Home
ಮೊಬೈಲ್

Nothing Phone (4a) ಸಂಪೂರ್ಣ ವಿಮರ್ಶೆ: ಖರೀದಿಸುವ ಮೊದಲು ಇಲ್ಲಿ ನೋಡಿ!

Nothing ಕಂಪನಿಯ A-ಸಿರೀಸ್ ಫೋನ್‌ಗಳು ಸಾಮಾನ್ಯವಾಗಿ ಸಮತೋಲನದ ಬೆಲೆ, ವಿಭಿನ್ನ ವಿನ್ಯಾಸ ಮತ್ತು ಹಿಂಭಾಗದಲ್ಲಿರುವ ಲೈಟ್‌ಗಳ ಮೂಲಕ ಬಳಕೆದಾರರ ಗಮನ ಸೆಳೆಯುತ್ತವೆ. Nothing Phone (3a) ಆ ನಿರೀಕ್ಷೆಗಳನ್ನು ಪೂರೈಸಿದಂತೆ, ಈ ವರ್ಷ Nothing Phone (4a) ಕೂಡ ಅದೇ ತತ್ವದ ಮೇಲೆ ಕೆಲವು ಪ್ರಾಯೋಗಿಕ ಬದಲಾವಣೆಗಳೊಂದಿಗೆ ಬಂದಿದೆ. Phone (4a) ಈಗ ಸ್ವಲ್ಪ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಅದರ ಜೊತೆಗೆ, ಹಿಂದಿನ ಪ್ರೋ ಮಾದರಿಯಲ್ಲಿ ಮಾತ್ರ ಇದ್ದ 3.5x ಆಪ್ಟಿಕಲ್ ಜೂಮ್ ಹೊಂದಿರುವ ಹೊಸ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಕೂಡ ಇಲ್ಲಿ ಸೇರಿಸಲಾಗಿದೆ. ನಮ್ಮ ಗಿಜ್‌ಬಾಟ್ ತಂಡವು ಈ ಫೋನ್ ಅನ್ನು ಒಂದು ವಾರದಿಂದ ಬಳಸುತ್ತಿದ್ದೇವೆ. ನಮ್ಮ ತಂಡದ ಒಟ್ಟಾರೆ ಅಭಿಪ್ರಾಯದಂತೆ ಇಲ್ಲಿದೆ Nothing Phone (4a) ವಿಮರ್ಶೆ.

ವಿನ್ಯಾಸ, ಬಿಲ್ಡ್ ಮತ್ತು Glyph
Nothing Phone (4a) ವಿನ್ಯಾಸದ ದೃಷ್ಟಿಯಲ್ಲಿ Phone (3a)ಗಿಂತ ಸ್ವಲ್ಪ ಬದಲಾವಣೆ ಹೊಂದಿದೆ. ಆದರೆ ಫೋನ್‌ನ ಪಾರದರ್ಶಕ ವಿನ್ಯಾಸ ತತ್ವವನ್ನು ಕಂಪನಿ ಉಳಿಸಿಕೊಂಡಿದೆ. ಈಗ 4a ನಲ್ಲಿ ಬಿಳಿ ಮತ್ತು ಮೆಟಾಲಿಕ್ ಭಾಗಗಳ ಮಿಶ್ರಣ ಕಾಣುತ್ತದೆ, ಇದು ಹೆಚ್ಚು ಕಾಂಟ್ರಾಸ್ಟ್ ನೀಡುತ್ತದೆ. ಕ್ಯಾಮೆರಾ ಮೋಡ್ಯೂಲ್ ಹಿಂದಿನ ಮಾದರಿಯಂತೆ ಅದೇ ಸ್ಥಳದಲ್ಲಿದೆ ಆದರೆ ಸ್ವಲ್ಪ ಕಾಂಪ್ಯಾಕ್ಟ್ ಆಗಿದೆ. ಅದರ ಜೊತೆಗೆ ಹಿಂಭಾಗದಲ್ಲಿ ತೆರೆದಿರುವ ಸ್ಕ್ರೂಗಳು ಮತ್ತು ಕೆಳಭಾಗದಲ್ಲಿ Nothing ಲೋಗೋ ಕಾಣಿಸುತ್ತದೆ.

