ಮಾರ್ಚ್ 5ರಂದು Nothing Phone (4a) ಸರಣಿ ಲಾಂಚ್: ಸಂಪೂರ್ಣ ಮಾಹಿತಿ ಇಲ್ಲಿದೆ!
ಬ್ರಿಟನ್ ಮೂಲದ ಜನಪ್ರಿಯ ಟೆಕ್ ಬ್ರ್ಯಾಂಡ್ Nothing ತನ್ನ ಹೊಸ Nothing Phone (4a) ಸರಣಿಯನ್ನು ಇದೇ ಮಾರ್ಚ್ 5ರಂದು ಅನಾವರಣಗೊಳಿಸಲು ಸಜ್ಜಾಗಿದೆ. ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಏಕಕಾಲದಲ್ಲಿ ಪರಿಚಯಗೊಳ್ಳಲಿರುವ ಈ ಹೊಸ Nothing Phone (4a) ಸರಣಿಯು ಮಧ್ಯಮ ಬೆಲೆಯ ವಿಭಾಗದಲ್ಲಿ ಹೊಸ ಸ್ಪರ್ಧೆಯನ್ನು ತರುವ ನಿರೀಕ್ಷೆ ಇದೆ. ಈ ಸರಣಿಯಲ್ಲಿ Nothing Phone (4a) ಮತ್ತು Nothing Phone (4a) Pro ಎಂಬ ಎರಡು ಫೋನ್‌ಗಳು ಬಿಡುಗಡೆಯಾಗುತ್ತಿದ್ದು, ಈ ಬಾರಿ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಬ್ಯಾಟರಿ ಸಾಮರ್ಥ್ಯದ ಮೇಲೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಮುಂಬರುವ Nothing Phone (4a) ಸರಣಿಯ ಬಿಡುಗಡೆ ಕುರಿತು ನಾವು ಇಲ್ಲಿಯವರೆಗೂ ತಿಳಿದಿರುವ ಎಲ್ಲಾ ಅಂಶಗಳನ್ನು ಈ ಕೆಳಗೆ ಪಟ್ಟಿ ಮಾಡಿದ್ದೇವೆ.
ಜಾಗತಿಕ ಲಾಂಚ್: ಏನು ವಿಶೇಷ?
Nothing Phone (4a) ಸರಣಿ ಬಿಡುಗಡೆಯು ಮಾರ್ಚ್ 5ರಂದು ನಡೆಯಲಿರುವ ಲಾಂಚ್ ಈವೆಂಟ್ ಫಿಜಿಕಲ್ ರೂಪದಲ್ಲಿ ನಡೆಯಲಿದ್ದು, ನಥಿಂಗ್ ಯೂಟ್ಯೂಬ್ ಚಾನಲ್ ಮೂಲಕ ಲೈವ್ ಸ್ಟ್ರೀಮಿಂಗ್ ವೀಕ್ಷಿಸಲು ಅವಕಾಶ ಇರಲಿದೆ. Nothing ತನ್ನ ಹೊಸ ಉತ್ಪನ್ನಗಳಲ್ಲಿ "ಬೋಲ್ಡ್ ಕಲರ್‌ವೇಸ್" ಮತ್ತು ದೀರ್ಘ ಬ್ಯಾಟರಿ ಆಯುಷ್ಯವನ್ನು ಪ್ರಮುಖ ಆಕರ್ಷಣೆಯಾಗಿ ಮುಂದಿಟ್ಟಿದೆ. ಈ ಸಾಧನಗಳಿಗಾಗಿ ಫ್ಲಿಪ್‌ಕಾರ್ಟ್ ಮೈಕ್ರೋಸೈಟ್ ಈಗಾಗಲೇ ಲೈವ್ ಆಗಿರುವುದು ಲಭ್ಯತೆಯನ್ನು ಸೂಚಿಸಿದೆ.
