Home
ಮೊಬೈಲ್

ಬೆಂಗಳೂರಿಗೆ ಮೊದಲು ಅವಕಾಶ!..Nothing Phone 4a ಖರೀದಿಗೆ ವಿಶೇಷ ಕಾರ್ಯಕ್ರಮ!

ಲಂಡನ್ ಮೂಲದ ಜನಪ್ರಿಯ ಟೆಕ್ ಬ್ರ್ಯಾಂಡ್ Nothing ಭಾರತದಲ್ಲಿ ಶೀಘ್ರವೇ ತನ್ನ Phone 4a ಸರಣಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ಹೊಸ ಸರಣಿಯಲ್ಲಿ Nothing Phone 4a ಮತ್ತು Nothing Phone 4a Pro ಸ್ಮಾರ್ಟ್‌ಫೋನ್‌ಗಳನ್ನು ಇದೇ ಮಾರ್ಚ್ 7ರಂದು ಪರಿಚಯಿಸುವ ಸಾಧ್ಯತೆ ಇದೆ. ಫ್ಲಿಪ್‌ಕಾರ್ಟ್ ಮೈಕ್ರೋಸೈಟ್‌ನಲ್ಲಿ ಈಗಾಗಲೇ Nothing Phone 4a ಲಭ್ಯತೆ, ವಿನ್ಯಾಸ, ಬಣ್ಣ ಆಯ್ಕೆ ಮತ್ತು ಕೆಲವು ಪ್ರಮುಖ ಫೀಚರ್ಸ್ ಸೇರಿದಂತೆ ಹಲವು ವಿವರಗಳನ್ನು ದೃಢೀಕರಿಸಲಾಗಿದೆ. ಇದೀಗ ಬಿಡುಗಡೆಗೂ ಮುನ್ನವೇ ಬೆಂಗಳೂರಿನಲ್ಲಿ ವಿಶೇಷ ಖರೀದಿ ಅವಕಾಶವನ್ನು ಘೋಷಿಸಲಾಗಿದೆ.!

ಹೌದು, Nothing ಕಂಪನಿ ಮಾರ್ಚ್ 7ರಂದು ಸಂಜೆ 6 ಗಂಟೆಗೆ ಬೆಂಗಳೂರಿನಲ್ಲಿ "ಎಕ್ಸ್‌ಕ್ಲೂಸಿವ್ ಡ್ರಾಪ್" ಕಾರ್ಯಕ್ರಮವನ್ನು ಆಯೋಜಿಸಿದೆ. ಇಂದಿರಾನಗರದ 100 ಫೀಟ್ ರಸ್ತೆಯಲ್ಲಿರುವ Nothing Store - 660/1, 100 Feet Road ನಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಗ್ರಾಹಕರು ದೇಶದ ಇತರ ಭಾಗಗಳಲ್ಲಿ ಮಾರಾಟ ಆರಂಭವಾಗುವ ಮೊದಲೇ Nothing Phone 4a ಖರೀದಿಸಲು ಅವಕಾಶ ಪಡೆಯಲಿದ್ದಾರೆ ಎಂದ ಕಂಪೆನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದು ವಿಶೇಷವಾಗಿ ಬೆಂಗಳೂರಿನ ಟೆಕ್ ಸಮುದಾಯಕ್ಕೆ ದೊಡ್ಡ ಆಕರ್ಷಣೆಯಾಗಿ ಕಾಣಿಸುತ್ತಿದೆ.

ಮೊದಲ 100 ಮಂದಿಗೆ ವಿಶೇಷ ಉಡುಗೊರೆಗಳು
ಈ ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಮೊದಲ 100 ಗ್ರಾಹಕರಿಗೆ ನೀಡಲಾಗುವ ವಿಶೇಷ ಆಫರ್. Nothing Phone 4a ಸರಣಿಯಲ್ಲಿ ಫೋನ್ ಖರೀದಿಸುವ ಮೊದಲ 100 ಮಂದಿಗೆ ಎಂಗ್ರೇವ್ ಮಾಡಲಾದ ಲಿಮಿಟೆಡ್ ಎಡಿಷನ್ ಸ್ಮಾರ್ಟ್‌ಫೋನ್ ನೀಡಲಾಗುತ್ತದೆ.ಇ ದಕ್ಕೆ ಜೊತೆಯಾಗಿ ಉಚಿತವಾಗಿ Nothing Ear (a) ಇಯರ್‌ಬಡ್ಸ್ ನೀಡಲಾಗುತ್ತದೆ. ಇನ್ನೊಂದು ವಿಶೇಷ ಆಫರ್ ಎಂದರೆ, ಇದೇ ದಿನ ಫೋನ್ ಖರೀದಿಸುವ ಮೊದಲ 100 ಮಂದಿಗೆ CMF Buds 2 Plus ಅನ್ನು ಕೇವಲ ₹999 ದರದಲ್ಲಿ ಪಡೆಯುವ ಅವಕಾಶವೂ ದೊರೆಯುತ್ತಿದೆ.

ಬೆಂಗಳೂರಿಗೆ ಮೊದಲು ಅವಕಾಶ!..Nothing Phone 4a ಖರೀದಿಗೆ ವಿಶೇಷ ಕಾರ್ಯಕ್ರಮ!

