Home
ಮೊಬೈಲ್

ಮಾರ್ಚ್ 5ರಂದು ಅನಾವರಣ: Nothing Phone (4a), 4a Pro ಭಾರತ ಬೆಲೆ ಬಹಿರಂಗ!

ಜನಪ್ರಿಯ ಟೆಕ್ ಬ್ರ್ಯಾಂಡ್ Nothing ತನ್ನ ಮುಂಬರುವ Nothing Phone (4a) ಸರಣಿಯನ್ನು ಮಾರ್ಚ್ 5ರಂದು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳಿಸುವುದಾಗಿ ಅಧಿಕೃತವಾಗಿ ತಿಳಿಸಿದೆ. ಈ ಬಿಡುಗಡೆ ಕಾರ್ಯಕ್ರಮ ಲಂಡನ್‌ನ ನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ Nothing Phone (4a) ಮತ್ತು Nothing Phone (4a) Pro ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ. ಇತ್ತೀಚಿನ ಸೋರಿಕೆಗಳ ಪ್ರಕಾರ, ಭಾರತದಲ್ಲಿ ಈ ಸರಣಿಯ ಪ್ರಾರಂಭಿಕ ಬೆಲೆಯು ₹35,000 ಒಳಗೆ ಇರಲಿದ್ದು, ಮಧ್ಯಮ-ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹೊಸ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

Nothing Phone (4a) ಸರಣಿ : ಭಾರತದಲ್ಲಿ ನಿರೀಕ್ಷಿತ ಬೆಲೆ
ಇತ್ತೀಚಿನ ಯೂರೋಪಿನ ಲೀಕ್ಸ್ ಪ್ರಕಾರ, Nothing Phone (4a) ಮೂಲ ಮಾದರಿಯ ಬೆಲೆ €409ರಿಂದ ಆರಂಭವಾಗಬಹುದು. ಇದರ ಆಧಾರದ ಮೇಲೆ ಭಾರತದಲ್ಲಿ ಪ್ರಾರಂಭಿಕ ಬೆಲೆ ₹35,000 ಒಳಗೆ ಇರಬಹುದೆಂಬ ಅಂದಾಜು ಇದೆ. ಮತ್ತೊಂದೆಡೆ, Nothing Phone (4a) Pro ಬೆಲೆ ₹45,000 ಒಳಗೆ ಆರಂಭವಾಗುವ ಸಾಧ್ಯತೆ ಇದೆ. ಅಧಿಕೃತ ಬೆಲೆ ಘೋಷಣೆ ಕಾರ್ಯಕ್ರಮದ ದಿನವೇ ಸ್ಪಷ್ಟವಾಗಲಿದೆ. ಇನ್ನು Nothing Phone (4a) ಮಾರ್ಚ್ 12ರಿಂದ ಭಾರತದಲ್ಲಿ ಮಾರಾಟಕ್ಕೆ ಬರಬಹುದು. Pro ಮಾದರಿ ಮಾರ್ಚ್ 26ರಿಂದ ಲಭ್ಯವಾಗುವ ಸಾಧ್ಯತೆ ಇದೆ. ಈ ಫೋನ್‌ಗಳು ಫ್ಲಿಪ್‌ಕಾರ್ಟ್ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಲು ಲಭ್ಯವಾಗಲಿವೆ. ಜೊತೆಗೆ ಬೆಂಗಳೂರಿನಲ್ಲಿರುವ ಕಂಪನಿಯ ಅಧಿಕೃತ ರಿಟೇಲ್ ಸ್ಟೋರ್ "Nothing (R)"ದಲ್ಲಿಯೂ ಮಾರಾಟ ನಿರೀಕ್ಷಿಸಲಾಗಿದೆ.

ಮಾರ್ಚ್ 5ರಂದು ಅನಾವರಣ: Nothing Phone (4a), 4a Pro ಭಾರತ ಬೆಲೆ ಬಹಿರಂಗ!

Nothing Phone (4a) ಸರಣಿ: ನಿರೀಕ್ಷಿತ ವೈಶಿಷ್ಟ್ಯಗಳು

Nothing Phone (4a) ಸರಣಿಯಲ್ಲಿ 6.7 ರಿಂದ 6.83 ಇಂಚಿನ 1.5K AMOLED ಡಿಸ್ಪ್ಲೇ ಸಿಗಬಹುದೆಂಬ ವರದಿಗಳಿವೆ. ಕೆಲವು ವರದಿಗಳು 30Hz ಮತ್ತು 120Hz ನಡುವೆ ಹೊಂದಾಣಿಕೆಯ ರಿಫ್ರೆಶ್ ದರಗಳನ್ನು ನೀಡುವಪ್ಯಾನೆಲ್ ಅನ್ನು ಸೂಚಿಸಿವೆ. ಇನ್ನು ಕಂಪನಿಯ ವಿಶೇಷತೆ ಆಗಿರುವ Glyph ಲೈಟಿಂಗ್ ವ್ಯವಸ್ಥೆಯಲ್ಲಿ ಈ ಬಾರಿ ಹೊಸ "Glyph Matrix" ಅಥವಾ 63 ಮಿನಿ-LEDಗಳಿರುವ Glyph Bar ಪರಿಚಯವಾಗುವ ನಿರೀಕ್ಷೆ ಇದೆ.

