Home
ಮೊಬೈಲ್

ಜನರು ಮೆಚ್ಚಿದ ಫೋನ್.. ಮೂರೇ ಗಂಟೆಯಲ್ಲಿ 1 ಲಕ್ಷ ಸೇಲ್: ಮಾರುಕಟ್ಟೆ ಶೇಕ್!

ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಫೋನ್ ಭಾರತದಲ್ಲಿ ಮೊದಲ ದಿನವೇ ಕೇವಲ ಮೂರೇ ಗಂಟೆಯಲ್ಲಿ 1 ಲಕ್ಷ ಯೂನಿಟ್‌ಗಳ ಮಾರಾಟ ಕಂಡಿದೆ. ಹೌದು, ನಥಿಂಗ್ ಕಂಪನಿಯ ಉಪ-ಬ್ರಾಂಡ್ ಆದ CMF ತನ್ನ ಚೊಚ್ಚಲ ಸ್ಮಾರ್ಟ್‌ಫೋನ್ ಮಾರಾಟದ ಮೊದಲ ದಿನವೇ ಭರ್ಜರಿ ಸೇಲ್ ಮಾಡಿದೆ. ಆ ಫೋನ್‌ ಬೇರೆ ಯಾವುದೂ ಅಲ್ಲ, CMF ಫೋನ್ 1 (CMF Phone 1) ಮೊಬೈಲ್. ಈ ಫೋನ್‌ ಅನ್ನು ಮೊಬೈಲ್‌ ಪ್ರಿಯರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಹೌದು, CMF ಫೋನ್ 1 ಸ್ಮಾರ್ಟ್‌ಫೋನ್ ಆನ್‌ಲೈನ್ ಮತ್ತು ಆಫ್‌ಲೈನ್ ಸೇರಿದಂತೆ ವಿವಿಧ ಸೈಟ್‌ಗಳಲ್ಲಿ ಭರ್ಜರಿ ಸೇಲ್ ಆಗಿದೆ. ಕೇವಲ ಮೂರು ಗಂಟೆಗಳಲ್ಲಿ 100,000 ಯುನಿಟ್‌ಗಳನ್ನು ಮಾರಾಟ ಮಾಡುವ ಗಮನಾರ್ಹ ಸಾಧನೆ ಮಾಡಿದೆ ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಬಜೆಟ್‌ ಬೆಲೆಯ 5G ಸ್ಮಾರ್ಟ್‌ಫೋನ್ ಆಗಿದ್ದು, ಗ್ರಾಹಕರನ್ನು ಆಕರ್ಷಿಸುವಲ್ಲಿ ಸಕ್ಸಸ್‌ ಕಂಡಿದೆ.

ಜನರು ಮೆಚ್ಚಿದ ಫೋನ್.. ಮೂರೇ ಗಂಟೆಯಲ್ಲಿ 1 ಲಕ್ಷ ಸೇಲ್: ಮಾರುಕಟ್ಟೆ ಶೇಕ್!

ನಥಿಂಗ್ ತನ್ನ ಉಪ ಬ್ರಾಂಡ್ ಸಿಎಂಎಫ್ ಅಡಿಯಲ್ಲಿ ಸಿಎಂಎಫ್ ಫೋನ್ 1, ಇಯರ್ ಬಡ್, ಸ್ಮಾರ್ಟ್‌ವಾಚ್, ಪವರ್ ಬ್ಯಾಂಕ್‌ಗಳನ್ನು ಅನಾವರಣಗೊಳಿಸಿದೆ. ಇವು ಬಜೆಟ್ ಸ್ನೇಹಿಯಾಗಿವೆ. ಸಿಎಂಎಫ್ ನ ಮೊದಲ ಮೊಬೈಲ್‌ ಆಗಿರುವ ಸಿಎಂಎಫ್ ಫೋನ್ 1 ಅನ್ನು ಇತ್ತೀಚೆಗಷ್ಟೇ ಭಾರತದಲ್ಲಿ ಲಾಂಚ್ ಮಾಡಲಾಗಿತ್ತು. ನಿನ್ನೆ (ಜುಲೈ 12) ಅದರ ಮೊದಲ ಮಾರಾಟ ಪ್ರಾರಂಭವಾಗಿದ್ದು, ಬಿಡುಗಡೆಯಾದ ಮೂರೇ ಗಂಟೆಗಳಲ್ಲಿ 1 ಲಕ್ಷ ಯೂನಿಟ್‌ಗಳು ಮಾರಾಟವಾಗಿವೆ.

ನಥಿಂಗ್ ಫೋನ್ 2ಎ ದಾಖಲೆ ಉಡೀಸ್‌!

ನಥಿಂಗ್ ಫೋನ್ 2ಎ ಬಿಡುಗಡೆಯಾಗಿದ್ದಾಗ 24 ಗಂಟೆಗಳಲ್ಲಿ 1 ಲಕ್ಷ ಫೋನ್ ಮಾರಾಟವಾಗಿದ್ದವು. CMF ಫೋನ್ 1 ಸ್ಮಾರ್ಟ್‌ಫೋನ್‌ ಆ ಸಾಧನೆಯನ್ನು ಮೂರೇ ಗಂಟೆಯಲ್ಲಿ ಮಾಡಿರುವುದು ವಿಶೇಷ. ಈ ರೀತಿಯ ವೇಗದ ಮಾರಾಟಕ್ಕೆ ಕಾರಣವೇನು? ಎಂಬ ಕುತೂಹಲ ಸಹಜ. ಈ ಫೋನಿನ ಫೀಚರ್ಸ್‌ಗಳಿಗೆ ಹೋಲಿಸಿದರೆ, ಇದರ ಬೆಲೆ ಕೈಗೆಟುಕುವಂತಿದೆ.