Nothing Phone (4a): ನಿರೀಕ್ಷಿತ ಸ್ಪೆಸಿಫಿಕೇಶನ್‌ಗಳು
Nothing Phone (4a) Qualcomm Snapdragon 7s Gen 4 ಪ್ರೊಸೆಸರ್‌ನೊಂದಿಗೆ ಬರಬಹುದೆಂದು ತಿಳಿದುಬಂದಿದೆ. ಡಿಸ್‌ಪ್ಲೆ ವಿಭಾಗದಲ್ಲಿ, ಇದು 6.78 ಇಂಚಿನ OLED ಡಿಸ್‌ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಬಳಕೆದಾರರಿಗೆ ಸ್ಮೂತ್ ಅನುಭವ ನೀಡಬಹುದು.
ಕ್ಯಾಮೆರಾ ವಿಭಾಗದಲ್ಲಿ, Nothing Phone (4a) ನಲ್ಲಿ 50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಲೆನ್ಸ್ ಹಾಗೂ 3.5x ಆಪ್ಟಿಕಲ್ ಜೂಮ್ ಹೊಂದಿರುವ 50MP ಟೆಲಿಫೋಟೋ ಲೆನ್ಸ್ ಇರಬಹುದು. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ನೀಡುವ ಸಾಧ್ಯತೆ ಇದೆ.
ಬ್ಯಾಟರಿ ವಿಭಾಗದಲ್ಲಿ, Nothing Phone (4a) ನಲ್ಲಿ 5,400mAh ಬ್ಯಾಟರಿ ಮತ್ತು 50W ಫಾಸ್ಟ್ ಚಾರ್ಜಿಂಗ್ ಬೆಂಬಲದಿಂದ ದೈನಂದಿನ ಬಳಕೆ ಸುಲಭವಾಗುವ ನಿರೀಕ್ಷೆ ಇದೆ.
Nothing Phone (4a) Pro: ಹೆಚ್ಚು ಶಕ್ತಿಶಾಲಿ ಆವೃತ್ತಿ
ಇನ್ನು ಈ ಸರಣಿಯ Pro ಮಾದರಿ Snapdragon 8s Gen 3 ಪ್ರೊಸೆಸರ್ ಮತ್ತು UFS 3.1 ಸ್ಟೋರೇಜ್ ಬೆಂಬಲದೊಂದಿಗೆ ಬರಬಹುದೆಂದು ಹೇಳಲಾಗುತ್ತಿದೆ. ಇದು 6.83 ಇಂಚಿನ OLED ಡಿಸ್‌ಪ್ಲೇ ಮತ್ತು 144Hz ರಿಫ್ರೆಶ್ ರೇಟ್ ಹೊಂದಿರಲಿದ್ದು, ಹೈ-ಪರ್ಫಾರ್ಮೆನ್ಸ್ ಬಳಕೆದಾರರಿಗೆ ಸೂಕ್ತವಾಗಿರಬಹುದು.
ಹೊಸ Glyph ಬಾರ್: ವಿನ್ಯಾಸದ ಪ್ರಮುಖ ಆಕರ್ಷಣೆ
Nothing ಫೋನ್‌ಗಳ ಗುರುತಾದ Glyph ಲೈಟಿಂಗ್ ವ್ಯವಸ್ಥೆಯಲ್ಲಿ ಈ ಬಾರಿ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ. Nothing Phone (4a) ಸರಣಿಯ ಹಿಂಭಾಗದ ಬಲ ಮೂಲೆಯಲ್ಲಿ ಹೊಸ Glyph ಬಾರ್ ಅಳವಡಿಸಲ್ಪಟ್ಟಿದ್ದು, 489 ಮಿನಿ LEDಗಳ ಮೂಲಕ ನೋಟಿಫಿಕೇಶನ್ ಮತ್ತು ಚಾರ್ಜಿಂಗ್ ಸೂಚನೆಗಳನ್ನು ನೀಡಬಹುದು. ಮೈಕ್ರೋಫೋನ್ ಆನ್ ಆಗಿರುವುದನ್ನು ಸೂಚಿಸಲು ಕೆಂಪು LED ಲೈಟ್ ಕೂಡ ಇರಬಹುದೆಂದು ವರದಿಗಳು ಸೂಚಿಸುತ್ತಿವೆ. ಇದು 3a ಸರಣಿಗಿಂತ 40% ಪ್ರಕಾಶಮಾನವಾಗಿದೆ ಎಂದು ಹೇಳಲಾಗಿದೆ.