ಮಾರ್ಚ್ 5ರಂದು ಅನಾವರಣ: Nothing Phone (4a), 4a Pro ಭಾರತ ಬೆಲೆ ಬಹಿರಂಗ!

ಪ್ರೊಸೆಸರ್ ಮತ್ತು ಕಾರ್ಯಕ್ಷಮತೆ ವಿಭಾಗದಲ್ಲಿ, ಇತ್ತೀಚೆಗೆ ಗೀಕ್‌ಬೆಂಚ್ ಪಟ್ಟಿಯಲ್ಲಿ ಗುರುತಿಸಿದಂತೆ Nothing Phone (4a) ಸರಣಿಯಲ್ಲಿ Snapdragon 7s Gen 4 ಪ್ರೊಸೆಸರ್ ಇರಲಿರುವುದು ಬಹುತೇಕ ಖಚಿತವಾಗಿದೆ. ಬ್ಯಾಟರಿ ವಿಭಾಗದಲ್ಲಿ, ಕಳೆದ ಮಾದರಿ Phone (3a) ಗಿಂತ ಬ್ಯಾಟರಿ ಬಾಳಿಕೆ ಸುಧಾರಿಸುವ ನಿರೀಕ್ಷೆಯಿದ್ದು, Phone (4a) ಸರಣಿಯಲ್ಲಿ 50W ವೇಗದ ಚಾರ್ಜಿಂಗ್ ಬೆಂಬಲವನ್ನು ಸಹ ನಿರೀಕ್ಷಿಸಲಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, Nothing Phone (4a) Pro ಮಾದರಿಯಲ್ಲಿ 50MP Sony ಮುಖ್ಯ ಕ್ಯಾಮೆರಾ ಮತ್ತು OIS ಸಪೋರ್ಟ್ ಇರಬಹುದೆಂದು ವರದಿಗಳು ಸೂಚಿಸುತ್ತಿವೆ. ಹೆಚ್ಚುವರಿ ಜೂಮ್ ಸಾಮರ್ಥ್ಯ 140x ವರೆಗೆ ಹೋಗಬಹುದು ಎಂಬ ಮಾತು ಕೇಳಿಬರುತ್ತಿದೆ. ಸಾಮಾನ್ಯ 4a ಮಾದರಿಯಲ್ಲಿ ಟ್ರಿಪಲ್ 50MP ಕ್ಯಾಮೆರಾ ವ್ಯವಸ್ಥೆ, 0.6x ಅಲ್ಟ್ರಾ-ವೈಡ್ ಮತ್ತು 70x ವರೆಗೆ ಜೂಮ್ ಸಪೋರ್ಟ್ ಇರಬಹುದು. ಜೊತೆಗೆ 32MP ಫ್ರಂಟ್ ಕ್ಯಾಮೆರಾ ಇರುವ ಸೂಚನೆ ಇದೆ.

Nothing Phone (4a) ಸರಣಿ: ಭಾರೀ ಸ್ಪರ್ಧೆಯ ಆರಂಭ?
ಭಾರತದಲ್ಲಿ ₹30,000-₹45,000 ಬೆಲೆ ವಿಭಾಗದಲ್ಲಿ ಈಗಾಗಲೇ ಭಾರೀ ಸ್ಪರ್ಧೆ ಇದೆ. ಈ ಹಿನ್ನೆಲೆಯಲ್ಲಿ Nothing Phone (4a) ಸರಣಿ ಪ್ರೀಮಿಯಂ ವಿನ್ಯಾಸ, ಸುಧಾರಿತ ಕ್ಯಾಮೆರಾ ಮತ್ತು ವಿಭಿನ್ನ Glyph ಲೈಟಿಂಗ್ ಮೂಲಕ ಯುವ ಬಳಕೆದಾರರನ್ನು ಆಕರ್ಷಿಸುವ ಸಾಧ್ಯತೆ ಇದೆ. ಅಧಿಕೃತ ಬಿಡುಗಡೆ ನಂತರ ಸಂಪೂರ್ಣ ವಿವರಗಳು ಹಾಗೂ ಖಚಿತ ಬೆಲೆ ಮಾಹಿತಿ ಲಭ್ಯವಾಗಲಿದೆ. ಒಟ್ಟಿನಲ್ಲಿ, Nothing Phone (4a) ಸರಣಿ ಮಧ್ಯಮ-ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಗಮನ ಸೆಳೆಯುವ ಪ್ರಮುಖ ಬಿಡುಗಡೆ ಆಗಬಹುದು. ಟೆಕ್ ಪ್ರಿಯರು ಮಾರ್ಚ್ 5ರ ಕಾರ್ಯಕ್ರಮದತ್ತ ಕಣ್ಣಿಟ್ಟಿದ್ದಾರೆ.

Best Mobiles in India

English summary
Ahead of its March 5 global launch, the Nothing Phone (4a) series pricing, specifications, and India availability details have surfaced online. The Phone (4a) is expected to be priced under ₹35,000, while the Pro variant could start below ₹45,000, with sales likely via Flipkart later in March.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+