ಬೆಂಗಳೂರಿನಲ್ಲಿ Nothing Phone (4a) Pro ಈವೆಂಟ್: ಮೊದಲ 100 ಮಂದಿಗೆ ಆಫರ್!
Nothing ಕಂಪನಿಯು ತನ್ನ ಹೊಸ Nothing Phone (4a) ಸರಣಿಯನ್ನು ಪರಿಚಯಿಸಿರುವ ವಿಷಯವನ್ನು ನೀವು ಈಗಾಗಲೇ ತಿಳಿದಿರಬಹುದು. ಈ ಸರಣಿಯಲ್ಲಿ Nothing Phone (4a) Pro ಮಾದರಿಯು ಮಾರ್ಚ್ 27ರಿಂದ ಮೂಲಕ ಮಾರಾಟಕ್ಕೆ ಲಭ್ಯವಾಗಲಿದೆ. ಆದರೆ, ಅದಕ್ಕೂ ಮೊದಲೇ ಭಾರತದಲ್ಲಿ Nothing Phone (4a) Pro ಫೋನಿನ ವಿಶೇಷ ರೀಟೇಲ್ ಈವೆಂಟ್ ಘೋಷಿಸಿದೆ. ಮಾರ್ಚ್ 21, 2026ರಂದು Nothing Store Bengaluru ನಲ್ಲಿ ಈ ಫಸ್ಟ್-ಡ್ರಾಪ್ ಈವೆಂಟ್ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ Nothing Phone (4a) Pro ಫೋನ್ ಅನ್ನು ಮೊದಲ ಬಾರಿ ನೇರವಾಗಿ ಖರೀದಿಸುವ ಅವಕಾಶ ಮತ್ತು ಆರಂಭಿಕ ಆಫರ್‌ಗಳು ಲಭ್ಯವಾಗಲಿದೆ. ಈ ಕುರಿತಂತೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
ಬೆಂಗಳೂರು ರೀಟೇಲ್ ಈವೆಂಟ್: ಯಾವಾಗ ಮತ್ತು ಎಲ್ಲಿ?
ಮಾರ್ಚ್ 21ರಂದು ಸಂಜೆ 6 ಗಂಟೆಗೆ ಬೆಂಗಳೂರಿನ Nothing Store ನಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ. (ನಥಿಂಗ್ ಸ್ಟೋರ್ ಬೆಂಗಳೂರು 660/1, 100 ಅಡಿ ರಸ್ತೆ, 1 ನೇ ಹಂತ ಇಂದಿರಾನಗರ, ಬೆಂಗಳೂರು) ಟೆಕ್ ಪ್ರಿಯರಿಗೆ ಇದು ಮೊದಲ ಹಸ್ತಾಂತರ ಅನುಭವವಾಗಿದ್ದು, ಹೊಸ ಫೋನ್ ಅನ್ನು ನೇರವಾಗಿ ಖರೀದಿಸುವ ಅವಕಾಶ ಸಿಗಲಿದೆ.
ಆರಂಭಿಕ ಆಫರ್‌ಗಳು: ಮೊದಲ 100 ಮಂದಿಗೆ ವಿಶೇಷ ಗಿಫ್ಟ್
ಈ ಈವೆಂಟ್‌ನಲ್ಲಿ ಮೊದಲ 100 ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನೂ ಘೋಷಿಸಲಾಗಿದೆ. ಆರಂಭಿಕ ಖರೀದಿದಾರರಿಗೆ ಎಂಗ್ರೇವ್ ಮಾಡಿದ ವಿಶೇಷ ಎಡಿಷನ್ Nothing Phone (4a) Pro ನೀಡಲಾಗುತ್ತದೆ. ಜೊತೆಗೆ, ಉಚಿತವಾಗಿ Nothing Ear ಇಯರ್‌ಬಡ್ಸ್ ಕೂಡ ನೀಡಲಾಗುತ್ತದೆ. ಇದು ಟೆಕ್ ಅಭಿಮಾನಿಗಳಿಗೆ ದೊಡ್ಡ ಆಕರ್ಷಣೆಯಾಗಿದೆ.