ಇದರ 6GB + 128GB ಸ್ಟೋರೇಜ್‌ ಮಾದರಿಯ ಬೆಲೆ 15,999 ರೂ. ಇದೆ. 8GB + 256GB ಮಾದರಿಯ ಬೆಲೆ 17,999 ರೂ. ಇದೆ. ಮೊದಲ ದಿನ 1 ಸಾವಿರ ರೂ. ರಿಯಾಯಿತಿ ಸಹ ಇತ್ತು. ಈ ಫೋನ್ ಕಪ್ಪು, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣದ ಆಕರ್ಷಕ ವಿನ್ಯಾಸ ಹೊಂದಿದೆ. ಕಂಪನಿಯು ಈ ಕೇಸ್‌ಗಳನ್ನು ಬದಲಾಯಿಸುವ ಆಯ್ಕೆಯನ್ನೂ ನೀಡಿದೆ.

ಜನರು ಮೆಚ್ಚಿದ ಫೋನ್.. ಮೂರೇ ಗಂಟೆಯಲ್ಲಿ 1 ಲಕ್ಷ ಸೇಲ್: ಮಾರುಕಟ್ಟೆ ಶೇಕ್!

CMF ಫೋನ್ 1ನ ವಿಶೇಷತೆಗಳೇನು?

ಡಿಸ್ಪ್ಲೇ: ಇದು 6.67 ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ. 1080x2400 ಪಿಕ್ಸೆಲ್ ರೆಸಲ್ಯೂಶನ್, 395 PPI ಪಿಕ್ಸೆಲ್ ಸಾಂದ್ರತೆ, 120Hz ಟಚ್ ಮತ್ತು 2000nits ಗರಿಷ್ಠ ಬ್ರೈಟ್‌ನೆಸ್‌ ಒಳಗೊಂಡಿದೆ.

ಪ್ರೊಸೆಸರ್: ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 73004nm ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ Mali-G615 MC2 GPU ಹೊಂದಿದೆ.

ಸ್ಟೋರೇಜ್: ಈ ಫೋನ್‌ನಲ್ಲಿ 8GB RAM ಮತ್ತು 128GB ವರೆಗಿನ ಇಂಟರ್ನಲ್ ಸ್ಟೋರೇಜ್‌ ಅನ್ನು ಒದಗಿಸಲಾಗಿದೆ. ಇದರೊಂದಿಗೆ, ಇದು 8GB ವರ್ಚುವಲ್ RAM ಮತ್ತು 2TB ವರೆಗೆ ವಿಸ್ತರಿಸಬಹುದಾದ ಮೊಮೊರಿಯನ್ನು ಸಹ ಹೊಂದಿದೆ.

ಕ್ಯಾಮೆರಾ: ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ 50MP ಪ್ರೈಮರಿ ಕ್ಯಾಮೆರಾ ಲೆನ್ಸ್ ಮತ್ತು ಪೋಟ್ರೇಟ್ ಸೆನ್ಸಾರ್ ಅನ್ನು ಬಳಸಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಫ್ರಂಟ್‌ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ: ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. 33 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲ ಮತ್ತು 5 ವ್ಯಾಟ್ ರಿವರ್ಸ್ ವೈರ್ಡ್ ಚಾರ್ಜಿಂಗ್ ಬೆಂಬಲದ ಪಡೆದಿದೆ. 20 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಮಾಡಬಹುದು.

ಓಎಸ್: ಇದು ಆಂಡ್ರಾಯ್ಡ್ 14 ಆಧಾರಿತ ನಥಿಂಗ್ ಓಎಸ್ 2.6 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 2 ವರ್ಷಗಳ OS ಅಪ್ಡೇಟ್‌ಗಳು ಮತ್ತು 3 ವರ್ಷಗಳ ಭದ್ರತಾ ಪ್ಯಾಚ್‌ಗಳ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ.

ಇತರೆ ಫೀಚರ್ಸ್‌: ಈ ಫೋನ್ ನೀರು ಮತ್ತು ಧೂಳು ನಿರೋಧಕವಾಗಿದೆ. ಡ್ಯುಯಲ್ ಸಿಮ್, 5G SA/NSA, 4G VoLTE, Wi-Fi 6 802.11ax (2.5GMOGHz), ಬ್ಲೂಟೂತ್ 5.3, ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಸಂಪರ್ಕ ಒಳಗೊಂಡಿದೆ.

Best Mobiles in India

English summary
The CMF Phone 1 has seen 1 lakh unit sales in just three hours across various channels, said the company. The Nothing Phone (2a) took 24 hours to achieve this feat, after taking 60 minutes to sell 60,000 units during its first sale back in March, says Nothing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+