ನಿರೀಕ್ಷಿತ ಫೀಚರ್‌ಗಳು ಮತ್ತು ವಿನ್ಯಾಸ
Nothing Phone 4a ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ವ್ಯವಸ್ಥೆ ಇರಲಿದೆ ಎಂದು ಟೀಸರ್‌ಗಳಿಂದ ತಿಳಿದುಬಂದಿದೆ. ಕಂಪನಿಯ ವಿಶಿಷ್ಟ "Glyph" ಡಿಸೈನ್ ಶೈಲಿಯನ್ನು ಮುಂದುವರಿಸಿಕೊಂಡು, ಹೊಸ Glyph Bar ಇಂಟರ್ಫೇಸ್‌ನಲ್ಲಿ ಏಳು LED ಲೈಟ್‌ಗಳನ್ನು ಸೇರಿಸಲಾಗಿದೆ. ಇದರಲ್ಲಿ Qualcomm Snapdragon ಸರಣಿಯ ಚಿಪ್‌ಸೆಟ್ ಇರಲಿದೆ ಎನ್ನಲಾಗುತ್ತಿದೆ. ಮಧ್ಯಮ ಶ್ರೇಣಿಯ ಪ್ರೀಮಿಯಂ ಫೀಚರ್‌ಗಳನ್ನು ನೀಡುವ ಸಾಧ್ಯತೆ ಇರುವುದರಿಂದ ಈ ಫೋನ್ ಯುವ ಬಳಕೆದಾರರ ಗಮನ ಸೆಳೆಯಲು ಸಿದ್ಧವಾಗಿರಬಹುದು.

ಬಣ್ಣ ಆಯ್ಕೆಗಳು ಮತ್ತು ನಿರೀಕ್ಷಿತ ಬೆಲೆ
ಸ್ಪೇನ್‌ನ ಬಾರ್ಸಿಲೋನಾದಲ್ಲಿ ಸೋಮವಾರ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2026 ರಲ್ಲಿ Nothing Phone 4a ಇತ್ತೀಚೆಗೆ ನಲ್ಲಿ ಪ್ರದರ್ಶನಕ್ಕಿಳಿದಿತ್ತು. ಈ ಸ್ಮಾರ್ಟ್‌ಫೋನ್ ಬ್ಲ್ಯಾಕ್, ಬ್ಲೂ, ಪಿಂಕ್ ಮತ್ತು ವೈಟ್ ಬಣ್ಣಗಳಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ದೃಢಪಡಿಸಿದೆ. ಆನ್‌ಲೈನ್ ವರದಿಗಳ ಪ್ರಕಾರ, Nothing Phone 4a ಭಾರತದಲ್ಲಿ ₹31,999 ಆರಂಭಿಕ ದರದಲ್ಲಿ ಲಭ್ಯವಾಗಬಹುದು. ಈ ಬೆಲೆಯಲ್ಲಿ 8GB RAM + 128GB ಸ್ಟೋರೇಜ್ ಮಾದರಿ ದೊರೆಯುವ ಸಾಧ್ಯತೆ ಇದೆ. ಇನ್ನಷ್ಟು ಸ್ಟೋರೇಜ್ ಆಯ್ಕೆಯಾಗಿ 8GB + 256GB ಮತ್ತು 12GB + 256GB ಮಾದರಿಗಳೂ ಬರಬಹುದು ಎಂದು ವರದಿಗಳು ಸೂಚಿಸುತ್ತವೆ. ಆದರೆ ಕಂಪನಿಯಿಂದ ಅಧಿಕೃತ ಬೆಲೆ ಮತ್ತು ಸ್ಟೋರೇಜ್‌ಗಳ ಘೋಷಣೆ ಇನ್ನೂ ಬಾಕಿಯಿದೆ.

ಭಾರತದಲ್ಲಿ Nothing Phone 4a ಸರಣಿಯ ಅಧಿಕೃತ ಲಾಂಚ್ ಮಾರ್ಚ್ 5ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಇತ್ತ ನಮ್ಮ ಬೆಂಗಳೂರು ಮೊದಲ ಮಾರಾಟ ಸ್ಥಳವಾಗಿರುವುದು ಸಿಹಿಸುದ್ದಿ ಎನ್ನಬಹುದು. ಇನ್ನು ವಿಭಿನ್ನ ವಿನ್ಯಾಸ, LED Glyph ಲೈಟಿಂಗ್ ಮತ್ತು ಆಕರ್ಷಕ ಆರಂಭಿಕ ಆಫರ್‌ಗಳು ಈ Nothing Phone 4a ಸರಣಿಗೆ ಹೆಚ್ಚಿನ ಬೇಡಿಕೆ ತರುವ ಸಾಧ್ಯತೆ ಇದೆ. ಮಾರ್ಚ್ 5 ಲಾಂಚ್ ದಿನದ ಬಳಿಕ ಪೂರ್ಣ ವೈಶಿಷ್ಟ್ಯಗಳು ಮತ್ತು ಖಚಿತ ಬೆಲೆ ವಿವರಗಳು ಸ್ಪಷ್ಟವಾಗಲಿವೆ. ಹೊಸ ತಂತ್ರಜ್ಞಾನ ಅನುಭವಿಸಲು ಬಯಸುವವರು Nothing Phone 4a ಮೇಲೆ ಕಣ್ಣಿಡಬಹುದು.

Best Mobiles in India

English summary
Nothing is set to launch the Nothing Phone 4a and Phone 4a Pro in India on March 5. Ahead of the official sale, the company is hosting an exclusive drop event in Bengaluru, offering early access to buyers along with limited edition engraved units and special freebies for the first 100 customers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+