Nothing Phone (4a) ಸರಣಿ: ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Nothing Phone (4a) Pro ಫೋನ್ 8GB + 128GB ಸ್ಟೋರೇಜ್ ಮಾದರಿ ಬೆಲೆ ₹39,999 ರಿಂದ ಪ್ರಾರಂಭವಾಗುತ್ತದೆ.. ಇದರ ಹೆಚ್ಚಿನ 8GB + 256GB ಮಾದರಿಯು ₹42,999 ಮತ್ತು 12GB + 256GB ಮಾದರಿಯು ₹45,999 ಬೆಲೆಯಲ್ಲಿ ಲಭ್ಯವಿದೆ. ಇನ್ನೊಂದೆಡೆ ಮೂಲ Nothing Phone (4a) ಫೋನ್ 8GB RAM + 128GB ಸ್ಟೋರೇಜ್ ರೂಪಾಂತರ ₹31,999 ರಿಂದ ಪ್ರಾರಂಭವಾಗುತ್ತದೆ. 8GB + 256GB ಮಾದರಿ ₹34,999 ಮತ್ತು 12GB + 256GB ಮಾದರಿ ₹37,999 ಬೆಲೆಯಲ್ಲಿ ಲಭ್ಯ.

Nothing Phone (4a) ಸರಣಿ: ಪ್ರಮುಖ ವೈಶಿಷ್ಟ್ಯಗಳು
ಮೂಲ Nothing Phone (4a) Nothing OS 4.1 ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಮೂರು ವರ್ಷಗಳ OS ಅಪ್ಡೇಟ್ ಹಾಗೂ ಆರು ವರ್ಷಗಳ ಭದ್ರತಾ ಅಪ್ಡೇಟ್‌ಗಳ ಭರವಸೆ ನೀಡುತ್ತದೆ. ಫೋನ್‌ನ ಪ್ರಮುಖ ಆಕರ್ಷಣೆ Glyph Bar ಲೈಟಿಂಗ್ ವ್ಯವಸ್ಥೆಯಾಗಿದ್ದು, 63 ಮಿನಿ LEDಗಳು ಮತ್ತು ಆರು ನಿಯಂತ್ರಿತ ವಲಯಗಳ ಮೂಲಕ ನೋಟಿಫಿಕೇಶನ್, ರಿಂಗ್ಟೋನ್ ಮತ್ತು ಇತರ ಕಾರ್ಯಗಳಿಗೆ ದೃಶ್ಯ ಸೂಚನೆಗಳನ್ನು ಒದಗಿಸುತ್ತದೆ.
ಇದರಲ್ಲಿ 6.78 ಇಂಚಿನ LTPS Flexible AMOLED ಡಿಸ್ಪ್ಲೇ ಇದ್ದು 120Hz ರಿಫ್ರೆಶ್ ರೇಟ್ ಮತ್ತು 4,500 ನಿಟ್ಸ್ ಪೀಕ್ ಬ್ರೈಟ್ನೆಸ್ ನೀಡುತ್ತದೆ. Gorilla Glass 7i ರಕ್ಷಣೆ ಕೂಡ ಇದೆ. ಕಾರ್ಯಕ್ಷಮತೆಗೆ Qualcomm Snapdragon 7s Gen 4 ಪ್ರೊಸೆಸರ್ ಬಳಸಲಾಗಿದ್ದು, 12GB RAM ಮತ್ತು 256GB ಸ್ಟೋರೇಜ್ ವರೆಗೆ ಆಯ್ಕೆ ಸಿಗುತ್ತದೆ.
ಕ್ಯಾಮೆರಾ ವಿಭಾಗದಲ್ಲಿ 50MP Samsung GN9 ಮುಖ್ಯ ಸೆನ್ಸರ್ (OIS ಸಹಿತ), 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ (70x Ultra Zoom), 8MP ಅಲ್ಟ್ರಾವೈಡ್ ಮತ್ತು 32MP ಸೆಲ್ಫಿ ಕ್ಯಾಮೆರಾ ಸೇರಿವೆ. 4K ವಿಡಿಯೋ 30fps ನಲ್ಲಿ ರೆಕಾರ್ಡ್ ಮಾಡುವ ಸಾಮರ್ಥ್ಯವೂ ಇದೆ. 5,400mAh ಬ್ಯಾಟರಿ ಮತ್ತು 50W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಸುಮಾರು 64 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತದೆ. ಜೊತೆಗೆ 5G, Wi-Fi 6, Bluetooth 5.4 ಮತ್ತು NFC ಸಂಪರ್ಕ ಆಯ್ಕೆಗಳು ಲಭ್ಯ.
