Home
ಮೊಬೈಲ್

ಇಂಥ ಚಾನ್ಸ್‌ ಬಿಡ್ತಿರಾ..? CMF ಫೋನ್ 1 ಅನ್ನು ಉಚಿತವಾಗಿ ಗೆಲ್ಲುವ ಅವಕಾಶ!

ಇಂಥ ಚಾನ್ಸ್‌ ಬಿಡ್ತಿರಾ..? ಇಲ್ಲಿಯವರೆಗೆ ಕೇಳಿರದ ಬಂಪರ್ ಅವಕಾಶ. 1 ರೂಪಾಯಿ ಇಲ್ಲದೆ ಫ್ರೀಯಾಗಿ CMF ಫೋನ್ 1 ಅನ್ನು ಉಚಿತವಾಗಿ ಗೆಲ್ಲುವ ಅವಕಾಶ! ಮೊಬೈಲ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಪ್ರಸ್ತುತ ಸ್ಮಾರ್ಟ್‌ಫೋನ್‌ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮೊಬೈಲ್‌ ಇಲ್ಲದೇ ಜೀವನವೇ ಇಲ್ಲ. ಯಾರೇ ಆಗಲಿ ಫೋನ್ ಖರೀದಿಸುವಾಗ ಆಫರ್‌ಗಳಿಗೆ ಹೆಚ್ಚು ಕಾಯುತ್ತಾರೆ. ಆದರೆ, ಇದೀಗ ಸ್ಮಾರ್ಟ್‌ಫೋನ್‌ ಕಂಪನಿಯೊಂದು ಉಚಿತವಾಗಿ ಮೊಬೈಲ್‌ ಅನ್ನು ಕೊಡುವುದಾಗಿ ಘೋಷಿಸಿದೆ. CMF ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಹೊಸ ಫೋನ್ ಅನ್ನು ಫ್ರೀಯಾಗಿ ನಿಮ್ಮದಾಗಿಸಿಕೊಳ್ಳಬಹುದು. ಉಚಿತವಾಗಿ ಫೋನ್‌ ಗೆಲ್ಲುವ ಇಂಥ ಅವಕಾಶ ಸಿಕ್ಕರೆ ಬಿಡ್ತಿರಾ..? ಖಂಡಿತವಾಗಿಯೂ ಇಲ್ಲ ಎನ್ನುವುದಾದರೆ ತಪ್ಪದೇ ಈ ಸುದ್ದಿ ಓದಿ.

ಹೌದು, ನಥಿಂಗ್‌ (Nothing) ಕಂಪನಿಯ ಉಪ-ಬ್ರಾಂಡ್ ಆಗಿರುವ CMF, ಭಾರತದಲ್ಲಿ ತನ್ನ ಹೊಸ ಫೋನ್ ಬಿಡುಗಡೆಗೆ ಸಜ್ಜಾಗಿದೆ. ಇದರ ಭಾಗವಾಗಿ CMF ವಿದ್ಯಾರ್ಥಿ ರೆಫರಲ್ ಕಾರ್ಯಕ್ರಮವನ್ನು ಪ್ರಕಟಿಸಿದೆ. ದೇಶಾದ್ಯಂತ ವಿದ್ಯಾರ್ಥಿಗಳು ಮೀಸಲಾದ ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು ಮತ್ತು ಶೀಘ್ರದಲ್ಲೇ ಲಾಂಚ್ ಆಗಲಿರುವ CMF ಫೋನ್ 1 ಅನ್ನು ಉಚಿತವಾಗಿ ಗೆಲ್ಲುವ ಅವಕಾಶವನ್ನು ಪಡೆಯಬಹುದು.

ಇಂಥ ಚಾನ್ಸ್‌ ಬಿಡ್ತಿರಾ..? CMF ಫೋನ್ 1 ಅನ್ನು ಉಚಿತವಾಗಿ ಗೆಲ್ಲುವ ಅವಕಾಶ!

