Nothing Phone 4a ವಿನ್ಯಾಸ ಬಹಿರಂಗ: ಗಮನ ಸೆಳೆದ ಟ್ರಿಪಲ್ ಕ್ಯಾಮೆರಾ ಸೆಟಪ್!
ಬ್ರಿಟನ್ ಮೂಲದ ಜನಪ್ರಿಯ ಟೆಕ್ ಕಂಪನಿ Nothing ತನ್ನ ಹೊಸ Nothing Phone 4a ಸರಣಿಯನ್ನು ಮುಂಬರುವ ಮಾರ್ಚ್ 5ರಂದು ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಸ Phone 4a ಸರಣಿಯಲ್ಲಿ Nothing Phone 4a ಮತ್ತು Nothing Phone 4a Pro ಎಂಬ ಎರಡು ಮಾದರಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಬಹುದೆಂದು ನಿರೀಕ್ಷಿಸಲಾಗಿದೆ. ಇನ್ನು ಈಗಾಗಲೇ ದೇಶದಲ್ಲಿ ಈ ಸರಣಿಗೆ ಸೀಮಿತವಾಗಿರುವ ಮೈಕ್ರೋಸೈಟ್ ಕೂಡ ಲೈವ್ ಆಗಿರುವುದು ಬಿಡುಗಡೆಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ, ಮುಖ್ಯ ವಿಷಯ ಇದಲ್ಲ.!
Nothing Phone 4a ಸರಣಿಯು ಅನಾವರಣಗೊಳ್ಳುವ ಕೆಲವು ದಿನಗಳ ಮೊದಲೇ ಸ್ಟ್ಯಾಂಡರ್ಡ್ Nothing Phone 4a ಸ್ಮಾರ್ಟ್‌ಫೋನಿನ ವಿನ್ಯಾಸವನ್ನು ಬಹಿರಂಗಪಡಿಸಲಾಗಿದೆ.! ಹೌದು, ಇದೇ ಮೊದಲ ಬಾರಿಗೆ Nothing Phone 4a ಸರಣಿಯ ಅಧಿಕೃತ ಡಿಸೈನ್ ಎಂಬುದರ ಬಗ್ಗೆ ಸುಳಿವು ಸಿಕ್ಕಿದೆ. Nothing Phone 4a ಸರಣಿಯ ಫೋನ್ ಅನ್ನು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ನೊಂದಿಗೆ ತೋರಿಸಲಾಗಿದೆ, ಇದನ್ನು ಸಮತಲವಾದ ಮಾತ್ರೆ ಆಕಾರದ ಕ್ಯಾಮೆರಾ ಮಾಡ್ಯೂಲ್ ಒಳಗೆ ಇರಿಸಲಾಗಿದೆ.
Nothing Phone 4a ಯ ಪ್ರಮುಖ ಆಕರ್ಷಣೆ ಎಂದರೆ, ಕಂಪೆನಿಯ ಸಿಗ್ನೇಚರ್ ಆಗಿರುವ ಪಾರದರ್ಶಕ ಹಿಂಭಾಗದ ವಿನ್ಯಾಸ. ಈ ಫೋನಿನ ಗಾಜಿನ ಹಿಂಭಾಗದ ಒಳಗೆ ಕಾಣಿಸಿಕೊಳ್ಳುವ ಸ್ಕ್ರೂಗಳು ಮತ್ತು ಇತರೆ ಭಾಗಗಳು ಬ್ರ್ಯಾಂಡ್‌ಗೆ ವಿಶಿಷ್ಟ ಗುರುತನ್ನು ನೀಡುತ್ತವೆ. ಈ ಬಾರಿ ಹಿಂಭಾಗದಲ್ಲಿ ಹಾರಿಜಾಂಟಲ್ ಪಿಲ್-ಆಕಾರದ ಕ್ಯಾಮೆರಾ ಮೋಡ್ಯೂಲ್‌ನಲ್ಲಿ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆ ಇರಲಿದೆ. LED ಫ್ಲ್ಯಾಶ್ ಕ್ಯಾಮೆರಾ ಮೋಡ್ಯೂಲ್‌ನ ಹೊರಭಾಗದಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳಲಿದೆ. ಬಿಳಿ ಬಣ್ಣದ ರೂಪಾಂತರದಲ್ಲಿ ಫೋನ್ ಈಗಾಗಲೇ ಟೀಸರ್ ಮೂಲಕ ಗಮನ ಸೆಳೆದಿದೆ.