Nothing Phone (4a) ಸಂಪೂರ್ಣ ವಿಮರ್ಶೆ: ಖರೀದಿಸುವ ಮೊದಲು ಇಲ್ಲಿ ನೋಡಿ!

ಹಿಂದೆ ಇದ್ದಂತೆ ಮೂರು ವಕ್ರ Glyph LED ಗಳ ಬದಲು ಈಗ ಕ್ಯಾಮೆರಾ ಮೋಡ್ಯೂಲ್ ಪಕ್ಕದಲ್ಲಿ ಒಂದು Glyph Bar ನೀಡಲಾಗಿದೆ. ಇದರಲ್ಲಿ ಆರು ಬಿಳಿ LEDಗಳು ಮತ್ತು ಒಂದು ಕೆಂಪು LED ಇದೆ. ವೀಡಿಯೊ ರೆಕಾರ್ಡಿಂಗ್ ನಡೆಯುವಾಗ ಈ ಕೆಂಪು LED ಮಿನುಗುತ್ತದೆ. ಒಟ್ಟು 63 ಮಿನಿ LEDಗಳು ಇದ್ದು ವಿವಿಧ ಪ್ರಕಾಶ ಮಟ್ಟಗಳಿಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಹಿಂದಿನ Glyph ವಿನ್ಯಾಸದಿಗಿಂತ ಇದು ಹೆಚ್ಚು ಸರಳ ಮತ್ತು ಶಾಂತವಾಗಿ ಕಾಣುತ್ತದೆ, ಇದರಿಂದ ಫೋನ್ ಹಿಂಭಾಗ ಹೆಚ್ಚು ಕ್ಲೀನ್ ಆಗಿ ಕಾಣುತ್ತದೆ. Glyph Interface ಒಳಗೆ ವಾಲ್ಯೂಮ್ ಇಂಡಿಕೇಟರ್, Glyph Timer, Glyph Progress ಮತ್ತು Flip to Glyph ಮುಂತಾದ ಸೆಟ್ಟಿಂಗ್‌ಗಳು ಇನ್ನೂ ಲಭ್ಯವಿವೆ.

ಇದರಿಂದ ಹೊರತು Essential Key ಈಗ ಎಡಭಾಗಕ್ಕೆ ಸ್ಥಳಾಂತರಿಸಲಾಗಿದೆ. ಬಲಭಾಗದಲ್ಲಿ ವಾಲ್ಯೂಮ್ ಬಟನ್‌ಗಳು ಮತ್ತು ಪವರ್ ಬಟನ್ ಇವೆ. ಪೋರ್ಟ್ ಮತ್ತು ಸ್ಪೀಕರ್ ಸ್ಥಾನಗಳು ಹಿಂದಿನಂತೆ ಉಳಿದಿವೆ. Phone (4a) ಇನ್ನೂ IP64 ರೇಟಿಂಗ್ ಮಾತ್ರ ಹೊಂದಿದೆ. Nothing ಪ್ರಕಾರ ಫೋನ್ ಅನ್ನು 25 ಸೆಂ.ಮೀ ನೀರಿನಲ್ಲಿ ಸುಮಾರು 20 ನಿಮಿಷ ತಾಳುತ್ತದೆ ಎಂದು ಹೇಳಿದರೂ, ಫೋನ್ ಅನ್ನು ನೀರಿನಿಂದ ದೂರ ಇಡುವುದು ಉತ್ತಮ. ಈ ಬೆಲೆಯ ಕೆಲವು ಫೋನ್‌ಗಳಲ್ಲಿ IP68 ರೇಟಿಂಗ್ ಇರುವುದರಿಂದ ಇಲ್ಲಿ ಹೆಚ್ಚಿನ ರೇಟಿಂಗ್ ಇದ್ದರೆ ಚೆನ್ನಾಗಿತ್ತು.

