Home
ಮೊಬೈಲ್

Nothing Phone 4a, 4a Pro ಭರ್ಜರಿ ಲಾಂಚ್: ಭಾರತದಲ್ಲಿ ಬೆಲೆ ಮತ್ತು ಫೀಚರ್ಸ್ ನೋಡಿ!

ಯುಕೆ ಮೂಲದ ಜನಪ್ರಿಯ ಟೆಕ್ ಬ್ರ್ಯಾಂಡ್ Nothing ತನ್ನ ಹೊಸ Nothing Phone 4a ಮತ್ತು Nothing Phone 4a Pro ಸ್ಮಾರ್ಟ್‌ಫೋನ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಗುರುವಾರ ಸಂಜೆ ಲಂಡನ್‌ನಲ್ಲಿ ನಡೆದ ಜಾಗತಿಕ ಕಾರ್ಯಕ್ರಮದಲ್ಲಿ ಈ ಎರಡೂ ಬಹುನಿರೀಕ್ಷಿತ ಫೋನ್‌ಗಳು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಏಕಕಾಲದಲ್ಲಿ ಪರಿಚಯಗೊಂಡಿದ್ದು, ಸ್ಮಾರ್ಟ್‌ಫೋನ್ ಪ್ರಿಯರ ಗಮನಸೆಳೆದಿವೆ. Nothing ಕಂಪೆನಿಯು ಈ ಹೊಸ ಸರಣಿಯಲ್ಲಿ ವಿಶಿಷ್ಟ Glyph ಲೈಟಿಂಗ್ ವಿನ್ಯಾಸವನ್ನು ಮತ್ತಷ್ಟು ಸುಧಾರಿಸಿದ್ದು, ಸಾಮಾನ್ಯ ಮಾದರಿಯಲ್ಲಿ ಹೊಸ Glyph Bar ವ್ಯವಸ್ಥೆ ಇದ್ದರೆ, Pro ಮಾದರಿಯಲ್ಲಿ ಹೆಚ್ಚಿನ LEDಗಳಿರುವ Glyph Matrix ವ್ಯವಸ್ಥೆ ಒದಗಿಸಿದೆ. ಹಾಗಾದರೆ, ಹೊಸ Nothing Phone 4a ಮತ್ತು Nothing Phone 4a Pro ಸ್ಮಾರ್ಟ್‌ಫೋನ್‌ಗಳು ಹೇಗಿವೆ?, ಬೆಲೆಗಳು ಮತ್ತು ಹಾಗೂ ಸಂಪೂರ್ಣ ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.

Nothing Phone 4a ಸರಣಿ: ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Nothing Phone 4a ಯ ಮೂಲ ಮಾದರಿ ಬೆಲೆ (8GB RAM + 128GB ಸ್ಟೋರೇಜ್) ₹31,999 ರಿಂದ ಪ್ರಾರಂಭವಾಗುತ್ತದೆ. ಇದರ 8GB + 256GB ರೂಪಾಂತರಕ್ಕೆ ₹34,999 ಹಾಗೂ 12GB + 256GB ಮಾದರಿಗೆ ₹37,999 ನಿಗದಿಯಾಗಿದೆ.ಇನ್ನೊಂದೆಡೆ Nothing Phone 4a Pro ಯ 8GB + 128GB ಮಾದರಿ ₹39,999 ಬೆಲೆಯಲ್ಲಿ ಬರುತ್ತದೆ. ಇದರ 8GB + 256GB ರೂಪಾಂತರ ₹42,999 ಆಗಿದ್ದು, ಟಾಪ್‌ಎಂಡ್ 12GB + 256GB ಮಾದರಿಯು ₹45,999 ಕ್ಕೆ ಲಭ್ಯವಾಗಲಿದೆ.

ಆದರೆ, ಮೂಲ ಮಾದರಿಯ ಮೇಲೆ ಬ್ಯಾಂಕ್ ಆಫರ್ ಮೂಲಕ ₹1,000 ರಿಯಾಯಿತಿ ಮತ್ತು ₹6,000 ವರೆಗೆ ಎಕ್ಸ್‌ಚೇಂಜ್ ಬೋನಸ್ ಕೂಡ ಲಭ್ಯವಿರುವುದಾಗಿ ತಿಳಿಸಲಾಗಿದೆ. ಇನ್ನು ಲಭ್ಯತೆ ಕುರಿತು ನೋಡುವುದಾದರೆ, Nothing Phone 4a ಮಾರ್ಚ್ 13ರಿಂದ ಹಾಗೂ Nothing Phone 4a Pro ಮಾರ್ಚ್ 27ರಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟಕ್ಕೆ ಬರಲಿವೆ. ಸಾಮಾನ್ಯ ಮಾದರಿಯನ್ನು Black, Blue, Pink ಮತ್ತು White ಬಣ್ಣಗಳಲ್ಲಿ ಹಾಗೂ Pro ಮಾದರಿಯನ್ನು Black, Pink ಮತ್ತು Silver ಬಣ್ಣಗಳಲ್ಲಿ ಖರೀದಿಸಬಹುದು.