ಇದೇ ವೇಳೆ, Nothing ತನ್ನ ಪ್ರಸಿದ್ಧ ಲೈಟ್ ಇಂಟರ್‌ಫೇಸ್‌ನಲ್ಲಿ ಹೊಸ ಬದಲಾವಣೆ ತರಲು ಸಿದ್ಧವಾಗಿರುವ ಸುಳಿವುಗಳು ದೊರೆತಿವೆ. "Glyph Bar" ಎಂಬ ಹೊಸ ನೋಟಿಫಿಕೇಶನ್ ವ್ಯವಸ್ಥೆಯಲ್ಲಿ ಏಳು ಪ್ರತ್ಯೇಕ LED ಲೈಟ್‌ಗಳು ಇರಬಹುದೆಂಬ ವರದಿಗಳಿವೆ. ಕರೆ, ಮೆಸೇಜ್ ಹಾಗೂ ಆಪ್ ಅಲರ್ಟ್‌ಗಳಿಗೆ ವಿಭಿನ್ನ ಲೈಟ್ ಪ್ಯಾಟರ್ನ್‌ಗಳನ್ನು ನೀಡುವ ಮೂಲಕ ಬಳಕೆದಾರರಿಗೆ ವಿಭಿನ್ನ ಅನುಭವ ನೀಡುವ ಪ್ರಯತ್ನ ಮಾಡಲಾಗಿದೆ. ಪವರ್ ಮತ್ತು ವಾಲ್ಯೂಮ್ ಬಟನ್‌ಗಳು ಬಲಭಾಗದಲ್ಲಿದ್ದು, ಎಡಭಾಗದಲ್ಲಿ ಹೆಚ್ಚುವರಿ ಕಸ್ಟಮೈಸಬಲ್ ಬಟನ್ ಇರಬಹುದೆಂದು ನಿರೀಕ್ಷಿಸಲಾಗಿದೆ.
ಸ್ಪೆಸಿಫಿಕೇಶನ್‌ಗಳ ವಿಷಯದಲ್ಲಿ, Nothing Phone 4a ಸರಣಿಯು Qualcomm Snapdragon ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ ಎಂದು ಕಂಪನಿ ಈಗಾಗಲೇ ತಿಳಿಸಿದೆ. ವರದಿಗಳ ಪ್ರಕಾರ, ಸ್ಟ್ಯಾಂಡರ್ಡ್ ಮಾದರಿಯಲ್ಲಿ Snapdragon 7s Gen 4 ಪ್ರೊಸೆಸರ್ ಇರಬಹುದು. 2.71GHz ಗರಿಷ್ಠ ವೇಗದ ಆಕ್ಟಾ-ಕೋರ್ ಚಿಪ್ ದೈನಂದಿನ ಬಳಕೆ, ಮಲ್ಟಿಟಾಸ್ಕಿಂಗ್ ಮತ್ತು ಗೇಮಿಂಗ್‌ಗೆ ಸಮರ್ಪಕ ಕಾರ್ಯಕ್ಷಮತೆ ನೀಡುವ ನಿರೀಕ್ಷೆಯಿದೆ. ಬ್ಯಾಟರಿ ವಿಭಾಗದಲ್ಲಿ 5,400mAh ಸಾಮರ್ಥ್ಯ ಮತ್ತು 50W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಇರಬಹುದೆಂದು ಹೇಳಲಾಗಿದೆ.

ಡಿಸ್ಪ್ಲೇ ವಿಭಾಗದಲ್ಲಿ, 6.7 ಇಂಚಿನ 1.5K AMOLED ಡಿಸ್ಪ್ಲೇ ಇರಲಿದ್ದು, ಇದು 120Hz ರಿಫ್ರೆಶ್ ರೇಟ್ ಅನ್ನು ಹೊಂದಿರುವ ನಿರೀಕ್ಷೆ ದೆ. ಒಟ್ಟಾರೆಯಾಗಿ Nothing Phone 4a ತನ್ನ ವಿಶಿಷ್ಟ ವಿನ್ಯಾಸ, ಕ್ಲೀನ್ ಸಾಫ್ಟ್‌ವೇರ್ ಅನುಭವ ಮತ್ತು ನವೀನ ಲೈಟ್ ಫೀಚರ್‌ಗಳ ಮೂಲಕ ವಿಭಿನ್ನತೆ ತರುವ ಪ್ರಯತ್ನ ಮಾಡುತ್ತಿದೆ.ಭಾರತದ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಈಗಾಗಲೇ ಕಠಿಣ ಸ್ಪರ್ಧೆ ಇದೆ. ಇಂತಹ ಸಂದರ್ಭದಲ್ಲಿ ಅಧಿಕೃತ ಬೆಲೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು ಪ್ರಕಟವಾದ ಬಳಿಕ, ಈ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಎಷ್ಟು ಗಮನ ಸೆಳೆಯಲಿದೆ ಎಂಬುದು ಸ್ಪಷ್ಟವಾಗಲಿದೆ.


Click it and Unblock the Notifications