Nothing Phone (4a) ಸಂಪೂರ್ಣ ವಿಮರ್ಶೆ: ಖರೀದಿಸುವ ಮೊದಲು ಇಲ್ಲಿ ನೋಡಿ!

ಕ್ಯಾಮೆರಾ
Phone (4a) ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಹೊಸ 50 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಇದೆ. ಇದು 3.5x ಆಪ್ಟಿಕಲ್ ಜೂಮ್, 7x ಇನ್-ಸೆನ್ಸರ್ ಜೂಮ್ ಮತ್ತು ಗರಿಷ್ಠ 70x ಜೂಮ್ ಸಪೋರ್ಟ್ ನೀಡುತ್ತದೆ. ಮುಂಭಾಗದ ಕ್ಯಾಮೆರಾ ಹಿಂದಿನಂತೆ 32 ಮೆಗಾಪಿಕ್ಸೆಲ್ ಆಗಿಯೇ ಇದೆ.

ಹಗಲು ಬೆಳಕಿನಲ್ಲಿ ತೆಗೆದ ಫೋಟೋಗಳು ಪ್ರಕಾಶಮಾನವಾಗಿ ಮತ್ತು ಉತ್ತಮ ವಿವರಗಳೊಂದಿಗೆ ಬರುತ್ತವೆ. ಬಣ್ಣಗಳು ಸ್ವಲ್ಪ ಹೆಚ್ಚು ತೀವ್ರವಾಗಿರುವಂತೆ ಕಾಣುತ್ತವೆ, ವಿಶೇಷವಾಗಿ ಆಕಾಶದ ನೀಲಿ ಮತ್ತು ಸಸ್ಯಗಳ ಹಸಿರು ಹೆಚ್ಚು ಸ್ಪಷ್ಟವಾಗಿರುತ್ತದೆ. ಬೆಳಕು ಸಾಕಷ್ಟು ಇದ್ದರೆ ಶಟ್ಟರ್ ವೇಗವೂ ಉತ್ತಮವಾಗಿರುತ್ತದೆ, ಆದರೆ ಕೆಲವೊಮ್ಮೆ ಫೋಟೋ ಪ್ರೊಸೆಸಿಂಗ್‌ಗೆ 2-3 ಸೆಕೆಂಡುಗಳ ಸಮಯ ಬೇಕಾಗಬಹುದು. ಒಟ್ಟಿನಲ್ಲಿ ಪ್ರೈಮರಿ ಕ್ಯಾಮೆರಾದ ಚಿತ್ರಗಳು Phone (3a) ಜೊತೆ ಬಹಳ ಸಮಾನವಾಗಿವೆ. ಅಲ್ಟ್ರಾ-ವೈಡ್ ಕ್ಯಾಮೆರಾದಲ್ಲಿ ವಿವರಗಳು ಕಡಿಮೆಯಾಗಿರುವುದು ಸ್ಪಷ್ಟವಾಗುತ್ತದೆ ಏಕೆಂದರೆ ಇದು ಕೇವಲ 8 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ. ಕಡಿಮೆ ಬೆಳಕಿನಲ್ಲಿ ನೊಯ್ಸ್ ಕೂಡ ಸ್ವಲ್ಪ ಹೆಚ್ಚಾಗುತ್ತದೆ.

ಆದರೆ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಪ್ರಮುಖ ಸುಧಾರಣೆಯಾಗಿದೆ. 3.5x ಆಪ್ಟಿಕಲ್ ಜೂಮ್ ಫೋಟೋ ತೆಗೆದುಕೊಳ್ಳುವಲ್ಲಿ ಹೆಚ್ಚು ಅನುಕೂಲವಾಗುತ್ತದೆ, ವಿಶೇಷವಾಗಿ ವ್ಯಕ್ತಿಗಳ ಪೋರ್ಟ್ರೇಟ್ ಫೋಟೋಗಳಿಗೆ. ಸುಮಾರು 80mm ಫೋಕಲ್ ಲೆಂಗ್ತ್‌ನಲ್ಲಿ ಚಿತ್ರಗಳು ಉತ್ತಮವಾಗಿ ಬರುತ್ತವೆ. ಚರ್ಮದ ಬಣ್ಣ ಸ್ವಾಭಾವಿಕವಾಗಿರುತ್ತದೆ ಮತ್ತು ಎಡ್ಜ್ ಡಿಟೆಕ್ಷನ್ ಕೂಡ ಸರಿಯಾಗಿರುತ್ತದೆ.