Nothing Phone 4a, 4a Pro ಲಾಂಚ್: ಭಾರತದಲ್ಲಿ ಬೆಲೆ ಮತ್ತು ಫೀಚರ್ಸ್ ನೋಡಿ!

Nothing Phone 4a: ಪ್ರಮುಖ ವೈಶಿಷ್ಟ್ಯಗಳು
Nothing Phone 4a ಡ್ಯುಯಲ್ SIM ಬೆಂಬಲ ಹೊಂದಿದ್ದು ಆಧಾರಿತ Nothing OS 4.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿ ಈ ಫೋನ್‌ಗೆ ಮೂರು ವರ್ಷಗಳ OS ಅಪ್ಡೇಟ್ ಹಾಗೂ ಆರು ವರ್ಷಗಳ ಭದ್ರತಾ ಅಪ್ಡೇಟ್ ನೀಡುವುದಾಗಿ ಘೋಷಿಸಿದೆ.

ಈ ಮಾದರಿಯ ಪ್ರಮುಖ ಆಕರ್ಷಣೆ Glyph Bar ವ್ಯವಸ್ಥೆ. ಇದರಲ್ಲಿ 63 ಮಿನಿ LED ಗಳು ಹಾಗೂ ಆರು ಪ್ರತ್ಯೇಕ ನಿಯಂತ್ರಿತ ವಲಯಗಳಿವೆ. ಇದು ರಿಂಗ್ಟೋನ್‌ಗಳು, ನೋಟಿಫಿಕೇಶನ್, ಟೈಮರ್, ವಾಲ್ಯೂಮ್ ಸೂಚನೆ ಮತ್ತು ಕ್ಯಾಮೆರಾ ಕೌಂಟ್‌ಡೌನ್ ಕಾರ್ಯಗಳಿಗೆ ಬೆಳಕು ಸೂಚನೆಗಳನ್ನು ನೀಡುತ್ತದೆ.

ಈ ಫೋನ್‌ನಲ್ಲಿ 6.78 ಇಂಚಿನ LTPS Flexible AMOLED ಡಿಸ್ಪ್ಲೇ ಇದ್ದು 120Hz ರಿಫ್ರೆಶ್ ರೇಟ್, 4,500 ನಿಟ್ಸ್ ಪೀಕ್ ಬ್ರೈಟ್ನೆಸ್ ಮತ್ತು Gorilla Glass 7i ರಕ್ಷಣೆ ನೀಡಲಾಗಿದೆ.

ಕಾರ್ಯಕ್ಷಮತೆಗೆ 4nm ತಂತ್ರಜ್ಞಾನದಲ್ಲಿ ನಿರ್ಮಿತವಾದ Qualcomm Snapdragon 7s Gen 4 ಪ್ರೊಸೆಸರ್ ಬಳಸಲಾಗಿದೆ. ಇದು 2.7GHz ಗರಿಷ್ಠ ಕ್ಲಾಕ್ ವೇಗವನ್ನು ಒದಗಿಸುತ್ತದೆ. ಫೋನ್‌ನಲ್ಲಿ ಗರಿಷ್ಠ 12GB RAM ಹಾಗೂ 256GB ಸ್ಟೋರೇಜ್ ಲಭ್ಯ.

Nothing Phone 4a, 4a Pro ಲಾಂಚ್: ಭಾರತದಲ್ಲಿ ಬೆಲೆ ಮತ್ತು ಫೀಚರ್ಸ್ ನೋಡಿ!

ಫೋಟೋಗ್ರಫಿಗೆ 50MP ಪ್ರಾಥಮಿಕ ಕ್ಯಾಮೆರಾ (Samsung GN9 ಸೆನ್ಸರ್) ಮತ್ತು OIS ಬೆಂಬಲ ನೀಡಲಾಗಿದೆ. ಜೊತೆಗೆ 50MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ 70x Ultra Zoom ಸಾಮರ್ಥ್ಯ ಹೊಂದಿದೆ. 8MP ಅಲ್ಟ್ರಾವೈಡ್ ಕ್ಯಾಮೆರಾ ಹಾಗೂ 32MP ಸೆಲ್ಫಿ ಕ್ಯಾಮೆರಾ ಕೂಡ ಇದೆ. ಫೋನ್ 4K ವಿಡಿಯೋವನ್ನು 30fps ವೇಗದಲ್ಲಿ ರೆಕಾರ್ಡ್ ಮಾಡಬಹುದು.

