆಲೆ ವಿಭಾಗದಲ್ಲಿ Nothing Phone 3a Lite ವ್ಯಾಲ್ಯೂ ಫಾರ್ ಮನಿ ಸ್ಮಾರ್ಟ್‌ಫೋನ್ ಆಗಿ ಹೊಸ ಮಾನದಂಡವನ್ನು ಸ್ಥಾಪಿಸುವ ಸಾಧ್ಯತೆ ಇದೆ. ಒಂದು ವೇಳೆ ನಥಿಂಗ್ ಕಂಪೆನಿಯು ಇದಕ್ಕೂ ಮೀರಿ ಬೆಲೆಯನ್ನು ಹೊಂದಿಸುವುದಾದರೆ, ಮುಂದೆ ನೋಡಬೇಕಾಗುತ್ತದೆ.

Best Mobiles in India

English summary
In the display department, Nothing Phone 3a Lite phone features a 6.77-inch Full HD+ AMOLED display with 120Hz refresh rate and 3,000 nits peak brightness. These features are currently one of the best options in mid-range phones. When I used the phone, the visibility was excellent in both indoor and outdoor conditions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+