Nothing Phone (4a) ಸಂಪೂರ್ಣ ವಿಮರ್ಶೆ: ಖರೀದಿಸುವ ಮೊದಲು ಇಲ್ಲಿ ನೋಡಿ!

ಕಡಿಮೆ ಬೆಳಕಿನಲ್ಲಿ ಫೋನ್ ಸ್ವಯಂಚಾಲಿತವಾಗಿ ನೈಟ್ ಮೋಡ್ ಅನ್ನು ಆನ್ ಮಾಡುತ್ತದೆ. ಇದರಿಂದ ಚಿತ್ರಗಳು ಹೆಚ್ಚು ಪ್ರಕಾಶಮಾನವಾಗಿ ಬರುತ್ತವೆ. ಆದರೆ ಶಟ್ಟರ್ ವೇಗ ಸ್ವಲ್ಪ ನಿಧಾನವಾಗಿರುವುದರಿಂದ ಫೋನ್ ಅನ್ನು ಸ್ಥಿರವಾಗಿ ಹಿಡಿಯಬೇಕು. ಚಿತ್ರಗಳಲ್ಲಿ ವಿವರಗಳು ಉತ್ತಮವಾಗಿರುತ್ತವೆ ಮತ್ತು ನೊಯ್ಸ್ ನಿಯಂತ್ರಣ ಸಹ ಸಮರ್ಪಕವಾಗಿರುತ್ತದೆ. ಆದರೆ ಬಲವಾದ ಬೆಳಕು, ಉದಾಹರಣೆಗೆ ಬೀದಿ ದೀಪಗಳು ಇದ್ದಾಗ ಲೆನ್ಸ್ ಫ್ಲೇರ್ ನಿಯಂತ್ರಣದಲ್ಲಿ ಕ್ಯಾಮೆರಾ ಹೆಚ್ಚು ಉತ್ತಮವಾಗಿಲ್ಲ ಎನ್ನಬಹುದು.

ವೀಡಿಯೊ ರೆಕಾರ್ಡಿಂಗ್ ವಿಷಯದಲ್ಲಿ Phone (4a) ಇನ್ನೂ ಕೇವಲ 4K 30fps ಮಾತ್ರ ಸಪೋರ್ಟ್ ಮಾಡುತ್ತದೆ. ಹೆಚ್ಚಿನ ಫ್ರೇಮ್ ರೇಟ್ ಬೇಕಾದರೆ 1080p ಗೆ ಬದಲಾಯಿಸಬೇಕು. 1080p ನಲ್ಲಿ 120fps ಸ್ಲೋ-ಮೋಶನ್ ವೀಡಿಯೊ ಕೂಡ ರೆಕಾರ್ಡ್ ಮಾಡಬಹುದು.

ಡಿಸ್ಪ್ಲೇ ಮತ್ತು ಸ್ಪೀಕರ್
Phone (4a) ನಲ್ಲಿ 6.78 ಇಂಚಿನ AMOLED ಡಿಸ್ಪ್ಲೇ ಇದೆ. Phone (3a) ಜೊತೆ ಹೋಲಿಸಿದರೆ ರೆಸಲ್ಯೂಶನ್ ಹೆಚ್ಚಿಸಲಾಗಿದೆ. ಈಗ ಇದು 1224x2720 ಪಿಕ್ಸೆಲ್ ರೆಸಲ್ಯೂಶನ್ ಮತ್ತು 440 PPI ಪಿಕ್ಸೆಲ್ ಡೆನ್ಸಿಟಿ ನೀಡುತ್ತದೆ. ಇದು 120Hz LTPS ಪ್ಯಾನೆಲ್ ಆಗಿದ್ದು, ಪರದೆಯಲ್ಲಿ ಚಲನೆ ಇಲ್ಲದಿದ್ದಾಗ ರಿಫ್ರೆಶ್ ರೇಟ್ 60Hz ಗೆ ಇಳಿಯುತ್ತದೆ.