CMF ಬ್ರ್ಯಾಂಡ್‌ನ ಮೊದಲ ಹ್ಯಾಂಡ್‌ಸೆಟ್‌ಗಳು, CMF ಫೋನ್ 1, CMF ಬಡ್ಸ್ ಪ್ರೊ 2 ಮತ್ತು CMF ವಾಚ್ ಪ್ರೊ 2, ಜುಲೈ 8 ರಂದು ಬಿಡುಗಡೆಯಾಗಲಿದೆ. ವಿಜೇತರು ಉಚಿತ ಹೊಸ ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್ ಅಥವಾ ಟ್ರು ವೈರ್‌ಲೆಸ್ ಇಯರ್‌ಫೋನ್‌ಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಕಂಪನಿ ಪ್ರಕಟಿಸಿದೆ.

ಏನಿದು ವಿದ್ಯಾರ್ಥಿ ರೆಫರಲ್ ಕಾರ್ಯಕ್ರಮ?

ಈ CMF ವಿದ್ಯಾರ್ಥಿ ರೆಫರಲ್ ಪ್ರೋಗ್ರಾಂ ಹೊಸ CMF ಉತ್ಪನ್ನಗಳಿಗೆ ಆರಂಭಿಕ ಪ್ರವೇಶವನ್ನು ಒದಗಿಸುತ್ತದೆ. ಮತ್ತು ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿಗಳನ್ನು ನೀಡುತ್ತದೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತದಾದ್ಯಂತ 15 ನಗರಗಳು ಮತ್ತು 75 ಕಾಲೇಜುಗಳ ವಿದ್ಯಾರ್ಥಿಗಳು ಈ ಪ್ರಚಾರದ ಭಾಗವಾಗುತ್ತಾರೆ. ದೇಶದ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ಯಾವುದೇ ವಿದ್ಯಾರ್ಥಿ ಇದರಲ್ಲಿ ಭಾಗವಹಿಸಬಹುದು.

ನೋಂದಣಿ ಹೇಗೆ? ಪ್ರಯೋಜನಗಳೇನು?

ವಿದ್ಯಾರ್ಥಿಗಳು ನಥಿಂಗ್ಸ್ ಮೀಸಲಾದ ಮೈಕ್ರೋಸೈಟ್ ಮೂಲಕ CMF ಮೂಲಕ ನೋಂದಾಯಿಸಿಕೊಳ್ಳಬೇಕು . ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ಪೂರ್ಣಗೊಳಿಸಬಹುದು, ಪರಿಶೀಲಿಸಬಹುದು ಮತ್ತು ಅವರ ವೈಯಕ್ತಿಕ ಉಲ್ಲೇಖಿತ ಕೋಡ್ ಅನ್ನು ರಚಿಸಬಹುದು. ಬಳಿಕ ತಮ್ಮ ಕೋಡ್ ಅನ್ನು ತಮ್ಮ ಸ್ನೇಹಿತರಿಗೆ ನೀಡಬೇಕು. ಪ್ರತಿ ಬಾರಿ ರೆಫರಲ್ ಕೋಡ್ ಅನ್ನು ಬಳಸಿದಾಗ, ನೀವು ಒಂದು ಅಂಕವನ್ನು ಪಡೆಯುತ್ತೀರಿ. ಮತ್ತು ರೆಫರಿ ಎರಡು ಅಂಕಗಳನ್ನು ಪಡೆಯುತ್ತಾರೆ.

ಇಂಥ ಚಾನ್ಸ್‌ ಬಿಡ್ತಿರಾ..? CMF ಫೋನ್ 1 ಅನ್ನು ಉಚಿತವಾಗಿ ಗೆಲ್ಲುವ ಅವಕಾಶ!

ಈ ಆಫರ್.. ಟಾಪ್ 50 ವಿದ್ಯಾರ್ಥಿಗಳಿಗೆ ಮಾತ್ರ!