ಈ ಸ್ಮಾರ್ಟ್‌ಫೋನ್‌ನಲ್ಲಿ 5,400mAh ಸಾಮರ್ಥ್ಯದ ಬ್ಯಾಟರಿ ಇದೆ. 50W ವೇಗದ ವೈರ್ಡ್ ಚಾರ್ಜಿಂಗ್ ಬೆಂಬಲದಿಂದ ಸುಮಾರು 64 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ. 5G, Wi-Fi 6, Bluetooth 5.4, NFC ಸೇರಿದಂತೆ ಹಲವು ಸಂಪರ್ಕ ಆಯ್ಕೆಗಳು ಈ ಫೋನ್‌ನಲ್ಲಿ ಲಭ್ಯ.

Nothing Phone 4a Pro: ಏನು ವಿಶೇಷ?
Nothing Phone 4a Pro ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ 6.83 ಇಂಚಿನ 1.5K AMOLED ಡಿಸ್ಪ್ಲೇ ಇದ್ದು 144Hz ರಿಫ್ರೆಶ್ ರೇಟ್ ಮತ್ತು 5,000 ನಿಟ್ಸ್ ಪೀಕ್ ಬ್ರೈಟ್ನೆಸ್ ನೀಡುತ್ತದೆ. ಕಾರ್ಯಕ್ಷಮತೆಗೆ Qualcomm Snapdragon 7 Gen 4 ಪ್ರೊಸೆಸರ್ ಬಳಸಲಾಗಿದೆ.

ಈ ಮಾದರಿಯಲ್ಲಿ Glyph Matrix ವ್ಯವಸ್ಥೆ ನೀಡಲಾಗಿದೆ. ಇದರಲ್ಲಿ 137 ಮಿನಿ LEDಗಳು ಇದ್ದು ಬ್ಯಾಟರಿ ಮಟ್ಟ, ಟೈಮರ್, ಡಿಜಿಟಲ್ ಕ್ಲಾಕ್ ಮತ್ತು ಇತರ ಮಾಹಿತಿಯನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕ್ಯಾಮೆರಾ ವಿಭಾಗದಲ್ಲಿ 50MP Sony LYT-700c ಸೆನ್ಸರ್ ಹೊಂದಿದ ಮುಖ್ಯ ಕ್ಯಾಮೆರಾ, 50MP ಟೆಲಿಫೋಟೋ ಲೆನ್ಸ್ (140x Ultra Zoom) ಮತ್ತು 8MP ಅಲ್ಟ್ರಾವೈಡ್ ಕ್ಯಾಮೆರಾ ಇದೆ. ಸೆಲ್ಫಿ ಕ್ಯಾಮೆರಾ ಸಾಮಾನ್ಯ ಮಾದರಿಯಂತೆಯೇ 32MP ಆಗಿದೆ.

ಇದರ ಬ್ಯಾಟರಿ ಸಾಮರ್ಥ್ಯವೂ 5,400mAh ಆಗಿದ್ದು 50W ಫಾಸ್ಟ್ ಚಾರ್ಜಿಂಗ್ ಬೆಂಬಲ ನೀಡುತ್ತದೆ.

ಒಟ್ಟಾರೆಯಾಗಿ, ಹೊಸ Nothing Phone 4a ಮತ್ತು Nothing Phone 4a Pro ಸ್ಮಾರ್ಟ್‌ಫೋನ್‌ಗಳು ವಿಶಿಷ್ಟ Glyph ಲೈಟಿಂಗ್ ವಿನ್ಯಾಸ, ಶಕ್ತಿಶಾಲಿ Snapdragon ಚಿಪ್‌ಸೆಟ್ ಮತ್ತು ಉತ್ತಮ ಕ್ಯಾಮೆರಾ ಸಾಮರ್ಥ್ಯಗಳಿಂದ ಮಿಡ್-ಪ್ರೀಮಿಯಂ ವಿಭಾಗದಲ್ಲಿ ಗಮನ ಸೆಳೆಯುವ ಸಾಧ್ಯತೆ ಇದೆ. ವಿಶೇಷವಾಗಿ ಭಾರತದಲ್ಲಿ ಸ್ಪರ್ಧಾತ್ಮಕ ಬೆಲೆಯೊಂದಿಗೆ ಬಿಡುಗಡೆಗೊಂಡಿರುವುದರಿಂದ, ಟೆಕ್ ಪ್ರಿಯರ ಗಮನವನ್ನು ಈ ಹೊಸ Nothing ಫೋನ್‌ಗಳು ಸೆಳೆಯುವ ಸಾಧ್ಯತೆ ಹೆಚ್ಚಿದೆ.

Best Mobiles in India

English summary
Nothing has officially launched the Nothing Phone 4a and Phone 4a Pro globally with improved Glyph lighting, upgraded design, and powerful features. Here’s a look at their price, specifications, and key highlights.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+