Nothing ಪ್ರಕಾರ ಈ ಫೋನ್ 4,500 ನಿಟ್ಸ್ ಪೀಕ್ ಬ್ರೈಟ್‌ನೆಸ್ ಮತ್ತು 1,600 ನಿಟ್ಸ್ ಔಟ್‌ಡೋರ್ ಬ್ರೈಟ್‌ನೆಸ್ ನೀಡುತ್ತದೆ. HDR ವೀಡಿಯೊ ಪರೀಕ್ಷೆಯಲ್ಲಿ ಗರಿಷ್ಠ 1062 ನಿಟ್ಸ್ ಬ್ರೈಟ್‌ನೆಸ್ ಕಂಡುಬಂದಿತು ಮತ್ತು ಕನಿಷ್ಠ ಬ್ರೈಟ್‌ನೆಸ್ ಸುಮಾರು 4 ನಿಟ್ಸ್ ಆಗಿತ್ತು. ರಾತ್ರಿ ಸಮಯದಲ್ಲಿ ರೀಲ್ಸ್ ನೋಡುತ್ತಿರುವಾಗ ಇದು ಕಣ್ಣುಗಳಿಗೆ ಒತ್ತಡ ನೀಡಲಿಲ್ಲ. Phone (4a) ನಲ್ಲಿ Always-On Display ಕೂಡ ಇದೆ.

ಚಿತ್ರಗಳನ್ನು ನೋಡಲು ಮತ್ತು ಸಿನಿಮಾಗಳನ್ನು ವೀಕ್ಷಿಸಲು ಡಿಸ್ಪ್ಲೇ ಗುಣಮಟ್ಟ ಉತ್ತಮವಾಗಿದೆ. ಕಪ್ಪು ಬಣ್ಣ ಗಾಢವಾಗಿರುತ್ತದೆ ಮತ್ತು ವೀಕ್ಷಣಾ ಕೋನಗಳು ಉತ್ತಮವಾಗಿವೆ. Netflix ನಲ್ಲಿ HDR ಸಪೋರ್ಟ್ ಇಲ್ಲದಿದ್ದರೂ Widevine L1 ಪ್ರಮಾಣೀಕರಣ ಇರುವುದರಿಂದ 1080p ನಲ್ಲಿ ಸ್ಟ್ರೀಮಿಂಗ್ ಸಾಧ್ಯ.
ಸ್ಟೀರಿಯೋ ಸ್ಪೀಕರ್‌ಗಳು 85-90% ವಾಲ್ಯೂಮ್‌ನಲ್ಲಿ ಬಹಳ ಜೋರಾಗಿ ಕೇಳಿಸುತ್ತವೆ. ವಿಶೇಷವಾಗಿ ಸಿನಿಮಾಗಳನ್ನು ನೋಡುತ್ತಿರುವಾಗ ಮಿಡ್ ಸೌಂಡ್ ಸ್ಪಷ್ಟವಾಗಿ ಕೇಳಿಸುತ್ತದೆ.

Nothing Phone (4a) ಸಂಪೂರ್ಣ ವಿಮರ್ಶೆ: ಖರೀದಿಸುವ ಮೊದಲು ಇಲ್ಲಿ ನೋಡಿ!