ಸಾಫ್ಟ್‌ವೇರ್ ಅನುಭವ: ಕ್ಲೀನ್ UI ಮುಂದುವರಿಯುತ್ತದೆಯೇ?
Nothing Phone (4a) ಸರಣಿ ಫೋನ್‌ಗಳು Android 16 ಆಧಾರಿತ Nothing UIನಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ಬ್ಲೋಟ್‌ವೇರ್ ರಹಿತ ಅನುಭವ Nothing ಬ್ರ್ಯಾಂಡ್‌ನ ಪ್ರಮುಖ ಬಲವಾಗಿದೆ. ಈ ಸರಣಿಯಲ್ಲಿಯೂ ಅದೇ ನೀತಿ ಮುಂದುವರಿಯುತ್ತದೆಯೇ ಎಂಬುದು ಬಿಡುಗಡೆ ಬಳಿಕ ಸ್ಪಷ್ಟವಾಗಲಿದೆ.
ಭಾರತದಲ್ಲಿ ಬೆಲೆ ಮತ್ತು ಬಣ್ಣ
ಭಾರತದಲ್ಲಿ Nothing Phone (4a) ಸರಣಿಯು ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಟೀಸರ್ ಪುಟ ಲೈವ್ ಆಗಿದೆ. ಈ ಸರಣಿಯು Black, White, Blue, Silver ಮತ್ತು Pink ಸೇರಿದಂತೆ ಹಲವು ಬಣ್ಣಗಳಲ್ಲಿ ಫೋನ್‌ಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಇನ್ನು ಬೆಲೆಯ ವಿಷಯದಲ್ಲಿ, ನಥಿಂಗ್ ಫೋನ್ (4a) ಆರಂಭಿಕ ಬೆಲೆಯನ್ನು ₹29,999 ರಿಂದ ₹31,999 ರವರೆಗೆ ಅಂದಾಜಿಸಲಾಗಿದ್ದರೆ, ಪ್ರೊ ಮಾದರಿಯ ಬೆಲೆಯನ್ನು ಸುಮಾರು ₹40,000 ರಿಂದ ₹41,999 ಎಂದು ಅಂದಾಜಿಸಲಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಳ
ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಈಗಾಗಲೇ ಭಾರೀ ಸ್ಪರ್ಧೆ ಇದೆ. ಇಂತಹ ಸಂದರ್ಭದಲ್ಲಿ Nothing Phone (4a) ಸರಣಿ ವಿನೂತನ ವಿನ್ಯಾಸ, ಶಕ್ತಿಶಾಲಿ ಪ್ರೊಸೆಸರ್ ಮತ್ತು ಸುಧಾರಿತ ಕ್ಯಾಮೆರಾ ವೈಶಿಷ್ಟ್ಯಗಳ ಮೂಲಕ ಗಮನ ಸೆಳೆಯುವ ಸಾಧ್ಯತೆ ಇದೆ. ಮಾರ್ಚ್ 5ರ ಲಾಂಚ್ ಬಳಿಕ ಅಧಿಕೃತ ಬೆಲೆ ಮತ್ತು ಸಂಪೂರ್ಣ ವಿವರಗಳು ಬಹಿರಂಗವಾಗಲಿವೆ. ಅಲ್ಲಿಯವರೆಗೂ ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್ ಆಗಿರಿ.


Click it and Unblock the Notifications








