ಭಾರತದಲ್ಲಿ Nothing Phone 3a ಫೋನ್ ಬಿಡುಗಡೆ!...ಖರೀದಿಗೆ ಕ್ಯೂ ಗ್ಯಾರಂಟಿ?
ಭಾರತದ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ 'Nothing Phone 3a' ಸ್ಮಾರ್ಟ್‌ಫೋನ್ ದೇಶದಲ್ಲಿಂದು ಭರ್ಜರಿಯಾಗಿ ಬಿಡುಗಡೆಗೊಂಡಿದೆ. ಕಳೆದ ಒಂದು ವಾರದಿಂದ ಮೊಬೈಲ್ ಮಾರುಕಟ್ಟೆಯಲ್ಲಿ ಹಲವಾರು ಊಹಾಪೋಹಗಳಿಗೆ ಸಾಕ್ಷಿಯಾಗಿದ್ದ 'Nothing Phone 3a' ಸ್ಮಾರ್ಟ್‌ಫೋನ್ ಇದೀಗ ಮಾರುಕಟ್ಟೆಯಲ್ಲಿ ಲೈವ್ ಆಗಿದ್ದು, ಹೊಸ ಎಸೆನ್ಷಿಯಲ್ ಬಟನ್ ಜೊತೆಗೆ ಆಕರ್ಷಕ ವಿನ್ಯಾಸ, ಗೂಗಲ್‌ನೊಂದಿಗೆ ಅಭಿವೃದ್ಧಿಪಡಿಸಿದ ಅಲ್ಟ್ರಾ XDR ಡಿಸ್ಪ್ಲೇ ತಂತ್ರಜ್ಞಾನ, AI-ಚಾಲಿತ ವೈಶಿಷ್ಟ್ಯಗಳು ಮತ್ತು ಸುಧಾರಿತ ಕ್ಯಾಮೆರಾ ವ್ಯವಸ್ಥೆಯ ಜೊತೆಗೆ ಮಾರುಕಟ್ಟೆಗೆ ಬಂದಿದೆ. ಹಾಗಾದರೆ, ದೇಶದ ಯುವಕರ ಕುತೂಹಲಕ್ಕೆ ಕಾರಣವಾಗಿರುವುದು ಹೊಸ 'Nothing Phone 3a' ಸ್ಮಾರ್ಟ್‌ಫೋನ್ ಹೇಗಿದೆ, ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
Nothing Phone 3a ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು.
ಹೊಸ Nothing Phone 3a ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಮತ್ತು 3,000 ನಿಟ್ಸ್ ಗರಿಷ್ಠ ಹೊಳಪಿನೊಂದಿಗೆ 6.77-ಇಂಚಿನ FHD+ AMOLED ಡಿಸ್ಪ್ಲೇಯನ್ನು ಹೊಂದಿದೆ, ಇದು ರೋಮಾಂಚಕ ದೃಶ್ಯಗಳು ಮತ್ತು ಸುಗಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ ಪರಿಣಾಮಕಾರಿ ಸಂಸ್ಕರಣಾ ಶಕ್ತಿಯನ್ನು ನೀಡುತ್ತದೆ ಎಂದು Nothing ಕಂಪನಿಯು ತಿಳಿಸಿದ್ದು, ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ನಥಿಂಗ್ OS 3.1 ನಲ್ಲಿ ಕಾರ್ಯನಿರ್ವಹಿಸುತ್ತದೆ, ಮತ್ತು ಮೂರು ವರ್ಷಗಳ OS ನವೀಕರಣಗಳು ಮತ್ತು ಆರು ವರ್ಷಗಳ ಭದ್ರತಾ ಪ್ಯಾಚ್‌ಗಳ ಭರವಸೆಯೊಂದಿಗೆ ಬಂದಿದೆ ಎಂದು ಹೇಳಿದೆ.

Nothing Phone 3a ಕ್ಯಾಮೆರಾ ವಿಭಾಗ
Nothing Phone 3a ಸ್ಮಾರ್ಟ್‌ಫೋನ್ ಈಗ ಟ್ರಿಪಲ್-ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಇದು ಈ ಹಿಂದಿನ ಮಾದರಿಯ ಹೋಲಿಸಿದರೆ ಗಮನಾರ್ಹವಾದ ಸುಧಾರಣೆಯಾಗಿದೆ ಎನ್ನಬಹುದು. ಈ ಸ್ಮಾರ್ಟ್‌ಫೋನಿನಲ್ಲಿನ 50MP ಪ್ರಾಥಮಿಕ ಕ್ಯಾಮೆರಾ AI ಸಂಸ್ಕರಣೆಯೊಂದಿಗೆ ಉತ್ತಮ ಜೂಮ್ ಸಾಮರ್ಥ್ಯಗಳನ್ನು ಒದಗಿಸುತ್ತದೆ, ವಿಶಾಲ ಶಾಟ್‌ಗಳಿಗೆ50MP ಟೆಲಿಫೋಟೋ ಲೆನ್ಸ್ , 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 32MP ಮುಂಭಾಗದ ಕ್ಯಾಮೆರಾ ತೀಕ್ಷ್ಣ ಸೆಲ್ಫಿಗಳಿಗೆ ಬಳಸಲಾಗುತ್ತದೆ. ಫೋನಿನ ಮುಂಭಾಗದ ಕ್ಯಾಮೆರಾ ವ್ಯವಸ್ಥೆ ಟ್ರೂಲೆನ್ಸ್ ಎಂಜಿನ್ 3.0 ನಿಂದ ಚಾಲಿತವಾಗಿದ್ದು, ಇದು ಬಣ್ಣ ನಿಖರತೆ ಮತ್ತು ದೃಶ್ಯ ಪತ್ತೆಗಾಗಿ AI ಆಧಾರಿತ ಸುಧಾರಣೆಯನ್ನು ಒದಗಿಸುತ್ತದೆ. ಕಂಪನಿಯು ಸೂಪರ್ ಮೂನ್ ಮೋಡ್ ಮತ್ತು ಅಲ್ಟ್ರಾ XDR ತಂತ್ರಜ್ಞಾನವು ಕಡಿಮೆ ಬೆಳಕಿನ ಛಾಯಾಗ್ರಹಣ ಮತ್ತು ಡೈನಾಮಿಕ್ ಶ್ರೇಣಿಯಲ್ಲಿನ ಸುಧಾರಣೆಗಳನ್ನು ತರುತ್ತದೆ ಎಂದು ಕಂಪೆನಿ ತಿಳಿಸಿದೆ.