ಕಾರ್ಯಕ್ಷಮತೆ
ಈ ಫೋನ್ 8GB ಮತ್ತು 12GB RAM ಆಯ್ಕೆಗಳಲ್ಲಿ ಲಭ್ಯವಿದೆ. ಸ್ಟೋರೇಜ್ 128GB ಮತ್ತು 256GB ಆಗಿದೆ. ಇದರಲ್ಲಿ LPDDR4X RAM ಮತ್ತು UFS 3.1 ಸ್ಟೋರೇಜ್ ಬಳಸಲಾಗಿದೆ. Phone (4a) ನಲ್ಲಿ Qualcomm Snapdragon 7s Gen 4 ಪ್ರೊಸೆಸರ್ ಇದೆ. ಇದು Phone (3a) ಯಲ್ಲಿದ್ದ Snapdragon 7s Gen 3 ಗಿಂತ ಸ್ವಲ್ಪ ಮಾತ್ರ ಸುಧಾರಿತವಾಗಿದೆ. A-ಸಿರೀಸ್ ಫೋನ್‌ಗಳು ಸಾಮಾನ್ಯವಾಗಿ ಅತಿಯಾದ ಕಾರ್ಯಕ್ಷಮತೆಗಾಗಿ ಅಲ್ಲ, ಸಮತೋಲನದ ಬಳಕೆಗೆ ರೂಪಿಸಲಾಗಿದೆ. ದೈನಂದಿನ ಬಳಕೆಯಲ್ಲಿ ಫೋನ್ ಸ್ಮೂತ್ ಆಗಿ ಕೆಲಸ ಮಾಡುತ್ತದೆ. ಅನೇಕ ಆಪ್‌ಗಳನ್ನು ತೆರೆಯುವುದು, Instagram ಸ್ಕ್ರೋಲ್ ಮಾಡುವುದು ಮತ್ತು YouTube Shorts ನೋಡಲು ಯಾವುದೇ ಲ್ಯಾಗ್ ಕಾಣಿಸಲಿಲ್ಲ.

AnTuTu v11 ಈ ಫೋನ್‌ನಲ್ಲಿ ಸರಿಯಾಗಿ ಕೆಲಸ ಮಾಡಲಿಲ್ಲ ಎನ್ನಬಹುದು. ಆದರೆ AnTuTu v10 ನಲ್ಲಿ ಫೋನ್ 871,858 ಅಂಕಗಳನ್ನು ಪಡೆದಿದೆ. Geekbench 6 ಪರೀಕ್ಷೆಯಲ್ಲಿ single-core ಸ್ಕೋರ್ 1275 ಮತ್ತು multi-core ಸ್ಕೋರ್ 3316 ಆಗಿತ್ತು, ಇದು Phone (3a) ಗಿಂತ ಸ್ವಲ್ಪ ಉತ್ತಮವಾಗಿದೆ. ಗೇಮಿಂಗ್ ಮುಖ್ಯ ಗುರಿಯಲ್ಲದಿದ್ದರೂ ಫೋನ್ ಸಮರ್ಪಕವಾಗಿ ಕೆಲಸ ಮಾಡುತ್ತದೆ. BGMI ನಲ್ಲಿ Smooth + Ultra Extreme ಸೆಟ್ಟಿಂಗ್ ಸಪೋರ್ಟ್ ಇದೆ, ಅಂದರೆ ಗೇಮ್ 120fps ವರೆಗೆ ಓಡಬಹುದು.