ಗಡುವಿನ ಕೊನೆಯಲ್ಲಿ, ಲೀಡರ್‌ಬೋರ್ಡ್‌ನಲ್ಲಿರುವ ಟಾಪ್ 50 ಜನರು CMF ಉತ್ಪನ್ನಗಳನ್ನು ಗೆಲ್ಲುತ್ತಾರೆ. ಈ ಪೈಕಿ 10 ವಿದ್ಯಾರ್ಥಿಗಳು CMF ಫೋನ್ 1 ಅನ್ನು ಗೆಲ್ಲಬಹುದು. 20 ವಿದ್ಯಾರ್ಥಿಗಳು CMF ಬಡ್ಸ್ ಪ್ರೊ 2 ಅನ್ನು ಗೆಲ್ಲಬಹುದು. ಇದಲ್ಲದೇ, ಉಳಿದ 20 ಜನರು CMF ವಾಚ್ ಪ್ರೊ 2 ಅನ್ನು ಗೆಲ್ಲಬಹುದು. ಮುಖ್ಯಾವಾಗಿ, ಒಬ್ಬ ವಿದ್ಯಾರ್ಥಿಯು ಕೇವಲ ಒಂದು ಸಾಧನವನ್ನು ಗೆಲ್ಲಲು ಅರ್ಹನಾಗಿರುತ್ತಾನೆ.

ಲೀಡರ್‌ಬೋರ್ಡ್‌ನಲ್ಲಿ ಅಂಕಗಳನ್ನು ಸಂಗ್ರಹಿಸಲು ಕೊನೆಯ ದಿನಾಂಕ ಜುಲೈ 7 ರಂದು ರಾತ್ರಿ 11:59 (PM IST) ಎಂದು ಮೈಕ್ರೋಸೈಟ್ ಪ್ರಕಟಿಸಿದೆ. ಅಂಕಗಳು ಸಮಾನವಾಗಿದ್ದರೆ, ಮೊದಲು ಅಂಕವನ್ನು ತಲುಪಿದ ವಿದ್ಯಾರ್ಥಿಯು ನಥಿಂಗ್ ಸ್ಮಾರ್ಟ್‌ಫೋನ್‌ (ಉನ್ನತ ಶ್ರೇಣಿ) ಅನ್ನು ಪಡೆಯುತ್ತಾನೆ ಎಂದು ಕಂಪನಿ ತಿಳಿಸಿದೆ.

CMF ಫೋನ್ 1 ಜೊತೆ ಬಡ್ಸ್ ಪ್ರೊ 2, ವಾಚ್ ಪ್ರೊ 2 ಲಾಂಚ್

ಜುಲೈ 8 ರಂದು CMF ಫೋನ್ 1, ಬಡ್ಸ್ ಪ್ರೊ 2 ಮತ್ತು ವಾಚ್ ಪ್ರೊ 2 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗುತ್ತದೆ. ಗ್ರಾಹಕೀಯಗೊಳಿಸಬಹುದಾದ ಬ್ಯಾಕ್ ಪ್ಯಾನೆಲ್‌ನೊಂದಿಗೆ ಸ್ಮಾರ್ಟ್‌ಫೋನ್ ಬರುವುದು ಖಚಿತವಾಗಿದೆ. ವಾಚ್ ಪ್ರೊ 2 ಪರಸ್ಪರ ಬದಲಾಯಿಸಬಹುದಾದ ಬೆಜೆಲ್‌ಗಳನ್ನು ಹೊಂದಿದೆ. ಮತ್ತೊಂದೆಡೆ, CMF ಬಡ್ಸ್ ಪ್ರೊ 2, 50 dB ವರೆಗೆ ಹೈಬ್ರಿಡ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ (ANC) ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
nothing sub brand launches cmf student referral program in india. winners to get cmf phone , CMF Buds Pro 2 and CMF Watch Pro 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+