Nothing Phone (4a) Pro: ಏನು ವಿಶೇಷ?
Nothing Phone (4a) Pro ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರಲ್ಲಿ 6.83 ಇಂಚಿನ 1.5K AMOLED ಡಿಸ್ಪ್ಲೇ, 144Hz ರಿಫ್ರೆಶ್ ರೇಟ್ ಮತ್ತು 5,000 ನಿಟ್ಸ್ ಪೀಕ್ ಬ್ರೈಟ್ನೆಸ್ ನೀಡಲಾಗಿದೆ. ಕಾರ್ಯಕ್ಷಮತೆಗೆ Qualcomm Snapdragon 7 Gen 4 ಚಿಪ್‌ಸೆಟ್ ಬಳಸಲಾಗಿದೆ. Pro ಮಾದರಿಯ ವಿಶೇಷತೆ Glyph Matrix ವ್ಯವಸ್ಥೆ. ಇದರಲ್ಲಿ 137 ಮಿನಿ LEDಗಳು ಇದ್ದು ಬ್ಯಾಟರಿ ಮಟ್ಟ, ಟೈಮರ್ ಮತ್ತು ಡಿಜಿಟಲ್ ಕ್ಲಾಕ್ ಸೇರಿದಂತೆ ಹಲವು ಮಾಹಿತಿಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ. ಕ್ಯಾಮೆರಾದಲ್ಲಿ 50MP Sony LYT-700C ಮುಖ್ಯ ಸೆನ್ಸರ್, 50MP ಟೆಲಿಫೋಟೋ (140x Ultra Zoom) ಮತ್ತು 8MP ಅಲ್ಟ್ರಾವೈಡ್ ಲೆನ್ಸ್ ನೀಡಲಾಗಿದೆ. 32MP ಸೆಲ್ಫಿ ಕ್ಯಾಮೆರಾ ಇದಲ್ಲಿಯೂ ಇದೆ.ಇದರಲ್ಲಿಯೂ 5,400mAh ಬ್ಯಾಟರಿ ಮತ್ತು 50W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದೆ.
ಸಾಮಾನ್ಯ Nothing Phone (4a) ಮಾದರಿ Black, Blue, Pink ಮತ್ತು White ಬಣ್ಣಗಳಲ್ಲಿ ಲಭ್ಯವಿದ್ದರೆ, Pro ಮಾದರಿಯು(Nothing Phone (4a) ) Black, Pink ಮತ್ತು Silver ಆಯ್ಕೆಗಳಲ್ಲಿ ಸಿಗಲಿದೆ.ಒಟ್ಟಾರೆಯಾಗಿ, Nothing Phone (4a) ಮತ್ತು Nothing Phone (4a) Pro ಎರಡೂ ವಿಶಿಷ್ಟ Glyph ಲೈಟಿಂಗ್ ವಿನ್ಯಾಸ, ಶಕ್ತಿಶಾಲಿ ಪ್ರೊಸೆಸರ್ ಮತ್ತು ಉತ್ತಮ ಕ್ಯಾಮೆರಾ ವೈಶಿಷ್ಟ್ಯಗಳಿಂದ ಮಿಡ್-ಪ್ರೀಮಿಯಂ ವಿಭಾಗದಲ್ಲಿ ಗಮಸೆಳೆಯುತ್ತಿವೆ. ನೆನಪಿಸಿಕೊಳ್ಳುವುದಾದರೆ, ಕಂಪನಿಯು ಮಾರ್ಚ್ 7 ರಂದು Nothing Phone (4a) ಗಾಗಿ ರೀಟೇಲ್ ಈವೆಂಟ್ ಅನ್ನು ನಡೆಸಿತ್ತು.


Click it and Unblock the Notifications