ಒಟ್ಟಿನಲ್ಲಿ Phone (4a) ಕಾರ್ಯಕ್ಷಮತೆಯಲ್ಲಿ Phone (3a) ಗಿಂತ ದೊಡ್ಡ ಬದಲಾವಣೆ ನೀಡುವುದಿಲ್ಲ, ಆದರೆ ದೈನಂದಿನ ಬಳಕೆಗೆ ಸಮತೋಲನದ ಅನುಭವ ನೀಡುತ್ತದೆ.ಈ ಫೋನ್ Nothing OS 4.1 ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು Android 16 ಆಧಾರಿತವಾಗಿದೆ. Nothing ಶೈಲಿಯ widgets, wallpapers ಮತ್ತು icon packs ಇಲ್ಲಿಯೂ ಲಭ್ಯವಿವೆ. Phone (4a) ಗೆ 3 ವರ್ಷಗಳ Android ಅಪ್ಡೇಟ್ ಮತ್ತು 6 ವರ್ಷಗಳ security updates ಸಿಗುತ್ತವೆ. ಆದರೆ ಇದೇ ಬೆಲೆಯ OnePlus Nord 5 ನಲ್ಲಿ 4 ವರ್ಷಗಳ Android ಅಪ್ಡೇಟ್ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್
Phone (4a) ನಲ್ಲಿ 5,400mAh ಬ್ಯಾಟರಿ ಇದೆ. ಇದು Phone (3a) ಗಿಂತ ದೊಡ್ಡದು. ಸಾಮಾನ್ಯ ಬಳಕೆಯಲ್ಲಿ ಈ ಬ್ಯಾಟರಿ ಒಂದು ಪೂರ್ಣ ಕೆಲಸದ ದಿನ ಸಾಗುತ್ತದೆ. ಆದರೆ ಸಂಜೆ 6:30-7 ಗಂಟೆ ವೇಳೆಗೆ ಮತ್ತೆ ಚಾರ್ಜ್ ಮಾಡಬೇಕಾಗಬಹುದು. ಇಲ್ಲಿ silicon-carbon ಬ್ಯಾಟರಿ ತಂತ್ರಜ್ಞಾನ ಬಳಸಿಲ್ಲ. ಚಾರ್ಜಿಂಗ್ ವಿಷಯದಲ್ಲಿ ಫೋನ್ 50W ವೈರ್ ಚಾರ್ಜಿಂಗ್ ಸಪೋರ್ಟ್ ನೀಡುತ್ತದೆ. 0 ರಿಂದ 100% ಚಾರ್ಜ್ ಆಗಲು ಒಂದು ಗಂಟೆಗೂ ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ.

ಅಂತಿಮ ಅಭಿಪ್ರಾಯ
Nothing Phone (4a) ಸಂಪೂರ್ಣ ಹೊಸ ಫೋನ್ ಆಗುವುದಕ್ಕಿಂತ Phone (3a) ಯ ಸುಧಾರಿತ ಆವೃತ್ತಿಯಂತೆ ಕಾಣುತ್ತದೆ. ಕಂಪನಿ ಇಲ್ಲಿ ದೊಡ್ಡ ಬದಲಾವಣೆ ಮಾಡುವ ಪ್ರಯತ್ನ ಮಾಡಿಲ್ಲ. ಬದಲಾಗಿ ಕೆಲವು ಪ್ರಾಯೋಗಿಕ ಸುಧಾರಣೆಗಳನ್ನು ಮಾಡಿದೆ - ಸ್ವಲ್ಪ ಉತ್ತಮ ಡಿಸ್ಪ್ಲೇ, ದೊಡ್ಡ ಬ್ಯಾಟರಿ ಮತ್ತು ಮುಖ್ಯವಾಗಿ 3.5x ಆಪ್ಟಿಕಲ್ ಜೂಮ್ ಇರುವ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ.

ಇದರಿಂದ ಕ್ಯಾಮೆರಾ ಬಳಕೆ ಹೆಚ್ಚು ಸುಲಭವಾಗುತ್ತದೆ, ವಿಶೇಷವಾಗಿ ಪೋರ್ಟ್ರೇಟ್ ಮತ್ತು ದೂರದ ಚಿತ್ರಗಳಿಗೆ. ಆದರೆ ಕಾರ್ಯಕ್ಷಮತೆ, IP64 ರೇಟಿಂಗ್ ಮತ್ತು ಅಲ್ಟ್ರಾ-ವೈಡ್ ಕ್ಯಾಮೆರಾ ಇನ್ನೂ ಸರಾಸರಿ ಮಟ್ಟದಲ್ಲೇ ಇದೆ. ಹೊಸ Glyph Bar ವಿನ್ಯಾಸವು ಫೋನ್‌ನ ಲುಕ್ ಅನ್ನು ಬದಲಾಯಿಸಿದೆ, ಆದರೆ ಅದು ಉತ್ತಮವೇ ಅಥವಾ ಇಲ್ಲವೇ ಎಂಬುದು ಬಳಕೆದಾರರ ವೈಯಕ್ತಿಕ ಅಭಿಪ್ರಾಯದ ಮೇಲೆ ಅವಲಂಬಿತವಾಗಿರುತ್ತದೆ.