ಎಸೆನ್ಷಿಯಲ್ ಬಟನ್ ಮತ್ತು AI-ಚಾಲಿತ ವೈಶಿಷ್ಟ್ಯಗಳು
Nothing Phone 3a ಸ್ಮಾರ್ಟ್‌ಫೋನ್‌ನಲ್ಲಿ ಹೊಸ ಎಸೆನ್ಷಿಯಲ್ ಬಟನ್ ಅನ್ನು ಕೆಳಗಿನ ಬಲಭಾಗದಲ್ಲಿ ಪರಿಚಯಿಸಲಾಗಿದೆ. ಈ ಎಸೆನ್ಷಿಯಲ್ ಸ್ಪೇಸ್ ಬಟನ್, AI-ಚಾಲಿತ ವಿಷಯ ಕೇಂದ್ರವಾಗಿದ್ದು, ಟಿಪ್ಪಣಿಗಳು ಮತ್ತು ವಿಚಾರಗಳನ್ನು ಸಂಘಟಿಸಲು, ತಕ್ಷಣ ಧ್ವನಿ ರೆಕಾರ್ಡಿಂಗ್, ಸೆಲ್ಫಿ ಮತ್ತು ಇತರ ಕಸ್ಟಮೈಸ್ ಮಾಡಬಹುದಾದ ಶಾರ್ಟ್‌ಕಟ್‌ಗಳನ್ನು ನಿರ್ವಹಿಸುತ್ತದೆ. ಈ ಹೊಸ ಸೇರ್ಪಡೆಯು ಬಳಕೆದಾರರ ಸಂವಹನವನ್ನು ಸುಗಮಗೊಳಿಸಲು ಮತ್ತು ಉತ್ಪಾದಕತೆ ಹಾಗೂ ವಿಷಯ ಹಂಚಿಕೆಯನ್ನು ಸುಲಭಗೊಳಿಸಲು ಉದ್ದೇಶಿತವಾಗಿದೆ ಎಂದು ಕಂಪನಿಯು ತಿಳಿಸಿದೆ. ಇನ್ನು ಈ ಫೋನನ್ 50W ವೇಗದ ಚಾರ್ಜಿಂಗ್ ಬೆಂಬಲಿಸುವ 5,000mAh ಬ್ಯಾಟರಿಯ ಮೂಲಕ ಶಕ್ತಿಯುತವಾಗಿದೆ. ಇತರ ಪ್ರಮುಖ ವೈಶಿಷ್ಟ್ಯಗಳಲ್ಲಿ ಗ್ಲಿಫ್ ಇಂಟರ್ಫೇಸ್, IP64-ರೇಟೆಡ್ ಧೂಳು ಮತ್ತು ನೀರಿನ ಪ್ರತಿರೋಧ, ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು ಮತ್ತು Google Pay ಬೆಂಬಲದೊಂದಿಗೆ NFC ವೈಶಿಷ್ಟ್ಯಗಳು ಸೇರಿವೆ.
Nothing Phone 3a ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Nothing Phone 3a ಸ್ಮಾರ್ಟ್‌ಫೋನ್ ಏಕೈಕ 8GB RAM + 128GB ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆಯಾಗಿದ್ದು, ₹24,999 ರೂ. ಬೆಲೆಯನ್ನು ನಿಗದಿಪಡಿಸಲಾಗಿದೆ. ಕಪ್ಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಖರೀಗೆ ಲಭ್ಯವಿರಲಿರುವ ಈ ಸಾಧನವು ಇದೇ ದೇಶದಲ್ಲಿ ಮಾರ್ಚ್ 11 ರಿಂದ ಭಾರತದಲ್ಲಿ ಮೊದಲ ಮಾರಾಟಕ್ಕೆ ಬರಲಿದೆ ಎಂದು ಕಂಪೆನಿ ತಿಳಿಸಿದೆ.


Click it and Unblock the Notifications