ಒಟ್ಟಿನಲ್ಲಿ Nothing Phone (4a) ವಿಭಿನ್ನ ವಿನ್ಯಾಸ, ಕ್ಲೀನ್ ಸಾಫ್ಟ್‌ವೇರ್ ಮತ್ತು ವಿಶ್ವಾಸಾರ್ಹ ದೈನಂದಿನ ಕಾರ್ಯಕ್ಷಮತೆಯೊಂದಿಗೆ ಸಮತೋಲನದ ಸ್ಮಾರ್ಟ್‌ಫೋನ್ ಅನುಭವ ನೀಡುತ್ತದೆ. ಆದರೆ ಈಗಾಗಲೇ Phone (3a) ಬಳಸುತ್ತಿರುವವರು ಇದಕ್ಕೆ ಅಪ್‌ಗ್ರೇಡ್ ಮಾಡಲೇಬೇಕೆಂಬ ಅವಶ್ಯಕತೆ ಇಲ್ಲ. ಆದರೆ ಸುಮಾರು ₹30,000 ಬೆಲೆ ವಿಭಾಗದಲ್ಲಿ ಹೊಸ ಫೋನ್ ಹುಡುಕುತ್ತಿರುವವರಿಗೆ ಇದು ಒಳ್ಳೆಯ ಆಯ್ಕೆಯಾಗಬಹುದು ಎಂಬುದು ನಮ್ಮ ಅಭಿಪ್ರಾಯ.

ಒಳ್ಳೆಯ ಅಂಶಗಳು (PROS)
ಹೊಸ Glyph Bar ಕುತೂಹಲಕಾರಿ ಮತ್ತು ಹಿಂದಿನದಕ್ಕಿಂತ ಹೆಚ್ಚು ಸರಳವಾಗಿದೆ
3.5x ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಬಹುಮುಖವಾಗಿದೆ
ತೀಕ್ಷ್ಣ 1.5K AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್
ಕ್ಲೀನ್ ಮತ್ತು ಸ್ಮೂತ್ Nothing OS ಅನುಭವ
ಉತ್ತಮ ಮತ್ತು ಜೋರಾಗಿ ಕೇಳಿಸುವ ಸ್ಟೀರಿಯೋ ಸ್ಪೀಕರ್ ವ್ಯವಸ್ಥೆ

ಗಮನಿಸಬೇಕಾದ ಅಂಶಗಳು (CONS)
Phone (3a) ಜೊತೆ ಹೋಲಿಸಿದರೆ ಕಾರ್ಯಕ್ಷಮತೆಯಲ್ಲಿ ಹೆಚ್ಚಿನ ಬದಲಾವಣೆ ಇಲ್ಲ
ಕೇವಲ IP64 ರೇಟಿಂಗ್ ಮಾತ್ರ
ಸ್ಪರ್ಧಿ ಫೋನ್‌ಗಳಲ್ಲಿ ಇನ್ನೂ ದೊಡ್ಡ ಬ್ಯಾಟರಿ ಲಭ್ಯ
ವೀಡಿಯೊ ರೆಕಾರ್ಡಿಂಗ್ ಕೇವಲ 4K 30fps ಗೆ ಮಾತ್ರ ಸೀಮಿತ
ಬಾಕ್ಸ್‌ನಲ್ಲಿ ಚಾರ್ಜರ್ ಇಲ್ಲ
NFC ಸಪೋರ್ಟ್ ಇಲ್ಲ
ರೇಟಿಂಗ್: 3.5 / 5

Best Mobiles in India

English summary
Nothing Phone (4a) comes with a bigger battery and a new 3.5x periscope telephoto camera, bringing practical upgrades while keeping the brand’s signature design and Glyph lights.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+